Puttakkana Makkalu: ಅತ್ತೆ ಬಂಗಾರಮ್ಮನ ಉದಾರ ಮನದ ಬಗ್ಗೆ ಸ್ನೇಹಾಗೆ ತಿಳಿಯುತ್ತಾ?
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಮೇಲೆ ಅದೆಷ್ಟೇ ಮುನಿಸು ಇದ್ದರೂ ಪುಟ್ಟಕ್ಕ ಅಂದರೆ ಬಂಗಾರಮ್ಮಗೆ ಬಹಳ ಪ್ರೀತಿ. ಇನ್ನೂ ಕಂಠಿ ಪುಟ್ಟಕ್ಕನ ಮನೆಯಿಂದ ತನ್ನ ಮನೆಗೆ ಬರುತ್ತಾನೆ ,ಅಷ್ಟರಲ್ಲಿ ಬಂಗಾರಮ್ಮ ಅದೇನೋ ಕೆಲಸವನ್ನು ಮಾಡುತ್ತಾ ಬ್ಯುಸಿ ಆಗಿರುವಾಗ ಕಂಠಿ ತನ್ನ ತಾಯಿಯ ಬಳಿಗೆ ಬಂದು ಪುಟ್ಟಕ್ಕ ಕೊಟ್ಟ ಬಡ್ಡಿಯ ಹಣವನ್ನು ಕೊಡುತ್ತಾನೆ.
ಪುಟ್ಟಕ್ಕ ತುಂಬಾ ಸ್ವಾಭಿಮಾನಿ ಆಕೆ ಹೇಳಿದ ಟೈಮ್‌ಗೆ ಹಣವನ್ನು ಕೊಡುತ್ತಾಳೆ. ಇದೆಲ್ಲವೂ ಬಂಗಾರಮ್ಮಗೆ ತಿಳಿದಿದೆ. ಆದರೆ ಈ ಯಾವುದನ್ನು ಬಂಗಾರಮ್ಮ ಪುಟ್ಟಕ್ಕನಿಂದ ಬಯಸುತ್ತಾ ಇಲ್ಲ. ಇತ್ತ, ಪುಟ್ಟಕ್ಕ ಯೋಚನೆಯಲ್ಲಿ ಮುಳುಗಿದ್ದಾಳೆ. ನಾನು ಅಮ್ಮವರ ಬಳಿ ಅಷ್ಟೊಂದು ಹಣ ತೆಗೆದುಕೊಂಡು ಇದ್ದೇನೆ. ಆದರೆ, ಅವರು ಅದ್ಯಾವುದನ್ನೂ ಅಷ್ಟಾಗಿ ಗಮನಕ್ಕೆ ತೆಗೆದುಕೊಂಡಿಲ್ಲ. ಆದರೆ ಸ್ನೇಹಾ ಬೇರೆ ವ್ಯವಹಾರ ಬೇರೆ ಅವರ ಕೊಟ್ಟ ಹಣವನ್ನು ನಾನು ಕೊಟ್ಟೆ ಕೊಡುತ್ತೇನೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಹಾಗೆಯೇ ಆ ಹಣವನ್ನು ಕಂಠಿಯ ಜೊತೆ ಕಳುಹಿಸಿ ಕೊಟ್ಟಿರುತ್ತಾರೆ. ಇನ್ನೂ ಕಂಠಿ ಅದನ್ನು ತನ್ನ ತಾಯಿಯ ಬಳಿ ಕೊಡುತ್ತಾನೆ.

ಪುಟ್ಟಕ್ಕ ಕೊಟ್ಟ ಹಣವನ್ನು ಅಮ್ಮನಿಗೆ ಕೊಟ್ಟ ಕಂಠಿ
ಅಮ್ಮ ಪುಟ್ಟಕ್ಕ ಅವರ ಬಡ್ಡಿ ಹಣ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕನ ಮಗಳ ಸ್ನೇಹಾ ಕಿವಿ ನೆಟ್ಟಗಾಗುತ್ತದೆ. ಇದೇನಿದು ಅಮ್ಮ ಯಾವ ಹಣ ಕೊಟ್ಟಿರಬಹುದು ಎಂದು ಯೋಚನೆ ಮಾಡುತ್ತಾ ಇರುವಾಗ ಬಂಗಾರಮ್ಮ ಪುಟ್ಟಕ್ಕನನ್ನು ಹೊಗಳಿ ಮಾತನಾಡುತ್ತಾರೆ. ಆಡುವ ಮಕ್ಕಳು ವ್ಯವಹಾರ ಮಾಡಲಿಕ್ಕೆ ಇಲ್ಲ. ಅನುಭವಸ್ಥರು ವ್ಯವಹಾರ ಮರೆಯಲಿಕ್ಕಿಲ್ಲ ಎಂಬುವುದು ಎಷ್ಟು ಸತ್ಯ ಎಂದು ಹೇಳುತ್ತಾರೆ.
