Don't Miss!
- News
ಕಡಿಮೆ ಬಡ್ಡಿದರದಲ್ಲಿ ರೈತರಿಗೆ 20 ಲಕ್ಷ ಸಾಲ ಘೋಷಿಸಿದ ಸಿದ್ದರಾಮಯ್ಯ
- Automobiles
ಮಂಗಳೂರಿನಲ್ಲಿ ಐಕಾನಿಕ್ ವಿಲ್ಲೀಸ್ ಜೀಪ್ನಂತೆ ಮಾಡಿಫೈಗೊಂಡ ಮಹೀಂದ್ರಾ ಥಾರ್
- Finance
ಬಜೆಟ್ 2023: ಗಣರಾಜ್ಯೋತ್ಸವ ದಿನದಂದೇ ಬಜೆಟ್ ಹಲ್ವಾ ಸಮಾರಂಭ
- Sports
ICC ODI Rankings: ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಟ್ಟಕ್ಕನ ಮನೆಗೆ ಆಗಮಿಸಿದ ರಾಜಿ; ಲಗ್ನ ಪತ್ರಿಕೆಯಲ್ಲಿ ರಾಜಿ ಹೆಸರು ಹಾಕುತ್ತಾಳಾ ಸ್ನೇಹಾ?
ಪುಟ್ಟಕ್ಕನ ಮನೆಯಲ್ಲಿ ಮದುವೆ ಸಂಭ್ರಮ ಸಡಗರ ಜೋರಾಗಿದೆ. ಮನೆ ಮಂದಿಯೆಲ್ಲ ಸಹನಾ ಮದುವೆಗೆ ಓಡಾಡುತ್ತಾ ಇದ್ದಾರೆ. ಇನ್ನು ರಾಜೇಶ್ವರಿ ಹಾಗೂ ಗೋಪಾಲ ಅರಶಿನ ಶಾಸ್ತ್ರ ಮಾಡುವ ವೇಳೆ ಅಲ್ಲಿಗೆ ಬರುತ್ತಾರೆ. ಕೌಸಲ್ಯಗೆ ಕೂಡ ಅದೇ ಬೇಕಾಗಿತ್ತು. ರಾಜಿ ಪುಟ್ಟಕ್ಕನ ಮನೆಗೆ ಆಗಮಿಸುವುದಿಲ್ಲ ಎಂದುಕೊಂಡು ರಾಜೇಶ್ವರಿಯನ್ನು ಹಾಗೂ ಗೋಪಾಲನನ್ನು ಕೇಳುತ್ತಾರೆ.
ಅವರಿಬ್ಬರೂ ಬಂದ ಬಳಿಕ ಏನೂ ಮಾತನಾಡದೆ ಸುಮ್ಮನೆ ಆಗುತ್ತಾರೆ. ಇನ್ನು ಶಾಸ್ತ್ರ ನಡೆಯುತ್ತಾ ಇರುವ ವೇಳೆ ಅಲ್ಲಿಗೆ ಬಂದ ರಾಜಿ ನಮಗಾಗಿ ನೀವು ಕಾಯುತ್ತ ಇದ್ದೀರಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ನಾವು ಒಳ್ಳೆಯ ಸಮಯಕ್ಕೆ ಕಾಯುತ್ತ ಇದ್ದೇವೆ ಎಂದು ಹೇಳಿದಾಗ ನಾವು ಬಂದೇವಲ್ಲ ಎಂದು ಹೇಳಿದಾಗ ಸ್ನೇಹಾ ನೀವು ಬರುವ ಮುಂಚೆ ಒಳ್ಳೆಯ ಟೈಮ್ ಇತ್ತು ಈಗ ಒಳ್ಳೆಯ ಟೈಮ್ ಇಲ್ಲ, ಅದು ನೀವು ಬರುವಾಗಲೇ ಆಗಿ ಹೋಯಿತು ಎಂದು ಹೇಳುತ್ತಾಳೆ.
