Puttakkana Makkalu: ಸ್ನೇಹಾ - ಕಂಠಿಗೆ ಮದುವೆ ಮಾಡಲು ಪಣ ತೊಟ್ಟ ಬಂಗಾರಮ್ಮ

By Poorva
Kannada serial Puttakkana Makkalu written updateon 18th April

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೂರೆಗೊಂಡಿದೆ. ಇದೀಗ ಕಂಠಿ ಹುಬ್ಬಳ್ಳಿಗೆ ಹೋಗಲು ಪುಟ್ಟಕ್ಕನ ಒಪ್ಪಿಗೆ ಸಿಕ್ಕಿ ಆಗಿದೆ. ಸ್ನೇಹಾಳನ್ನು ಹುಬ್ಬಳ್ಳಿಗೆ ಬಿಡಲು ಕಂಠಿ ನಿರ್ಧಾರ ಮಾಡಿದ್ದಾನೆ. ಇನ್ನು ಕಂಠಿ ಸ್ನೇಹಾ ಕರೆಗಾಗಿ ಕಾದು ಕುಳಿತಿದ್ದಾನೆ. ಹಾಗೆಯೇ ಈ ವಿಚಾರ ಸ್ನೇಹಾಗೆ ತಿಳಿಯಲಿ ಎಂದು ವಾಟ್ಸ್ ಆಪ್ ನಲ್ಲಿ ಮುಂಗುಸಿ ಫೀಲಿಂಗ್ಸ್ ನಲ್ಲಿ ಬರೆದುಕೊಂಡಿರುತ್ತಾನೆ.

ಸುಮಾ ಪುಸ್ತಕದ ವಿಚಾರವಾಗಿ ಆಕೆಯ ಫೋನ್ ನಿಂದಾ ಗೆಳತಿಗೆ ಕರೆ ಮಾಡಿ ವಿಚಾರ ಮಾಡುತ್ತಾ ಇರುತ್ತಾಳೆ. ಗೆಳತಿ ಜೊತೆ ಫೋನ್ ನಲ್ಲಿ ಮಾತನಾಡಿದ ಕೂಡಲೇ ಸುಮಾ ವಾಟ್ಸ್ ಆ್ಯಪ್ ಸ್ಟೇಟಸ್ ನೋಡುತ್ತಾಳೆ.. ಅದರಲ್ಲಿ ಕಂಠಿ ಸ್ಟೇಟಸ್ ನೋಡಿ ಅಕ್ಕನ ಬಳಿ ಬಂದು ಹೇಳುತ್ತಾಳೆ .

ಬಳಿಕ ಫೋನ್ ಸ್ವಿಚ್ ಆನ್ ಮಾಡಿ ಕೊಟ್ಟು ಬಾವನ ಬಳಿ ಮಾತನಾಡು ಅಕ್ಕ ಎಂದು ಹೇಳುತ್ತಾಳೆ. ಆ ಕೂಡಲೇ ಸ್ನೇಹಾ ಕಂಠಿಗೆ ಕರೆ ಮಾಡಿ ಸುಮಾಳನ್ನು ಅಲ್ಲಿಂದ ಓಡಿಸಿ ಬಿಡುತ್ತಾಳೆ. ಇನ್ನು ಕಂಠಿ ಬಳಿ ಪ್ರೀತಿಯಿಂದ ಮಾತನಾಡಿದ ಸ್ನೇಹಾಗೆ ಕಂಠಿ ತನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾ ಇದ್ದಾರನೆಂದು ತಿಳಿದು ಮರುಕ ಆಗುತ್ತದೆ. ಇನ್ನು ಸಹನಾ ಜೊತೆ ಮುರಳಿ ಕರೆ ಮಾಡಿ ಮಾತನಾಡುತ್ತಾ ಇರುತ್ತಾನೆ. ಇದನ್ನೆಲ್ಲ ಚಿತ್ರ ಗಂಡ ಕೇಳಿಸಿಕೊಂಡಿರುತ್ತಾನೆ .

