Puttkkana Makkalu: ಸಹನಾ ಮಾತು ಕೇಳಿ ಪುಟ್ಟಕ್ಕ ಶಾಕ್; ಸ್ನೇಹಾಳನ್ನು ಕರೆದುಕೊಂಡು ಹೋಗಲು ಬಂದ ಕಂಠಿ
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಗೋಪಾಲ ರಾಜಿ ಮಾತು ಕತೆ ನಡೆಸುತ್ತಾ ಇರುವಾಗ ಹಣದ ವಿಚಾರ ಬರುತ್ತದೆ. ತಕ್ಷಣ ರಾಜೇಶ್ವರಿಗೆ ಏನೋ ಪ್ಲಾನ್ ಹೊಳೆಯುತ್ತದೆ. ಆಕೆ ನೇರವಾಗಿ ಪುಟ್ಟಕ್ಕನ ಮನೆ ಕಡೆ ಹೋಗುತ್ತಾಳೆ. ಪುಟ್ಟಕ್ಕ ದೇವಾಲಯದ ಬಳಿ ನಿಂತುಕೊಂಡು ಇರುತ್ತಾಳೆ.
ಆಗ ಅಲ್ಲಿಗೆ ಬಂದ ರಾಜೀ ಪುಟ್ಟಕ್ಕನ ಬಳಿ ಹಂಗು ಹಿಂಗು ಸ್ನೇಹಾನಾ ಬಂಗಾರಮ್ಮನ ಮನೆಗೆ ಕಳುಹಿಸಿ ಬಿಟ್ಟೆ ಎಂದೆಲ್ಲ ಕುಹಕ ಆಡುತ್ತಾ ಇರುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ರಾಜವ್ವ ನಾನು ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡದ್ದೇನೆ ನೀನು ಅದರ ಬಗ್ಗೆ ಮಾತನಾಡದೆ ಬೇರೆ ಮಾತನಾಡುವುದು ಇದ್ದಾರೆ ಮಾತನಾಡಿ ಎಂದು ಖಡಕ್ ಆಗಿ ಹೇಳುತ್ತಾಳೆ.

ಆಗ ರಾಜೀ ನೀನು ಬಂಗಾರಮ್ಮನ ಸಹಾಯ ತೆಗೆದುಕೊಂಡು ನಿನ್ನ ದೊಡ್ಡ ಮಗಳ ಮದುವೆ ಮಾಡಿದೆ ಆದರೆ ಇದೀಗ ಎರಡನೇಯವಳನ್ನು ಕೂಡ ಬಂಗರಮ್ಮನ ಮಗ ನೀಗೆ ಮದುವೆ ಮಾಡಿಕೊಟ್ಟಿದ್ದಿಯ, ಇದೀಗ ನಿನ್ನ ಬಳಿ ಬಂಗರಮ್ಮಾ ಆ ಹದಿನೈದು ಲಕ್ಷ ಕೇಳಿದರೆ ಏನು ಮಾಡುತ್ತೀಯಾ ಎಂದು ರಾಜಿ ಪುಟ್ಟಕ್ಕನ ತಲೆಗೆ ಹುಳ ಬಿಡುತ್ತಾಳೆ ಇದೆಲ್ಲವನ್ನೂ ಸಹನಾ ಮೆತ್ತಗೆ ಕೇಳಿಸಿಕೊಂಡಿರುತ್ತಾಳೆ ಇನ್ನೂ ರಾಜಿ ಅಲ್ಲಿಂದ ಹೋದ ಬಳಿಕ ಸಹನಾ ತನ್ನ ತಾಯಿಯ ಬಳಿಗೆ ಬರುತ್ತಾಳೆ. ಆಕೆ ಕೂಡ ಅದೇ ಮಾತನ್ನು ಹೇಳುತ್ತಾಳೆ.
