Puttakkana Makkalu: ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿರುವ ಕೌಸಲ್ಯ ಮಾತಿಗೆ ತಲೆ ತಿರುಗಿಬಿದ್ದ ಪುಟ್ಟಕ್ಕ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಕಂಠಿ ಸ್ನೇಹಾಗೆ ಸಖತ್ ಆಗಿ ಆಟ ಆಡಿಸುತ್ತಾ ಇದ್ದಾನೆ. ಇದನ್ನೆಲ್ಲ ನೋಡಿದ ಸ್ನೇಹಾಗೆ ಸಿಕ್ಕಾಪಟ್ಟೆ ಬೇಸರ ಆಗುತ್ತದೆ. ಯಾರು ಆ ಹುಡುಗಿ ನನಗಿಂತಲೂ ಚೆನ್ನಾಗಿ ಇದ್ದಾಳ ಎಂದೆಲ್ಲ ಯೋಚನೆ ಮಾಡಿಕೊಂಡು ಕಂಠಿ ಜೊತೆ ಹೆಜ್ಜೆ ಹಾಕುತ್ತಾ ಹೋಗುತ್ತಾಳೆ .
ಇನ್ನು ಕಂಠಿ ತನ್ನ ಹುಡುಗಿಯನ್ನು ಹೊಗಳುತ್ತಾ ಇದ್ದರೂ ಸ್ನೇಹಾ ಸುಮ್ಮನೆ ಇದ್ದು ಬಿಡುತ್ತಾಳೆ. ಡೇಕೊರೇಶನ್ ಮೇಲೆ ಡೇಕೋರೇಶನ್ ಮಾಡಿರುವುದನ್ನು ಕಂಡು ಸ್ನೇಹಾ ಕಂಠಿ ಜೊತೆ ಏನು ಶ್ರೀ ಇದೆಲ್ಲ ಇಷ್ಟೊಂದು ಡೇಕೊರೇಶನ್ ಮಾಡಿದ್ದೀರಾ, ಇಷ್ಟೊಂದು ಹಣ ಯಾಕೆ ಖರ್ಚು ಮಾಡಬೇಕಾಗಿತ್ತು ಎಂದಾಗ ಕಂಠಿ ಅವನದ್ದೇ ಆದ ಸಮಾಜಯಿಸಿ ನೀಡುತ್ತಾ ಇರುತ್ತಾನೆ.

ಬಳಿಕ ಕಂಠಿ ಸ್ನೇಹಾ ಬಳಿ ನನ್ನ ಹಾಗೂ ಹುಡುಗಿ ಪರಿಚಯ ಆಗಿದ್ದು ನಿಮ್ಮ ಮೆಸ್ ನಿಂದಾ ಆ ಕಾರಣಕ್ಕೆ ನಿಮ್ಮ ಮೆಸ್ ಅಂದರೆ ನನಗೆ ತುಂಬಾ ಪ್ರೀತಿ ಎಂದು ಹೇಳಿದಾಗ ಸ್ನೇಹಾ ಯಾರದು ನನಗೆ ತಿಳಿಯದೇ ಇರುವ ಹುಡುಗಿ ಎಂದೆಲ್ಲ ಕೇಳುತ್ತಾ ಇರುವಾಗ ಕಂಠಿಗೆ ನಗು ಬರುತ್ತದೆ.
ಇನ್ನು ಸುಮಾ ಅಕ್ಕನ ಬಳಿ ಕರೆ ಮಾಡಲು ಹೇಳಿದ್ದೆ ಅಲ್ಲಿ ಏನಾಗಿದೆಯೋ ಏನೋ ಎಂದು ಕರೆ ಮಾಡಿದಾಗ ಸ್ನೇಹಾ ಕರೆಯನ್ನು ಕಟ್ ಮಾಡುತ್ತಾಳೆ. ಇದನ್ನು ಕಂಡ ಸುಮಾಗೆ ಇನ್ನೂ ಟೆನ್ಶನ್ ಹೆಚ್ಚಾಗುತ್ತದೆ. ಇಲ್ಲಿ ಏನೋ ಆಗಬಾರದ್ದು ನಡೆದಿದೆ ಆ ಕಾರಣಕ್ಕೆ ಇಷ್ಟೆಲ್ಲ ಆಗುತ್ತಿದೆ ಎಂದು ಹೇಳುತ್ತಾಳೆ. ಇನ್ನು ಬಂಗಾರಮ್ಮ ಗಂಡನ ಕಾಲು ಒತ್ತುತ್ತಾ ಇರುತ್ತಾಳೆ. ಆಗ ಆಕೆಯ ಗಂಡ ದೇವಾಲಯದ ಮುಖ್ಯಸ್ಥರ ಬಳಿ ಹಾಗೆ ಮಾತನಾಡಬಾರದಾಗಿತ್ತು, ನಾನು ಹೇಗೆ ಅಲ್ಲಿಗೆ ಬರುತ್ತಿದ್ದೆ ಆದರೆ ನೀನು ಹಾಗೆ ನಡೆದುಕೊಂಡು ಇದ್ದಿದು ನನಗೆ ಸರಿ ಎನಿಸಲಿಲ್ಲ ಎಂದು ಹೇಳುತ್ತಾನೆ.
