Puttakkana Makkalu: ಕಂಠಿಯನ್ನು ಹೊಗಳಿದ ಸ್ನೇಹಾ; ಖುಷಿಪಟ್ಟ ಕಂಠಿ
ಪುಟ್ಟಕ್ಕ ನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಂಠಿ ಬಂಗಾರಮ್ಮನ ಜೊತೆ ಸಾಲ ಕೇಳಲು ಬಂದಿದ್ದಾನೆ. ಪುಟ್ಟಕ್ಕನ ಮೆಸ್ ನಲ್ಲಿ ಕೆಲಸ ಮಾಡಲು ತನ್ನ ಅತ್ತೆಯನ್ನೆ ಕೇಳಿಕೊಂಡಿದ್ದಾರೆ . ಆದರೆ ಪುಟ್ಟಕ್ಕ ಗೆ ಕಂಠಿ ಮಾತು ಕೇಳಿ ಬಹಳ ಶಾಕ್ ಆಗುತ್ತದೆ. ಇನ್ನೂ ಕಂಠಿ ಮಾತ್ರ ಎನು ಮಾತನಾಡದೆ ಇರುತ್ತಾನೆ.
ಅಷ್ಟರಲ್ಲಿ ರಾಜೀ ಬಂದು ರಂಪ ರಾಮಾಯಣ ಶುರು ಮಾಡುತ್ತಾಳೆ. ಜೋರಾಗಿ ಕಿರುಚಿ ಅಲ್ಲೋಲ ಕಲ್ಲೋಲ ಮಾಡುತ್ತಾಳೆ. ಪುರುಷೋತ್ತಮ ಶಾಲೆಗೆ ಹೋಗುವುದು ಇಲ್ಲ ಎಂದು ಹೇಳಿದ್ದನ್ನು ಕೇಳಿದ ರಾಜೀ ಗೆ ಸಿಟ್ಟೇರಿ ಆತನ ಮೇಲೆ ಕೈ ಎತ್ತಲು ಹೋದಾಗ ಅದನ್ನು ಪುಟ್ಟಕ್ಕ ತಡೆಯುತ್ತಾರೆ.

ಇನ್ನೂ ಇದನ್ನೆಲ್ಲ ನೋಡಿದ ರಾಜೇಶ್ವರಿ ಮಾತ್ರ ತನ್ನ ಮಗನ ಮೇಲೆ ಕೂಡ ಕೈ ಮಾಡಿ ಹಾಗಿಲ್ಲ ಎಂದು ಹೇಳಿ ಪುರುಷೋತ್ತಮ ನನ್ನು ದರ ದರ ಎಂದು ಎಳೆದುಕೊಂಡು ಹೋಗುತ್ತಾಳೆ. ಇದನ್ನೆಲ್ಲ ಕಂಡ ಕಂಠಿ ನೇರವಾಗಿ ಮನೆಗೆ ಬರುತ್ತಾನೆ.. ನಾನು ಹೊಲದಲ್ಲಿ ಕೆಲಸ ಮಾಡಬೇಕು ಎಂದುಕೊಂಡು ಇದ್ದೇನೆ ಎಂದಾಗ ಬಂಗಾರ ಮ್ಮ ಮಾತ್ರ ಬಹಳ ಭಾರವಾದ ಮನಸ್ಸಿನಿಂದ ಕಂಠಿ ಕಡೆಗೆ ನೋಡುತ್ತಾರೆ. ದೊರೆ ಇದೀಗ ಬಡ್ಡಿ ವ್ಯವಹಾರಗಳನ್ನು ಸರಿಯಾಗಿ ನೋಡಿಕೊಳ್ಳುತ್ತಾ ಇಲ್ಲ.
