Puttakkana Makkalu: ಕಂಠಿಯನ್ನು ಭೇಟಿ ಮಾಡಲು ಕರೆದ ಸ್ನೇಹಾ; ಮದುವೆ ಹಾಲ್‌ನಲ್ಲಿ ಕಂಠಿಯನ್ನು ಕಂಡು ಪುಟ್ಟಕ್ಕ ಶಾಕ್

By Poorva
Kannada serial Puttakkana Makkalu written updated on 22nd june

ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಸ್ನೇಹಾ ಹಾಗೂ ಕಂಠಿ ಇಬ್ಬರ ಮದುವೆ ಕೂಡ ನಿಂತು ಹೋಗಿದೆ. ಕಂಠಿಗೆ ಹಾಗೂ ಸ್ನೇಹಾಗೆ ಈ ಮದುವೆ ಚೂರು ಇಷ್ಟ ಇರುವುದಿಲ್ಲ. ಇಷ್ಟ ಇಲ್ಲದವರನ್ನು ಒಲ್ಲದ ಮನಸಿನಿಂದ ಮದುವೆ ಆಗಲು ಒಪ್ಪಿಕೊಂಡಿದ್ದಾರೆ ಇಬ್ಬರು.

ಪುಟ್ಟಕ್ಕನ ಮಾತಿಗೆ ಕಟ್ಟು ಬಿದ್ದ ಸ್ನೇಹಾ ತಾನು ಪ್ರೀತಿ ಮಾಡುತ್ತಿರುವ ಹುಡುಗನನ್ನು ಮದುವೆ ಆಗಲಾಗದೇ ತಾಯಿಯ ಮಾತಿಗೆ ಕಟ್ಟುಬಿದ್ದಿದ್ದಾಳೆ. ಇನ್ನು ಭುವನ್ ಮದುವೆ ಬೇಡ ಎಂದು ಎದ್ದು ಕಾರಣ ಇಲ್ಲದೆ ಹೊರಟು ಹೋಗುತ್ತಾನೆ. ಪುಟ್ಟಕ್ಕ ಇದನ್ನೆಲ್ಲ ನೋಡಿ ಶಾಕ್ ಆಗಿ ಎದೆ ಹಿಡಿದುಕೊಂಡು ಅಳುತ್ತಾಳೆ.

ಅಮ್ಮ ಎದೆ ಹಿಡಿದುಕೊಂಡು ಇರುವುದನ್ನು ನೋಡಿದ ಸ್ನೇಹಾಗೆ ಏನು ಮಾಡಬೇಕು ಎಂದು ತಿಳಿಯದೇ ಅಮ್ಮನನ್ನು ಸಾಂತ್ವನ ಮಾಡುತ್ತಾ ಇರುತ್ತಾಳೆ. ಪುಟ್ಟಕ್ಕ ಜೋರಾಗಿ ಅಳುತ್ತಾ ಕುಸಿದು ಬೀಳುತ್ತಾಳೆ. ಆಗ ಭುವನ್ ಎನು ಮಾತನ್ನು ಆಡದೆ ಸುಮ್ಮನೆ ನಿಂತುಕೊಂಡಿರುತ್ತಾನೆ. ಭುವನ್ ಯಾರ ಮಾತನ್ನೂ ಕೇಳದ ಸ್ಥಿತಿಯಲ್ಲಿ ಇರುತ್ತಾನೆ

ಭುವನ್ ಬಳಿ ಚಂದ್ರು ಕೇಳುತ್ತಾನೆ. ಏನಾಯ್ತು ಭುವನ್ ಮದುವೆ ತನಕ ಬಂದು ಈಗ ಮದುವೆ ಬೇಡ ಎಂದರೆ ಎನು ಅರ್ಥ ಯಾಕಾಗಿ ಹೀಗೆ ಮಾಡುತ್ತಾ ಇದ್ದಿಯಾ ಎಂದೆಲ್ಲ ಕೇಳುತ್ತಾನೆ. ಆಗ ಭುವನ್ ನನ್ನ ಜೀವನದ ಪ್ರಶ್ನೆ. ನನ್ನ ನಿರ್ಧಾರವನ್ನು ಯಾರು ಕೇಳುವುದು ನನಗೆ ಇಷ್ಟ ಆಗುವುದಿಲ್ಲ ಎಂದು ಖಡಕ್ ಆಗಿ ಹೇಳುತ್ತಾನೆ.

