ಸಹನಾ ಕೈಯಿಂದ ಫೋನ್ ಕಿತ್ತುಕೊಂಡ ಕೌಸಲ್ಯ; ಸಹನಾ ಮುಂದೇನು ಮಾಡ್ತಾಳೆ?

By Poorva
Kannada serial Puttakkana Makkalu written update on 24th March

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಪುಟ್ಟಕ್ಕಗೆ ಕೌಸಲ್ಯದೇ ಚಿಂತೆ ಆಗಿದೆ. ಕೌಸಲ್ಯ ಬಳಿ ಹಣ ಕೊಟ್ಟರೂ ನಮಗೆ ಆ ಹಣ ಸಿಕ್ಕಿಲ್ಲ ನಮಗೆ ಇಪ್ಪತ್ತೈದು ಲಕ್ಷ ಬೇಕು ಎಂದು ಹಠ ಹಿಡಿದು ಬಿಟ್ಟಿದ್ದಾಳೆ. ಇನ್ನು ಪುಟ್ಟಕ್ಕ ಇದನ್ನೇ ನೆನಪಿಸಿಕೊಂಡು ಭಯ ಬೀಳುತ್ತಾಳೆ. ಏನು ಮಾಡುವುದು ಹಣ ಕೊಡಲಿಲ್ಲ ಎಂದರೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದರೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಇನ್ನು ಈ ವಿಚಾರ ತನ್ನ ಮಕ್ಕಳಿಗೆ ತಿಳಿಯಬಾರದು ಎಂದುಕೊಂಡು ಪಡಬಾರದ ವೇದನೆ ಪಡುತ್ತಾ ಇರುತ್ತಾಳೆ. ಸ್ನೇಹಾ ಹಾಗೂ ಕಂಠಿ ವಾಯ್ಸ್ ಮೆಸೇಜ್ ಎಲ್ಲಾ ಕಳುಹಿಸುತ್ತಾ ಬಹಳ ಖುಷಿಯಿಂದ ಮಾತನಾಡುತ್ತಾ ಇರುತ್ತಾರೆ. ಸ್ನೇಹಾ ಮೆಸೇಜ್ ನೋಡುತ್ತಾ ಇದ್ದಾಗ ಕಂಠಿಗೆ ಅದೇನೋ ಪುಳಕ. ಇದನ್ನೆಲ್ಲ ನೋಡಿ ಸುಮಾಗೆ ನಗು. ಸ್ನೇಹಾ ಕಂಠಿ ಮಾತುಗಳನ್ನೆಲ್ಲ ಕೇಳಿಸಿಕೊಂಡ ಸುಮಾ ಕಂಠಿ ಗೋಳು ಹೊಯ್ದುಕೊಳ್ಳುತ್ತಾಳೆ.

ಇನ್ನು ಸ್ನೇಹಾಗೆ ಕಂಠಿ ಕರೆ ಮಾಡಿ ನಾವು ಅಜ್ಜ ಅಜ್ಜಿ ಆಗುವವರೆಗೂ ಹೀಗೆಯೇ ಮಾತನಾಡೋಣ ಎಂದೆಲ್ಲ ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಾ ನಾಚಿ ನೀರಾಗಿದ್ದಳು. ಇನ್ನು ಕಂಠಿಯನ್ನು ಮಲಗಲು ಹೇಳುತ್ತಾಳೆ. ಬಳಿಕ ಕಂಠಿ ಕರೆ ಕಟ್ ಮಾಡಿ ಆನಂದದಿಂದ ಮಲಗುತ್ತಾನೆ . ಇನ್ನು ಕಂಠಿಯನ್ನು ಅವರ ತಂದೆ ಕರೆಯುತ್ತಿದ್ದಾರೆ ಎಂದು ಹೇಳಲು ಕೆಲಸದವರು ಬರುತ್ತಾರೆ ಆ ಕೂಡಲೇ ಕಂಠಿ ಹೊರಟು ತನ್ನ ತಂದೆಯ ಬಳಿಗೆ ಬರುತ್ತಾನೆ.

ಕಂಠಿ ಮೊಗದಲ್ಲಿ ಇರುವ ಖುಷಿಯನ್ನು ನೋಡಿಯೇ ಅವರು ಗ್ರಹಿಸಿ ಬಿಟ್ಟಿದ್ದರು, ಮಗ ಯಾರನ್ನೋ ತುಂಬಾ ಹಚ್ಚಿಕೊಂಡು ಇದ್ದಾನೆ ಎಂದು ಖುಷಿ ಪಡುತ್ತಾರೆ. ಆ ಬಳಿಕ ಕಂಠಿ ಬಳಿ ಮನಸಿನ ಮಾತು ಹೇಳುತ್ತಾರೆ. ಅದನ್ನು ಕೇಳಿದ ಕಂಠಿ ತಂದೆಯ ಬಳಿ ಇರುವ ನಿಜವನ್ನು ಹೇಳಿ ಬಿಡುತ್ತಾನೆ. ಆಗ ತನ್ನ ಮಗನ ಖುಷಿ ಮುಖ್ಯ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುತ್ತಾರೆ. ಹಾಗೆಯೇ ಬಹಳ ಖುಷಿ ಪಡುತ್ತಾರೆ. ಆದರೆ ತನ್ನ ಹೆಂಡತಿ ಈಗಾಗಲೇ ಹೇಳಿದ ಪ್ರಕಾರ ತಾನು ಹೇಳಿದ ಹುಡುಗಿಯನ್ನೇ ಮದುವೆ ಆಗಬೇಕು ಎಂದು ಹೇಳಿರುವ ಮಾತು ಕಂಠಿ ತಂದೆಗೆ ನೆನಪಾಗುತ್ತದೆ.

