Puttakkana Makkalu: ಕಂಠಿ ಮೇಲೆ ಮುನಿಸಿಕೊಂಡ ಸುಮಾ ಬಳಿ ನಿಜ ಹೇಳುತ್ತಾಳಾ ಸ್ನೇಹಾ?

By Poorva
Kannada serial Puttakkana Makkalu written updated on 22nd March

ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪುಟ್ಟಕ್ಕಗೆ ಬಿಪಿ ಹೆಚ್ಚಳವಾಗಿ ಕುಸಿದು ಬೀಳುತ್ತಾಳೆ. ಈ ವೇಳೆ ಸುಮಾ ಅದನ್ನು ನೋಡಿ ಶಾಕ್ ಆಗಿ ಸ್ನೇಹಾಗೆ ಕರೆ ಮಾಡುತ್ತಾಳೆ. ಇದನ್ನು ಕೇಳಿದ ಕೂಡಲೇ ಸ್ನೇಹಾ ಬರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಡಾಕ್ಟರ್ ಕೂಡ ಬರುತ್ತಾರೆ. ಡಾಕ್ಟರ್ ಬಂದಿರುವುದನ್ನು ನೋಡಿದ ಸ್ನೇಹಾಗೆ ಇನ್ನೂ ಆತಂಕ ಹೆಚ್ಚಾಗುತ್ತದೆ.

ಪುಟ್ಟಕ್ಕ ಕೊಂಚ ಎಚ್ಚರಗೊಂಡು ನನಗೆ ಏನು ಆಗಿಲ್ಲ ನೀವು ಯಾಕೆ ಇಷ್ಟು ಭಯ ಪಟ್ಟುಕೊಂಡು ಅಳುತ್ತಿಯಾ ಸುಮಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾಗೆ ದುಃಖ ಉಮ್ಮಳಿಸಿ ಬರುತ್ತದೆ. ಡಾಕ್ಟರ್ ಸುಮಾಗೆ ಸಮಾಧಾನ ಮಾಡುತ್ತಾರೆ ಸುಮಾ ಸುಮ್ಮನಾಗುತ್ತಾಳೆ. ಆ ವೇಳೆ ಡಾಕ್ಟರ್ ಕಂಠಿಯನ್ನು ಹೊರಗೆ ಕರೆದು ಪುಟ್ಟಕ್ಕ ಅವರನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದೆಲ್ಲ ಹೇಳಿ ಅಲ್ಲಿಂದ ಹೋಗುತ್ತಾರೆ. ಆತಂಕದಲ್ಲಿ ಇದ್ದ ಸ್ನೇಹಾಳನ್ನು ಸಮಾಧಾನ ಮಾಡುತ್ತಾಳೆ.

ಇನ್ನು ಕಾಳಿ ಜೂಜು ಆಟ ಆಡುತ್ತಾ ಇರುತ್ತಾನೆ. ಕುಡಿದ ಮತ್ತಿನಲ್ಲಿ ಏನೇನೋ ಮಾತನಾಡುತ್ತಾ ಇರುತ್ತಾರೆ. ಅಷ್ಟರಲ್ಲಿ ಕಾಳೀ ಸ್ನೇಹಿತರು ಬಂದು ಸ್ನೇಹಾಗೆ ಕಂಠಿ ಪ್ರಪೋಸ್ ಮಾಡಿದ ದೃಶ್ಯವನ್ನು ತೋರಿಸುತ್ತಾರೆ. ಆದರೆ ಕಾಳೀಗೆ ಅದೇನು ದೊಡ್ಡದು ಎಂದು ಅನ್ನಿಸುತ್ತಾ ಇಲ್ಲ, ಇನ್ನು ಪುಟ್ಟಕ್ಕ ಆಳುತ್ತಿರುವ ಸುಮಳನ್ನು ಸಮಾಧಾನ ಮಾಡುತ್ತಾ ಇರುತ್ತಾಳೆ. ಆಗ ಕಂಠಿ ಕೂಡ ಪುಟ್ಟಕ್ಕ ಬಳಿ ಅವ್ವ ನಿಮಗೆ ಏನೇ ತೊಂದರೆ ಇದ್ದರೂ ನಿಮ್ಮ ಇಬ್ಬರು ಮಕ್ಕಳ ಜೊತೆ ಹೇಳದೆ ಇದ್ದರೂ ನನ್ನ ಬಳಿ ಹೇಳಿ ಎಂದು ಹೇಳುತ್ತಾನೆ

