For Quick Alerts
  ALLOW NOTIFICATIONS  
  For Daily Alerts

  ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ; ಮದುವಣಗಿತ್ತಿ ಹಾಗೆ ಸಿಂಗಾರಗೊಂಡ ಪುಟ್ಟಕ್ಕನ ಮನೆ

  By Poorva
  |

  ಪುಟ್ಟಕ್ಕನ ಮನೆಯಲ್ಲಿ ಮದುವೆ ಸಡಗರ ಜೋರಾಗಿಯೇ ಇದೆ. ಇಷ್ಟು ಸಣ್ಣ ಇದ್ದ ಮಗು ಇದೀಗ ಮದುವೆ ವಯಸ್ಸಿಗೆ ಬಂದಿದ್ದಾಳೆ ಎಂದು ಪುಟ್ಟಕ್ಕಗೆ ಬೇಸರ ಹಾಗೂ.ಖುಷಿ ಕೂಡ. ತನ್ನ ಪುಟ್ಟ ಮಗಳಿಗೆ ಆಕೆ ಮೆಚ್ಚಿದ ಹುಡುಗನನ್ನೆ ಮದುವೆ ಮಾಡಿಕೊಡಲು ಪುಟ್ಟಕ್ಕ ಬಯಸುತ್ತಾಳೆ. ಆದರೆ ಇದೇ ಪುಟ್ಟಕ್ಕಗೆ ಮುಳುವಾಗಿದೆ. ವರದಕ್ಷಿಣೆ ಎಂದು ವರನ ಕಡೆಯವರು ಪುಟ್ಟಕ್ಕನ ಬಳಿ ಹದಿನೈದು ಲಕ್ಷ ಪೀಕಿಸಲು ನೋಡುತ್ತಾ ಇದ್ದಾರೆ. ಇದು ಅಲ್ಲದೇ ಮದುವೆ ಖರ್ಚು ಬೇರೆ. ಪುಟ್ಟಕ್ಕ ವರನ ಕಡೆಯವರು ಈ ರೀತಿ ಮಾಡಿರುವುದನ್ನು ಕಂಡು ಬಹಳ ಬೇಸರ ವ್ಯಕ್ತ ಪಡಿಸುತ್ತಾಳೆ.

  ಯಾರ ಬಳಿಯೂ ಹೇಳಿಕೊಳ್ಳದೆ ಸುಮ್ಮನೆ ಇರುತ್ತಾಳೆ. ಎದೆ ಎತ್ತರಕ್ಕೆ ಬೆಳೆದ ಮಗುವನ್ನು ಬೆಳೆಸಿ ತನ್ನ ಏಳು ಬೀಳುಗಳಲ್ಲಿ ಆ ಮಗಳೆ ಪುಟ್ಟಕ್ಕಗೆ ಸಹಾಯ ಮಾಡುತ್ತಾಳೆ, ಅಮ್ಮನಿಗೆ ಮಗಳೆ ಸಾಥ್ ನೀಡುತ್ತಾಳೆ, ಆಕೆಯೇ ಸಹನಾ ತನ್ನ ಅಕ್ಕ ತಂಗಿಗಾಗಿ ಕಲಿಕೆಗಾಗಿ ಬೆವರು ಸುರಿಸಿ ಕೆಲಸ ಮಾಡಿ ಅಮ್ಮನಿಗೆ ಸಾಥ್ ನೀಡುತ್ತಿದ್ದಳು. ಏನೇ ಕಷ್ಟ ಎದುರಾದರೂ ಇದುವರೆಗೂ ನನಗೆ ಈ ರೀತಿ ಕಷ್ಟ ಆಯಿತು, ಹಾಗೆಯೇ ತನ್ನ ಇಷ್ಟ ಕಷ್ಟಗಳ ಬಗ್ಗೆ ಕಿಂಚಿತ್ತೂ ಯಾರ ಜೊತೆಯೂ ಬಾಯಿ ಬಿಡುತ್ತಾ ಇರಲಿಲ್ಲ, ಅಂತಹದರಲ್ಲಿ ತಾನು ಒಬ್ಬ ಹುಡುಗನನ್ನು ಪ್ರೀತಿ ಮಾಡಿ ಮದುವೆ ಆಗಬೇಕು ಎನ್ನುವ ಸತ್ಯ ಪುಟ್ಟಕ್ಕನ ಅರಿವಿಗೆ ಬರಲು ಕೊಂಚ ತಡ ಆದರೂ ಕೂಡ ಆಕೆಗೆ ಸತ್ಯ ತಿಳಿಯುತ್ತದೆ.

