twitter
    For Quick Alerts
    ALLOW NOTIFICATIONS  
    For Daily Alerts

    Puttakkana Makkalu: ಹಣ ಸಹಾಯ ಮಾಡಿ ಪುಟ್ಟಕ್ಕನಿಗೆ ಮೋಸ ಮಾಡ್ತಾಳಾ ಬಂಗಾರಮ್ಮ?

    |

    ಮನೆಗೆ ಬಂದ ಪುಟ್ಟಕ್ಕನಿಗೆ ಬಂಗಾರಮ್ಮ ಮದುವೆಗೆ ಹಣ ಕೊಡುತ್ತಾರೆ. ಇದನ್ನು ನೋಡಿದ ಪುಟ್ಟಕ್ಕಗೆ ಕಣ್ಣಲ್ಲಿ ನೀರು ತುಂಬಿ ಬರುತ್ತದೆ. ಆದರೂ ನನಗೆ ಈ ಹಣ ಸಾಲದ ರೂಪದಲ್ಲಿ ಕೊಡಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದಾಗ ಬಂಗಾರಮ್ಮ ನನ್ನ ಪುಟ್ಟಕ್ಕ ಯಾರ ಬಳಿಯೂ ಕೈ ಚಾಚಾ ಬಾರದು ನನಗೆ ನಿನ್ನ ಮೇಲೆ ಕೋಪ ಇಲ್ಲ ಪುಟ್ಟಕ್ಕ ಬೇಸರ ಇದೆ ಎಂದು ತನ್ನ ಮನದ ಬೇಸರವನ್ನು ಹೊರ ಹಾಕುತ್ತಾಳೆ . ಪುಟ್ಟಕ್ಕ ಮನೆಯ ಪತ್ರ ಅಡ ಇಡಲು ಹೋಗಿದ್ದ ವಿಚಾರ ಬಂಗಾರಮ್ಮಗೆ ತಿಳಿಯುತ್ತದೆ.

    ಇದರಿಂದ ಬಂಗಾರಮ್ಮ ಪುಟ್ಟಕ್ಕನನ್ನು ಮನೆಗೆ ಕರೆಸಿಕೊಂಡು ಹಣಕೊಟ್ಟು ಕಳುಹಿಸುತ್ತಾಳೆ. ಇನ್ನು ಮನೆಗೆ ಬಂದ ಪುಟ್ಟಕ್ಕ ಸೀರೆಯ ಗಂಟಿನಲ್ಲಿ ಹಣ ತರುತ್ತಾಳೆ. ಇದನ್ನು ಸುಮಾ ನೋಡುತ್ತಾಳೆ. ಅರೆ ಅಮ್ಮ ಏನು ಸೀರೆಯಲ್ಲಿ ಕಟ್ಟಿಕೊಂಡು ಬಂದಿದ್ದಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಅಲ್ಲಿಗೆ ಆ ವೇಳೆ ಬಳೆಗಾರ ಬರುತ್ತಾನೆ. ಬಳೆಗಾರ ಬಂದದ್ದನ್ನು ನೋಡಿ ಅಮ್ಮನಿಗೆ ಹೇಳುತ್ತಾಳೆ. ಆ ವೇಳೆ ಪುಟ್ಟಕ್ಕ ಹಣವನ್ನು ಜೋಡಿಸಿ ಬೀರುವಿನಲ್ಲಿ ಇಡುತ್ತಾಳೆ. ಮಗಳು ಬಂದ ಕೂಡಲೇ ಬೀರುವನ್ನು ಮುಚ್ಚುತ್ತಾಳೆ.

    ಅಮ್ಮನ ನಡೆ ನೋಡಿ ಅನುಮಾನಗೊಂಡ ಸುಮಾ ಅಮ್ಮ ಏನಾದರು ಮುಚ್ಚಿ ಇಡುತ್ತಾ ಇದ್ದೀಯಾ ಎಂದು ಕೇಳಿದಾಗ ಪುಟ್ಟಕ್ಕ ಏನು ಇಲ್ಲ ನೀನು ಹೋಗಿರು ನಾನು ಬರುತ್ತೇನೆ ಎಂದು ಹೇಳಿ ಕಳುಹಿಸುತ್ತಾಳೆ. ಸುಮಾ ಮನೆಯ ಹೊರಗೆ ಹೋಗಬೇಕಾದರೆ ಸ್ನೇಹಾ ಸುಮಾ ಬಳಿ ಅಮ್ಮನನ್ನು ಬರ ಹೇಳು ಬಳೆಗಾರ ಬಂದಿದ್ದಾನೆ ಎಂದಾಗ ಸುಮಾ ನೀನೇ ಹೇಳು ಎಂದು ಹೇಳುತ್ತಾಳೆ. ಈ ವೇಳೆ ಪುಟ್ಟಕ್ಕ ಇರುವಲ್ಲಿಗೆ ಬಂದ ಸ್ನೇಹಾ ಏನಮ್ಮ ಬಂಗಾರಮ್ಮ ಯಾಕೆ ನಿನ್ನ ಕರೆಸಿಕೊಂಡಿದ್ದಿದ್ದು ಎಂದಾಗ ಮಡಿಲಕ್ಕಿ ತುಂಬಲು ಕರೆದರು ಎಂದು ಸುಳ್ಳು ಹೇಳ್ತಾಳೆ.

    ಅಮ್ಮನಿಗೆ ಬುದ್ಧಿವಾದ ಹೇಳಿದ ಸ್ನೇಹಾ

    ಅಮ್ಮನಿಗೆ ಬುದ್ಧಿವಾದ ಹೇಳಿದ ಸ್ನೇಹಾ

    ಇದನ್ನು ಕೇಳಿದ ಸ್ನೇಹ ಹುಷಾರು ಅಮ್ಮ ಇದೀಗ ಎಲ್ಲರಿಗೂ ದುಡ್ಡಿನ ಅಗತ್ಯ ಇರುತ್ತದೆ ಮದುವೆ ಅಂದರೆ ಹಾಗೆ ಎಲ್ಲರಿಗೂ ದುಡ್ಡು ಬೇಕು ಇದರ ಆಮಿಷಗಳನ್ನು ಕೊಟ್ಟು ಬಂಗಾರಮ್ಮ ದುಡ್ಡು ಕೊಡಲು ಬರಬಹುದು ಆದರೆ ನೀನು ಮಾತ್ರ ಬಹಳ ಜಾಗರೂಕತೆ ವಹಿಸಬೇಕು ಇಲ್ಲವಾದರೆ ಬಹಳ ಕಷ್ಟ ಆಗುತ್ತದೆ ಬಲವಂತವಾಗಿ ಹಣ ಕೊಟ್ಟು ಬಡ್ಡಿ ವಸೂಲು ಮಾಡುವವರು ಅವರು. ಅವರ ಹತ್ತಿರ ಎಷ್ಟು ಬೇಕೋ ಅಷ್ಟು ಇಟ್ಟುಕೊ.. ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನು ಪುಟ್ಟಕ್ಕ ಒಬ್ಬಳೇ ಯೋಚನೆ ಮಾಡುತ್ತಾ ಇರುತ್ತಾಳೆ. ಬಂಗಾರಮ್ಮ ಹಾಗೆ ಮಾಡುವವರು ಅಲ್ಲ ನನಗೆ ಅವರ ಬಗ್ಗೆ ನಂಬಿಕೆ ಇದೆ ಎಂದು ಮನದಲ್ಲಿ ಅಂದುಕೊಳ್ತಾಳೆ.

    ಮನೆಗೆ ಬಂದ ಕೌಸಲ್ಯ

    ಮನೆಗೆ ಬಂದ ಕೌಸಲ್ಯ

    ಬಳಿಕ ಬಳೆಗಾರ ಇರುವಲ್ಲಿಗೆ ಬಂದಾಗ ಅಲ್ಲಿಗೆ ಕೌಸಲ್ಯ ಕೂಡ ಬರುತ್ತಾಳೆ. ಪುಟ್ಟಕ್ಕ ನಮಸ್ತೆ ಭೀಗರೆ ಎಂದು ಹೇಳಿದಾಗ ಅದಕ್ಕೂ ಉತ್ತರ ಕೊಡದೆ ಸುಮ್ಮನೆ ಇರುತ್ತಾಳೆ. ಇದನ್ನು ನೋಡಿದ ನಂಜಮ್ಮ ಮೆತ್ತಗೆ ಚುಚ್ಚಿ ಮಾತನಾಡುತ್ತಾಳೆ. ಆದರೆ ಕೌಸಲ್ಯ ಮಾತ್ರ ಯಾವುದಕ್ಕೂ ಜಗ್ಗದೆ ಸುಮ್ಮನೆ ಕುಳಿತಿರುತ್ತಾಳೆ. ಬಳಿಕ ಬಳೆ ಹಾಕುವವನು ಕೂಡ ಪುಟ್ಟಕ್ಕನ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುತ್ತಾನೆ. ಬಳಿಕ ಸಹನಾ ಬಳಿ ಎಲ್ಲಾ ಶಾಸ್ತ್ರ ಮಾಡಿಸಿ ಬಳೆ ತೊಡಿಸುತ್ತಾರೆ. ನಂಜಮ್ಮ ಬಳೆ ತೊಟ್ಟುಕೊಂಡು ತನ್ನ ಮನೆಯತ್ತ ಹೋಗುತ್ತಾಳೆ. ಅವರು ಹೋದ ಬಳಿಕ ಅಲ್ಲಿಗೆ ಕಂಠಿ ಹಾಗೂ ಆತನ ಗೆಳೆಯರು ಇಬ್ಬರು ಬರುತ್ತಾರೆ. ಬಳೆ ತೊಡುವವನು ಸ್ನೇಹಗೆ ಬಳೆ ಹಾಕಬೇಕು ಎಂದು ಅಂದುಕೊಂಡ ವೇಳೆ ಏನೋ ಒಂದು ಕಾರಣದಿಂದ ಮೆಂತ್ಯ ಹೊರಗೆ ಹೋಗುತ್ತಾನೆ .

    ಸ್ನೇಹಾ ಕೈಗೆ ಬಳೆ ತೊಡಿಸಿದ ಕಂಠಿ

    ಸ್ನೇಹಾ ಕೈಗೆ ಬಳೆ ತೊಡಿಸಿದ ಕಂಠಿ

    ಹೊರಗೆ ಬಂದ ಬಳಿಕ ಸ್ನೇಹಾ ಕೈಗೆ ಬಳೆ ತೊಡಿಸಲು ಮುಂದೆ ಬರುತ್ತಾನೆ. ಆದರೆ ಮೊದಲು ಸ್ನೇಹ ಮುಜುಗರದಿಂದ ಬೇಡ ಎಂದು ಹೇಳಿದರೂ ಕೊನೆಗೆ ಬಳೆ ತೊಡಿಸಲು ಕೈ ಕೊಡುತ್ತಾಳೆ. ಇದನ್ನು ನೋಡಿದ ಕಂಠಿ ಗೆ ಬಹಳ ಖುಷಿ ಆಗುತ್ತದೆ.

    English summary
    Kannada serial Puttakkana makkalu written updated on 1st February
    Thursday, February 2, 2023, 18:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X