ಈ ವೇಳೆ ಅಲ್ಲಿಗೆ ಬಂದ ಕಂಠಿ ಹಾಗೂ ಆತನ ಗೆಳೆಯರನ್ನು ನೋಡಿದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಇನ್ನು ಅಲ್ಲಿಗೆ ಕಂಠಿ ಬಂದಿರುವುದನ್ನು ನೋಡಿ ರಾಜೀಗೆ ಮೈ ಎಲ್ಲ ಉರಿಯುತ್ತದೆ. ಕಂಠಿ ಸ್ನೇಹಾ ಬಳಿ ಸಲುಗೆಯಿಂದ ಮಾತನಾಡುತ್ತಾ ಇರುವುದನ್ನು ನೋಡಿದ ರಾಜಿ ಗೋಪಾಲನ ಕಡೆ ನೋಡುತ್ತಾಳೆ. ಬಳಿಕ ಮನದಲ್ಲಿ ನೀನು ನಾನು ಇದ್ದೇನೆ ಎಂದು ಬಹಳ ಸಲಿಗೆಯಿಂದ ಮಾತನಾಡುತ್ತಾ ಇದ್ದೀಯಾ ನಡೆಸು ನಡೆಸು ಬಂಗಾರಮ್ಮ ಬಳಿ ಇನ್ನೂ ಜೋರಾಗಿ ಬತ್ತಿ ಇಡುತ್ತೇನೆ ಎಂದು ಹೇಳಿಕೊಳ್ಳುತ್ತಾಳೆ. ಕಾರ್ಯಕ್ರಮ ಎಲ್ಲಾ ನಿರ್ವಿಘ್ನವಾಗಿ ಆಗುತ್ತದೆ.

ಲಗ್ನ ಪತ್ರಿಕೆ ಕಂಡು ಶಾಕ್ ಆದ ಮೇಷ್ಟ್ರು
ಲಗ್ನ ಪತ್ರಿಕೆ ಬರುತ್ತದೆ. ಮುರಳಿ ಆತನ ಅಕ್ಕ ಬಳಿ ಹೌದು ಅಕ್ಕ ನಾವು ಮಾಡಿಸಿದ್ದಲ್ಲ ಎಂದು ಹೇಳುತ್ತಾನೆ. ಆಗ ಅಲ್ಲಿಗೆ ಬಂದ ಕೌಸಲ್ಯ ಅದನ್ನು ನಾನೇ ಬದಲಾವಣೆ ಮಾಡಿಸಿದ್ದು, ನಾಲ್ಕಾರು ಮನೆಗೆ ಕೊಡುವ ಪತ್ರಿಕೆ ಸ್ವಲ್ಪ ಚೆನ್ನಾಗಿ ಇರಬೇಕು ಅಲ್ವಾ ಎಂದುಕೊಂಡು ಚೇಂಜ್ ಮಾಡಿಸಿದೆ ಎಂದು ಹೇಳುತ್ತಾಳೆ. ಪ್ರತಿ ಒಂದು ಹಳೆಯ ಲಗ್ನ ಪಟ್ರಿಕೆಗಿಂತ ೧೨ ರೂಪಾಯಿ ಜಾಸ್ತಿ ಇದಕ್ಕೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿ ಅಮ್ಮನ ಬಳಿ ಇದಕ್ಕೆ ಯಾರು ಹಣ ಕೊಟ್ಟರು ಎಂದು ಕೇಳಿದಾಗ ಹೆಣ್ಣಿನ ಕಡೆಯವರು ಕೊಟ್ಟರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿ ನಮ್ಮ ಲಗ್ನ ಪತ್ರಿಕೆಗೆ ಹೆಣ್ಣಿನ ಕಡೆಯವರು ಯಾಕೆ ಹಣ ಕೊಡಬೇಕು ಎಂದು ಹೇಳಿದಾಗ ಕೌಸಲ್ಯ ಏನೋ ಒಂದು ಹೇಳಿ ತಪ್ಪಿಸಿಕೊಳ್ಳತ್ತಾ ಇರುತ್ತಾಳೆ.

