Puttakkana Makkalu: ಕೋಪದಿಂದ ಮಾತನಾಡಿದ ಸ್ನೇಹಾ ಮನಸು ಗೆಲ್ಲುತ್ತಾನಾ ಕಂಠಿ? ಕಂಠಿ ಮಾತಿಗೆ ಸ್ತಬ್ಧಗೊಂಡ ಸ್ನೇಹಾ
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸ್ನೇಹಾಗೆ ಪ್ರಸ್ತದ ಶಾಸ್ತ್ರ ಮಾಡಲು ಮುಂದಾಗಿದ್ದಾರೆ ವಸು ಹಾಗೂ ಸಹನಾ . ಸಹನಾ ಈ ಬಗ್ಗೆ ಸ್ನೇಹಾ ಬಳಿ ಪ್ರಶ್ನೆ ಮಾಡಿದ್ದಾರೆ. ಎಲ್ಲಾ ಕೂಡ ಮಾಡಿ ಆಯಿತು ಇನ್ನೂ ಇನ್ನು ಮಾಡಬೇಕಾದ ಒಂದು ಕೆಲಸ ಇದೆ ಅದಕ್ಕೆ ನಿನ್ನ ಬಳಿ ಆ ಬಗ್ಗೆ ಕೇಳಬೇಕು ಅನ್ನಿಸಿತು ಎಂದಾಗ ಸ್ನೇಹಾ ಜೋರಾಗಿ ಪ್ರಸ್ತಕ್ಕ ಸರಿ ಹಾಗಾದರೆ ನೀನು ಎಲ್ಲಾ ತಯಾರಿ ಮಾಡಿಕೋ ಎಂದು ಹೇಳಿ ಅಲ್ಲಿಂದ ಹೋದಾಗ ವಸು ಗೆ ಕೂಡ ಸ್ನೇಹಾ ನಡವಳಿಕೆ ಶಾಕ್ ಆಗುತ್ತದೆ.
ಇನ್ನೂ ವಸು ಕಂಠಿಗೆ ಕರೆ ಮಾಡಿ ಬೇಗ ಬಾ ..ಅಣ್ಣಯ್ಯ ..ನಿನ್ನದು ಇವತ್ತು ಪ್ರಸ್ತ ಶಾಸ್ತ್ರ ಇದೆ. ಎಂದಾಗ ಕಂಠಿ ಗೆ ಶಾಕ್ ಆಗುತ್ತದೆ ಆಗ ವಸು ಅಲ್ಲಿ ನಡೆದ ವಿಚಾರವನ್ನು ಹೇಳುತ್ತಾಳೆ ಆಗ ಕಂಠಿ ಯನ್ನೂ ಆತನ ಗೆಳೆಯರು ರೇಗಿಸುತ್ತಾರೆ. ಇನ್ನೂ ಕಂಠಿ ನೇರವಾಗಿ ಮನೆಗೆ ಹೋಗುತ್ತಾನೆ ಆ ವೇಳೆ ಮನೆಯಲ್ಲಿ ಪ್ರಸ್ತ ಕ್ಕೆ ಎಲ್ಲಾ ತಯಾರಿ ಕೂಡ ನಡೆದು ಇರುತ್ತದೆ ಕಂಠಿ ಬೆಳ್ಳಗಿನ ಶರ್ಟ್ ಹಾಗೂ ಪಂಚೆಯನ್ನು ಕಟ್ಟಿಕೊಂಡು ರೂಮಿನಲ್ಲಿ ಕುಳಿತುಕೊಂಡಿರುವಾಗ ಸ್ನೇಹಾ ಬಂದ ಹಾಗೆ ಅನ್ನಿಸುತ್ತಾ ಇರುತ್ತದೆ..

