Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu: ಮೇಷ್ಟ್ರ ತಂದೆ ತಾಯಿ ತಲೆಗೆ ಹುಳ ಬಿಟ್ಟ ಸ್ವಾಮೀಜಿ
ಕಂಠಿ ಮಾಸ್ಟರ್ ಪ್ಲಾನ್ ನಂತೆ ಸಿದೇಶ್ ಮುರಳಿ ಮೇಷ್ಟ್ರು ಮನೆಗೆ ಬುಡಬುಡಿಕೆ ವೇಷದಲ್ಲಿ ಬರುತ್ತಾನೆ. ಮುರಳಿ ಮೇಷ್ಟ್ರು ಮನೆಗೆ ಬಂದು ಜೋರಾಗಿ ಮುರಳಿ ಮೇಷ್ಟ್ರ ತಂದೆ ತಾಯಿ ಹೆಸರು ಹೇಳಿ ಕರೆಯುತ್ತಾನೆ. ಈ ವೇಳೆ ಮೇಷ್ಟ್ರ ತಾಯಿ ತಂದೆ ಮನೆ ಹೊರಗೆ ಬಂದಾಗ ಬುಡಬುಡಿಕೆ ವೇಷಧಾರಿಯನ್ನು ಕಂಡು ಹೆದರುತ್ತಾರೆ. ಬಳಿಕ ಅವರ ಮನದಲ್ಲಿ ಏನೆಲ್ಲಾ ಇದೆ ಅದನ್ನು ಬುಡಬುಡಕೆ ವೇಷಧಾರಿ ಅವರ ಮುಂದೆ ಹೇಳುತ್ತಾನೆ.
ಇದನ್ನೆಲ್ಲ ಕೇಳಿದ ಮೇಷ್ಟ್ರ ತಂದೆ ತಾಯಿ ಇದೆಲ್ಲ ಸತ್ಯ ಆಗಿರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಬುಡಬುಡಿಕೆ ವೇಷಧಾರಿ ನೀವು ಆ ಹುಡುಗಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಿಮಗೆ ನಿಮ್ಮ ಮಗ ಎದುರು ನಿಲ್ಲುತ್ತಾನೆ ಅಲ್ವಾ ಎಂದಾಗ ಹೌದು ಹೌದು ಎಂದು ಹೇಳುತ್ತಾರೆ. ಬಳಿಕ ಬುಡಬುಡಿಕೆಯಾತ ನಾನು ಹೆಚ್ಚು ಹೇಳುವುದಿಲ್ಲ, ಈ ಮನೆಗೆ ಬಹಳ ದೊಡ್ಡ ಕಂಟಕ ಇದೆ. ಅದು ನಿವಾರಣೆ ಆಗಬೇಕು ಎಂದರೆ ಗುಡಿಗೆ ಹೋಗಿ ಪ್ರದಕ್ಷಿಣೆ ಹಾಕಿ ಅಲ್ಲಿ ನಮ್ಮ ಗುರುಗಳು ಗಡ್ಡ ಬಿಟ್ಟುಕೊಂಡು ಕುಳಿತು ಇರುತ್ತಾರೆ ಅವರ ಬಳಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ಎಲ್ಲಾ ಪರಿಹಾರ ಮಾಡುತ್ತಾರೆ ಎಂದು ಹೇಳಿ ಅಲ್ಲಿಂದ ಸಿದ್ದೇಶ್ ಹೋಗುತ್ತಾನೆ ಇದನ್ನೆಲ್ಲ ಕೇಳಿದ ಮೇಷ್ಟ್ರ ತಂದೆ ತಾಯಿಗೆ ಬಹಳ ಭಯ ಆಗುತ್ತದೆ. ಇದನ್ನೆಲ್ಲ ಮರೆಯಲ್ಲಿ ನೋಡುತ್ತಿದ್ದ ಕಂಠಿಗೆ ಈಗ ಮಾಡಿದ ಪ್ಲಾನ್ ಸಕ್ಸಸ್ ಆಯಿತು ಅಂದುಕೊಳ್ಳುತ್ತಾ ಇರುತ್ತಾನೆ. ಇನ್ನು ಗುಡಿಯಲ್ಲಿ ನಾಗ ಗಡ್ಡ ದಾರಿ ಸ್ವಾಮೀಜಿಯ ವೇಷ ಹಾಕಿ ಕುಳಿತಿರುತ್ತಾನೆ. ಈ ವೇಳೆ ನಾಗನನ್ನು ನಿಜವಾದ ಸ್ವಾಮೀಜಿ ಎಂದು ತಿಳಿದು ಎಲ್ಲರೂ ಕೈ ಮುಗಿದು ನಿಲ್ಲುತ್ತಾರೆ.

