Puttakkana Makkalu: ಅಮ್ಮನ ಕೋಪಕ್ಕೆ ಸಿಲುಕಿದ ಕಂಠಿ ಮುಂದೇನು ಮಾಡುತ್ತಾನೆ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಂಠಿ ಇಬ್ಬರ ಕೈಗೆ ಸಿಕ್ಕಿ ನಲುಗಿ ಹೋಗಿದ್ದಾನೆ. ಒಂದು ಕಡೆ ತಾಯಿ ಇನ್ನೊಂದು ಕಡೆ ಹೆಂಡತಿ ಇಬ್ಬರೂ ಬಹಳ ಕಠೋರ ಮಾತುಗಾರರು ಒಬ್ಬರಿಗೆ ಏನಾದರೂ ಹೇಳಲು ಹೋದರೆ ಇನ್ನೊಬ್ಬರಿಗೆ ಆಗುವುದಿಲ್ಲ ಆದರೆ ಏನು ಮಾಡುವುದು ಎಂದು ತಿಳಿಯದೇ ದಿಕ್ಕೇ ತೋಚದಂತಾಗಿದೆ.
ಇದೀಗ ಕಂಠಿ ಮಾತ್ರ ಮನೆಯಿಂದ ಮೆತ್ತಗೆ ಸ್ನೇಹಿತರ ಬಳಿ ಮಾತನಾಡಲು ತೆರಳುತ್ತ ಇರುವಾಗ ಬಂಗಾರಮ್ಮ ತನ್ನ ಮಗನ ಬಳಿ ನೇರವಾಗಿ ಮಾತನಾಡಲು ಆಗದೆ ಮಗಳ ಬಳಿ ಹೇಳುತ್ತಾಳೆ. ಅವನು ಎಲ್ಲಿಗೆ ಹೋಗಬೇಕು ಅಂದುಕೊಂಡು ಇದ್ದಾನೆ, ಮನೆಯಲ್ಲಿ ಇರಲು ಹೇಳು ಇನ್ನೂ ಬೇರೆ ಮನೆಗೆ ಮೆಸ್ ಗೆ ಹೋಗುವುದು ಬೇಡ ಎಂದು ಹೇಳಿದಾಗ ಕಂಠಿ ತನ್ನ ತಾಯಿ ಬಳಿ ಬಂದು ಹೇಳುತ್ತಾನೆ.

ಸ್ನೇಹಾ ನನ್ನ ಹೆಂಡತಿ.. ನಾನು ಆಕೆಯನ್ನು ಮನಸಾರೆ ಯಾವಾಗ ಇಷ್ಟ ಪಟ್ಟೆನೋ ಅವತ್ತಿನಿಂದ ಆಕೆ ನನ್ನ ಹೆಂಡತಿ ಎಂದು ಡಿಸೈಡ್ ಮಾಡಿದ್ದೆ.. ಆದರೆ ಆಕೆಗೆ ನಿಜ ಹೇಳುವಲ್ಲಿ ನಾನು ಎಡವಿದ್ದೇನೆ.. ಆದರೆ ನನಗೆ ನೀನು ಬಹಳ ಮುಖ್ಯ.. ತಾಯಿಯೇ ದೇವರು ಅಂತಾರೆ ನೀನೇ ನನ್ನ ದೇವರು.. ಎಂದೆಲ್ಲ ಹೇಳಿದಾಗ ಬಂಗಾರ ಮ್ಮಾ ಗೆ ಮಗನ ಮೇಲೆ ಕೋಪ ಬರುತ್ತದೆ..
ಊರಲ್ಲಿ ನಾನು ತಲೆ ಎತ್ತಿದ ಹಾಗೆ ಮಾಡಿ ಬಿಟ್ಟಿದ್ದಿಯ ಇದೀಗ ನನಗೆ ಬುದ್ದಿ ಮಾತುಗಳನ್ನು ಹೇಳುತ್ತಿಯಾ ಇದು ಸರಿಯ ಎಂದೆಲ್ಲ ಪ್ರಶ್ನೆ ಮಾಡಿದಾಗ ಕಂಠಿ ಮಾತ್ರ ನಾನು ತೆಗೆದುಕೊಂಡು ಇರುವ ನಿರ್ಧಾರ ಸರಿಯಾಗಿದೆ. ನಾನು ಯಾರನ್ನೂ ಬಿದುವಾಮತೆ ಇಲ್ಲ ಎಂದು ನೇರವಾಗಿ ತೋಟದ ಮನೆಗೆ ಹೋಗುತ್ತಾನೆ. ಅಲ್ಲಿ ಕಂಠಿಗಾಗೀ ಆತನ ಗೆಳೆಯರು ಕಾದು ನಿಂತು ಇರುತ್ತಾರೆ.
