Puttakkana Makkalu : ಮುನಿಸು ಬಿಟ್ಟು ಮತ್ತೆ ಒಂದಾಗ್ತಾರಾ ಸಹನಾ, ಮುರಳಿ; ಸುಮಾ ಪ್ಲಾನ್ ಕೆಲಸ ಮಾಡುತ್ತಾ?

By Poorva

ಮುರಳಿ ಮೇಷ್ಟ್ರ ತಾಯಿ ಕೌಸಲ್ಯ ಮದುವೆಗೆ ಬಟ್ಟೆಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಬರಲು ಟ್ಯಾಕ್ಸಿಗೆ ಕೂಡ ಪುಟ್ಟಕ್ಕ ಹಣ ಕೊಡುತ್ತಾರೆ. ಹಾಗೆಯೇ ಎಲ್ಲಾ ಶಾಪಿಂಗ್ ಮುಗಿದ ಬಳಿಕ ಪುಟ್ಟಕ್ಕನ ಬಳಿ ಹಣ ಕೇಳುತ್ತಾಳೆ. ಪುಟ್ಟಕ್ಕ ತನ್ನ ಬಳಿಯಲ್ಲಿ ಇದ್ದ ಹಣವನ್ನು ಕೌಸಲ್ಯ ಕೈಗೆ ಒಪ್ಪಿಸುತ್ತಾರೆ. ಅದನ್ನು ನೋಡಿದ ಸಹನಾಗೆ ಏನು ಹೇಳಬೇಕೋ ತಿಳಿಯದೇ ಗಾಬರಿ ಆಗುತ್ತಾಳೆ.

ಇದನ್ನು ನೋಡಿದ ಕೌಸಲ್ಯ ಅಳಿಯ ನಿಮ್ಮನ್ನು ಡ್ರಾಪ್ ಮಾಡೋಣ ಅಂದುಕೊಂಡೆ ಆದರೆ ನಾವು ಬೇರೆ ದಾರಿಯಿಂದ ಹೋಗುವುದು ಎಂದಾಗ ಪುಟ್ಟಕ್ಕ ಬೇಸರ ಮಾಡಿಕೊಳ್ಳದೆ ಪರವಾಗಿಲ್ಲ ಬಿಡಿ ಎಂದು ಹೇಳುತ್ತಾಳೆ. ಅವರು ಹೋದ ಬಳಿಕ ಅಮ್ಮನ ಬಳಿ ಸಹನಾ ಏನಮ್ಮ ಇದೆಲ್ಲ, ಎಲ್ಲದಕ್ಕೂ ನೀನೇ ದುಡ್ಡು ಕೊಟ್ಟೆ ಅಲ್ವಾ ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಹೇಳುತ್ತಾಳೆ.

ಪುಟ್ಟಕ್ಕ ಅನ್ನದಾನಕ್ಕೆ ಆರ್ಡರ್ ಬಂದಿತ್ತು ಅಲ್ವಾ, ಆದೆ ಕಣವ್ವ ಸ್ನೇಹಾ ರಾಜವ್ವನ ಬಳಿ ತೆಗೆದುಕೊಂಡು ಬಂದಳು ಅಲ್ವಾ ಅದೇ ದುಡ್ಡು ಇದು ಎಂದು ಹೇಳಿದಾಗ ಸಹನಾ ಸುಮ್ಮನೆ ಆಗುತ್ತಾಳೆ. ಬಳಿಕ ಅಲ್ಲಿಂದ ಹೊರಡುತ್ತಾರೆ. ಇನ್ನು ಕಂಠಿ ಹಾಗೂ ಆತನ ಗೆಳೆಯರು ಹೊಲದ ಬಳಿ ಬಂದಾಗ ನಕಲಿ ದೊರೆ ಓಡಿ ಹೋಗುತ್ತಾನೆ.