ರಾಜಿಗೆ ಕರೆ ಮಾಡಿದ ಕೌಸಲ್ಯ
ಕೌಸಲ್ಯ ಅದರಲ್ಲಿ ರಾಜೇಶ್ವರಿ ಹಾಗೂ ಗೋಪಾಲ ಅವರ ಹೆಸರನ್ನು ಸೇರಿಸಿಕೊಂಡಿದ್ದಾರೋ ಅಥವಾ ಇಲ್ಲವೋ ಎಂದು ಯೋಚಿಸುತ್ತಾ ಇರುತ್ತಾಳೆ. ಇನ್ನು ರಾಜಿ ಹಾಗೂ ಗೋಪಾಲ ಪುಟ್ಟಕ್ಕನ ಮನೆಯಿಂದ ತೆರಳುತ್ತಾರೆ.. ಆ ವೇಳೆ ಕೌಸಲ್ಯ ರಾಜೀಗೆ ಕರೆ ಮಾಡುತ್ತಾಳೆ.. ಆ ವೇಳೆ ಕೌಸಲ್ಯ ಅಲ್ಲಿಯೇ ಇದ್ದೀರಾ ಅಥವಾ ಹೊರಟಿದ್ದಿರಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ರಾಜೀ ಯಾಕೆ ಎಂದು ಪ್ರಶ್ನೆ ಹಾಕುತ್ತಾಳೆ..

ಪುಟ್ಟಕ್ಕನನ್ನು ತರಾಟೆಗೆ ತೆಗೆದುಕೊಳ್ಳಲು ಆಗಮಿಸಿದ ರಾಜಿ
ಬಳಿಕ ಲಗ್ನ ಪತ್ರಿಕೆಗಳಲ್ಲಿ ಪುಟ್ಟಕ್ಕ ಹೆಸರು ಹಾಕಿಸಿದ್ದಾರಾ ಅಥವಾ ಇಲ್ವಾ ಎಂದು ಕೇಳುತ್ತಾಳೆ. ಅದನ್ನು ಕೇಳಿದ ರಾಜೀ ಅದು ಈಗ ತಾನೇ ಬಂತು ಅದನ್ನು ನೋಡುವಷ್ಟು ಪುರುಸೊತ್ತು ನನಗೆ ಇಲ್ಲ ಎಂದು ಹೇಳುತ್ತಾಳೆ. ಇನ್ನು ದೇವರ ಮನೆಯಿಂದ ಲಗ್ನ ಪತ್ರಿಕೆಯನ್ನು ತೆಗೆದು ಮಕ್ಕಳ ಕೈಗೆ ಕೊಟ್ಟಾಗ ಪುಟ್ಟಕ್ಕ ಬಹಳ ಖುಷಿ ಪಡುತ್ತಾಳೆ. ಹಾಗೆಯೇ ಮಕ್ಕಳು ಕೂಡ ಖುಷಿ ಪಡುತ್ತಾರೆ. ಲಗ್ನ ಪತ್ರಿಕೆಯಲ್ಲಿ ರಾಜೀ ಹಾಗೂ ಗೋಪಾಲ ಹೆಸರು ಹಾಕಿಸದ್ದನ್ನು ನೋಡಿ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಆ ವೇಳೆ ಅಲ್ಲಿಗೆ ರಾಜಿ ಹಾಗೂ ಗೋಪಾಲ ಬರುತ್ತಾರೆ. ಅವರು ಕೂಡ ಲಗ್ನ ಪತ್ರಿಕೆಯಲ್ಲಿ ಹೆಸರು ಇಲ್ಲದನ್ನು ನೋಡಿ ಕೋಪಗೊಳ್ಳುತ್ತ ಇರುತ್ತಾರೆ. ಆದರೆ ಕೊನೆಯಲ್ಲಿ ಅವರಿಬ್ಬರ ಹೆಸರನ್ನು ಕಂಡು ಖುಷಿ ಪಡುತ್ತಾರೆ. ಕಂಠಿ ಚಪ್ಪರ ಹಾಕುವುದರಲ್ಲಿ ಬ್ಯುಸಿ ಆಗಿದ್ದಾನೆ. ಆತನ ಗೆಳೆಯರು ಕಂಠಿ ಗೆ ಸಹಾಯ ಮಾಡುತ್ತಾ ಇರುತ್ತಾರೆ.