Puttakkana Makkalu: ರಾಜಿ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಕಂಠಿ

By Poorva

ತಲೆಬಿಸಿಯಲ್ಲಿ ಮನೆಯ ಒಳಗೆ ಹೋಗಿದ್ದ ಮೇಷ್ಟ್ರ ತಾಯಿ ಮನೆಯಿಂದ ಹೊರಗೆ ಬಂದು ನನಗೂ ಈ ಮದುವೆಗೆ ಒಪ್ಪಿಗೆ ಇದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಮುರಳಿ ಮೇಷ್ಟ್ರ ಮನೆಯವರಿಗೆ ಬಹಳ ಖುಷಿ ಆಗುತ್ತದೆ. ಮನೆಗೆ ಬಂದ ಮೇಷ್ಟ್ರು ತಂದೆ ತಾಯಿಯನ್ನು ನೋಡಿ ಹಾಗೆಯೇ ಹೋಗುತ್ತಾರೆ. ಇದನ್ನು ನೋಡಿದ ಮೇಷ್ಟ್ರ ತಂದೆ "ಮುರಳಿ ನಿಂತುಕೋ" ಎಂದು ಹೇಳಿ ಪತ್ನಿ ಬಳಿ ಏನಂದೆ ನೀನು ಎಂದು ಕೇಳುತ್ತಾರೆ. ಆ ವೇಳೆ ಕೌಸಲ್ಯ ನನಗೂ ಈ ಮದುವೆ ಓಕೆ ಎಂದು ಹೇಳಿದಾಗ ಮುರಳಿಗೆ ಬಹಳ ಖುಷಿ ಆಗುತ್ತದೆ. ಇನ್ನೂ ಮೇಷ್ಟ್ರ ಮನೆಯಲ್ಲಿ ಮದುವೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಖುಷಿ ಆಗುತ್ತದೆ.

ಸ್ನೇಹಾ ಅಮ್ಮನ ಬಳಿ ಹೇಳಿ ಬಹಳ ಖುಷಿ ಪಡುತ್ತಾಳೆ ಹಾಗೆಯೇ ಪುಟ್ಟಕ್ಕ ಮಾತ್ರ ಆಕಾಶದಲ್ಲಿ ತೇಲಾಡುತ್ತ ಇದ್ದಾಳೆ. ಇದಕ್ಕೆಲ್ಲ ಕಾರಣ ದೊರೆ ಎಂದು ಖುಷಿ ಪಡುತ್ತಾ ಇರುವಾಗ ಸುಮಾ ದೊರೆನಾ ಯಾರದು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಪುಟ್ಟಕ್ಕ ನಿನಗೆ ಯಾಕದು ಬಿಟ್ಟು ಬಿಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸುಮಾ ಸುಮ್ಮನೆ ಆಗುತ್ತಾಳೆ. ಬಳಿಕ ಸ್ನೇಹಾ ಚಿತ್ರಾ ಅವರು ಹೇಳಿದ್ದು ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನುತ್ತಾಳೆ. ಆ ವೇಳೆ ಸಹನಾ ಮುಖ ಕೆಂಪೇರುತ್ತದೆ. ಬಹಳ ಖುಷಿ ಪಡುತ್ತಾಳೆ. ಇನ್ನು ತಂಗಿಯಂದಿರು ಕಾಲು ಎಳೆಯುವುದನ್ನು ನೋಡಿ ನಾಚಿಕೆಯಿಂದ ಮನೆಯ ಒಳಗೆ ಹೋಗುತ್ತಾಳೆ..