ಸ್ನೇಹಾ ಬಳಿ ನಿಜ ಹೇಳಲು ಹೊರಟ ಕಂಠಿ

ಸ್ನೇಹಾ ಬಳಿ ನಿಜ ಹೇಳಲು ಹೊರಟ ಕಂಠಿ

ನಿಮ್ಮನ್ನು ಯಾರೋ ಆಟ ಆಡಿಸುತ್ತಾ ಇದ್ದಾರೆ ನೀವು ಅದನ್ನು ನಂಬಿಕೊಂಡು ಬಂದಿದ್ದೀರಿ ಅಲ್ವಾ ಎಂದು ಕಂಠಿ ಹೇಳುತ್ತಾನೆ. ಅದಕ್ಕೆ ಸ್ನೇಹಾ ಇಷ್ಟು ದಿನ ಆಟ ಆಡಿಸುತ್ತಾ ಇದ್ದ ಶ್ರೀ ಆದರೆ ಇವತ್ತು ಫೈನಲ್ಲಿ ಅವನನ್ನು ಮೀಟ್ ಆಗಲು ಚಾನ್ಸ್ ಸಿಕ್ಕಿತು ಎಂದಾಗ ಸಿದ್ದೇಶ್ ಮೆತ್ತಗೆ ಅತ್ತಿಗೆ ಅವನನ್ನು ದೊರೆ ಎಂದು ನಂಬಿಕೊಂಡು ಬಿಟ್ಟಿದ್ದಾರೆ ಎನ್ನುತ್ತಾನೆ.

ಸ್ನೇಹಾ ಮಾತಿಗೆ ಬೆಚ್ಚಿದ ಕಂಠಿ

ಸ್ನೇಹಾ ಮಾತಿಗೆ ಬೆಚ್ಚಿದ ಕಂಠಿ

ಇದಕ್ಕೆ ಪ್ರತಿಕ್ರಿಯಿಸಿದ ಸ್ನೇಹಾ ಆ ದೊರೆ ಮುಖ ಮುಚ್ಚಿಕೊಂಡು ಬಂದಿದ್ದ, ಮುಖ ತೋರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾಳೆ. ಇದನ್ನು ಕೇಳಿದ ಕಂಠಿಗೆ ಏನು ಹೇಳಬೇಕೋ ತಿಳಿಯದಾಗಿ ಹೋಗುತ್ತದೆ. ಬಳಿಕ ಕಂಠಿ ಸ್ನೇಹಾಗೆ ಬುದ್ದಿ ಮಾತು ಹೇಳುತ್ತಾನೆ. ಆದರೆ ಎಲ್ಲಾ ಸತ್ಯ ಗೊತ್ತಿರುವ ಸ್ನೇಹಾ ಮಾತ್ರ ಏನು ಹೇಳದೆ ಸುಮ್ಮನೆ ಇರುತ್ತಾಳೆ. ಬಳಿಕ ಕಂಠಿ ಏನು ಮಾಡುವುದು ಎಂದು ತಿಳಿಯದೇ ಸ್ನೇಹಾಗೆ ನಿಜ ಹೇಳುವ ಧೈರ್ಯ ಮಾಡುತ್ತಾನೆ..

