Puttakkana Makkalu: ಕಂಠಿಯನ್ನು ನೋಡಿ ಉರಿದು ಬಿದ್ದ ಸ್ನೇಹಾ; ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ಪುಟ್ಟಕ್ಕ

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ನೋಡುಗರಿಗೆ ಮುದ ನೀಡುತ್ತಿದೆ. ಸ್ನೇಹಾ ಳನ್ನು ಕರೆದುಕೊಂಡು ಹೋಗಲು ಕಂಠಿ ಬಂದೆ ಬಿಟ್ಟಿದ್ದಾನೆ. ಕಂಠಿಯನ್ನೂ ನೋಡಿದ ಪುಟ್ಟಕ್ಕ ಓಡೋಡಿ ಬಂದು ಅಳಿಯಂದಿರೆ ಬನ್ನಿ ಒಳಗೆ ಎಂದು ಕರೆಯುತ್ತಾಳೆ. ಪ್ರೀತಿಯಿಂದ ಆದರದ ಸ್ವಾಗತ ಮಾಡುತ್ತಾಳೆ. ಆದರೆ ಕಂಠಿಗೆ ಸ್ನೇಹಾ ಹೇಳಿದ ಮಾತುಗಳು ಕಿವಿಗೆ ಅಪ್ಪಳಿಸಿದ ಹಾಗೆ ಆಗುತ್ತಿತ್ತು.

ಆ ಕಾರಣದಿಂದ ಕಂಠಿ ಹೊರಗೆ ನಿಲ್ಲುತ್ತಾನೆ ಸ್ನೇಹ ಳನ್ನು ಕಂಠಿ ಮನೆಗೆ ಕರೆದುಕೊಂಡು ಹೋಗಲು ಬಹಳ ಚೆಂದದಿಂದ ಬರುತ್ತಾನೆ ಆದರೆ ಮನದಲ್ಲಿ ಬಹಳ ಭಯ ಕೂಡ ಇರುತ್ತದೆ. ಎನು ಮಾಡುವುದು ಯಾಕೆ ಹೀಗಾಯಿತು ..ಸ್ನೇಹಾ ನನ್ನ ಜೊತೆ ಚೆನ್ನಾಗಿ ಜೀವನ ನಡೆಸುತ್ತಾಳ ಎಂಬುವುದನ್ನು ಯೋಚನೆ ಮಾಡುತ್ತಾ ಇರುತ್ತಾನೆ.

puttakkana makkalu

ಇನ್ನೂ ಕಂಠಿ ಪುಟ್ಟಕ್ಕನ ಮನೆಯ ಹೊರಗೆ ನಿಂತುಕೊಂಡು ಇರಬೇಕಾದರೆ ಸುಮಾ ಅದ್ಯಾಕೋ ಕುಹಕ ಆಡುತ್ತಾಳೆ.. ಅಕ್ಕನನ್ನು ಇಲ್ಲಿಂದಲೇ ಕರೆದುಕೊಂಡು ಹೋಗಬೇಕು ಎಂದು ಅಂದುಕೊಂಡು ಇದ್ದೀರಾ ಎಂದು ಹೇಳಿದಾಗಲೂ ಕಂಠಿ ಎನು ಮಾತನಾಡದೆ ಇರುತ್ತಾಳೆ . ಆಗ ಅಲ್ಲಿಗೆ ಬಂದ ಸ್ನೇಹಾ ನಂದು ಹೊರಟು ಆಯಿತು..

ಮನೆಯಿಂದ ಹೊರಡೋಣ ಎಂದಾಗ ಪುಟ್ಟಕ್ಕ ಮೆತ್ತಗೆ ಸ್ನೇಹಾ ಬಳಿ ಹೇಳುತ್ತಾಳೆ ಶಾಸ್ತ್ರ ಇದೆ ಹಾಗೆಯೇ ಮನೆಗೆ ಹೋಗಲು ಆಗುವುದು ಇಲ್ಲ. ಅಳಿಯಂದಿರನ್ನು ಮನೆ ಒಳಗೆ ಕರೆ ಎಂದಾಗ ಸ್ನೇಹಾ ಕಠೋರವಾಗಿ ಹೇಳುತ್ತಾಳೆ ಮನಸ್ಸಲ್ಲಿ ಯಾವತ್ತೂ ಜಾಗ ಇಲ್ಲ.. ಮನೆ ಒಳಗೆ ಬರಬಹುದು ಎಂದು ಹೇಳುತ್ತಾಳೆ.