ಆತನಿಗೆ ಸಹನಾ ಯಾರ ಜೊತೆಯೂ ಮಾತನಾಡಬಾರದು ಆಕೆ ನನಗೆ ಮಾತ್ರ ಎಂದು ಯೋಚನೆ ಮಾಡುತ್ತಾ ಸಮಯಕ್ಕೆ ಕಾದು ಕುಳಿತುಕೊಂಡಿರುತ್ತಾನೆ. ಸಹನಳನ್ನು ಹೇಗಾದರೂ ಮಾಡಿ ನನ್ನವಳನ್ನಾಗಿ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇನ್ನು ಸಹನಾ ಮುರಳಿ ಧ್ಯಾನದಲ್ಲಿ ಇರುತ್ತಾಳೆ.

ನನ್ನ ಗಂಡ ಯಾವತ್ತು ಬರುತ್ತಾರೆ ಎಂದು ಆತ ಬರುವ ದಾರಿಯನ್ನು ಕಾಯುತ್ತಾ ನಿಂತುಕೊಂಡಿರುತ್ತಾಳೆ. ಇನ್ನು ಕೌಸಲ್ಯ ಹಾಗೂ ಆಕೆಯ ಗಂಡ ರಾಜೇಶ್ವರಿ ಜೊತೆ ಮಾತನಾಡುತ್ತಾ ಇರುತ್ತಾರೆ. ರಾಜೇಶ್ವರಿ ಕೌಸಲ್ಯಳನ್ನು ಹಂಗಿಸಿ ಮಾತನಾಡಿದರೆ ಕೌಸಲ್ಯಗೆ ರಾಜೀ ಮಾತನಾಡುವಾಗ ಸಖತ್ ಕೋಪ ಬರುತ್ತಾ ಇತ್ತು. ಆದರೂ ಅದನ್ನೆಲ್ಲ ಸಹಿಸಿಕೊಂಡು ರಾಜೀ ಮಾತು ಕೇಳಿಸಿಕೊಂಡಳು.

ಇನ್ನು ಸಹನಳನ್ನು ಹೇಗಪ್ಪ ಮನೆ ಬಿಟ್ಟು ಓಡಿಸುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ರಾಜಿ ಮಾತಿನ ಮೇಲೆ ನಂಬಿಕೆ ಇಟ್ಟು ಅಲ್ಲಿಂದ ಹೋಗುತ್ತಾರೆ. ಇತ್ತ ನಂಜಮ್ಮ ಚಂದ್ರು ಬಾಯಿ ಬಿಡಿಸುವ ಎಲ್ಲಾ ಪ್ರಯತ್ನ ಮಾಡುತ್ತ ಇದ್ದಾಳೆ. ಕಂಠಿ ಹಾಗೂ ಸ್ನೇಹಾ ನಡುವೆ ಲವ್ ಇದೆ ಎಂದು ಗೊತ್ತಾದ ನಂಜಮ್ಮಗೆ ಮಗನ ಬಾಯಿಯಿಂದಲೇ ಅದೆಲ್ಲವನ್ನೂ ಕೇಳುವ ಆಸೆ. ಚಂದ್ರು ಕಂಠಿ ಹಾಗೂ ಸ್ನೇಹಾ ಲವ್ ಸ್ಟೋರಿ ನಡುವೆ ಹೋಗದೆ ಸುಮ್ಮನೆ ಇರುತ್ತಾನೆ. ಆದರೆ ನಂಜಮ್ಮ ಸ್ನೇಹಾ ಹಾಗೂ ಕಂಠಿ ಮದುವೆ ಮಾಡಲು ನಿಶ್ಚಯ ಮಾಡುತ್ತಾಳೆ. ಬಂಗಾರಮ್ಮಗೆ ಪಾಠ ಕಲಿಸಲು ಸ್ನೇಹಾನೆ ಸರಿ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

More from Filmibeat

English summary
Kannada serial Puttakkana Makkalu written updateon 18th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X