ಅವರನ್ನೆಲ್ಲ ನೋಡಿದ ಕಂಠಿ ಗೆ ಕೊಂಚ ಸಮಾಧಾನ ಆಗುತ್ತದೆ. ಆ ಬಳಿಕ ಮುಂಗುಸಿ ಬಳಿ ಕಂಠಿ ಹೇಳುತ್ತಾನೆ.. ನನಗೆ ಸಿಕ್ಕ ಪತ್ತೆ ಭಯ ಆಗುತ್ತಿದೆ ಒಂದು ಕಡೆ ಅಮ್ಮ ಇನ್ನೊಂದು ಕಡೆ ಸ್ನೇಹಾ ಆವತ್ತೆ ನಾನು ಅನಾಥಾಶ್ರಮಕ್ಕೆ ಒಮ್ಮೆ ಹೋಗಿದ್ದೆ ಆಗ ಸ್ನೇಹಾ ಅಮ್ಮ ಇಬ್ಬರೂ ಭೇಟಿ ಆಗಿದ್ದರು.. ಆಲ್ಲಿ ನಡೆದ ಜಗಳ ನೋಡಿ ಭಯ ಪಟ್ಟುಬಿಟ್ಟೆ. ಆದರೆ ಇದೀಗ ಒಂದೇ ಮನೆಯಲ್ಲಿ ಇವರಿಬ್ಬರೂ ಇರುತ್ತಾರೆ ಅನ್ನೋದೇ ಬಹಳ ಭಯವಾಗಿ ಕಾಡುತ್ತಿದೆ.
ಅದರಲ್ಲಿ ಬೇರೆ ಸ್ನೇಹಾ ಗೆ ನಾನು ಅಂದರೆ ಸ್ವಲ್ಪ ಕೂಡ ಇಷ್ಟ ಇಲ್ಲ. ಅಂತಹದರಲ್ಲಿ ಎಂದು ಹೇಳುತ್ತಿರುವಾಗ ಕಂಠಿ ಗೆಳೆಯರು ಕೇಳುತ್ತಾರೆ.. ಅತ್ತಿಗೆಗೆ ನೀವು ಇಷ್ಟ ಇಲ್ಲ ಎಂಬುವುದನ್ನು ಡೈರೆಕ್ಟ್ ಆಗಿ ಯಾವತ್ತಾದರೂ ಹೇಳಿದ್ದಾರ .. ನೀವು ಯಾಕೆ ಹೀಗೆಲ್ಲ ಅಂದುಕೊಂಡು ಇದ್ದೀರಾ ಎಂದು ಕೇಳುತ್ತಾರೆ ಆಗ ಸ್ನೇಹಾ ಹಾಗೂ ಕಂಠಿ ಪೊಲೀಸ್ ಸ್ಟೇಷನ್‌ನಿಂದ ಬರಬೇಕಾದರೆ ನಡೆದ ಸಂಭಾಷಣೆಯನ್ನು ಗೆಳೆಯರ ಮುಂದೆ ಬಿಚ್ಚಿಡುತ್ತಾರೆ ಕಂಠಿ.
ಸ್ನೇಹಾ ಮಾತನಾಡಿದ ಒಂದೊಂದು ಮಾತು ಭರ್ಜಿಯಿಂದ ಚುಚ್ಚಿದ ಹಾಗೆ ಆಗಿತ್ತು ಕಂಠಿ ಗೆ. ತನ್ನ ಅಮ್ಮನ ಮಾತಿಗಾಗಿ ಆಕೆಯ ಖುಷಿಗಾಗಿ ಸ್ನೇಹಾ ಎನು ಮಾಡಲು ಸದಾ ಸಿದ್ದ ಈ ವಿಚಾರ ಕೂಡ ಹಾಗೆಯೇ ಆಗಿದೆ. ಮನದಲ್ಲಿ ನೂರಾರು ಒದ್ದಾಟ ಕೋಪ ಹೇಳಲಾಗದ ಪ್ರೀತಿ ಆದರೂ ಕಂಠಿ ಮಾಡಿದ ಮೋಸವನ್ನು ಸ್ನೇಹಾ ಮರೆಯಲು ಸಾಧ್ಯನಾ ಎಂಬುವುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ.


Click it and Unblock the Notifications