ಇದನ್ನು ಕೇಳಿದ ಸುಮಾ ನಿಮಗೆ ಯಾಕೆ ನಮ್ಮ ಬಗ್ಗೆ ಅಷ್ಟು ಕಾಳಜಿ, ನೀವು ಬೇರೆ ಹುಡುಗಿಯನ್ನು ಹುಡುಕಿದ್ದಿರಾ, ನಿಮಗೆ ಯಾಕೆ ನಮ್ಮ ಅವ್ವನ ಮೇಲೆ ಅಷ್ಟು ಕಾಳಜಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಅರ್ಥ ಆಗಲೇ ಇಲ್ಲ, ಏನಮ್ಮ ಈ ರೀತಿ ಮಾತನಾಡುತ್ತಾ ಇದ್ದೀಯಾ ಏನಾಯಿತು ಎಂದೆಲ್ಲ ಕೇಳಿದಾಗ ಸ್ನೇಹಾ ಏನೋ ಒಂದು ನೆಪ ಹೇಳಿ ಸುಮ್ಮನೆ ಆಗುತ್ತಾಳೆ. ಪುಟ್ಟಕ್ಕ ಸುಸ್ತಾಗಿಯೇ ಇರುತ್ತಾಳೆ.

ಕಂಠಿ ಮುಖ ನೋಡಿ ಏನಪ್ಪಾ ಮದುವೆ ಏನಾದರು ಆಗುತ್ತಾ ಇದ್ದೀಯಾ ಎಂದಾಗ ಕಂಠಿ ಇಲ್ಲ ಅಮ್ಮ ಎಂದು ಹೇಳುತ್ತಾನೆ. ಬಳಿಕ ಅಲ್ಲಿಂದ ಮೆತ್ತಗೆ ಹೊರ ಹೋಗುತ್ತಾನೆ. ಕಂಠಿ ಹೋಗುತ್ತಿದ್ದ ಹಾಗೆಯೇ ಸ್ನೇಹಾ ಕೂಡ ಬಂದೆ ಅಮ್ಮ ಎಂದು ಹೇಳಿ ಹೊರಗೆ ಹೋಗುತ್ತಾಳೆ.

ಕಂಠಿ ಸ್ನೇಹಾನಾ ಜೊತೆ ಬರುತ್ತೀನಿ ಎಂದು ಹೇಳಿ ನನಗೆ ಏನು ಕೊಡಲ್ವ ಎಂದು ರೊಮ್ಯಾಂಟಿಕ್ ಆಗಿ ಕೇಳಿದಾಗ ಸ್ನೇಹಾ ನಾಚಿ ನೀರಾಗಿದ್ದಳು. ಆ ವೇಳೆ ಅಲ್ಲಿಗೆ ಬಂದ ಸುಮಾ ಮಾತ್ರ ಕಂಠಿ ಕೈ ಗಟ್ಟಿಯಾಗಿ ಹೊಡೆದುಕೊಳ್ಳುತ್ತಾ ಇರುತ್ತಾಳೆ. ಇದನ್ನು ನೋಡಿದ ಕಂಠಿ ಗಳಿಬಿಲಿಗೊಳ್ಳುತ್ತಾನೆ. ಇರೋ ಸತ್ಯನ ಸುಮಾ ಬಳಿ ಹೇಳುತ್ತಾಳ ಸ್ನೇಹಾ ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written updated on 22nd March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X