Puttakkana Makkalu: ಸ್ನೇಹಾ - ಕಂಠಿ ಮದುವೆ ಮುರಿದುಬಿತ್ತು; ರಾಧಾ ಕಾಣಿಸದ್ದನ್ನು ಕಂಡು ಬಂಗಾರಮ್ಮ ಶಾಕ್!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ ಟಿ ಆರ್ ಪೀಯಲ್ಲು ಮುಂದಿದೆ. ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅವರು ಅಮೋಘವಾಗಿ ನಟನೆ ಮಾಡುತ್ತಿದ್ದಾರೆ. ಇದೀಗ ಕಂಠಿ ಹಾಗೂ ಸ್ನೇಹಾ ಬೇರೆ ಬೇರೆ ಮದುವೆ ಆಗಲು ತಯಾರಾಗಿದ್ದಾರೆ.
ಆದರೆ ಕಂಠಿ ಬಹಳ ನೋವಲ್ಲಿ ಹಸೆ ಮಣೆ ಏರುತ್ತಾನೆ. ಸ್ನೇಹಾ ಅಮ್ಮನ ಮಾತಿಗೆ ಕಟ್ಟು ಬಿದ್ದು ಏನು ಮಾಡಲಿ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇಷ್ಟ ಇಲ್ಲದ ಮದುವೆಯನ್ನು ಆಗಬೇಕು ಎಂದು ಮನದಲ್ಲಿ ದುಗುಡ ತುಂಬಿಕೊಂಡು ಇದ್ದ ಕಂಠಿ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.

ಅಮ್ಮನ ಆಸೆಯಂತೆ ರಾಧಳನ್ನು ಮದುವೆ ಆಗಲು ಕಂಠಿ ಒಪ್ಪಿಗೆ ನೀಡಿದ್ದಾನೆ. ಯಾಕೆಂದರೆ ಕಂಠಿಗೆ ತನ್ನ ಖುಷಿಗಿಂತ ಅಮ್ಮನ ಖುಷಿಯೇ ಹೆಚ್ಚು. ಬಂಗಾರಮ್ಮನ ಮಗನೇ ಶ್ರೀ ಎಂದು ಸ್ನೇಹಾಗೆ ಇನ್ನೂ ಗೊತ್ತಿಲ್ಲ. ಕಂಠಿನೆ ಶ್ರೀ ಎಂದು ಗೊತ್ತಾದರೆ ಸ್ನೇಹಾ ಕಂಠಿಯನ್ನು ಸುಮ್ಮನೆ ಬಿಡುವ ಹಾಗೆ ಕೂಡ ಕಾಣಿಸುತ್ತ ಇಲ್ಲ.
ಯಾಕೆಂದರೆ ಬಂಗಾರಮ್ಮನನ್ನು ಕಂಡ್ರೆ ಸ್ನೇಹಾಗೆ ಆಗಲ್ಲ. ಬಂಗಾರಮ್ಮನಿಗೂ ಸ್ನೇಹಾ ಕಂಡ್ರೆ ಆಗಲ್ಲ. ನಿನ್ನ ಮಗಳು ನನ್ನ ಮಗನಿಂದ ದೂರ ಇರಬೇಕು. ಅವರಿಬ್ಬರೂ ಯಾವತ್ತೂ ಭೇಟಿಯಾಗಬಾರದು ಎಂದು ಬಂಗಾರಮ್ಮ ಪುಟ್ಟಕ್ಕನ ಬಳಿ ಕಠೋರವಾಗಿ ಹೇಳುತ್ತಾಳೆ. ಇನ್ನೂ ಆ ಕೊಟ್ಟ ಮಾತಿನ ಪ್ರಕಾರ ವಾಗಿ ಭುವನ್ ಜೊತೆ ಸ್ನೇಹ ಮದುವೆ ಮಾಡಲು ಪುಟ್ಟಕ್ಕ ಪಣ ತೊಟ್ಟಿದ್ದಾಳೆ.
ಆ ಪ್ರಕಾರವಾಗಿ ಮದುವೆ ತನಕ ಇದೀಗ ಬಂದು ನಿಂತಿದೆ. ಇವರಿಬ್ಬರ ಮದುವೆ ಬಹಳ ಅದ್ದೂರಿಯಾಗಿ ಕೂಡ ನಡೆಯುತ್ತಿದೆ. ತಾಳಿ ಕಟ್ಟುವ ಸಮಯದಲ್ಲಿ ಮಾತ್ರ ಭುವನ್ ಮನಸ್ಸು ಬದಲಾಗಿರುತ್ತದೆ. ಹಸೆಮಣೆ ಬಳಿ ಬರುವ ತನಕ ಭುವನ್ ಮನದಲ್ಲಿ ಏನು ಅಳುಕು ಇರುವುದಿಲ್ಲ.
ಆದರೆ ತಾಳಿ ಹಿಡಿದುಕೊಂಡ ಬಳಿಕ ಭುವನ್ ಗೆ ಅದೇನಾಯಿತೋ ಗೊತ್ತಿಲ್ಲ. ಆತ ಮಾತ್ರ ಈ ಮದುವೆ ನಾನು ಆಗುವುದಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ರಾಜೇಶ್ವರಿ ಹಾಗೂ ನಂಜಮ್ಮ ಮಾತ್ರ ಬಹಳ ಖುಷಿ ಪಟ್ಟರೆ ಪುಟ್ಟಕ್ಕನಿಗೆ ಭರ ಸಿಡಿಲು ಬಡಿದ ಹಾಗೆ ಆಗುತ್ತದೆ. ಇನ್ನು ಹಸೆ ಮನೆಗೆ ಕಂಠಿ ಬಂದು ಕುಳಿತಿದ್ದಾನೆ. ಆದರೆ ರಾಧಾ ಮಾತ್ರ ಮಂಟಪದಲ್ಲಿ ಎಲ್ಲಿಯೂ ಕಾಣಿಸದೆ ಇರುವುದನ್ನು ಕಂಡು ಆಕೆಯ ತಾಯಿ ಬಹಳ ಗಾಬರಿ ಪಡುತ್ತಾಳೆ.
ಆದರೆ ಬಂಗಾರಮ್ಮಗೆ ಒಂದು ಕಡೆ ಬಹಳ ಶಾಕ್ ಆದರೆ ಕಂಠಿ ಮಾತ್ರ ಏನು ಮಾತನಾಡದೆ ಇರುತ್ತಾನೆ. ಆತನಿಗೆ ರಾಧಾ ಕಾಣೆ ಆಗಿರುವುದು ಒಂದು ರೀತಿಯಲ್ಲಿ ಖುಷಿ ಆಗುತ್ತದೆ. ಇನ್ನು ಇಬ್ಬರ ಮದುವೆ ಬೇರೆ ಬೇರೆ ಕಾರಣಗಳಿಂದ ನಿಂತು ಹೋಗಿದೆ. ಇನ್ನಾದರೂ ಸ್ನೇಹಾ ಕಂಠಿ ಮುನಿಸು ಮರೆತು ಒಂದಾಗುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