ಮೇಷ್ಟ್ರ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕಿತು ಅನ್ನುವ ವೇಳೆ ರಾಜೇಶ್ವರಿಗೆ ಬಹಳ ಕೋಪ ಬರುತ್ತದೆ . ಮೇಷ್ಟ್ರ ತಂದೆ ತಾಯಿ ಬಳಿ ಅಷ್ಟೆಲ್ಲ ಹೇಳಿದರು ಅದೆಲ್ಲವನ್ನೂ ಕ್ಯಾರೇ ಎನ್ನದೆ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಅಲ್ವಾ ಎಂದು ಜೋರಾಗಿ ಹೇಳಿದಾಗ ಗೋಪಾಲನಿಗೆ ಖುಷಿ ಆದರೆ ಕಾಳೀ ಮಾತ್ರ ಸಹನಾ ನನ್ನ ಪ್ರೀತಿ ಮಾಡುತ್ತಾ ಇದ್ದಾಳೆ ಅದು ಹೇಗೆ ಮೇಷ್ಟ್ರನ್ನು ಮದುವೆ ಮಾಡಿಕೊಳ್ಳುತ್ತಾಳೆ ನೋಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಬಳಿಕ ಮೇಷ್ಟ್ರ ಮನೆಗೆ ಹೋಗಿ ಬರೋಣ ಕಾಳೀ ಎಂದು ರಾಜೇಶ್ವರಿ ಹೇಳುತ್ತಾಳೆ. ಇನ್ನು ಮೇಷ್ಟ್ರ ಮನೆಗೆ ಹೋದ ರಾಜೇಶ್ವರಿ ಮೇಷ್ಟ್ರ ತಂದೆ ತಾಯಿ ತಲೆ ಕೆಡಿಸಲು ನೋಡುತ್ತಾಳೆ.

ಮೇಷ್ಟ್ರ ಮನೆಗೆ ಆಗಮಿಸಿದ ರಾಜಿ

ಮೇಷ್ಟ್ರ ಮನೆಗೆ ಆಗಮಿಸಿದ ರಾಜಿ

ಈ ವಿಚಾರವನ್ನು ಪುರುಷೋತ್ತಮ ಸುಮನಾ ಬಳಿ ಹೇಳಿದಾಗ ಸ್ನೇಹಗೆ ಈ ವಿಚಾರ ತಿಳಿಯುತ್ತಾ ಇದ್ದ ಹಾಗೆ ಕಂಠಿಗೆ ಕರೆ ಮಾಡುತ್ತಾಳೆ. ರಾಜೇಶ್ವರಿ ಕುತಂತ್ರವನ್ನು ಕಂಠಿ ಬಳಿ ಹೇಳಿದಾಗ ಎನು ಮಾಡಬೇಕು ಎಂದು ಯೋಚನೆ ಮಾಡಿದ ಕಂಠಿಗೆ ಇದು ತನ್ನ ಅವ್ವನಿಂದ ಮಾತ್ರ ಸಾಧ್ಯ ಎಂದುಕೊಂಡು ಅಮ್ಮನನ್ನು ಕರೆದುಕೊಂಡು ಮುರಳಿ ಮೇಷ್ಟ್ರ ಮನೆಗೆ ಹೋಗುತ್ತಾನೆ. ಇನ್ನು ಮೇಷ್ಟ್ರ ಮನೆಯಲ್ಲಿ ರಾಜೇಶ್ವರಿ ಪುಟ್ಟಕ್ಕ ಗಂಡ ಬಿಟ್ಟವಳು, ಪುಟ್ಟಕ್ಕನ ಮಗಳು ಕೂಡ ಮದುವೆ ಆದ ಬಳಿಕ ನಿಮ್ಮ ಮಗನನ್ನು ಬಿಡುವುದಿಲ್ಲ ಎಂಬುವುದಕ್ಕೆ ಎನು ಗ್ಯಾರಂಟಿ, ಯಾಕಾಗಿ ಮದುವೆ ಆಗುತ್ತಾ ಇದ್ದಾರೆ, ಇದರಿಂದ ನಿಮ್ಮ ಮಗನ ಜೀವನ ಹಾಳು ಆಗುತ್ತದೆ ಎಂದು ಹೇಳಿದಾಗ ಮೇಷ್ಟ್ರ ಮನೆ ಮುಂದೆ ಬಂಗಾರಮ್ಮ ಬರುತ್ತಾರೆ.

