Don't Miss!
- News
ಪತ್ರಿಕೆಗಳ ಜಾತಿ ಮೂಲ ಹುಡುಕಿ ಬಿಜೆಪಿ ಸರ್ಕಾರದ ಜಾಹೀರಾತು; ಪ್ರಿಯಾಂಕ್ ಖರ್ಗೆ ಹೀಗೆ ಹೇಳಿದ್ದು ಯಾಕೆ?
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- Technology
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu : ತಲೆ ಸುತ್ತಿ ಬಿದ್ದ ಪುಟ್ಟಕ್ಕ; ರಾಜೇಶ್ವರಿ ಪಿತೂರಿಯನ್ನು ಮಕ್ಕಳ ಬಳಿ ಹೇಳುತ್ತಾಳಾ ಪುಟ್ಟಕ್ಕ?
ಸಹನಾ ಮುರಳಿ ಮೇಷ್ಟ್ರನ್ನು ತಪ್ಪಾಗಿ ತಿಳಿದುಕೊಂಡಿದ್ದಾಳೆ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಸಹನಾ ಅವರೇ ನನ್ನದು ತಪ್ಪಾಯಿತು ಎಂದು ಮುರಳಿ ಮೇಷ್ಟು ಹೇಳಿದರೂ ಯಾರ ಮಾತೂ ಕೇಳದ ಸಹನಾ ಜೋರಾಗಿ ಇದು ಹುಡುಗಾಟದ ವಿಷಯ ಅಲ್ಲ, ಸುಳ್ಳು ಹೇಳಿದ ಮೇಲೆ ಕ್ಷಮೆ ಕೇಳಬೇಕು ಎಂದು ಮನದಲ್ಲಿ ಇದ್ದರೇ ಪದೇ ಪದೇ ಸುಳ್ಳು ಹೇಳಲು ಯಾರು ಹಿಂಜರಿಯುವುದಿಲ್ಲ, ಸುಳ್ಳಿಗೆ ಕ್ಷಮೆ ಪರಿಹಾರ ಅಲ್ಲ, ಎಂದು ಹೇಳಿ ಕೋಪದಿಂದ ಅಲ್ಲಿಂದ ಹೋಗುತ್ತಾಳೆ. ಇದನ್ನು ನೋಡಿದ ಸುಮಾ ಆದರೂ ಅಕ್ಕಂದು ಇದು ಜಾಸ್ತಿ ಆಯಿತು, ಸರ್ ಅಷ್ಟೊಂದು ಕ್ಷಮೆ ಕೇಳಿದರೂ ಅಕ್ಕ ಮನಸ್ಸು ಮಾತ್ರ ಕರಗಲೇ ಇಲ್ಲ ಅಲ್ವಾ ಎಂದು ಸ್ನೇಹಾ ಬಳಿ ಚರ್ಚಿಸುತ್ತಾಳೆ.
ಸ್ನೇಹಾ ಅಕ್ಕನ ಮಾತಲ್ಲಿ ನ್ಯಾಯ ಇದೆ, ಅದಕ್ಕೆ ನಾನು ಏನು ಅಂದಿಲ್ಲ ಎಂದು ಹೇಳಿದಾಗ ಕಂಠಿಗೆ ದಿಗಿಲು ಆಗುತ್ತದೆ. ಇದನ್ನೆಲ್ಲ ಕೇಳಿದ ಮೇಷ್ಟ್ರು ಅಲ್ಲಿಂದ ಬಹಳ ಬೇಸರದಿಂದ ಹೋಗುತ್ತಾರೆ. ಕಂಠಿ ಇದೇನು ಮೇಷ್ಟ್ರು ಹೋದರು, ಸಹನಾ ಅವರ ಹಿಂದೆ ಹೋಗಿ ಕ್ಷಮೆ ಕೇಳಬೇಕಿತ್ತು ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಕೊಂಚ ಜೋರಾಗಿ ಅದೆಲ್ಲ ಇಲ್ಲ, ನಮ್ಮದರಲ್ಲಿ ಕ್ಷಮೆ ಕೇಳಿದ ಬಳಿಕ ಹಿಂದೆ ಬಿದ್ದು ಕ್ಷಮೆ ಕೇಳುವುದು ಅದೆಲ್ಲ ಸರಿ ಅಲ್ಲ ಎಂದು ಹೇಳಿದಾಗ ಕಂಠಿ ಸುಮ್ಮನೆ ಇರುತ್ತಾನೆ.