ನನ್ನ ಗಂಡನಿಗೆ ಇಲ್ಲದ ಮರ್ಯಾದೆ ನನಗೆ ಯಾಕೆ, ನೀವು ಆದ ಮೇಲೆ ನಾನು ಇದು ಅವರಿಗೆ ನೆನಪು ಇಲ್ಲ ಎನ್ನಿಸುತ್ತದೆ, ನನ್ನ ದೃಷ್ಟಿಯಲ್ಲಿ ನಾನು ಮಾಡಿದ್ದೇ ಸರಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮನ ಗಂಡ ಸುಮ್ಮನೆ ಆಗುತ್ತಾನೆ. ಬಳಿಕ ತನ್ನ ಮಗಳ ಕೆಟ್ಟ ನಿರ್ಧಾರದಿಂದ ಹಾಗೆ ನಂಜಮ್ಮ ಮಾತುಗಳಿಂದ ನಿಮಗೆ ಹೀಗೆ ಆಗಿದೆ, ನನಗೆ ಅವರೆಲ್ಲರ ಮೇಲೂ ಕೋಪ ಇದೆ ನಾನು ಯಾವತ್ತೂ ಅವರನ್ನು ಕ್ಷಮಿಸುವುದು ಇಲ್ಲ, ನಂಜಮ್ಮಗೆ ಇನ್ಯಾವತ್ತೂ ಕ್ಷಮೆ ಎನ್ನುವುದೇ ಇಲ್ಲ, ಹಾಗೆಯೇ ಆ ಚಂದ್ರು ಇದೆಲ್ಲವನ್ನೂ ನೋಡುತ್ತಾ ನಿಂತಿದ್ದ ಆತನ ಮೇಲೂ ಕೋಪ ಇದೆ, ಹಾಗೆಯೇ ನಿಮ್ಮ ವಿಚಾರದಲ್ಲಿ ನನ್ನ ಮಗಳು ನಡೆದುಕೊಂಡ ರೀತಿಯಲ್ಲೂ ನನಗೆ ಸರಿ ಕಾಣಲಿಲ್ಲ, ಆದ ಕಾರಣ ವಸುವನ್ನು ಕೂಡ ಕ್ಷಮಿಸಲ್ಲ, ಇನ್ನು ಕಂಠಿ ಜೀವನ ಹಾಳಾಗಲು ನಾನು ಬಿಡುವುದು ಇಲ್ಲ, ಕಂಠಿ ಚೆನ್ನಾಗಿ ಇರಬೇಕು ಮದುವೆ ಸಂಸಾರ ಮಾಡಿಕೊಂಡು ಆರಾಮವಾಗಿ ಇರಬೇಕು ಹೀಗೆ ಆಗಬೇಕು ಅಂದರೆ ಆದಷ್ಟು ಬೇಗ ಮದುವೆ ಮಾಡಬೇಕು ಎಂದು ನಿಶ್ಚಯ ಮಾಡುತ್ತಾಳೆ.
ಇನ್ನು ಪುಟ್ಟಕ್ಕಗೆ ಕೌಸಲ್ಯ ಕರೆ ಮಾಡುತ್ತಾಳೆ. ಕೌಸಲ್ಯ ಫೋನ್ ಎಂದು ಗೊತ್ತಾಗದೆ ಕರೆಯಲ್ಲಿ ಮಾತಾಡುತ್ತಾಳೆ ಪುಟ್ಟಕ್ಕ. ಬಳಿಕ ಪುಟ್ಟಕ್ಕ ಹಾಗೂ ಕೌಸಲ್ಯ ಇಬ್ಬರು ಯೋಗ ಕ್ಷಮೆ ವಿಚಾರಣೆ ಮಾಡುತ್ತಾ ಇರುತ್ತಾರೆ. ಇನ್ನು ಕೌಸಲ್ಯ ನೇರವಾಗಿ ಹಣದ ವಿಚಾರ ಮಾತಾನಾಡುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಕೊಂಚ ಆತಂಕದಿಂದ ಹಣವನ್ನು ನಿಮ್ಮ ಗಂಡನ ಜೊತೆ ಕೊಟ್ಟಿದ್ದೀನಿ ಎಂದಾಗ ಕೌಸಲ್ಯ ಸಾಕ್ಷಿ ಬಗ್ಗೆ ಎಲ್ಲಾ ಮಾತನಾಡುತ್ತಾಳೆ.
ಅದೆಲ್ಲವನ್ನೂ ಕೇಳಿ ಪುಟ್ಟಕ್ಕಗೆ ಭಯ ತುಂಬಿಕೊಳ್ಳುತ್ತಾಳೆ. ಬಳಿಕ ಪುಟ್ಟಕ್ಕ ಸುಮ್ಮನೆ ಆಗುತ್ತಾಳೆ. ಇನ್ನು ಕೌಸಲ್ಯ ಹಣದ ವಿಚಾರ ಮಾತನಾಡಿ ಕರೆ ಕಟ್ ಮಾಡುತ್ತಾಳೆ. ಕೌಸಲ್ಯ ಮಾತುಗಳನ್ನು ಕೇಳಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಬಳಿಕ ತಲೆ ತಿರುಗಿ ಬೀಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











