Puttakkana Makkalu: ಸಹನಾ - ಮುರಳಿನ ದೂರ ಮಾಡುತ್ತಾಳಾ ಕೌಸಲ್ಯ?
ಕಂಠಿ ತಾನು ಮದುವೆ ಆಗುತ್ತಿರುವ ಹುಡುಗಿಯನ್ನು ಪರಿಚಯ ಮಾಡಿಸುತ್ತೇನೆ ಎಂದು ಹೇಳಿದ ವೇಳೆಯಿಂದ ಬಹಳ ಬೇಸರ ಪಟ್ಟುಕೊಂಡು ಇದ್ದಾಳೆ ಸ್ನೇಹಾ. ಆಕೆ ಕಂಠಿ ಹುಡುಗಿಯನ್ನು ಭೇಟಿ ಆಗಲು ಬಹಳ ಅಂದವಾಗಿ ತಯಾರಿಯಾಗುತ್ತ ಇರುತ್ತಾಳೆ. ಇದೆಲ್ಲವನ್ನೂ ನೋಡಿದ ಸುಮಾ ನಗುತ್ತಾ ಇರುತ್ತಾಳೆ. ಆ ವೇಳೆ ಆಗಲೇ ಕಂಠಿ ಜೀಪ್ ಬಂದು ನಿಲ್ಲುತ್ತದೆ.
ಶ್ರೀ ಬಂದೆ ಬಿಟ್ಟ ಎಂದು ಸ್ನೇಹಾ ಖುಷಿಯಲ್ಲಿ ಹೋದರೆ ಅಲ್ಲಿ ಬಂದಿದ್ದು ಕಂಠಿ ಗೆಳೆಯರು. ಕಂಠಿ ಗೆಳೆಯರನ್ನು ನೋಡಿದ ಸ್ನೇಹಾ ಕೊಂಚ ಬೇಸರ ವ್ಯಕ್ತ ಪಡಿಸುತ್ತಾಳೆ. ಕಂಠಿ ಗೆಳೆಯರು ಬೇಗ ಬನ್ನಿ ಅಕ್ಕ ಎಂದಾಗ ಸ್ನೇಹಾ ತಡ ಮಾಡದೇ ಹೋಗುತ್ತಾಳೆ. ಇನ್ನು ಕಂಠಿ ಗೆಳೆಯರು ಸ್ನೇಹಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಿಡುತ್ತಾರೆ ಇದನ್ನು ಕಂಡ ಸ್ನೇಹಾಗೆ ಕೊಂಚ ಭಯ ಆಗುತ್ತದೆ.

ಇಲ್ಲಿ ಯಾಕೆ ಭೇಟಿ ಮಾಡಲು ಹೇಳಿದರು ಇಂತಹ ನಿರ್ಜನ ಪ್ರದೇಶದಲ್ಲಿ ಏನು ಮಾತನಾಡಲು ಇದೆ ಎಂದಾಗ ಕಂಠಿ ಗೆಳೆಯರು ಇದು ಅಣ್ಣನ ಪ್ಲಾನ್ ಅಲ್ಲ ಅಕ್ಕ, ಇದು ಅವರ ಹುಡುಗಿ ಪ್ಲಾನ್ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಸುಮ್ಮನಾಗ್ತಾಳೆ. ಮುಂಗುಸಿ ಹಾಗೂ ಆತನ ಗೆಳೆಯ ಅಲ್ಲಿಂದ ಹೋಗುತ್ತಾರೆ. ಬಳಿಕ ಸ್ನೇಹಾ ಮಾತ್ರ ಒಬ್ಬಳೇ ನಡೆದುಕೊಂಡು ಬರುತ್ತಾಳೆ.
ಸ್ವಲ್ಪ ದೂರ ನಡೆದು ಬಂದ ಸ್ನೇಹಾ ಭಯದಿಂದ ಶ್ರೀ ಎಂದು ಕರೆಯುತ್ತಾಳೆ. ಅಷ್ಟರಲ್ಲಿ ಲೈಟ್ ಗಳು ಬೆಳಗುತ್ತದೆ. ಇದೇನಿದು ಲೈಟ್ ಗಳು ಬೆಳಗುತ್ತಿದೆ ಎಂದಾಗ ಅಲ್ಲಿಗೆ ವಾದ್ಯ ಮೇಳದವರು ಬರುತ್ತಾರೆ. ಅದನ್ನು ಕಂಡ ಸ್ನೇಹಾ ಮನದಲ್ಲಿ ನಾನು ಅಲ್ಲ ಅವರ ಹುಡುಗಿ ಬೇರೆ ಇದ್ದಾರೆ ಬರಬೇಕಷ್ಟೆ ಎನ್ನುವ ವೇಳೆ ಕಂಠಿ ಎದುರಿಗೆ ಬರುತ್ತಾನೆ. ಆತ ಪಂಚೆ ಶರ್ಟ್ ಹಾಕಿದ್ದನ್ನು ನೋಡಿ ಮೈ ಮರೆತು ಅಲ್ಲೇ ನಿಂತು ಬಿಡುತ್ತಾಳೆ.
ಸ್ನೇಹಾ ಅವರೇ ನೀವಾ, ನಾನು ನನ್ನ ಹುಡುಗಿ ಬಂದಳು ಅಂದುಕೊಂಡೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ಬೇಸರ ಆದರೂ ಸುಮ್ಮನೆ ಇರುತ್ತಾಳೆ. ಬಳಿಕ ವಾದ್ಯ ಊದುವವರ ಬಳಿ ಇದು ನನ್ನ ಹುಡುಗಿ ಅಲ್ಲ.. ವಾದ್ಯ ಊದುವುದನ್ನು ನಿಲ್ಲಿಸಿ ಎಂದು ಹೇಳುತ್ತಾನೆ.