ಮುರಳಿ ಮನೆಗೆ ಹೊರಟ ಕಂಠಿ

ಮುರಳಿ ಮನೆಗೆ ಹೊರಟ ಕಂಠಿ

ಇನ್ನು ಸುಮಾ ಮುರಳಿ ಮೇಷ್ಟ್ರು ಹಾಗೂ ಸಹನಾಳನ್ನು ಒಂದು ಮಾಡಲು ದೊಡ್ಡ ಮಾಸ್ಟರ್ ಪ್ಲಾನ್ ಮಾಡುತ್ತಾಳೆ. ಸಹನಾಳನ್ನು ಗುಡಿಗೆ ಹೋಗಬೇಕು ಎಂದು ಕರೆದುಕೊಂಡು ಬರುತ್ತಾರೆ. ಆದರೆ ಎಷ್ಟೇ ದೂರ ಹೋದರೂ ಗುಡಿ ಸಿಗದೇ ಇರುವುದನ್ನು ನೋಡಿದ ಸಹನಾ ಸ್ನೇಹಾ ಹಾಗೂ ಸುಮಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಏನು ಎತ್ತ ಎಂದು ಕೇಳದೆ ಸೀದಾ ಬಾ ಎಂದು ಸ್ನೇಹಾ ಹೇಳುತ್ತಾಳೆ. ಸಹನಾ ಪ್ರಶ್ನೆ ಮೇಲೆ ಪ್ರಶ್ನೆ ಇಡುತ್ತಾ ಬರುತ್ತಾಳೆ.

ಕಾಡಿಗೆ ಬರುವುದಿಲ್ಲ ಎಂದು ಹಠ ಹಿಡಿದ ಮೇಷ್ಟ್ರು

ಕಾಡಿಗೆ ಬರುವುದಿಲ್ಲ ಎಂದು ಹಠ ಹಿಡಿದ ಮೇಷ್ಟ್ರು

ಮುರಳಿ ಮೇಷ್ಟ್ರನ್ನು ಕಂಠಿ ಹಾಗೂ ಆತನ ಗೆಳೆಯರು ಸೇರಿ ಕರೆದುಕೊಂಡು ಬರುತ್ತಾರೆ. ಆದರೆ ಎಲ್ಲಿಗೆ ಎಂದು ಹೇಳದೆ ಇರುವ ಕಾರಣ ಮುರಳಿ ಮೇಷ್ಟ್ರು ಅರ್ಧ ದಾರಿ ತನಕ ಬಂದು ಕೊನೆಗೆ ಹಿಂದೇಟು ಹಾಕುತ್ತಾರೆ. ಮೇಷ್ಟ್ರೇ ಕಾಡಿನ ಒಳಗೆ ಹೋಗಿ ಬಿಡೋಣ ಎಂದು ಕಂಠಿ ಹೇಳುತ್ತಾನೆ. ಅದಕ್ಕೆ ಮುರಳಿ ಬೇಡಪ್ಪಾ ನಾನು ಬರಲ್ಲ ಕಾಡು ಅಂದರೆ ನನಗೆ ಭಯ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ಹಾಗೂ ಆತನ ಗೆಳೆಯರು ಮುರಳಿ ಮೇಷ್ಟ್ರನ್ನು ಎತ್ತಿಕೊಂಡು ಹೋಗುತ್ತಾರೆ. ಇನ್ನು ಕಾಡಿನ ಒಳಗೆ ಹೋದ ಬಳಿಕ ಸಹನಾಳನ್ನು ಮೇಷ್ಟ್ರು ನೋಡುತ್ತಾರೆ. ಮೇಷ್ಟ್ರು ಬರುವ ವೇಳೆ ಎಲ್ಲರೂ ಅಡಗಿ ಕುಳಿತುಕೊಳ್ಳುತ್ತಾರೆ. ಆ ವೇಳೆ ಸಹನಾ ಬಳಿಗೆ ಬಂದ ಮೇಷ್ಟ್ರು ಆಕೆಯ ಕೈ ಹಿಡಿದುಕೊಳ್ಳುತ್ತಾರೆ. ಇದನ್ನು ನೋಡಿದ ಸಹನಾ ಮೇಷ್ಟ್ರ ಮುಖವನ್ನು ನೋಡಿ ಕೈಯನ್ನು ಬಿಡಿಸಿಕೊಳ್ಳುತ್ತಾಳೆ. ಇಷ್ಟೆಲ್ಲಾ ನಡೆದ ಮೇಲೆ ಸಹನಾ ಮೇಷ್ಟ್ರ ಜೊತೆ ಮುನಿಸು ಬಿಟ್ಟು ಮಾತನಾಡುತ್ತಾಳಾ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written update on 23rd January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X