ಹಾಗೆಯೇ ಇದೀಗ ಕೂಲಿ ಕೆಲಸ ಮಾಡುತ್ತಾನೆ ಎಂದು ಹೇಳುತ್ತ ಇದ್ದಾನೆ ಎಂದಾಗ ಕಂಠಿ ಮೆತ್ತಗೆ ಹೇಳುತ್ತಾನೆ ನಾನು ಕೂಲಿ ಮಾಡುತ್ತೇನೆ ಎಂದು ಯಾವಾಗ ಹೇಳಿದೆ ಎಂದು ತಾಯಿ ಬಳಿ ಹೇಳುತ್ತಾನೆ.. ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವುದು ಇಲ್ಲ .. ಯಾಕೆಂದರೆ ಈಗಾಗಲೇ ಅಲ್ಲಿ ಸಾಕಷ್ಟು ಜನ ಕೆಲಸ ಮಾಡುತ್ತಾ ಇದ್ದಾರೆ.. ನಾನು ಬೇರೆಯೇ ಹೊಲವನ್ನು ಗೇಣಿ ಗೆ ತೆಗೆದುಕೊಳ್ಳಬೇಕೆಂದು ಅಂದುಕೊಂಡು ಇದ್ದೇನೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಬಂಗಾರಮ್ಮಗೆ ಶಾಕ್ ಆಗುತ್ತದೆ.
ಬಂದವಳು ಹೀಗೆಲ್ಲ ನನ್ನ ಮಗನನ್ನು ತಿರುಗಿಸಿದಳು ಅಲ್ವಾ... ಬಂದವಳು ಎಷ್ಟೆಲ್ಲ ಮಗನನ್ನು ಬದಲಾಯಿಸಿದರು ಎಂದೆಲ್ಲ ಊರಿನ ಜನ ಮಾತಾಡೋ ಹಾಗೆ ಮಾಡುತ್ತಿರಿ ಅಲ್ವಾ ಎಂದೆಲ್ಲ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಕಂಠಿ ಮಾತ್ರ ನಾನು ಯಾರ ಮಾತನ್ನೂ ಕೂಡ ಇಲ್ಲ. ನನಗೆ ದುಡಿಯ ಬೇಕು ... ದುಡಿದು ತಿನ್ನಬೇಕು ಎನ್ನುವ ಆಸೆ ಅದಕ್ಕಾಗಿ ನಾನು ಸಾಲ ತೆಗೆದುಕೊಳ್ಳಬೇಕು ಎಂದುಕೊಂಡು ತಾಯಿಯ ಮುಖ ನೋಡುತ್ತಾರೆ.
ಇನ್ನೂ ಕೋದಂಡ ಅವರ ಬಳಿ ಕಂಠಿ ಜೋರಾಗಿ ಹೇಳುತ್ತಾನೆ.. ಕೊಂದಂಡ ಕೃಷಿಕರಿಗೆ ಸಲ ಕೊಡವಶ್ಟು ನನಗೆ ಕೊಡು.. ನಾನು ಆ ಪ್ರಕಾರ ಬಡ್ಡಿ ಕಟ್ಟಿಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಕೋದಂಡ ಮಾತ್ರ ಅದು ಅದು ಎಂದು ತೊದಲುತ್ತ ಇರುತ್ತಾನೆ. ಬಳಿಕ ಹೇಳುತ್ತಾನೆ ಅಮ್ಮಾವರ ಜೊತೆ ಈ ರೀತಿ ಮಾತನಾಡುವುದು ಸರಿ ಇಲ್ಲ ಎಂದಾಗ ಬಂಗಾರ ಮ್ಮ ಹೇಳುತ್ತಾರೆ.
ಯಾರ ಮಾತೂ ಕೇಳಿ ಇದೀಗ ಈ ನಿರ್ಧಾರ ತೆಗೆದುಕೊಂಡು ಇದ್ದಾನೆ ಎಂದಾಗ ಸ್ನೇಹಾ ಬಂದು ಅಡ್ಡ ಬಾಯಿ ಹಾಕುತ್ತಾಳೆ.. ಯಾರ ಮಾತನ್ನು ಯಾರು ಕೇಳಿಲ್ಲ ಎಂದು ಜೋರಾಗಿ ಹೇಳುತ್ತಾಳೆ ...ಅವರ ಇಷ್ಟ ಅದು ನೀವು ಬಲವಂತ ಮಾಡಬಹುದು ನಾನು ಮಾಡುವುದು ಇಲ್ಲ ಎಂದು ಹೇಳುತ್ತಾಳೆ. ಇವರು ಮಾಡುತ್ತಿರುವ ಕೆಲಸ ನನಗೆ ಬಹಳ ಖುಷಿ ನೀಡಿದೆ . ನಮಗೆ ಈ ಬಗ್ಗೆ ಹೆಮ್ಮೆ ಇದೆ ಎಂದು ಹೇಳುತ್ತಾರೆ.


Click it and Unblock the Notifications











