Puttakkana Makkalu: ಕುಸ್ತಿ ಕಲಿಯಲು ಹೊರಟ ಕಂಠಿ, ಹೆಂಡತಿ ಸ್ನೇಹಾಳಿಂದ ದೂರ ಉಳಿಯುತ್ತಾನಾ..?

By Poorva

500 ಸಂಚಿಕೆಗಳನ್ನು ಮುಗಿಸಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ಕಂಠಿ ಕುಸ್ತಿ ಪಂದ್ಯದಲ್ಲಿ ವಿನ್ ಆಗಲೇಬೇಕೆಂದು ನಿರ್ಧಾರ ಮಾಡಿಕೊಂಡಿದ್ದಾನೆ. ಹೆಂಡತಿಯಿಂದ ದೂರವಾಗಿ ಇರಬೇಕೆಂದು ಉಸ್ತಾದ್ ಕಂಠಿಗೆ ಹೇಳಿದ್ದಾರೆ. ಆದರೆ ಕಂಠಿಗೆ ಇದು ಬಹುದೊಡ್ಡ ಟಾಸ್ಕ್ ಆಗಿದ್ದು ಕುಸ್ತಿ ಪಂದ್ಯದಲ್ಲಿ ಗೆಲ್ಲಲೇ ಬೇಕೆಂದು ಉಸ್ತಾದ್‌ನ ಮೊರೆ ಹೋಗಿದ್ದಾನೆ.

ಮೂರು ಹೊತ್ತು ಸ್ನೇಹನ ನೆನಪಲ್ಲೇ ಇರುವ ಕಂಠಿಗೆ ಇದೀಗ ಸ್ನೇಹನಾ ಬಿಟ್ಟಿರೋಕಾಗುತ್ತೋ ಕಾದು ನೋಡಬೇಕಾಗಿದೆ ಇದೀಗ ಪುಟ್ಟಕ್ಕಾಗೆ ಬಹುದೊಡ್ಡ ಸಂಕಷ್ಟ. ಸಹನ ಬಾಳಲ್ಲಿ ಬಿರುಗಾಳಿ ಹೇಳುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಸಹನಗೆ ಏನೋ ತೊಂದರೆ ಆಗಿದೆ ಎಂದು ಪುಟ್ಟಕ್ಕ ಸಹನ ಮನೆಗೆ ಹೋದರೆ ಕೌಸಲ್ಯ ಅವಮಾನ ಮಾಡುತ್ತಾಳೆ ಸಹನಾಗೆ ಕಳ್ಳಿ ಪಟ್ಟವನ್ನು ಹೋರಿಸುತ್ತಾಳೆ.

Kannada serial Puttakkana Makkalu written update on 25th October

ಕೌಸಲ್ಯ ಮಾತಿಗೆ ಬೆದರದ ಸಹನಾ

ಸಹನಾ ಕೆನ್ನೆಯ ಮೇಲೆ ಕಲೆಯನ್ನು ನೋಡಿದ ಪುಟ್ಟಕ್ಕ ಹೆದರುತ್ತಾರೆ. ಸಹನಗೆ ಅಮ್ಮನನ್ನು ನೋಡಿ ಏನು ಹೇಳಬೇಕು ಎಂದು ತೋಚದೆ ಅಳುವೆ ಬಂದು ಹೋಗುತ್ತದೆ. ಆದರೆ ಕೌಸಲ್ಯ ಮಾತ್ರ ಪುಟ್ಟಕ್ಕನ ಬಳಿ ಚಾಡಿ ಹೇಳುತ್ತ ಇರುತ್ತಾಳೆ.. ಸಹನ ಮಾತ್ರ ಅಮ್ಮನ ಬಳಿ ನಾನು ಒಂದು ಕ್ಷಣವು ಇಲ್ಲಿ ಇರುವುದಿಲ್ಲ ನಾನು ನನ್ನ ಗಂಡನ ಬಳಿ ಎಲ್ಲ ಮಾತನಾಡಿಕೊಳ್ಳುತ್ತೇನೆ ಇಲ್ಲಿಂದ ಹೋಗೋಣ ಎಂದು ನನ್ನ ತಾಯಿಯ ಬಳಿ ಹೇಳುತ್ತಾಳೆ.