ಇದನ್ನೆಲ್ಲ ಕೇಳಿದ ಸಿದ್ದೇಶ್ ಅಕ್ಕನೆ ಹಾಗಾದರೆ ಇನ್ನೂ ತಂಗಿ ಅಂದಾಗ ಕಂಠಿಗೆ ಇನ್ನೂ ಟೆನ್ಶನ್ ಹೆಚ್ಚಾಗಿ ಬಿಡುತ್ತದೆ. ಇನ್ನು ಪುಟ್ಟಕ್ಕ ರಸ್ತೆಯಲ್ಲಿ ನಡೆದುಕೊಂಡು ಬರುತ್ತಾ ಇರುತ್ತಾಳೆ. ಗಂಡಿನ ಕಡೆಯವರು ಇಟ್ಟ ಬೇಡಿಕೆಯನ್ನು ಯೋಚನೆ ಮಾಡುತ್ತಾ ಇರುತ್ತಾಳೆ. ರಾಜೇಶ್ವರಿ ಮಾತುಗಳನ್ನು ಎಲ್ಲಾ ಯೋಚನೆ ಮಾಡುತ್ತಾ ಬರುವಾಗ ರಸ್ತೆಯಲ್ಲಿ ಪುಟ್ಟಕ್ಕ ತಲೆಸುತ್ತಿ ಬೀಳುತ್ತಾಳೆ.

ಪುಟ್ಟಕ್ಕನ ಸಹಾಯಕ್ಕೆ ಬಂದ ಊರ ಮಂದಿ
ಇದನ್ನು ನೋಡಿದ ಜನ ಪುಟ್ಟಕ್ಕನನ್ನು ಎದ್ದೇಳಿಸಲು ಬಂದಾಗ ಅಲ್ಲಿಗೆ ಬಂಗಾರಮ್ಮ ಬರುತ್ತಾರೆ. ಪುಟ್ಟಕ್ಕನನ್ನು ಆ ಸ್ಥಿತಿಯಲ್ಲಿ ಕಂಡ ಬಂಗಾರಮ್ಮಗೆ ಬಹಳ ಬೇಸರ ಆಗುತ್ತದೆ. ಎಲ್ಲಿಗೆ ಒಬ್ಬಳೇ ಹೋಗಿದ್ದೆ, ಮಕ್ಕಳನ್ನು ಕರೆದುಕೊಂಡು ಹೋಗಬಾರದಾಗಿತ್ತ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಭೀಗರ ಮನೆಗೆ ಹೋಗಿದ್ದೆ ಎಂದು ಹೇಳುತ್ತಾಳೆ. ಇನ್ನು ತನ್ನ ಕಾರಿನಲ್ಲಿ ಪುಟ್ಟಕ್ಕನನ್ನು ಮೆಸ್ ಬಳಿ ಬಿಡಲು ಬರುತ್ತಾರೆ.