ಪುಟ್ಟಕ್ಕನನ್ನು ಹಾಡಿ ಹೊಗಳಿದ ಬಂಗಾರಮ್ಮ
ಪುಟ್ಟಕ್ಕ ಅದೆಷ್ಟು ಒಳ್ಳೆಯವಳು. ಮರಿಯದ ಹಾಗೆ ಹತ್ತನೇ ತಾರೀಕಿಗೆ ಬಡ್ಡಿ ದುಡ್ಡು ಕೊಟ್ಟಿದ್ದಾಳಲ್ಲ ಆಕೆಯನ್ನು ಮೆಚ್ಚಲೇ ಬೇಕು ಎಂದು ಜೋರಾಗಿ ಹೇಳುತ್ತಾಳೆ ಬಂಗಾರಮ್ಮ. ಪುಟ್ಟಕ್ಕನ ಮೆಸ್ ಸುಟ್ಟು ಹೋಗಿದೆ. ಹಾಗಿದ್ದರೂ ಅದು ಹೇಗೆ ಇಷ್ಟು ಹಣವನ್ನು ಹೊಂದಿಸಿದಳು ಪುಟ್ಟಕ್ಕ ಎಂಬುವುದೇ ತಿಳಿಯುತ್ತಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಗೌಡರ ಬಳಿ ಹಣ ಕೇಳಿದ್ದ ಬಗ್ಗೆ ಅಮ್ಮನಿಗೆ ಮಾಹಿತಿ ನೀಡಿದ ಕಂಠಿ
ಹಾಗೆಯೇ ಇದನ್ನು ಕಂಠಿಗೆ ಹೇಳುತ್ತಾರೆ ಬಂಗಾರಮ್ಮ. ಹಾಗೇನೂ ಇಲ್ಲ. ಪುಟ್ಟಕ್ಕ ಗೌಡರ ಬಳಿ ಕೇಳಿ ಇರಬಹುದು. ಪುಟ್ಟಕ್ಕ ಸುಮಾ ಫೀಸ್ ಅನ್ನು ಕಟ್ಟಲು ಗೌಡರ ಬಳಿ ಸಹಾಯ ಕೇಳಿದ್ದರು. ಆದರೆ ಇದು ಕೂಡ ಹಾಗೆ ಅನ್ನಿಸುತ್ತದೆ ಅವರ ಬಳಿ ಕೇಳಿ ಇರಬಹುದು ಎಂದು ಹೇಳಿದಾಗ ಸ್ನೇಹಾ ಗೆ ಕಣ್ಣು ತುಂಬಿ ಬರುತ್ತದೆ. ನಾನು ಇದ್ದರೂ ಅಮ್ಮನಿಗೆ ಕಷ್ಟ ತಪ್ಪುತ್ತಾ ಇಲ್ಲವಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ಹೋಗುತ್ತಾಳೆ. ಇನ್ನೂ ಪುಟ್ಟಕ್ಕನ ಮಗಳು ಸುಮಾ ಫೀಸ್ ಅನ್ನು ಬಂಗಾರಮ್ಮ ಕಟ್ಟಿದ್ದರು. ಆದರೆ ಇದ್ಯಾವುದೂ ಯಾರಿಗೂ ತಿಳಿಯಬಾರದು ಎಂದು ಕೋದಂಡನ ಬಳಿ ಹೇಳಿದ್ದರು. ಇದನ್ನು ಕೋದಂಡ ಬಂಗಾರಮ್ಮನ ಬಳಿ ಹೇಳುವಾಗ ಅಲ್ಲಿಗೆ ವಸು ಬರುತ್ತಾಳೆ.


Click it and Unblock the Notifications