ಯಾಕಮ್ಮ ನೀನು ಬಂಗಾರಮ್ಮನ ಕೈಯಿಂದ ಹಣ ತೆಗೆದುಕೊಂಡೆ ನಾನು ಖುಷಿ ಆಗಿರುತ್ತೇನೆ ಎಂದು ಹಾಗೆ ಮಾಡಿದ್ದು ಅಲ್ವಾ ಆದರೆ ನಾನು ಅವರ ಮನೆಯಲ್ಲಿ ಖುಷಿ ಆಗಿ ಇರಲು ಆಗುತ್ತಿಲ್ಲ, ನನ್ನ ಗಂಡ ಇಲ್ಲಿಯೇ ಇರುತ್ತಾರೆ ನಾನು ಅಲ್ಲಿ ನಾನು ಬಹಳ ಕಷ್ಟ ಪಟ್ಟುಕೊಂಡು ಅಲ್ಲಿ ಇರುವುದು ಇದು ನಿನಗೆ ಯಾಕೆ ಅರ್ಥ ಆಗುತ್ತಿಲ್ಲ ಎಂದು ಹೇಳಿದಾಗ ಪುಟ್ಟಕ್ಕ ಹಾಗೆಲ್ಲ ನೀನು ಹೇಳಬೇಡ ಮಗಳೆ ಏನು ಆಗುವುದಿಲ್ಲ ಎಂದೆಲ್ಲ ಹೇಳುತ್ತಾಳೆ. ಬಳಿಕ ಪುಟ್ಟಕ್ಕ ಸಂಬಂಧ ಹಾಳು ಮಾಡುವುದು ಬಹಳ ಸುಲಭ, ಆದರೆ ಅದೇ ಸಂಬಂಧವನ್ನು ಉಳಿಸಿಕೊಳ್ಳುವುದು ಮಾತ್ರ ಬಹಳ ಕಷ್ಟ ಎಂದೆಲ್ಲ ಬುದ್ದಿ ಹೇಳಿದಾಗಲೂ ಸಹನಾ ಅಷ್ಟಾಗಿ ಸಮಾಧಾನ ಆಗಲೇ ಇಲ್ಲ.
ಅಮ್ಮನ ಮಾತಿಗೆ ಸಮಾಧಾನ ಆಗದ ಆ ಬಳಿಕ ಸಹನಾ ನೀನು 15 ಲಕ್ಷ ಕೊಟ್ಟಿರುವ ವಿಚಾರವನ್ನು ಮುರಳಿ ಬಳಿ ಹೇಳಿದ್ದಿಯ ಇಲ್ಲ ತಾನೆ ನಾನು ಅವರ ಬಳಿ ಎಲ್ಲಾ ವಿಚಾರ ಹೇಳುತ್ತೇನೆ, ಹಾಗೆಯೇ ನನಗೆ ಆ ಮನೆಗೆ ಹೋಗಲು ಇಷ್ಟ ಇಲ್ಲ, ನಿಮ್ಮ ಜೊತೆ ಇರುವುದಾಗಿ ನಾನು ಹೇಳಿಯೇ ಬಿಡುತ್ತೇನೆ ಎಂದು ಹೇಳಿದಾಗ ಪುಟ್ಟಕ್ಕ ಮಗಳ ಬಳಿ ಬೇಡಿಕೊಂಡು ಇರುತ್ತಾಳೆ. ಹಾಗೆಯೇ ಆತರ ಯಾವ ಕೆಲಸವನ್ನೂ ಮಾಡಬೇಡ ಎಂದು ಅಂಗಲಾಚುತ್ತಾಳೆ. ಆಗ ಸಹನಾ ಅಮ್ಮನ ಬಳಿ ಒಂದು ಮಾತು ಹೇಳುತ್ತಾಳೆ ಅಮ್ಮ ನೀನು ನನ್ನ ಬಳಿ ಈ ಥರ ಹೇಳಿ ಬಾಯಿ ಮುಚ್ಚಿಸುತ್ತಿರಾ ಆದರೆ ಈ ವಿಚಾರ ಸ್ನೇಹಾ ಗೆ ತಿಳಿದರೆ ನೀನೇನು ಮಾಡುತ್ತೀಯಾ ಎಂದಾಗ ಪುಟ್ಟಕ್ಕ ಬಹಳ ಗಾಬರಿಗೊಂಡು ಇರುತ್ತಾಳೆ. ಇನ್ನೂ ಸಹನಾ ಈ ವಿಚಾರ ಸ್ನೇಹಾ ಬಳಿ ಹೇಳಿರುವುದನ್ನು ಹೇಳುತ್ತಾಳೆ. ಆ ವೇಳೆ ಕಂಠಿ ಸ್ನೇಹಾ ನ ಮನೆಗೆ ಕರೆದುಕೊಂಡು ಹೋಗಲು ಬರುತ್ತಾನೆ ಇನ್ನೂ ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