ಮೇಷ್ಟ್ರ ಮನೆಗೆ ಆಗಮಿಸಿದ ಬಂಗಾರಮ್ಮ

ಮೇಷ್ಟ್ರ ಮನೆಗೆ ಆಗಮಿಸಿದ ಬಂಗಾರಮ್ಮ

ಕಂಠಿ ತಾಯಿಯನ್ನು ಮಾತ್ರ ಕಳುಹಿಸಿ ಕಾರಿನ ಬಳಿ ನಿಂತು ಇರುತ್ತಾನೆ. ರಾಜೇಶ್ವರಿ ಆಡಿದ ಮಾತನ್ನು ಕೇಳಿಸಿಕೊಂಡ ಬಂಗಾರಮ್ಮ ಜೋರಾಗಿ ಹೇಳುತ್ತಾಳೆ ನೀವು ಏನು ಹೆದರಿಕೊಳ್ಳಬೇಡಿ ಆ ತರ ಎನು ಆಗುವುದಿಲ್ಲ. ಇದಕ್ಕೆ ನಾನು ಗ್ಯಾರಂಟಿ ಕೊಡುತ್ತೇನೆ. ಪುಟ್ಟಕ್ಕನ ಹಾಗೆ ಭೀಗತಿ ಸಿಗಳು ನೀವು ಪುಣ್ಯ ಮಾಡಿದಿರಿ. ಮದುವೆಗೆ ಒಪ್ಪಿಗೆ ನೀಡಿದ್ದರಿಂದ ನಮಗೆ ಖುಷಿ ಆಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ತಂದೆ ತಾಯಿ ಸುಮ್ಮನೆ ಇರುತ್ತಾರೆ ಹಾಗೂ ರಾಜಿ ಅಲ್ಲಿಂದ ಹೋಗುತ್ತಾಳೆ..

ಪುಟ್ಟಕ್ಕನ ಮನೆಗೆ ಆಗಮಿಸಲಿರುವ ಗಂಡಿನ ಕಡೆಯವರು

ಪುಟ್ಟಕ್ಕನ ಮನೆಗೆ ಆಗಮಿಸಲಿರುವ ಗಂಡಿನ ಕಡೆಯವರು

ಇನ್ನು ಪುಟ್ಟಕ್ಕನ ಮನೆಗೆ ಮದುವೆ ಮಾತು ಕತೆಗೆ ಮೇಷ್ಟ್ರ ಮನೆಯವರು ಬರುತ್ತಾರೆ.. ಅದನ್ನು ನೋಡಿ ಬಹಳ ಖುಷಿ ಪಡುತ್ತಾಳೆ ಪುಟ್ಟಕ್ಕ. ಕೌಸಲ್ಯ ಈ ಸಲ ಹೋದ ಬಾರಿ ಮನೆಗೆ ಬಂದಾಗಿನಿಂದ ಈ ಬಾರಿ ಮನೆ ನೀಟಾಗಿ ಇದೆ ಎಂದಾಗ ಸ್ನೇಹಾ ಹೋದ ಬಾರಿ ಕೂಡಾ ಹೀಗೆಯೇ ಇತ್ತು ನೀವು ಸರಿಯಾಗಿ ನೋಡಿಲ್ಲ ಎಂದು ಕಾಣಿಸುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ತಾಯಿಗೆ ಅವಕ್ಕಾಗುತ್ತಾರೆ.

ಸ್ನೇಹಾ ಮಾತಿಗೆ ಅವಕ್ಕಾದ ಕೌಸಲ್ಯ

ಸ್ನೇಹಾ ಮಾತಿಗೆ ಅವಕ್ಕಾದ ಕೌಸಲ್ಯ

ಇದನ್ನು ಕೇಳಿದ ಪುಟ್ಟಕ್ಕ ಸ್ನೇಹಾಳನ್ನು ಒಳಗೆ ಕಳುಹಿಸಲು ಎಲ್ಲಾ ಕೆಲಸ ಹೇಳುತ್ತಾಳೆ. ಆದರೆ ಸ್ನೇಹಾ ಮಾತ್ರ ಅಲ್ಲಾಡದೆ ಅಲ್ಲೇ ನಿಂತಿರುತ್ತಾಳೆ. ಈ ವೇಳೆ ಕಂಠಿ ಮಾತ್ರ ಸ್ನೇಹಾ ಮುಖ ನೋಡಿಕೊಂಡು ಇರುತ್ತಾನೆ ಸ್ನೇಹಾ ಕೂಡ ಹಾಗೆ ನೋಡುತ್ತಾ ಇರುವಾಗ ಸುಮಾಗೆ ಡೌಟ್ ಬರುತ್ತದೆ.. ಏನೋ ಎಡವಟ್ಟಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದು ಹೇಳುತ್ತಾಳೆ. ಇನ್ನು ಸಹನಾಳನ್ನು ನೋಡಿದ ಮೇಷ್ಟ್ರು ಕಳೆದು ಹೋಗಿದ್ದಾರೆ ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 26th December
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X