Puttakkana Makkalu: ಸ್ನೇಹಾ ಬಗ್ಗೆ ತಾತ್ಸಾರವಾಗಿ ಮಾತನಾಡಿದ ಬಂಗಾರಮ್ಮಗೆ ನಾಟಿದೆ ಪುಟ್ಟಕ್ಕನ ಮಾತಿನ ಚಾಟಿ ಏಟು!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಪುಟ್ಟಕ್ಕ ಮಗಳ ಜೀವನ ಸರಿ ಹೋಗಲು ಆಕೆಯೇ ಪಂಚಾಯಿತಿ ಕರೆದಿದ್ದಾಳೆ. ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ನ್ಯಾಯ ಹೇಳಬೇಕಿದ್ದ ಬಂಗಾರಮ್ಮ ಇದೀಗ ಪುಟ್ಟಕ್ಕನ ವಿರುದ್ದ ಪೈಪೋಟಿ ಮಾಡಬೇಕಾಗಿದೆ. ಆಲೋಚನೆ ಮಾಡದ ತಪ್ಪಿಗೆ ಬಂಗಾರಮ್ಮ ಬಹು ದೊಡ್ಡ ದಂಡವನ್ನು ತೆರಬೇಕಾದ ಅನಿವಾರ್ಯತೆ ಬಂದೊದಗಿದೆ.
ಇದೀಗ ತಾಂಡವ ಅಂದುಕೊಂಡ ಹಾಗೆ ಕಂಠಿಯನ್ನು ಜೈಲಿನಿಂದ ಬಿಡಿಸಲು ಸ್ನೇಹಾ ಬಂದೇ ಬಿಟ್ಟಿದ್ದಾಳೆ. ಸ್ನೇಹಾ ತಾಂಡವನ ಬಳಿ ಕಂಠಿಯನ್ನು ಜೈಲಿನಿಂದ ಬಿಡಿಸಲು ಬಂದಿರುವೆ ದಯಮಾಡಿ ಅವರನ್ನು ಬಿಟ್ಟು ಬಿಡಿ ಎಂದಾಗ ತಾಂಡವ ಅದು ಸಾಧ್ಯ ಇಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಯಾಕೆ ಹೀಗೆ ಮಾತಾಡುತ್ತಾ ಇದ್ದೀರಾ ದಯವಿಟ್ಟು ಹೀಗೆಲ್ಲ ಮಾಡಲು ಹೋಗಬೇಡಿ ಎಂದೆಲ್ಲ ಹೇಳುತ್ತಾಳೆ.

ಇದನ್ನು ಕೇಳಿದ ತಾಂಡವ ಕಂಠಿ ಜೈಲಿನಲ್ಲಿ ಇಲ್ಲ ಎಸ್ಕೇಪ್ ಆಗಿದ್ದಾನೆ ಎಂದು ಹೇಳಿದಾಗ ಕಂಠಿ ಜೋರಾಗಿ ಮಾತನಾಡುತ್ತಾನೆ. ಯಾಕೆ ಸರ್ ಈ ರೀತಿ ಸುಳ್ಳು ಹೇಳುತ್ತೀರಾ ನಾನು ಹೇಳಿದ್ದೆನಲ್ಲ ನನ್ನನ್ನು ಬಿಡಿಸಿಕೊಂಡು ಹೋಗಲು ನನ್ನ ಹೆಂಡ್ತಿ ಬಂದೆ ಬರುತ್ತಾಳೆ ಎಂದು ಹೇಳಿದಾಗ ತಾಂಡವಗೆ ಮಾತ್ರ ಸಿಟ್ಟು ಬರುತ್ತದೆ.
ಆದರೆ ಏನು ಮಾತನಾಡದ ಸ್ಥಿತಿಯಲ್ಲಿ ಇದ್ದಾನೆ ಆತ. ಇನ್ನು ಸ್ನೇಹಾ ಮಾತ್ರ ಕಂಠಿ ಮಾತಿಗೆ ದುರುಗುಟ್ಟಿ ನೋಡುತ್ತಾ ಇರುತ್ತಾಳೆ. ಇನ್ನು ಕಂಠಿಯನ್ನು ಜೈಲಿನಿಂದ ರಿಲೀಸ್ ಮಾಡಿಕೊಂಡು ಪಂಚಾಯತ್ ಅತ್ತ ಹೊರಡುತ್ತಾಳೆ. ಇನ್ನು ಪಂಚಾಯಿತಿಯಲ್ಲಿ ರಾಜೇಶ್ವರಿ ಬಂಗಾರಮ್ಮನ ಕಡೆ ನಿಂತು ಮಾತನಾಡುತ್ತಾ ಇರುತ್ತಾಳೆ.
ಪುಟ್ಟಕ್ಕ ರಾಜೀ ಬಳಿ ನೀನು ನನ್ನ ಗಂಡನ ಮದುವೆ ಆಗಿದ್ದಿಯಲ್ಲ ಎಂದು ಹೇಳಿದಾಗ ರಾಜೀ ನಾನು ನಿನ್ನ ಗಂಡ ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಟ್ಟೆ ಮದುವೆ ಆಗಿದ್ದೇವೆ ಎನ್ನುತ್ತಾಳೆ. ಪುಟ್ಟಕ್ಕ ನನ್ನ ಮಗಳು ಮತ್ತೆ ಬಂಗಾರಮ್ಮನ ಮಗ ಸಹ ಪ್ರೀತಿ ಮಾಡಿ ಮದುವೆ ಆಗಿದ್ದು ಎಂದು ಹೇಳುತ್ತಾಳೆ.
ಆ ವೇಳೆ ಬಂಗಾರಮ್ಮ ಕೊಂಚ ಜೋರಾಗಿ ಪುಟ್ಟಕ್ಕ ನಿನ್ನ ಮಗಳು ನನ್ನ ಮಗನ ತಲೆ ಕೆಡಿಸಿ ಮದುವೆ ಮಾಡಿಕೊಂಡಿರುವುದು, ಇದು ಸರಿ ಅಲ್ಲ ಎಂದೆಲ್ಲ ಹೇಳಿದಾಗ ಪುಟ್ಟಕ್ಕ ಬಂಗಾರಮ್ಮಗೆ ನೀವು ಆಡಿದ ಮಾತು ವಾಪಸ್ ತೆಗೆದುಕೊಳ್ಳಿ ನನ್ನ ಮಗಳು ಯಾವತ್ತೂ ಹಾಗೆ ಮಾಡುವುದು ಇಲ್ಲ ಎಂದು ಖಡಕ್ ಆಗಿ ಹೇಳಿದಾಗ ಬಂಗಾರಮ್ಮಗೆ ಕೊಂಚ ಶಾಕ್ ಆಗುತ್ತದೆ.


Click it and Unblock the Notifications