ಸ್ವಾಮೀಜಿ ಬಳಿ ಓಡಿ ಬಂದ ಮೇಷ್ಟ್ರ ತಂದೆ ತಾಯಿ
ಈ ವೇಳೆ ನಾಗಗೆ ಗಡ್ಡ ಕೆರೆತವಾಗುತ್ತದೆ. ಬಳಿಕ ಲೋ ಮುಂಗುಸಿ ಈ ಗೆಟಪ್ ಹಾಕಿ ನೀನು ಹೇಗೆ ಇರುತ್ತಿಯಾ ಎಂದು ಹೇಳುತ್ತಾನೆ ಇದನ್ನು ಕೇಳಿದ ಸಿದ್ದೇಶ್ ಹೇ ಬಾಯಿಮುಚ್ಚು ಅಣ್ಣ ಹೇಳಿದಷ್ಟು ಮಾಡು ಎಂದು ಹೇಳುತ್ತಾನೆ ಇದನ್ನು ನೋಡಿದ ಭಕ್ತರು ಏನಿದು ಸ್ವಾಮೀಜಿ ಒಬ್ಬರೇ ಮಾತನಾಡುತ್ತಾ ಇದ್ದಾರೆ ಎಂದಾಗ ಹುಲಿ ಅವರು ದೇವರ ಬಳಿ ಮಾತನಾಡುತ್ತಾ ಇದ್ದಾರೆ ಎಂದು ಹುಲಿ ಸುಳ್ಳನ್ನು ಹೇಳುತ್ತಾನೆ ಈ ವೇಳೆ ಅಲ್ಲಿಗೆ ಬಂದ ಮುರಳಿ ಮೇಷ್ಟ್ರ ತಂದೆ ತಾಯಿ ಬಹಳ ಭಕ್ತಿಯಿಂದ ಕೈ ಮುಗಿಯುತ್ತಾರೆ.

ಮಗನ ಮನದರಸಿಯನ್ನು ಮದುವೆ ಮಾಡಿಕೊಳ್ಳಲು ಹೇಳಿದ ಸ್ವಾಮೀಜಿ
ಇವರು ಬಹಳ ಸಂಕಷ್ಟದಲ್ಲಿ ಇದ್ದಾರೆ ಅದಕ್ಕೆ ಅವರ ಸಂಕಷ್ಟವನ್ನು ನಿವಾರಣೆ ಮಾಡಿ ನಿಮ್ಮ ಬಳಿ ಮಾತನಾಡುತ್ತೇನೆ ಎಂದು ಹೇಳಿ ನಾಗ ಮೇಷ್ಟ್ರ ತಂದೆ ತಾಯಿ ಬಳಿ ಮಾತನಾಡುತ್ತಾನೆ. ನಿಮ್ಮ ಮನೆಯಲ್ಲಿ ಆದಷ್ಟು ಬೇಗ ಶುಭ ಕಾರ್ಯ ನಡೆಯುತ್ತೆ, ನಿಮ್ಮ ಮಗ ಒಪ್ಪಿಕೊಂಡಾಕೆ ನಿಮ್ಮ ಮನೆಗೆ ಬಂದರೆ ಐಶ್ವರ್ಯ ನಿಮ್ಮ ಕಾಲ ಬುಡದಲ್ಲಿ ಬಿದ್ದಿರುತ್ತೆ ಎಂದು ಹೇಳಿದಾಗ ಮೇಷ್ಟ್ರು ತಂದೆ ಒಪ್ಪಿದರೂ ತಾಯಿ ಮಾತ್ರ ಒಪ್ಪಿಗೆ ಸೂಚಿಸುವುದಿಲ್ಲ. ಛೀ ಛೀ ಆಕೆ ನಮ್ಮ ಮನೆಯ ಸೊಸೆ ಆಗುವುದು ನನಗೆ ಇಷ್ಟ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ನಾಗ ಏನೆಲ್ಲಾ ಹೇಳಬೇಕು ಅದೆಲ್ಲವನ್ನೂ ಹೇಳುತ್ತಾನೆ ಆದರೆ ಮೇಷ್ಟ್ರ ತಾಯಿ ಒಪ್ಪಿಸಿದ್ದು ಬಹಳ ಖುಷಿ ಆಗುತ್ತದೆ.