ಆ ಮಾತು ಕೇಳಿದ ಕಂಠಿ ಮಾತ್ರ ಬಹಳ ಬೇಸರ ಮಾಡಿಕೊಂಡು ಇದ್ದರೂ ಎನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾನೆ. ಇನ್ನೂ ಪುಟ್ಟಕ್ಕ ದೇವರಿಗೆ ಆರತಿ ಬೆಳಗುತ್ತಾರೆ. ಆ ಬಳಿಕ ಸ್ನೇಹಾ ಹಾಗೂ ಕಂಠಿ ಇಬ್ಬರು ಆರತಿ ತೆಗೆದುಕೊಳ್ಳುವಾಗ ಕಂಠಿ ಕೈ ತಾಗಿತು ಎಂದು ಸ್ನೇಹಾ ಕೊಂಚ ಕೈಯನ್ನು ಹಿಂದೆ ತೆಗೆದುಕೊಳ್ಳುತ್ತಾಳೆ.

ಹಾಗೆಯೇ ಅಮ್ಮನ ಕಾಲಿಗೆ ನಮಸ್ಕಾರ ಮಾಡುವಾಗಲೂ ಸ್ನೇಹಾ ಮಾತ್ರ ಕಂಠಿ ಜೊತೆ ಅಂತರ ಕಾಯ್ದುಕೊಂಡು ಇರುತ್ತಾಳೆ. ಕಂಠಿ ಮೆತ್ತಗೆ ಎನು ಮಾತನಾಡದೆ ಸುಮ್ಮನೆ ಇರುತ್ತಾನೆ. ಹಾಗೆಯೇ ಸ್ನೇಹಾ ತನ್ನ ಅಮ್ಮನನ್ನು ಬಿಗಿ ದಪ್ಪಿ ಅಮ್ಮ ನಾನು ಇನ್ನೂ ಹೊರಡುತ್ತೇನೆ ಎಂದು ಹೇಳಿದಾಗ ಪುಟ್ಟಕ್ಕ ಮಾತ್ರ ಬಹಳ ಅಳುತ್ತಾಳೆ. ಸುಮಾ ಸಹನಾ ಕೂಡ ಸ್ನೇಹಳನ್ನು ಮನಸಿಲ್ಲದ ಮನಸ್ಸಿನಿಂದ ಕಳುಹಿಸಿ ಕೊಡುತ್ತಾರೆ.

ಇನ್ನೂ ಕಂಠಿ ಜೀಪಿನಲ್ಲಿ ನಾನು ಬರುವುದು ಇಲ್ಲ.. ನನ್ನ ಸ್ಕುಟರ್ ನಲ್ಲಿ ನಾನು ಬರುತ್ತೇನೆ ಎಂದು ಹೇಳಿ ಸ್ಕೂಟರ್ ಸ್ಟಾಟ್ ಮಾಡಲು ಹೋದರೆ ಸ್ಕೂಟರ್ ಸ್ಟಾಟ್ ಆಗಲೇ ಇಲ್ಲ. ಇದನ್ನು ನೋಡಿದ ಕಂಠಿ ನಾನೇ ಸ್ಟಾರ್ಟ್ ಮಾಡುತ್ತೇನೆ ಎಂದು ಹೇಳಿದರು ಸ್ನೇಹಾ ಮಾತ್ರ ಬೇಡ ಎನ್ನುತ್ತಾಳೆ .. ಬಳಿಕ ಸ್ನೇಹಾ ಕೈ ಯಿಂದ ತೆಗೆದುಕೊಂಡು ತಾನೇ ಸ್ಕೂಟರ್ ಸ್ಟಾಟ್ ಮಾಡಿ ಕೊಡುತ್ತಾನೆ . ಇನ್ನೂ ಸುಮಾ ಅದೇ ಹೇಗೆ ನೀವು ಸ್ಟಾರ್ಟ್ ಮಾಡಿದಾಗ ಸ್ಟಾರ್ಟ್ ಆಯಿತು... ಎಂದಾಗ ಪ್ರೀತಿಯಿಂದ ಸಮಾಧಾನದಿಂದ ಸ್ಕೂಟರ್ ಸ್ಟಾರ್ಟ್ ಮಾಡಿದರೆ ಆಗುತ್ತದೆ ದರ್ಪದಿಂದ ಅಲ್ಲ .ಎಂದಾಗ ಸ್ನೇಹಾ ಎನು ಮಾತನಾಡದೆ ಅಲ್ಲಿಂದ ಹೊರಟು ಹೋಗುತ್ತಾಳೆ ಇನ್ನೂ ಕಂಠಿ ಕೂಡ ಸ್ನೇಹಾನಾ ಹಿಂದೆ ಜೀಪಿನಲ್ಲಿ ಹೋಗುತ್ತಾನೆ.

More from Filmibeat

English summary
Kannada serial puttakkana makkalu written updated on 25th july
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X