Puttakkana Makkalu: ಶಾಸ್ತ್ರಗಳಿಂದ ಹತ್ತಿರವಾಗುತ್ತಿದ್ದಾರೆ ಕಂಠಿ- ಸ್ನೇಹಾ, ಚೌಡವ್ವನ ಮಾತಿಗೆ ಎದುರಾಡದ ಬಂಗಾರಮ್ಮ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮ ಅವರ ಮನೆಯಲ್ಲಿ ಸ್ನೇಹಾಗೆ ಶಾಸ್ತ್ರ ನಡೆದಿದೆ. ಆಣೆ ಚೌಡವ್ವ ಕಂಠಿ ಹಾಗೂ ಸ್ನೇಹಾಗೆ ಹಲವಾರು ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಇನ್ನೂ ಸ್ನೇಹಾ ಹಾಗೂ ಕಂಠಿ ಮೊದಲನೇ ರಾತ್ರಿ ಶಾಸ್ತ್ರಕ್ಕೆ ವಸು, ಸುಮಾ ಹಾಗೂ ಸಹನಾ ಹೂವಿನ ಅಲಂಕಾರ ಮಾಡಲು ಹೋಗುತ್ತಾರೆ. ಆಗ ಸುಮಾಳ ಮುದ್ದು ಮುದ್ದು ಮಾತುಗಳಿಗೆ ಮನೆ ಮಂದಿಯೆಲ್ಲ ಜೋರಾಗಿ ನಗುತ್ತಾರೆ.
ಸುಮಾಳ ಪೆದ್ದುಪೆದ್ದು ಮಾತುಗಳು ವಸುಗೆ ಮಾತ್ರ ಬಹಳ ನಗು ತರಿಸುತ್ತದೆ. ಇನ್ನೂ ರೂಮ್ ನಲ್ಲಿ ಹೂವಿನ ಅಲಂಕಾರ ಮಾಡುತ್ತಾ ಇರುವ ವೇಳೆ ಸುಮಾ ಅಕ್ಕನ ಬಳಿ ಕೇಳುತ್ತಾಳೆ ಯಾಕೆ ಹೂ ಹರಡುವುದು? ಹೀಗೆ ಮಾಡಿದರೆ ಅವರಿಗೆ ನಿದ್ದೆ ಬರುತ್ತದಾ? ಎಂದೆಲ್ಲ ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಆದರೆ, ಸಹನಾಗೆ ಮಾತ್ರ ಆಕೆಯ ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯ ಆಗದೆ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೆ ವಸುಗೆ ಮಾತ್ರ ಬಹಳಷ್ಟು ನಗು ಉಕ್ಕಿ ಹರಿಯುತ್ತದೆ.

ಇನ್ನೂ ಉಂಗುರ ಹುಡುಕುವ ಶಾಸ್ತ್ರವನ್ನು ಮಾಡುತ್ತಾರೆ. ಇನ್ನೂ ಈ ಶಾಸ್ತ್ರ ಯಾಕೆ ಮಾಡಿಸುವುದು ಎನ್ನುವ ಬಗ್ಗೆ ಆಣೆ ಚೌಡವ್ವ ಎಲ್ಲರಿಗೆ ಬಿಡಿಸಿ ಹೇಳುತ್ತಾರೆ. ಶಾಸ್ತ್ರಗಳು ಇರುವುದು ಸಂಬಂಧಗಳನ್ನು ಗಟ್ಟಿ ಮಾಡಲು, ಆ ಸಲುವಾಗಿ ಶಾಸ್ತ್ರಗಳನ್ನು ಮಾಡಲಾಗುತ್ತದೆ ಎಂದೆಲ್ಲ ಹೇಳುತ್ತಾರೆ. ಇನ್ನು ಉಂಗುರ ಹುಡುಕುವ ಶಾಸ್ತ್ರದಲ್ಲಿ ಸ್ನೇಹಾನೇ ಮೇಲೂ ಗೈ ಎಂದು ಹೇಳಿದರೆ ತಪ್ಪಾಗದು.
ಭಾರೀ ಖುಷಿಯಲ್ಲಿ ಇರುವ ಕಂಠಿ
ಈ ಎಲ್ಲಾ ಶಾಸ್ತ್ರಗಳಿಂದ ಕಂಠಿಗೆ ಮಾತ್ರ ಬಹಳ ಖುಷಿ ಆಗುತ್ತದೆ. ಹಾಗೆಯೇ ಸುಮಾ ಮಾತ್ರ ಅಕ್ಕನೆ ಗೆದ್ದಿರುವುದು ಎಂದು ಬಹಳ ಖುಷಿ ಪಡುತ್ತಾಳೆ. ಇನ್ನೂ ಅವರಿಬ್ಬರನ್ನು ಮೊದಲನೆಯ ರಾತ್ರಿಗೆ ರೂಮ್‌ನೊಳಗೆ ಕಳುಹಿಸಿ ಕೊಡುತ್ತಾರೆ. ಆ ಕೂಡಲೇ ಕಂಠಿ ಚಾಪೆಯನ್ನು ಹಾಸಿ ಅದರಲ್ಲಿ ಮಲಗುತ್ತಾನೆ. ಆಗ ಸ್ನೇಹಾ ಮೆತ್ತಗೆ ಹೇಳುತ್ತಾಳೆ ನಾನು ಚಾಪೆಯಲ್ಲಿ ಮಲಗುತ್ತೇನೆ ಎಂದು. ಆದರೆ ಬೇಡವೆಂದು ಕಂಠಿ ಮೆತ್ತಗೆ ಚಾಪೆಯಲ್ಲಿ ಮಲಗುತ್ತಾನೆ.