  ಬಳಿಕ ಆಕೆ ಯಾರನ್ನು ಇಷ್ಟ ಪಡುತ್ತಿದ್ದಾಳೆ ಅವರ ಜೊತೆ ಮದುವೆ ಮಾಡಲು ಭರ್ಜರಿ ತಯಾರಿ ನಡೆಸುತ್ತ ಇರುತ್ತಾರೆ. ಇನ್ನು ಪುಟ್ಟಕ್ಕನ ಮನೆ ಮದುಮಗಳ ಹಾಗೆ ಸಿಂಗರಿಸಿ ಮಿಂಚುತ್ತಿದೆ. ಮನೆ ಎಲ್ಲಾ ನೆಂಟರು ಓಡಾಡುತ್ತಾ ಇದ್ದಾರೆ. ಪುಟ್ಟಕ್ಕ ಕೊಂಚವೂ ಬಿಡುವಿಲ್ಲದೆ ತನ್ನ ಮಗಳ ಮದುವೆ ನಿರ್ವಿಘ್ನವಾಗಿ ನೆರವೇರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತ ಇರುತ್ತಾಳೆ. ನನ್ನ ಮೊದಲ ಕನಸು ನನಸು ಆಗುವ ಕಾಲ ಹತ್ತಿರದಲ್ಲಿ ಇದೆ, ನನ್ನ ಮಗಳನ್ನು ಬೇರೆ ಮನೆಗೆ ದೀಪ ಹಚ್ಚಲು ಕಳುಹಿಸುತ್ತಾ ಇದ್ದೇನೆ ನಿಮ್ಮ ಆಶೀರ್ವಾದ ಆಕೆಗೆ ಸದಾ ಇರಲಿ ಎಂದು ಹೇಳುತ್ತಾಳೆ.

  ಮಗಳಿಗೆ ಜನರ ಆಶಿರ್ವಾದ ಬೇಡಿದ ಪುಟ್ಟಕ್ಕ

  ಮಗಳಿಗೆ ಜನರ ಆಶಿರ್ವಾದ ಬೇಡಿದ ಪುಟ್ಟಕ್ಕ

  ಬಳಿಕ ಮಗಳನ್ನ ನೋಡಿ ಪುಟ್ಟಕ್ಕ ಎಷ್ಟು ಬೇಗ ನೀನು ಬೆಳೆದು ನಿಂತಿದ್ದಿಯಾ, ಮಗಳನ್ನು ಬೆಳೆಸಿ ಕನ್ಯಾದಾನ ಮಾಡಲು ಪುಣ್ಯ ಮಾಡಬೇಕು, ಚಿಕ್ಕ ವಯಸ್ಸಿನಿಂದ ಮನದಲ್ಲಿ ಕಷ್ಟಗಳನ್ನು ಬಚ್ಚಿಟ್ಟುಕೊಂಡು ಬೆಳೆದೆ, ಹೋದ ಮನೆಯಲ್ಲಿ ಖುಷಿಯಾಗಿ ಇರು ಮಗಳೆ ಎಂದು ಹೇಳುತ್ತಿರುವ ಪುಟ್ಟಕ್ಕಗೆ ಮಗಳ ಮೇಲೆ ಇರುವ ಆಘಾದವಾದ ಪ್ರೀತಿಯನ್ನು ನೋಡಬಹುದಾಗಿದೆ.

  ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಹನಾ

  ಅರಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಹನಾ

  ಪುಟ್ಟಕ್ಕ ಮಗಳಿಗೆ ಅರಶಿನ ಶಾಸ್ತ್ರವನ್ನು ಮಾಡಿ ತಾನು ಕೂಡ ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ನೃತ್ಯಗಳನ್ನು ಮಾಡಿ ಎಲ್ಲರ ಮನ ಗೆಲ್ಲುತ್ತಾಳೆ. ಸುಮಾಳ ಖುಷಿಯನ್ನು ನೋಡಿ ಪುಟ್ಟಕ್ಕ ಕಳೆದೇ ಹೋಗಿದ್ದಾಳೆ. ಇನ್ನು ಸ್ನೇಹಾ ಹೋಟೆಲ್ ನಲ್ಲಿ ಇದ್ದ ಅಣ್ಣನನ್ನು ಕರೆದು ಆತನಿಗೆ ದೊರೆ ಇರುವ ಹಾಗೆ ವೇಷ ತೊಡಿಸಿ ಮಾತನಾಡುತ್ತಾ ಇರುವಾಗ ಕಂಠಿ ಹಾಗೂ ಆತನ ಗೆಳೆಯರು ಬರುತ್ತಾರೆ. ಅವರನ್ನು ನೋಡಿದ್ದೆ ತಡ ಆತ ಓಡಿ ಹೋಗುತ್ತಾನೆ.

  ನಕಲಿ ದೊರೆಯನ್ನು ಹಿಡಿಯಲು ಹೊರಟ ಕಂಠಿ

  ನಕಲಿ ದೊರೆಯನ್ನು ಹಿಡಿಯಲು ಹೊರಟ ಕಂಠಿ

  ಇದನ್ನು ನೋಡಿದ ಸಿದ್ದೇಶ್ ಆತನನ್ನು ಫಾಲೋ ಮಾಡಿಕೊಂಡು ಹೋಗುತ್ತಾನೆ. ಕಂಠಿ ಏನು ತಿಳಿಯದ ಹಾಗೆ ನಟಿಸುತ್ತಾ ಇರುತ್ತಾನೆ. ಆದರೆ ದೊರೆ ಎಂದು ಹೇಳಿಕೊಂಡು ಬಂದವನು ಯಾರು ಎಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾನೆ. ಇದನ್ನು ನೋಡಿದ ಸ್ನೇಹ ಮನದಲ್ಲಿ ನಗುತ್ತಾ ಕಂಠಿ ಬಳಿ ದೊರೆ ಬಗ್ಗೆ ಇಲ್ಲದ ವಿಚಾರಗಳನ್ನು ಹೇಳುತ್ತಾಳೆ. ಕಂಠಿ ಹೊಟ್ಟೆ ಉರಿದುಕೊಂಡು ಸುಮ್ಮನೆ ಇರುತ್ತಾನೆ.

  ಸ್ನೇಹಾಗೆ ಪ್ರೀತಿ ಹೇಳುತ್ತಾನ ಕಂಠಿ?

  ಸ್ನೇಹಾಗೆ ಪ್ರೀತಿ ಹೇಳುತ್ತಾನ ಕಂಠಿ?

  ಇನ್ನು ಸಹನಾ ಮದುವೆಯಲ್ಲಿ ಸ್ನೇಹಾ ಬಹಳ ಓಡಾಡುತ್ತಾ ಇರುತ್ತಾಳೆ. ಸ್ನೇಹಾಳನ್ನು ನೋಡಿದ ಕಂಠಿ ಕೆಂಪು ಗುಲಾಬಿ ಹಿಡಿದುಕೊಂಡು ಪ್ರಪೋಸ್ ಮಾಡುತ್ತಾನ? ಮುರಳಿ ಬಗ್ಗೆ ತಪ್ಪು ತಿಳಿದುಕೊಂಡ ಸ್ನೇಹಾ ತನ್ನ ತಪ್ಪನ್ನು ತಿಳಿದುಕೊಂಡು ಮೇಷ್ಟ್ರ ಜೊತೆ ಪುನಃ ಒಂದಾಗುತ್ತಾಳಾ ಎಂಬುವುದನ್ನು ಕಾದು ನೋಡಬೇಕಿದೆ. ಇನ್ನು ಪುಟ್ಟಕ್ಕ ತನ್ನ ಮಗಳ ಮದುವೆಗೆ ಆಗಮಿಸಿ ಶುಭ ಹಾರೈಸಲು ಪ್ರೀತಿಯ ಆಹ್ವಾನವನ್ನು ನೀಡಿದ್ದಾಳೆ.

  English summary
  Kannada serial Puttakkana Makkalu written update on 22nd January
  Monday, January 23, 2023, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X