ಪುಟ್ಟಕ್ಕನ ಮನೆಯಲ್ಲಿ ಮನೆ ಮಾಡಿದ ಸಂತಸ

By Poorva

ಚೈತ್ರ ಜೊತೆ ಮಾತನಾಡಿದ ಪುಟ್ಟಕ್ಕನ ಮಗಳು ಸ್ನೇಹಾ ಮದುವೆಗೆ ಮನೆಯಲ್ಲಿ ಒಪ್ಪಿಕೊಳ್ಳುವ ಎಲ್ಲಾ ಲಕ್ಷಣ ಕಾಣುತ್ತಿದೆ, ಸದ್ಯದಲ್ಲೇ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಎಂದು ಹೇಳಿದಾಗ ಖುಷಿಯಿಂದ ಫೋನ್ ಇಡುತ್ತಾಳೆ . ಬಳಿಕ ಸ್ನೇಹಾ ಮನದಲ್ಲಿ ಯೋಚನೆ ಮಾಡುತ್ತಾ ಶ್ರೀ ಅಂತದ್ದೇನು ಮ್ಯಾಜಿಕ್ ಮಾಡಿದರು ಎಂದು ಯೋಚಿಸುತ್ತಾ ಮನೆಗೆ ಬಂದಾಗ ಪುಟ್ಟಕ್ಕನ ಮನೆಯಲ್ಲಿ ನೀರವ ಮೌನ ಆವರಿಸುತ್ತದೆ

ಅದನ್ನು ನೋಡಿದ ಸ್ನೇಹಾ ತನ್ನ ತಲೆಯಲ್ಲಿ ಇದ್ದ ಹೇರ್ ಪಿನ್ ಅನ್ನು ತೆಗೆದು ಕೆಳಗೆ ಹಾಕುತ್ತಾಳೆ. ಇದರಿಂದ ಕೊಂಚ ಸೌಂಡ್ ಬರುತ್ತದೆ. ಇದನ್ನು ನೋಡಿದ ಮನೆ ಮಂದಿ.ಸ್ನೇಹಾ ಬಳಿ ಏನಾಯ್ತೆ ಸ್ನೇಹಾ ಎಂದಾಗ ಸ್ನೇಹಾ ಏನು ಎಲ್ಲರೂ ಮೌನ ವಹಿಸಿದ್ದೀರಿ ನನಗೆ ತುಂಬಾ ಹಸಿವು ಆಗುತ್ತಿದೆ ಎನ್ನುತ್ತಾಳೆ. ಮುರಳಿ ಮೇಷ್ಟು ಹೇಳಿದಾಗ ಮೌನ ವಹಿಸಿದ್ದ ಸಹನಾ ಮೊಗದಲ್ಲಿ ನಗು ಬೀರುತ್ತದೆ.

ಅದನ್ನು ನೋಡಿದ ಸುಮಾ ಮುರಳಿ ಮೇಷ್ಟ್ರು ಅಂದ ಕೂಡಲೇ ಮುಖದಲ್ಲಿ ಅದು ಹೇಗೆ ನಗು ಬಂತು ನೋಡು ಎಂದು ಹೇಳುತ್ತಾಳೆ. ಇನ್ನು ಸ್ನೇಹಾ ಮನೆಯ ಹೊರಗೆ ಚಾಪೆ ಹಾಕಿ ಅಲ್ಲಿಯೇ ಊಟ ಮಾಡೋಣ ಎಂದು ಹೇಳಿದಾಗ ಎಲ್ಲರೂ ಅಲ್ಲಿಗೆ ಹೋಗುತ್ತಾರೆ.