ಕಂಠಿ ಜೊತೆ ಮಾತನಾಡಲು ಚಡಪಡಿಸಿ ಸ್ನೇಹಾ
ಇನ್ನೂ ಸ್ನೇಹಾ ಮೆತ್ತಗೆ ಎದ್ದು ಕಂಠಿ ಜೊತೆ ಮಾತನಾಡುತ್ತಾಳೆ. ನೀವು ಯಾವತ್ತೂ ಹಾಗೆಯೇ ಇರಿ ಶ್ರೀ.. ಸುಳ್ಳುಗಳನ್ನು ಹೇಳಬೇಡಿ . ನಿಮ್ಮ ತಾಯಿಯ ವಿರುದ್ಧ ಮಾತನಾಡಿದ್ದೀರಿ. ಅವರಿಗೆ ನಿಮ್ಮ ಮೇಲೆ ಬಹಳ ಕೋಪ ಇರುತ್ತದೆ ಎಂದಾಗ ಕಂಠಿ ಹೇಳುತ್ತಾನೆ. ನನ್ನ ತಾಯಿ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಆಕೆ ಹಸು ತರ... ಆಕೆ ನಿರಪರಾಧಿ ಎಂದು ಯಾವಾಗ ತಿಳಿಯುತ್ತದೆ, ಆಗ ನನ್ನನ್ನು ಆಕೆ ಮುದ್ದಾಡುತ್ತಲೇ ಇರುತ್ತಾಳೆ ಎಂದು ಹೇಳುತ್ತಾನೆ.
ಬಹಳ ಟೆನ್ಶನ್‌ನಲ್ಲಿ ಇರುವ ಮುರಳಿ
ಮುರಳಿ ಬಹಳ ಟೆನ್ಶನ್‌ನಿಂದಾ ದೇವಿಪುರಕ್ಕೆ ಬರುತ್ತಾನೆ. ಆತನಿಗೆ ಇಂಟರ್ ವ್ಯೂನಲ್ಲಿ ಲಂಚ ಕೇಳಿದ್ದಾರೆ ನನಗೆ ಈ ಕೆಲಸ ಸಿಗುವುದು ಇಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾನೆ. ಇನ್ನೂ ಅದೇ ಹೊತ್ತಿಗೆ ಕೌಸಲ್ಯ ಮಗನಿಗೆ ಕರೆ ಮಾಡಿ ಇಂಟರ್ ವ್ಯೂ ಏನಾಯಿತು ಎಂಬ ಬಗ್ಗೆ ವಿಚಾರಣೆ ಮಾಡುತ್ತಾ ಇರುತ್ತಾಳೆ. ಆಗ ಅಲ್ಲಿ ನಡೆದ ವಿಚಾರ ತಾಯಿ ಗೆ ಹೇಳುತ್ತಾನೆ ಹತ್ತು ಲಕ್ಷ ಹೇಗೆ ತರುವುದು ಎಂದಾಗ ಕೌಸಲ್ಯ ಹೇಳುತ್ತಾಳೆ. ನಮ್ಮ ಬಳಿ 15 ಲಕ್ಷ ಇದೆ ಎಂದು. ಇದನ್ನು ಕೇಳಿ ಮುರಳಿಗೆ ಶಾಕ್ ಆಗುತ್ತದೆ.


Click it and Unblock the Notifications