ಇನ್ನು ಪುಟ್ಟಕ್ಕನ ಮೆಸ್ ಗೆ ಮುರಳಿ ಮೇಷ್ಟ್ರು ಬರುತ್ತಾರೆ. ಮುರಳಿ ಮೇಷ್ಟ್ರನ್ನು ನೋಡಿ ಪುಟ್ಟಕ್ಕನಿಗೆ ಬಹಳ ಖುಷಿ ಆಗುತ್ತದೆ. ಇನ್ನು ಮೆಸ್ ನಲ್ಲಿ ತಿಂಡಿ ತಿನ್ನಲು ಅವರು ಬಂದಿರುತ್ತಾರೆ.‌ ಅದನ್ನು ನೋಡಿದ ಪುಟ್ಟಕ್ಕ ಮೇಷ್ಟ್ರಗೆ ಮನೆಯ ಒಳಗೆ ತಿಂಡಿ ಕೊಡು ಸುಮಾ ಎಂದಾಗ ಮೇಷ್ಟ್ರೇ ಬೇಡ ನಾನು ಇಲ್ಲಿಯೇ ತಿನ್ನುತ್ತೇನೆ ಎಂದು ಹೇಳುತ್ತಾರೆ.‌ಇದನ್ನು ಕೇಳಿದ ಪುಟ್ಟಕ್ಕ ಸುಮ್ಮನೆ ಆಗುತ್ತಾರೆ

ಇನ್ನು ಬೆಳಗ್ಗೆ ಎದ್ದ ಸಹನಾ ಎಲ್ಲಾ ಕೆಲಸ ಮಾಡಿ ಸ್ಟವ್ ನಲ್ಲಿ ಹಾಲು ಇಡುತ್ತಾಳೆ. ಆ ವೇಳೆ ಚಿತ್ರ ಬಂದು ಅತ್ತಿಗೆ ನನಗೆ ಒಂದು ಗ್ಲಾಸ್ ಟೀ ಮಾಡಿಕೊಡಿ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಹೋಗುತ್ತಾಳೆ. ಆಗ ಸಹನಾಗೆ ತನ್ನ ಬೆನ್ನ ಹಿಂದೆ ಯಾರೋ ಇದ್ದಾರೆ ಎಂದು ಅನ್ನಿಸಿ ಬಿಡುತ್ತದೆ. ಆದರೆ ತಿರುಗಿ ನೋಡುವಾಗ ಯಾರು ಇರೋದಿಲ್ಲ..ಮ ಪುನಃ ಹಿಂದೆ ತಿರುಗಿ ನೋಡಿದಾಗ ಚಿತ್ರ ಗಂಡನನ್ನು ನೋಡಿ ಬೆಚ್ಚಿ ಬೀಳುತ್ತಾಳೆ.

ಆತ ನನಗೆ ಚಹಾ ಬೇಕಿತ್ತು ಆದಕ್ಕೆ ಬಂದೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಬೇಗ ಬೇಗನೆ ಚಹಾ ಮಾಡಿ ಕೊಡುತ್ತಾಳೆ. ಬಳಿಕ ಅದನ್ನು ತೆಗೆದುಕೊಂಡು ಆತ ಹೋಗುತ್ತಾನೆ. ಆ ಬಳಿಕ ಚಿತ್ರ ಬಳಿ ಹೋಗಿ ಚಿತ್ರ ಅವರೇ ನನಗೆ ಫೋನ್ ಒಮ್ಮೆ ಕೊಡುತ್ತೀರಾ ಅಮ್ಮನ ಬಳಿ ಮಾತನಾಡಬೇಕಿತ್ತು ಎನ್ನುತ್ತಾಳೆ. ಚಿತ್ರ ಫೋನ್ ಕೊಡುತ್ತಾಳೆ. ಮುರಳಿಗೆ ಸ್ನೇಹಾ ಕರೆ ಮಾಡುತ್ತಾಳೆ, ಮುರಳಿ ಕರೆ ಸ್ವೀಕಾರ ಮಾಡಿ ಮಾತನಾಡುತ್ತಾನೆ. ಬಳಿಕ ಸಹನಾ ಯೋಗ ಕ್ಷೇಮ ವಿಚಾರಣೆ ಮಾಡುತ್ತಾಳೆ. ಪುಟ್ಟಕ್ಕಗೆ ಹುಷಾರಿಲ್ಲ ಅನ್ನುವ ವಿಚಾರ ತಿಳಿದು ಬಹಳ ಬೇಸರಗೊಳ್ಳುತ್ತ ಇರುತ್ತಾಳೆ. ಆಗ ಕೌಸಲ್ಯ ಬಂದು ಸಹನಾ ಕೈ ಯಿಂದ ಫೋನ್ ಕಿತ್ತುಕೊಳ್ಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ..

More from Filmibeat

English summary
Kannada serial Puttakkana Makkalu written update on 24th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X