ಕಂಠಿ ಗೆ ಬಹಳ ಭಯ ಆಗುತ್ತದೆ. ಆಕೆ ಕಂಠಿ ಯ ಜೊತೆ ಮಾತನಾಡಬೇಕು ಎಂದು ಹೊರಟಾಗ ಕಂಠಿ ಮೆತ್ತಗೆ ಹೇಳುತ್ತಾನೆ ನಾನು ಕೆಳಗೆ ಮಲಗುತ್ತೇನೆ ನೀವು ಮೇಲೆ ಮಲಗಿ ಎಂದು ಹೇಳುತ್ತಾನೆ ಆದರೆ ಸ್ನೇಹಾ ಮಾತ್ರ ಕಂಠಿ ಬಳಿ ಜೋರಾಗಿ ಹೇಳುತ್ತಾಳೆ ಎನು ನನ್ನ ಮನಸು ಗೆಲ್ಲಬೇಕು ಅಂದುಕೊಂಡು ಇದ್ದೀರಾ ಹೀಗೆಲ್ಲ ಮಾಡಿದರೆ ನಾನು ಜಗ್ಗುವುದು ಇಲ್ಲ ಎಂದು ಹೇಳಿದಾಗ ಕಂಠಿ ಗೆ ಬೇಸರ ಆಗುತ್ತದೆ ಆತ ಸ್ನೇಹಾ ನ ಕಾಲಿಗೆ ಬಿದ್ದು ಕ್ಷಮೆ ಕೇಳಿದಾಗ ಸ್ನೇಹಾ ತಪ್ಪನ್ನು ಕ್ಷಮಿಸಿ ಬಿಗಿದಪ್ಪಿ ಕೊಂಡ ಹಾಗೆ ಭಾಸವಾಗುತ್ತದೆ
ಆದರೆ ಇದೆಲ್ಲ ಕನಸೆಂದು ಸ್ವಲ್ಪ ಹೊತ್ತಾದ ಬಳಿಕ ಅರಿವಿಗೆ ಬರುತ್ತದೆ .ಇನ್ನೂ ಕಂಠಿ ಸುಮ್ಮನೆ ಕುಳಿತು ಇರುವಾಗ ಸ್ನೇಹಾ ಬರುತ್ತಾಳೆ. ಸ್ನೇಹಾ ಜೋರಾಗಿ ಹೇಳುತ್ತಾಳೆ.. ನನಗೆ ಗೊತ್ತು ಇದು ನಿನ್ನದೇ ಮಾಸ್ಟರ್ ಪ್ಲಾನ್ ಎಂದು ನನಗೆ ಸುಳ್ಳು ಹೇಳುವವರು ಅಂದರೆ ಬಹಳ ಸಿಟ್ಟು ಬರುತ್ತದೆ ಅಂತಹದರಲ್ಲಿ ನೀವು ಅದೆಷ್ಟು ದೊಡ್ಡ ಸುಳ್ಳು ಹೇಳಿದಿರಿ ನನ್ನ ಜೊತೆ ಪ್ರೀತಿ ಅನುಕಂಪ ಗೆಳೆಯತನ ಸುಳ್ಳಿನಿಂದ ಪಡೆದುಕೊಂಡದ್ದು.. ನೀವು ಬಂಗಾರಮ್ಮನ ಮಗ ಎಂದು ಗೊತ್ತಿದ್ದರೆ ಖಂಡಿತ ನಿಮ್ಮ ಮದುವೆ ಆಗುತ್ತಾ ಇರಲಿಲ್ಲ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕಂಠಿ ಗೆ ನೋವು ಆದರೂ ಸುಮ್ಮನೆ ಇರುತ್ತಾನೆ. ಇನ್ನೂ ಕಂಠಿ ಮಾತ್ರ ಎನು ಮಾತನಾಡದೆ ಇರುವುದನ್ನು ಕಂಡ ಸ್ನೇಹಾ ಹೇಳುತ್ತಾಳೆ. ನಿನಗೆ ನನ್ನ ಪ್ರೀತಿ ಅಂತೂ ಸಿಕ್ಕಲ್ಲ .. ಇನ್ನೂ ದೇಹ ಬಲವಂತವಾಗಿ ತೆಗೆದುಕೋ ಎಂದು ಹೇಳಿದಾಗ ಕಂಠಿ ಹೇಳುತ್ತಾನೆ.
ನಾನು ನಿಮ್ಮನ್ನು ಬಹಳ ಪ್ರೀತಿ ಮಾಡಿದ್ದೇನೆ ನಿಮ್ಮನ್ನು ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡಿದ್ದೇನೆ ಮಾಡುತ್ತಿದ್ದೇನೆ ಕೂಡ. ಆ ಪ್ರೀತಿ ನಿಜವಾದ ಪ್ರೀತಿ ಎಂದು ನಿಮಗೆ ತಿಳಿಯುತ್ತದೆ. ಆಗ ನಾನು ನಿಮ್ಮ ಜೊತೆ ಸಂಸಾರ ನಡೆಸುತ್ತೇನೆ ಅಷ್ಟರ ವರೆಗೆ ನಿಮ್ಮನ್ನು ಮುಟ್ಟುವುದು ಇಲ್ಲ ಎಂದು ಹೇಳುತ್ತಾನೆ . ಕಂಠಿ ಮಾತಿಗೆ ಸ್ನೇಹಾ ಸ್ತಬ್ಧ ಗೊಳ್ಳುತ್ತಾಳೆ


Click it and Unblock the Notifications