ಪುಟ್ಟಕ್ಕನ ಮನೆಗೆ ಬಂದ ಕಂಠಿ

ಪುಟ್ಟಕ್ಕನ ಮನೆಗೆ ಬಂದ ಕಂಠಿ

ಕಂಠಿ ಹೇಳುತ್ತಾನೆ ಮುರಳಿ ಮೇಷ್ಟ್ರ ಮನೆಯವರನ್ನು ಹೇಗಾದರೂ ಒಪ್ಪಿಸಬೇಕು ಸ್ನೇಹಾ ಮೊಗದಲ್ಲಿ ಮಂದ ಹಾಸ ನೋಡಬೇಕು ಎಂದು ಕಂಠಿ ಹಾಗೂ ಸಿದ್ದೇಶ್ ಮಾತನಾಡಿಕೊಂಡು ಮೆಸ್ ಬಳಿ ಬರುತ್ತಾರೆ. ಇನ್ನು ಪುಟ್ಟಕ್ಕ ಎಲ್ಲರಿಗೂ ಕೈ ತುತ್ತು ಹಾಕುತ್ತಿರುವುದನ್ನು ನೋಡಿದ ಕಂಠಿ ಸಿದ್ದೇಶ್ ನೀನು ಬಂದರೆ ಡೌಟ್ ಬರುತ್ತದೆ ನಾನೇ ಹೋಗುತ್ತೇನೆ ಎಂದು ಹೇಳಿ ಅಲ್ಲಿಗೆ ಹೋಗುತ್ತಾನೆ. ಕಂಠಿಯನ್ನು ನೋಡಿದ ಪುಟ್ಟಕ್ಕ ಅವನನ್ನು ಊಟಕ್ಕೆ ಕೂರುವಂತೆ ಹೇಳುತ್ತಾಳೆ ಹಾಗೂ ಕಂಠಿಗೂ ಕೈ ತುತ್ತು ನೀಡುತ್ತಾಳೆ

ಪುಟ್ಟಕ್ಕನ ಕೈ ತುತ್ತು ಸವಿದ ಕಂಠಿ

ಪುಟ್ಟಕ್ಕನ ಕೈ ತುತ್ತು ಸವಿದ ಕಂಠಿ

ಇದೇ ವೇಳೆ ಅಮ್ಮ ನೀವು ಸಮಾಧಾನದಿಂದ ಇರಿ ನಿಮ್ಮ ಮಗಳ ಮದುವೆಯನ್ನು ನಿರ್ವಿಘ್ನವಾಗಿ ಮಾಡಿ ಮುಗಿಸುತ್ತಿರಿ ಎಂದು ಕಂಠಿ ಹೇಳುತ್ತಾನೆ. ಇದನ್ನು ನೋಡಿದ ಪುಟ್ಟಕ್ಕ ಮೊಗದಲ್ಲಿ ನಗು ಬಂದರೆ ಸ್ನೇಹಾಗೆ ಹೆಮ್ಮೆ ಎನಿಸುತ್ತದೆ. ತನ್ನ ಕೈಯಲ್ಲಿ ಇದ್ದ ಕೈ ತುತ್ತನ್ನು ಶ್ರೀ ಕೈ ಗೆ ಹಾಕಿ ಕೈ ತುತ್ತು ತಿನ್ನುವಂತೆ ಹೇಳುತ್ತಾಳೆ. ಇದನ್ನು ನೋಡಿದ ಸುಮಾ ಇನ್ನೊಂದು ಮದುವೆ ಕೂಡ ಸದ್ಯದಲ್ಲೇ ಇದೆ ಅನ್ನಿಸುತ್ತದೆ ಎಂದು ಮನದಲ್ಲಿ ಹೇಳಿಕೊಳ್ಳುತ್ತಾ ಇರುತ್ತಾಳೆ.

ಮೇಷ್ಟ್ರ ಮನೆಯಲ್ಲಿ ಮದುವೆಯ ಚರ್ಚೆ

ಮೇಷ್ಟ್ರ ಮನೆಯಲ್ಲಿ ಮದುವೆಯ ಚರ್ಚೆ

ಮುರಳಿ ಮೇಷ್ಟ್ರ ಮನೆಯಲ್ಲಿ ಮಾತ್ರ ಮೇಷ್ಟ್ರ ತಾಯಿಯದ್ದು ಒಂದೇ ವಾದ. ಅದೇನೆಂದರೆ ನಮಗೆ ಸಹನಾ ಇಷ್ಟ ಇಲ್ಲ. ನಮ್ಮ ಆಚಾರ ವಿಚಾರಕ್ಕೂ ಸರಿ ಹೊಂದಲ್ಲ ನಾನು ಬೇರೆ ಹುಡುಗಿ ನೋಡುತ್ತಾ ಇದ್ದೇನೆ ಎಂಬುದು. ನಾನು ನಿಮ್ಮ ಹಾಗೆ ಕಿರುಚಿ ಮಾತನಾಡಲ್ಲ ನಿಮಗೆ ಇಷ್ಟ ಇದ್ದರೆ ಈ ಮನೆಯಲ್ಲಿ ಇರಿ ಇಲ್ಲ ಅಂದರೆ ಹೋಗಿ.. ಆದರೆ ನಾನು ಮಾತ್ರ ಸಹನಾಳನ್ನ ಮದುವೆ ಆಗುವುದು ಖಂಡಿತ ಎಂದು ಖಡಕ್ ಆಗಿ ಹೇಳಿ ಹೋಗುತ್ತಾನೆ ಇದನ್ನು ಕೇಳಿದ ಮೇಷ್ಟ್ರು ತಾಯಿ ಮಾತ್ರ ಸಣ್ಣ ಮುಖ ಹಾಕಿಕೊಳ್ಳುತ್ತಾ ಇರುವಾಗ ಮೇಷ್ಟ್ರ ತಂದೆ ಸ್ವಾಮೀಜಿ ಹೇಳಿದ್ದು ನಿಜ ಆಯ್ತು ಕಣೇ ಎಂದು ಹೇಳುತ್ತಾರೆ.