ಮಗಳ ಮಾತಿಗೆ ಪುಟ್ಟಕ್ಕನಿಗೆ ಏನು ಹೇಳಬೇಕು ಎಂದು ತೋಚದಂತಾಗುತ್ತದೆ. ಆದರೆ ಪುಟ್ಟಕ್ಕ ಸಹನಾಗೆ ಬುದ್ದಿ ಮಾತುಗಳನ್ನ ಹೇಳಿ ಅಲ್ಲಿಯೇ ಇರುವಂತೆ ಹೇಳುತ್ತಾರೆ. ಆದರೆ ಸಹ ನನಗೆ ಅಮ್ಮನ ಮಾತುಗಳು ಇಷ್ಟ ಆಗದೆ ಹೋದರು ತಾಯಿಯ ಮಾತಿನಂತೆ ನಡೆದುಕೊಳ್ಳುತ್ತಾಳೆ. ಇನ್ನು ಈ ವಿಚಾರ ಸುಮಗೆ ಗೊತ್ತಾಗದ ಹಾಗೆ ನೋಡಿಕೊಳ್ಳುತ್ತಾಳೆ.

ಕುಸ್ತಿ ಗೆಲ್ಲುವತ್ತ ಕಂಠಿ ಗಮನ

ಕಂಠಿ ಕುಸ್ತಿ ಆಟವನ್ನು ಆಡಿ ಹೇಗಾದರೂ ಮಾಡಿ ವಿಜೇತನಾಗಿ 10 ಲಕ್ಷ ಹಣವನ್ನು ಪಡೆದುಕೊಳ್ಳಲೇ ಬೇಕೆಂದು ಯೋಚನೆ ಮಾಡುತ್ತಿರುತ್ತಾನೆ. ಆದ ಕಾರಣ ಉಸ್ತಾದ್ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ತನ್ನನ್ನು ನಿಮ್ಮ ಶಿಷ್ಯನಾಗಿ ಮಾಡಿಕೊಳ್ಳಿ ನೀವು ಹೇಳಿದ ಹಾಗೆಯೇ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ.

Kannada serial Puttakkana Makkalu written update on 25th October

ಉಸ್ತಾದ್‌ಗೆ ಕಂಠಿ ಮೇಲೆ ಅಷ್ಟಾಗಿ ನಂಬಿಕೆ ಬರುವುದಿಲ್ಲ. ಬಳಿಕ ಕಂಠಿಗೆ ಉಸ್ತಾದ್ ಹೇಳುತ್ತಾನೆ ಕುಸ್ತಿ ಪಂದ್ಯದಲ್ಲಿ ಆಟ ಆಡಬೇಕು ಎಂದಾದರೆ ಬ್ರಹ್ಮಚಾರಿ ಪಟ್ಟವನ್ನು ಪಡೆಯಬೇಕು. ಇಲ್ಲವಾದರೆ ಕುಸ್ತಿ ಪಂದ್ಯದಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಂಡತಿಯೊಂದಿಗೆ ಒಂದೇ ಕೋಣೆಯಲ್ಲಿ ನೀವು ಒಟ್ಟಿಗೆ ಮಲಗಬಾರದು ಹಾಗೆಯೇ ಬಹಳ ಸಲಿಗೆಯಿಂದ ಕೂಡ ಇರಬಾರದು. ಕುಸ್ತಿ ಮುಗಿಯುವವರೆಗೂ ಹನುಮಂತ ದೇವರ ಸ್ತುತಿಯನ್ನು ಮಾಡಬೇಕು ಎಂದು ಹೇಳಿದಾಗ ಕಂಠಿ ಒಪ್ಪಿಕೊಳ್ಳುತ್ತಾನೆ.

ಉಸ್ತಾದ್ ಮಾತಿಗೆ ಒಪ್ಪಿಗೆ ಸೂಚಿಸಿದ ಕಂಠಿ

ಷರತ್ತುಗಳಿಗೆ ಕಂಠಿ ಒಪ್ಪಿಕೊಂಡ ಮೇಲೆ ಉಸ್ತಾದ್ ಕಂಠಿಯನ್ನು ಸ್ವೀಕರಿಸುತ್ತಾರೆ. ಇನ್ನು ಕಂಠಿ ಮುಂಜಾನೆ ನಾಲ್ಕು ಗಂಟೆಗೆ ಇದ್ದು ಕುಸ್ತಿ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಇನ್ನು ಪುಟ್ಟಕ್ಕನ ಮೆಸ್‌ಗೆಗೆ ಅಧಿಕಾರಿಗಳು ಬಂದು, ತಳ್ಳುವ ಗಾಡಿಯಲ್ಲಿ ಪುಟ್ಟಕ್ಕ ಮೆಸ್‌ ನಡೆಸಿಕೊಂಡು ತನ್ನ ಜೀವನವನ್ನು ಸಾಗಿಸುತ್ತಿರುವುದಕ್ಕೂ ಈಗ ಅಡ್ಡಗಾಲು ಇಟ್ಟಿದ್ದಾರೆ. ಮುಂದೇನು ಆಗಲಿದೆಯೋ ಕಾದುನೋಡಬೇಕು.

More from Filmibeat

English summary
Puttakkana Makkalu serial October 25th update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X