Puttakkana Makkalu: ಪುಟ್ಟಕ್ಕನ ಮನೆ ರಾಜೇಶ್ವರಿ ಪಾಲು!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ಅದ್ಭುತ ತಿರುವು ಪಡೆದುಕೊಂಡಿದೆ. ರಾಜೇಶ್ವರಿ ಪುಟ್ಟಕ್ಕನನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು ಎಂದು ಯೋಚನೆ ಮಾಡುತ್ತಾ ಇದ್ದಾಳೆ. ಅದಕ್ಕಾಗಿ ದೇವರಿಗೆ ವಿಶೇಷವಾದ ಪೂಜೆಯನ್ನು ಮಾಡುತ್ತಾಳೆ. ಇನ್ನು ಇದನ್ನೆಲ್ಲ ನೋಡಿದ ಗೋಪಾಲ ಒಂದು ನಿಮಿಷ ಅವಕ್ಕಾಗಿ ನಿಲ್ಲುತ್ತಾನೆ. ಪುರುಷೋತ್ತಮ ಕೂಡ ತಾಯಿಯ ಕುತಂತ್ರ ಬುದ್ದಿ ತಿಳಿದು ಸ್ನೇಹಾ ಅಕ್ಕನ ಬಳಿ ಇದೆಲ್ಲವನ್ನೂ ಹೇಳಲೇಬೇಕು ಎಂದು ಬರುತ್ತಾನೆ. ಇನ್ನು ಪುಟ್ಟಕ್ಕ ಎದ್ದು ಅಂಗಳ ಗುಡಿಸುತ್ತ ಇರುವಾಗ ಸಹನಾ ನೀರು ತಾ ಎಂದು ಕರೆದಾಗ ಎದುರಿಗೆ ಸ್ನೇಹಾ ನಿಂತಿರುತ್ತಾಳೆ ಇದನ್ನು ನೋಡಿದ ಪುಟ್ಟಕ್ಕಗೆ ಕೊಂಚ ಮುಜುಗರ ಆಗುತ್ತದೆ.

ಸಹನಾಗೆ ಬೆಳಗ್ಗೆ ಬೇಗ ಎಚ್ಚರ ಆಗುತ್ತದೆ. ಆಕೆ ಎದ್ದು ಕುಳಿತುಕೊಳ್ಳುತ್ತ ಇರುತ್ತಾಳೆ. ಎಷ್ಟೇ ಹೊತ್ತಾದರೂ ಮುರಳಿ ಮನೆಯಲ್ಲಿ ಯಾರು ಎದ್ದೇಳಲ್ಲ. ಆಕೆ ಕಿಟಕಿ ಬಳಿ ಹೊರಗೆ ನೋಡುತ್ತಾ ಇರುವಾಗ ಆಕೆಯ ಮಾವನಿಗೆ ಎಚ್ಚರ ಆಗುತ್ತದೆ ಆತ ಮೆತ್ತಗೆ ಸಹನಾ ಬಳಿ ಏನು ಇಷ್ಟು ಬೇಗ ಎದ್ದಿಯಲ್ಲ ಎಂದೆಲ್ಲ ಕೇಳುತ್ತಾನೆ. ಆಗ ಸಹನಾ ಏನು ಇಲ್ಲ ಮನೆಯಲ್ಲಿ ಬೇಗ ಎದ್ದು ರೂಢಿ ಮಾವ ಗುಡಿಸಿ ರಂಗೋಲಿ ಹಾಕಲಾ ಎಂದಾಗ ಆಕೆಯ ಮಾವ ಯಾಕೆ ಬೇಡ ಬಿಡಮ್ಮ ಇವತ್ತು ನಾವು ಬೇರೆ ಮನೆಗೆ ಹೋಗುವುದು ಅದಕ್ಕಾಗಿ ಬೇಡ ಎಂದು ಹೇಳುತ್ತಾರೆ. ಇನ್ನು ಎಲ್ಲರೂ ಬೇಗ ಬೇಗ ಎದ್ದೇಳುತ್ತಾರೆ.

Kannada serial Puttakkana Makkalu written update on 1st March

ಮುರಳಿ ಏಳದ ಕಾರಣ ಸಹನಾ ಅವರನ್ನು ಎಬ್ಬಿಸುತ್ತೇನೆ ಎಂದಾಗ ಕೌಸಲ್ಯ ಬೇಡ ಅವನ ಅಪ್ಪನೇ ಅವನನ್ನು ಎಬ್ಬಿಸಿ ರೂಡಿ ಎನ್ನುತ್ತಾಳೆ. ಸಹನಾ ಸುಮ್ಮನಾದರೂ ಚಿತ್ರಗೆ ವಿಚಿತ್ರ ಎನಿಸುತ್ತದೆ. ಇನ್ನು ಸುಮಾ ಮೆಸ್ ನಲ್ಲಿ ಖಾಲಿ ಬೋರ್ಡ್ ನೋಡಿ ಅದರ ಮೇಲೆ ನುಡಿಗಟ್ಟು ಬರೆಯುತ್ತಾಳೆ. ಅದನ್ನು ನೋಡಿದ ಆಕೆಯ ತಾಯಿಗೆ ಸಹನಾ ನೆನಪಾಗುತ್ತದೆ. ಆದರೂ ಸುಮ್ಮನೆ ಇರುತ್ತಾರೆ. ಆದರೆ ಅಕ್ಕನ ನೆನಪಾಗಿ ಸುಮಾಗೆ ಬಹಳ ಬೇಸರ ಆಗುತ್ತದೆ. ಆಕೆ ಅಮ್ಮನನ್ನು ತಬ್ಬಿ ಹಿಡಿದುಕೊಂಡು ಜೋರಾಗಿ ಅಳುತ್ತಾಳೆ. ಆ ಬಳಿಕ ಇಬ್ಬರೂ ಕಾಲೇಜಿಗೆ ತೆರಳುತ್ತಾರೆ.