ಬಳಿಕ ಸ್ನೇಹಾ ಬಳಿ ನಾವು ನನ್ನ ಹುಡುಗಿ ಬರುತ್ತಾಳೆ ಅಲ್ವಾ ಅದಕ್ಕೆ ಒಳ್ಳೆಯ ಅರೇಂಜ್ ಮೇಂಟ್ ಮಾಡಿಕೊಂಡಿದ್ದೇವೆ, ನೀವು ಅದರ ಜಲಕ್ ಒಮ್ಮೆ ನೋಡಿ ಎಂದು ಕರೆದುಕೊಂಡು ಹೋಗುತ್ತಾನೆ. ಇನ್ನು ಸಹನಾ ಅತ್ತೆಯ ವರ್ತನೆ ಸರಿ ಕಾಣದ್ದನ್ನು ನೋಡಿ ಬಹಳ ಬೇಸರ ಪಟ್ಟುಕೊಂಡಿರುತ್ತಾಳೆ. ಮದುವೆ ಆದರೂ ತನ್ನ ಗಂಡನ ಜೊತೆ ಮಾತನಾಡಬಾರದು ಎಂದು ಇದ್ದರೆ ಹೇಗೆ ಎಂದು ಅಳುತ್ತಾ ಇರುತ್ತಾಳೆ.
ಇನ್ನು ಚಿತ್ರ ಬಳಿ ಆದರೂ ತನ್ನ ಗಂಡನಿಗೆ ಕರೆ ಮಾಡಲು ಫೋನ್ ಕೇಳಬೇಕು ಎಂದು ಅಂದುಕೊಳ್ಳುತ್ತಾ ಇರುತ್ತಾಳೆ. ಅಷ್ಟರಲ್ಲಿ ಪುನಃ ಮುರಳಿ ಕರೆ ಮಾಡಿ ಸಹನಾ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಯಾಕೆ, ನಾನು ಆಕೆಯ ಬಳ ಮಾತನಾಡಬೇಕು ಎಂದಾಗ ಸಹನಾ ದೇವಾಲಯಕ್ಕೆ ಹೋಗಿದ್ದಾಳೆ, ಹಾಗೆ ಹೀಗೆ ಎಂದು ಸುಳ್ಳು ಹೇಳುತ್ತಾಳೆ. ಆದರೆ ಸಹನಾ ಮಾತ್ರ ಕೌಸಲ್ಯ ಎದುರು ಇರುತ್ತಾಳೆ. ಇದನ್ನು ಕೇಳಿಸಿಕೊಂಡ ಮುರಳಿಗೆ ಬೇಸರ ಆಗುತ್ತದೆ.
ಇನ್ನು ಸಹನಾ ಮಾತ್ರ ಅಳುತ್ತಾ ತನ್ನ ಬೆಡ್ ರೂಂ ಸೇರಿಕೊಳ್ಳುತ್ತಾಳೆ. ಆಗ ಅಲ್ಲಿಗೆ ಬಂದ ಚಿತ್ರ ನಾನು ಇವತ್ತು ಒಂದು ಫಂಕ್ಷನ್ ಗೆ ಹೋಗಬೇಕು ಅದಕ್ಕೆ ನಿಮ್ಮದು ಸೀರೆ ಕೊಡುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಸ್ನೇಹಾ ಸರಿ ಎಂದು ಹೇಳುತ್ತಾಳೆ. ಬಳಿಕ ಸೀರೆ ತೆಗೆದುಕೊಂಡು ಹೋಗಲು ರೆಡಿ ಆದಾಗ ಚಿತ್ರ ಎಂದು ಕರೆಯುತ್ತಾರೆ. ಆಗ ಅಲ್ಲಿಗೆ ಬಂದ ಕೌಸಲ್ಯ ನಿನ್ನ ಜೊತೆ ಫೋನ್ ಕೊಡದೇ ಇರುವುದರ ಉದ್ದೇಶ ಬೇರೇನೂ ಇಲ್ಲ, ಮುರಳಿ ಒಳ್ಳೆಯ ಕ್ಲಾಸ್ ಮಾಡಲಿ ಆತನ ಯೋಚನೆ ನಿನ್ನ ಮೇಲೆ ಇದ್ದರೆ ಕಷ್ಟ ಇನ್ನು ಮುರಳಿ ವಾರ ವಾರ ಮನೆಗೆ ಬರುತ್ತಾನೆ ಅಲ್ವಾ ಆಗ ಮಾತನಾಡಿಕೊ ಎಂದು ಹೇಳಿ ಹೋಗುತ್ತಾರೆ. ಇದನ್ನು ಕೇಳಿದ ಸಹನಾಗೆ ಇನ್ನೂ ದುಃಖ ಉಮ್ಮಳ್ಳಿಸಿ ಬರುತ್ತದೆ. ಇನ್ನು ಬಂಗಾರಮ್ಮ ಮನೆಗೆ ದೇವಾಲಯದ ಕಡೆಯಿಂದ ಪೂಜೆ ಹೇಳಲು ಬರುತ್ತಾರೆ. ಬಂಗಾರಮ್ಮ ಮಾತ್ರ ಬರುವಂತೆ ಹೇಳುತ್ತಾರೆ. ಅವರ ಗಂಡ ಬರುವುದು ಬೇಡ ಎಂದಾಗ ಬಂಗಾರಮ್ಮಗೆ ಸಿಕ್ಕಾಪಟ್ಟೆ ಕೋಪ ಬಂದು ಮನೆಯಿಂದ ಆಚೆ ಹೋಗಲು ಹೇಳುತ್ತಾರೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