ಭುವನ್ ತಂದೆ ಕೂಡ ಕಾರಣ ಏನು ಎಂದು ಕೇಳಿದರೆ ಭುವನ್ ಹೇಳುವುದಿಲ್ಲ ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ. ಭುವನ್ ಬಳಿ ಪುಟ್ಟಕ್ಕ ಕಾಡಿ ಬೇಡುತ್ತಾಳೆ. ಭುವನ್ ಏನು ಮಾತುಗಳನ್ನು ಆಡದೆ ಸುಮ್ಮನೆ ಇರುತ್ತಾನೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ. ಪುಟ್ಟಕ್ಕ ಕಂಗಾಲಾಗಿ ಹೋಗಿರುತ್ತಾಳೆ.

ಪುಟ್ಟಕ್ಕನ ಸ್ಥಿತಿ ಕಂಡು ರಾಜೇಶ್ವರಿ ಮಾತ್ರ ನಗುತ್ತಾ ಇರುತ್ತಾಳೆ. ಇನ್ನು ಬಂಗಾರಮ್ಮ ಕೋಪಗೊಂಡು ಇರುತ್ತಾಳೆ. ಕಾಳಿ ಬರೆದಿದ್ದ ಲೆಟರ್ ಅನ್ನು ಹಿಡಿದುಕೊಂಡು ಸಿದ್ದೇಶ್ ಬರುತ್ತಾನೆ. ಬಂದು ಬಂಗಾರಮ್ಮನ ಕೈಗೆ ಕೊಡುತ್ತಾನೆ. ಆ ಲೆಟರ್ ಓದಿದ ಬಂಗಾರಮ್ಮ ಬಹಳ ಕೋಪ ಮಾಡಿಕೊಂಡಿರುತ್ತಾಳೆ.

ಇನ್ನು ಇದಕ್ಕೆಲ್ಲ ಕಾರಣ ಆ ರಾಜಿ. ರಾಜಿಗೆ ಬುದ್ದಿ ಕಲಿಸಿಯೆ ಕಲಿಸುತ್ತೇನೆ ಎಂದು ಹೇಳಿ ಪುಟ್ಟಕ್ಕ ಇರುವ ಮದುವೆ ಹಾಲ್ ಗೆ ಹೋಗುತ್ತಾಳೆ. ರಾಜೀಯನ್ನು ಜೋರಾಗಿ ಬಂಗಾರಮ್ಮ ಕರೆಯುತ್ತಾಳೆ. ರಾಜಿಗೆ ಮಾತ್ರ ಬಂಗಾರಮ್ಮನ ಕೋಪ ಕಂಡು ನಾನು ಏನು ಮಾಡಿದೆ ಎಂದು ಮುಖ ನೋಡುತ್ತಾ ನಿಂತಿದ್ದಳು ರಾಜೇಶ್ವರಿ ಕಾಳಿ ಮಾಡಿದ ಅವಾಂತರವನ್ನು ರಾಜೇಶ್ವರಿ ಹೇಳುತ್ತಾಳೆ.

ಬಳಿಕ ರಾಜಿಗೆ ಬಾಯಿಗೆ ಬಂದ ಹಾಗೆ ಬೈದು ಅಲ್ಲಿಂದ ಹೋಗುತ್ತಾಳೆ. ಆಗ ಸ್ನೇಹಾ ಕಂಠಿ ಮದುವೆ ನಡೆದಿಲ್ಲ ಎಂಬುವುದು ಖಾತ್ರಿ ಆಗುತ್ತದೆ. ಬಳಿಕ ಸಿದ್ದೇಶ್ ಬಳಿ ಕಂಠಿಯನ್ನು ಕರೆದುಕೊಂಡು ಬರುವುದಾಗಿ ಹೇಳುತ್ತಾಳೆ . ಸಿದ್ದೇಶ್ ಮಾತು ಕೇಳಿ ಸ್ನೇಹಾ ಇರುವಲ್ಲಿಗೆ ಕಂಠಿ ಬರುತ್ತಾನೆ. ಇದನ್ನು ನೋಡಿದ ಪುಟ್ಟಕ್ಕ ಶಾಕ್ ಆಗುತ್ತಾಳೆ.

More from Filmibeat

English summary
Kannada serial Puttakkana Makkalu written updated on 22nd june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X