ಇನ್ನು ಬಂಗಾರಮ್ಮ ಬಡ್ಡಿ ಪುಸ್ತಕ ತೆಗೆದು ನೋಡಬೇಕಾದರೆ ಯಾವುದು ಕಲೆಕ್ಷನ್ ಆಗಿರುವುದಿಲ್ಲ. ಅದನ್ನು ನೋಡಿದ ಬಂಗಾರಮ್ಮ ಎಲ್ಲರನ್ನೂ ಕರೆಯುತ್ತಾಳೆ. ಮುಂಗುಸಿ ಹಾಗೂ ಆತನ ಗೆಳೆಯ ಬರುತ್ತಾರೆ. ಮುಂಗುಸಿ ಬಳಿ ಏನ್ಲಾ ನಮಗೆ ಅನ್ನ ಹಾಕುತ್ತಿರುವ ಬಡ್ಡಿ ವಸೂಲಿ ಕೆಲಸ ಮಾಡುತ್ತಾ ಇಲ್ವಾ ಎಂದಾಗ ಕಂಠಿ ಕೂಡ ಅಲ್ಲಿಗೆ ಬಂದಾಗ ಆಕೆ ಕಂಠಿ ವಿರುದ್ದ ಕೂಡ ಅಸಮಾಧಾನ ಹೊರ ಹಾಕುತ್ತಾಳೆ.

Kannada serial Puttakkana Makkalu written update on 1st March

ಇದನ್ನು ಕಂಡ ಕಂಠಿಗೆ ಮಾತ್ರ ಏನು ಮಾಡುವುದು ಎಂದು ತಿಳಿಯದೇ ದಿಕ್ಕೇ ತೋಚದಂತಾಗಿದೆ. ಬಡ್ಡಿ ವಸೂಲು ಮಾಡಲು ಹೋದರೆ ಸ್ನೇಹಾ ಕೈಗೆ ಸಿಕ್ಕಿ ಹಾಕಿಕೊಳ್ಳುವುದು ಕೂಡ ಬೇಡ ಏನು ಮಾಡಲಿ ಎಂದೆಲ್ಲ ಯೋಚನೆ ಮಾಡುವಾಗ ಮುಂಗುಸಿ ಅಣ್ಣ ನಾವು ಬಡ್ಡಿ ವಸೂಲಿ ಮಾಡುವವರು ಎಂದೆಲ್ಲ ಗೊತ್ತಾದರೆ ಅಕ್ಕ ನಮ್ಮ ಬಳಿ ಯಾವತ್ತೂ ಮಾತನಾಡುವುದೇ ಇಲ್ಲ ಎಂದು ಹೇಳುತ್ತಾನೆ.‌ಅದನ್ನು ಕೇಳಿ ಕಂಠಿಗೆ ಏನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.

ಇನ್ನು ಪುರುಷೋತ್ತಮ ಸ್ನೇಹಾಳನ್ನು ಹುಡುಕುತ್ತಾ ಮೆಸ್ ಕಡೆ ಬರುತ್ತಾನೆ. ಅಲ್ಲಿ ಪುಟ್ಟಕ್ಕನನ್ನು ಕಂಡು ಅವ್ವ ನೀನು ಮನೆ ಪತ್ರಕ್ಕೆ ರುಜು ಮಾಡಿದ್ದೀಯಾ ಅಮ್ಮ ಇಲ್ಲಿಗೆ ಬರುತ್ತಾ ಇದ್ದಾರೆ ನಾನು ಅದಕ್ಕೆ ಸ್ನೇಹಾ ಅಕ್ಕನ ಹುಡುಕುತ್ತಾ ಬಂದೆ ಅಕ್ಕ ಎಲ್ಲಿದ್ದಾಳೆ ಎಂದು ಕೇಳುತ್ತಾನೆ. ಅದನ್ನು ಕೇಳಿ ಭಯಗೊಂಡ ಪುಟ್ಟಕ್ಕ ಪತ್ರಕ್ಕೆ ರುಜು ಹಾಕಿದ್ದು ನಾನೇ ಆದರೆ ಇಷ್ಟು ಬೇಗ ಮನೆ ಖಾಲಿ ಮಾಡುವುದು ಹೇಗೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 1st March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X