ತಾಯಿಯನ್ನು ಬರ ಹೇಳಿದ ಕಂಠಿ
ಈ ವೇಳೆ ಕಂಠಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡುತ್ತಾನೆ. ತನ್ನ ತಾಯಿಯನ್ನೇ ಗುಡಿಗೆ ಬರ ಹೇಳುತ್ತಾನೆ. ಬಂಗಾರಮ್ಮ ಬರುತ್ತಾರೆ. ಮೇಷ್ಟ್ರ ತಂದೆ ತಾಯಿಯನ್ನು ನೋಡಿ ನೀವು ಪುಟ್ಟಕ್ಕನ ಬೀಗರು ಅಲ್ವಾ ಎಂದಾಗ ಮೇಷ್ಟ್ರ ತಂದೆ ನಾವು ಪುಟ್ಟಕ್ಕನ ಬೀಗರು ಆಗುವವರು ಎಂದು ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮ ಪುಟ್ಟಕ್ಕನಂತಹ ಭೀಗರನ್ನು ಪಡೆಯುವುದು ನಿಮ್ಮ ಅದೃಷ್ಟ ಎನ್ನುತ್ತಾರೆ. ಸಹನಾಳಂತಹ ಹುಡುಗಿ ನಿಮಗೆ ಸಿಗುವುದಿಲ್ಲ ಎಂದು ಹೇಳುತ್ತಾರೆ.

ಬಂಗಾರಮ್ಮನವರ ಮಾತು ಕೇಳುತ್ತಾರ ಮೇಷ್ಟ್ರ ತಾಯಿ
ಮೇಷ್ಟ್ರ ತಂದೆ ದುರಾಸೆಯಿಂದ ಇಂತಹ ಬಂಗಾರಮ್ಮನವರ ಗೆಳತಿ. ಪುಟ್ಟಕ್ಕ ಎಂದರೆ ಪುಟ್ಟನ ಹವಾ ಎಷ್ಟಿದೆ ಗೊತ್ತಾ ಎಂದು ಯೋಚನೆ ಮಾಡು ಎಂದು ಮೇಷ್ಟ್ರ ತಂದೆ ತಾಯಿ ಬಳಿ ಹೇಳುತ್ತಾರೆ. ಇದನ್ನು ನೋಡಿದ ಬಂಗಾರಮ್ಮ ಸುಮ್ಮನೆ ಆಗುತ್ತಾರೆ . ಬಳಿಕ ಕಂಠಿ ಬಂದು ಗುಡಿ ಸುತ್ತಿ ಬರಬೇಕಾದರೆ ಎದುರಿಗೆ ಸ್ನೇಹಾ ಸಿಗುತ್ತಾಳೆ ಸ್ನೇಹಾ ಳನ್ನು ನೋಡಿ ಬಂಗಾರಮ್ಮ ಕೋಪ ಮಾಡಿಕೊಳ್ಳುತ್ತಾಳೆ..

ಸ್ನೇಹಾ ಮಾತಿಗೆ ಕೋಪಗೊಂಡ ಬಂಗಾರಮ್ಮ
ಬಳಿಕ ಸ್ನೇಹಾ ನಿಮ್ಮಂತವರು ದೇವಸ್ಥಾನಕ್ಕೂ ಬರುತ್ತಾರಾ ಎಂದೆಲ್ಲ ಹೇಳುತ್ತಾಳೆ ಇದನ್ನು ಕೇಳಿದ ಬಂಗಾರಮ್ಮಗೆ ಕೋಪ ಬಂದು ಅಲ್ಲಿಂದ ಹೋಗುತ್ತಾರೆ. ಬಳಿಕ ಕಂಠಿ ಬಳಿ ನಾನು ಇವತ್ತು ಸಮಾಧಾನವಾಗಿ ಮಾತನಾಡುವುದು ದೊರೆಗೆ ಇಷ್ಟ ಆಗಿರಬಹುದು ಅಲ್ವಾ ಎಂದು ಹತ್ತು ಬಾರಿ ಕೇಳುತ್ತಾಳೆ. ಇದನ್ನು ನೋಡಿದ ಕಂಠಿ ಹೌದು ಬಹಳ ಇಷ್ಟ ಆಗಿರಬಹುದು ಎಂದು ಹೇಳುತ್ತ ಇರುತ್ತಾನೆ. ಇದನ್ನು ಕೇಳಿದ ಕಂಠಿ ಮಾತ್ರ ಸುಮ್ಮನೆ ಆಗುತ್ತಾನೆ. ಬಳಿಕ ಸ್ನೇಹಾ ಅಲ್ಲಿಂದ ನಗುತ್ತಾ ಹೋಗುತ್ತಾಳೆ.. ಮುಂದೇನ ಕಾದು ನೋಡಬೇಕಿದೆ.