ಮುಖಕ್ಕೆ ಹೊಡೆದ ಹಾಗೆ ಮಾತನಾಡಿದ ಮೇಷ್ಟ್ರು

ಮುಖಕ್ಕೆ ಹೊಡೆದ ಹಾಗೆ ಮಾತನಾಡಿದ ಮೇಷ್ಟ್ರು

ಇನ್ನು ಮೇಷ್ಟ್ರು ಹೋದ ಬಳಿಕ ಮನೆಯಲ್ಲಿ ಚರ್ಚೆ ಮಾಡಿ ಮೇಷ್ಟ್ರ ತಂದೆ ಮದುವೆಗೆ ಒಪ್ಪುತ್ತಾರೆ... ತಾಯಿಯನ್ನು ಚೈತ್ರ ಒಪ್ಪಿಸುತ್ತಾರೆ. ಸಣ್ಣ ಮುಖ ಹಾಕಿಕೊಂಡು ಗಂಡನ ಬಳಿ ಬಂದು ನನಗೆ ಕೂಡ ಈ ಮದುವೆಗೆ ಒಪ್ಪಿಗೆ ಇದೆ ಎಂದು ಹೇಳಿ ಹೋಗುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ತಂದೆಗೆ ಖುಷಿ ಆಗುತ್ತದೆ. ಮುರಳಿ ತಂದೆ ತಾಯಿ ಬಳಿ ಕಠಿಣವಾಗಿ ಮಾತನಾಡಿದ ವಿಚಾರ ಸಹನಾ ಬಳಿ ಬಂದು ಹೇಳುತ್ತಾನೆ. ಇದನ್ನು ಕೇಳಿದ ಸಹನಾ ಮಾತ್ರ ಯಾಕೆ ಹಾಗೆ ಮಾತನಾಡಿಸಿದಿರಿ ಎಂದಾಗ ಅದಕ್ಕೆ ಶ್ರೀ ಕಾರಣ ಎಂದು ಹೇಳುತ್ತಾನೆ. ಇನ್ನು ಕಂಠಿ ನಾನು ಬೇಕಂತಲೇ ಹಾಗೆ ಮಾತನಾಡಿ ಎಂದೆ ಎಂದು ಕಂಠಿ ಹೇಳುತ್ತಾನೆ.. ಇನ್ನು ಮಂಜಮ್ಮಗೆ ಸ್ನೇಹಾ ಬಳಿ ಮಾತನಾಡುವ ಹುಡುಗ ಕಂಠಿ ಎಂಬ ವಿಚಾರ ಇದೀಗ ರಾಜೇಶ್ವರಿಯಿಂದ ಗೊತ್ತಾಗಿದೆ. ಇದರಿಂದ ಭಯಗೊಂಡ ಮಂಜಮ್ಮ ಮಾತ್ರ ಸುಮ್ಮನೆ ಇದ್ದಾಳೆ. ಮನೆಯಲ್ಲಿ ಹೇಳಿದರೂ ತಾಪತ್ರಯ ಹೇಳದಿದ್ದರೂ ತಾಪತ್ರಯ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ ಮಂಜಮ್ಮ.. ಮುರಳಿ ಮೇಷ್ಟ್ರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿರುವ ವಿಚಾರವನ್ನು ಚೈತ್ರ ಸ್ನೇಹಾ ಬಳಿ ಹೇಳುತ್ತಾಳೆ.

More from Filmibeat

English summary
Kannada serial puttakkana makkalu written updated on 24th December
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X