ಬಂಗಾರಮ್ಮನನ್ನು ನೋಡಿ ನಡುಗಿದ ಕಂಠಿ
ಬಂಗಾರಮ್ಮ ಅವರ ಕಾರು ನೋಡಿದ ಸುಮಾ ಜೋರಾಗಿ ಬಂಗಾರಮ್ಮ ಅವರ ಕಾರು ಬಂತು ಅಕ್ಕ ನೀನು ಬಚ್ಚಿ ಇಟ್ಟುಕೋ ಎಂದಾಗ ಬೆದರಿದ ಕಂಠಿ ಈಗಲೇ ಬರಬೇಕಾಗಿತ್ತ ಎಂದು ಸಿದ್ದೇಶ್ ಕಡೆ ನೋಡುತ್ತಾನೆ. ಅವರಿಗೂ ಏನು ಮಾಡಬೇಕು ತಿಳಿಯಲಿಲ್ಲ. ಇನ್ನು ಸ್ನೇಹಾ ಎಲ್ಲಿ ಅವಿತು ಕುಳಿತುಕೊಳ್ಳುತ್ತಾಳೋ ಅಲ್ಲಿಗೆ ಕಂಠಿ ಬಂದಾಗ ಸ್ನೇಹಾ ಕಂಠಿಯನ್ನು ಸಮಾಧಾನ ಮಾಡುತ್ತಾಳೆ..ಬಳಿಕ ಇಲ್ಲಿ ಯಾಕೆ ಅವಿತು ಕುಳಿತುಕೊಳ್ಳಲು ಬಂದಿರಿ ಎಂದು ಪ್ರಶ್ನೆ ಮಾಡುತ್ತಾಳೆ. ಪುಟ್ಟಕ್ಕನನ್ನು ನೋಡಿದ ಆಕೆಯ ಮಕ್ಕಳು ಓಡಿ ಬಂದು ಅಮ್ಮನಿಗೆ ಏನಾಯಿತು ಎಂದು ವಿಚಾರಣೆ ಮಾಡುತ್ತಾರೆ. ಪುಟ್ಟಕ್ಕ ಬಂಗಾರಮ್ಮ ಅವರನ್ನು ನೋಡಿ ಧನ್ಯವಾದ ಅರ್ಪಣೆ ಮಾಡುತ್ತಾರೆ.

ಪುಟ್ಟಕ್ಕನನ್ನು ಸಮಾಧಾನ ಮಾಡಿದ ಕಂಠಿ
ಇದನ್ನು ಕೇಳಿದ ಬಂಗಾರಮ್ಮ ಮಾತ್ರ ಹಾಗೆಲ್ಲ ನನ್ನ ಬಳಿ ಹೇಳಿದರೆ ಸರಿ ಇರುವುದಿಲ್ಲ ಎಂದೆಲ್ಲ ಹೇಳುತ್ತಾರೆ. ಇನ್ನು ಮಗನಿಗೆ ನಾನು ಹೇಳಿದ್ದೆ ಪುಟ್ಟಕ್ಕನ ಮನೆಗೆ ಹೋಗು ಎಂದು ಬಂದಿಲ್ವ ಎಂದು ಕೇಳಿದಾಗ ಎಲ್ಲರಿಗೂ ಕೊಂಚ ಗಲಿ ಬಿಲಿ ಆಗುತ್ತದೆ. ಇನ್ನು ಬಂಗಾರಮ್ಮ ಪುಟ್ಟಕ್ಕನ ಬಳಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೊರಡುತ್ತಾಳೆ. ಆಕೆ ಹೊರಟ ಬಳಿಕ ಅಲ್ಲಿಗೆ ಬಂದ ಕಂಠಿಯನ್ನೂ ನೋಡಿ ಶಾಕ್ ಆಗಿ ಮಾತನಾಡುತ್ತಾರೆ. ನೀನು ಇಲ್ಲಿಗೆ ಬಂದಿದಿಯಾ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾಳೆ. ಇದನ್ನು ಕೇಳಿದ ಕಂಠಿ ಅಮ್ಮನ ಬಳಿ ಉತ್ತರ ಹೇಳುತ್ತ ಇರುತ್ತಾನೆ. ಇದನ್ನೆಲ್ಲ ಸ್ನೇಹಾ ಕಿಟಕಿಯಿಂದ ನೋಡುತ್ತಾ ಇರುವುದನ್ನು ಕಂಠಿ ನೋಡುತ್ತಾನೆ. ಇನ್ನು ರಾಜೇಶ್ವರಿ ಮಾತ್ರ ಬಹಳ ಖುಷಿಯಲ್ಲಿರುತ್ತಾಳೆ. ಪುಟ್ಟಕ್ಕನಿಗೆ ಇನ್ನೂ ಮೇಲೆ ನರಕಯಾತನೆ ಮುಗಿಯುವುದು ಇಲ್ಲ ಎಂದು ಮನದಲ್ಲಿ ಖುಷಿ ಪಡುತ್ತಾ ಇರುತ್ತಾಳೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ .