Puttakkana Makkalu: ಕಂಠಿಗೆ ಹೆಣ್ಣು ನೋಡಿದ ಬಂಗಾರಮ್ಮ; ಮಗನ ಮದುವೆ ಅದ್ಧೂರಿಯಾಗಿ ಮಾಡಲು ಪ್ಲಾನ್
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬಂದಿದೆ. ಹಾಗೆಯೇ ಹೊಸ ಹೊಸ ತಿರುವು ಪಡೆದುಕೊಂಡಿದೆ. ಇದೀಗ ಪುಟ್ಟಕ್ಕನ ಮನೆಯಲ್ಲೂ ಮದುವೆ ವಾತಾವರಣ ಕಳೆ ಗಟ್ಟಿದೆ. ಹಾಗೆಯೇ ಬಂಗಾರಮ್ಮ ಮನೆಯಲ್ಲೂ ಹಬ್ಬದ ವಾತಾವರಣ ಮೂಡಿದೆ.
ಸ್ನೇಹಾ, ಕಂಠಿ ಜೀವನ ಸರಿ ಹೋಗಬೇಕು ತನ್ನಿಂದ ಆಗಿ ಆತನ ಜೀವನ ಹಾಳಾಗಬಾರದು ಎಂಬ ಉದ್ದೇಶದಿಂದ ಭುವನ್ ಜೊತೆ ಹೆಚ್ಚು ಕ್ಲೋಸ್ ಆಗಿ ಇದ್ದವರ ಹಾಗೆ ನಟನೆ ಮಾಡುತ್ತಾಳೆ. ಮನದಲ್ಲಿ ಬೆಟ್ಟದಷ್ಟು ನೋವು ತುಂಬಿಕೊಂಡು ಅದನ್ನು ನುಂಗಲು ಆಗದೆ ಉಗಿಯಲು ಆಗದೆ ಭಾಧೆ ಪಡುತ್ತಿದ್ದಾಳೆ.

ಮನೆಯವರನ್ನೆಲ್ಲ ಎದುರು ಹಾಕಿಕೊಂಡ ಸ್ನೇಹಾ ಎಲ್ಲರ ವಿರುದ್ದವಾಗಿ ಮಾತನಾಡುತ್ತಾಳೆ. ಈ ಕಾರಣದಿಂದ ಮನೆಯವರು ಯಾರೂ ಸ್ನೇಹಾ ಬಳಿ ಸರಿಯಾಗಿ ಮಾತನಾಡದೆ ಇರುತ್ತಾರೆ. ಕಂಠಿ ಸ್ನೇಹಾನಾ ಎಷ್ಟೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೂ ಸ್ನೇಹಾ ಮಾತ್ರ ಕಂಠಿಗೆ ಇನ್ನಷ್ಟು ನೋವು ಮೇಲೆ ನೋವು ಕೊಡುತ್ತಾ ಇದ್ದಾಳೆ.
ಇದರಿಂದ ನೊಂದ ಕಂಠಿ ಇನ್ನೊಂದು ಮದುವೆಗೆ ಕೂಡ ರೆಡಿ ಆಗಿದ್ದಾನೆ. ಸ್ನೇಹಾಳಿಂದಾಗಿ ಮನೆಯವರಿಗೆಲ್ಲ ನೋವು ಕೊಟ್ಟುಬಿಟ್ಟೆ ಎಂಬ ಗಿಲ್ಟ್ ಆತನನ್ನು ಕಾಡುತ್ತಲೇ ಇರುತ್ತದೆ. ಈ ಕಾರಣದಿಂದ ತಾಯಿ ಬಳಿ ಬಂದ ಕಂಠಿ ಅಮ್ಮ ಇನ್ನು ಮೇಲೆ ನೀನು ಏನು ಹೇಳುತ್ತಿಯಾ ಅದನ್ನು ನಾನು ಕೇಳುತ್ತೇನೆ. ಹಾಗೆಯೇ ನೀನು ಯಾವ ಹುಡುಗಿಯನ್ನು ಮದುವೆ ಆಗು ಎಂದು ಹೇಳುತ್ತಿಯಾ ಅದೇ ಹುಡುಗಿಯನ್ನು ನಾನು ಮದುವೆ ಆಗುತ್ತೇನೆ ಎಂದು ಹೇಳಿದಾಗ ಬಂಗಾರಮ್ಮಗೆ ಆದ ಆನಂದ ಅಷ್ಟಿಷ್ಟಲ್ಲ.
ಕಂಠಿ ಆ ಮಾತು ಅಂದ ಕೂಡಲೇ ಆತನಿಗೆ ಹುಡುಗಿ ಹುಡುಕಲು ಶುರು ಮಾಡುತ್ತಾಳೆ ಬಂಗಾರಮ್ಮ. ಇನ್ನು ಕಂಠಿ ತಂದೆ ಮಾತ್ರ ಸ್ನೇಹಾನಾ ಪ್ರೀತಿ ಮಾಡಿದ ಕಂಠಿ ಇದೀಗ ದಿಢೀರನೆ ಮದುವೆಗೆ ಹೇಗೆ ಒಪ್ಪಿಕೊಂಡ ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಇದನ್ನು ಕಂಡ ಬಂಗಾರಮ್ಮ ತನ್ನ ಗಂಡನ ಬಳಿ ಹೇಳುತ್ತಾರೆ. ಇವತ್ತು ಒಬ್ಬರು ನೆಂಟರು ನಮ್ಮ ಮನೆಗೆ ಬರುತ್ತಾರೆ ಅವರಿಗಾಗಿ ಎದುರು ನೋಡುತ್ತಾ ಇದ್ದೀನಿ ಎಂದಾಗ ಬಂಗಾರಮ್ಮ ಮನೆಯ ಹೊರಗೆ ಕಂಠಿ ತಂದೆಯ ತಂಗಿ ಬಂದು ನಿಂತಿರುತ್ತಾರೆ. ಆಕೆಯನ್ನು ನೋಡಿದ ಕಂಠಿ ತಂದೆಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಅದೆಲ್ಲವನ್ನೂ ತಡೆದುಕೊಂಡ ಕಂಠಿ ತಂದೆ ಇವರು ಯಾಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಪ್ರಶ್ನಾರ್ಥಕ ವಾಗಿ ಬಂಗಾರಮ್ಮನನ್ನು ನೋಡುತ್ತಾರೆ.
ಇನ್ನು ಬಂಗಾರಮ್ಮ ಅವರಿಬ್ಬರನ್ನು ಒಳಗೆ ಬರಲು ಹೇಳಿದರೆ ಆಕೆ ಅಣ್ಣನ ಮುಖ ನೋಡಿ ಅಣ್ಣ ಏನು ಹೇಳಲಿಲ್ಲ ಅತ್ತಿಗೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ಬಂಗಾರಮ್ಮ ತನ್ನ ಗಂಡನ ಬಳಿ ಮೆತ್ತಗೆ ಅವರಿಬ್ಬರನ್ನು ಒಳಗೆ ಬರಲು ಹೇಳಿ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಕಂಠಿ ತಂದೆ ಮಾದೇಗೌಡ ಒಳಗೆ ಬನ್ನಿ ಎಂದು ಕರೆಯುತ್ತಾರೆ. ಆ ಹೊತ್ತಿಗೆ ಕಂಠಿ ಕೂಡ ಮಹಡಿ ಮೇಲಿನಿಂದ ಇಳಿದು ಬರುತ್ತಾನೆ. ಇನ್ನು ಕಂಠಿಗೆ ಮಾತ್ರ ಅವರಿಬ್ಬರೂ ಯಾರು ಎಂದು ತಿಳಿಯದೇ ಸುಮ್ಮನೆ ನಿಂತಿರುವಾಗ ಆಕೆಯ ಅತ್ತೆ ಶಶಿಕಲಾ ಹಾಗೂ ಆಕೆಯ ಮಗಳು ರಾಧಳ ಪರಿಚಯ ಮಾಡಿಸುತ್ತಾಳೆ. ಬಂಗಾರಮ್ಮ ಕಂಠಿ ತನ್ನ ಅತ್ತೆಯ ಆಶಿರ್ವಾದ ಪಡೆದುಕೊಳ್ಳುತ್ತಾನೆ.. ಇನ್ನು ರಾಧಾ ಹಾಗೂ ಕಂಠಿ ಮದುವೆ ಮಾತುಕತೆ ಬಗ್ಗೆ ಮಾತನಾಡಲು ಶಶಿಕಲಾ ಬಂದಿರುತ್ತಾಳೆ.
ಆ ವೇಳೆ ಕಂಠಿಗೆ ತನ್ನ ಹಾಗೂ ರಾಧ ಮದುವೆ ಮಾಡಲು ಇವರನ್ನು ಕರೆದಿದ್ದಾರೆ ಎಂಬುದು ತಿಳಿಯುತ್ತದೆ. ಇನ್ನು ಸ್ನೇಹಾ ಹಾಗೂ ಕಂಠಿ ದೂರದೂರ ಆಗಿಯೇ ಬಿಟ್ಟರಾ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











