Puttakkana Makkalu: ಮಕ್ಕಳಿಗಾಗಿ ಗಂಡನನ್ನು ಮನೆಯಿಂದ ಹೊರ ಹಾಕುತ್ತಾಳ ಪುಟ್ಟಕ್ಕ?
ಪುಟ್ಟಕ್ಕ ತನ್ನ ಮೂವರು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದಾರೆ. ಹಾಗೆಯೇ ಗಂಡ ಗೋಪಾಲ ರಾಜೇಶ್ವರಿಯನ್ನು ಮದುವೆ ಆಗಿ ಆರಾಮ ಆಗಿರುತ್ತಾನೆ . ಆದರೆ ಪುಟ್ಟಕ್ಕ ಮೆಸ್ ನಡೆಸುತ್ತಾ ಜೋಳಿಗೆಯಲ್ಲಿ ಇಟ್ಟುಕೊಂಡು ಮಗು ಸಾಕುತ್ತ ಇರುತ್ತಾಳೆ . ಅವ್ವ ಎಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ನನ್ನ ಕಣ್ಣ ಮುಂದೆ ಇದೆ ನಾನು ಎಂದಿಗೂ ಅಪ್ಪನನ್ನು ಕ್ಷಮಿಸುವುದು ಇಲ್ಲ ಎಂದು ಸ್ನೇಹಾ ಪದೇ ಪದೇ ಹೇಳುತ್ತ ಇರುತ್ತಾಳೆ.
ಇನ್ನು ಮನೆಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ. ಜೊತೆಗೆ ಕಂಠಿ ಮಾಡುತ್ತಿರುವ ವ್ಯವಸಾಯದ ಕೆಲಸಕ್ಕೆ ಭೂಮಿ ಪೂಜೆ ಕೂಡ ನಡೆಯಿತು. ಅದಕ್ಕೆ ಸ್ವತಃ ಬಂಗಾರಮ್ಮ ಅವರ ಆಶೀರ್ವಾದ ಕಂಠಿಗೆ ಸಿಕ್ಕಾಯಿತು. ಇನ್ನೇನಿದ್ದರೂ ಅಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಒಂದೇ ಕಂಠಿಗೆ ಇರುವ ಸವಾಲು. ಕೃಷಿ ಕೆಲಸ ಎಂದರೆ ಸೋಲು ಗೆಲುವು ಇದ್ದಿದ್ದೇ. ಮೈ ಬಗ್ಗಿಸಿ ಕೆಲಸ ಮಾಡಿದರೆ ಕಂಡಿತವಾಗಿ ನಾವು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವ ಭರವಸೆ. ಇನ್ನು ಪುಟ್ಟಕ್ಕ ಕೂಡ ತನ್ನ ಅಳಿಯನಿಗೆ ಆಶಿರ್ವಾದ ನೀಡುತ್ತಾರೆ.

ಇದೆಲ್ಲ ಆದ ಬಳಿಕ ಎಲ್ಲರೂ ಪುಟ್ಟಕ್ಕನ ಮನೆಗೆ ಬರುತ್ತಾರೆ. ಎಲ್ಲರೂ ಖುಷಿಯಿಂದ ಮಾತನಾಡಿ ಆದ ಬಳಿಕ ಸ್ನೇಹಾ ಹೊರಗಡೆಯಿಂದಲೆ ನಾನಿನ್ನೂ ಬರುತ್ತೇನೆ ಎಂದು ಹೊರಡಲು ಅನುವಾಗುತ್ತಾಳೆ. ಆಗ ಪುಟ್ಟಕ್ಕ ಮನೆ ಒಳಗೆ ಬರಲು ಹೇಳುತ್ತಾಳೆ. ಆಗ ಸ್ನೇಹಾ ಈ ಗೋಪಾಲ ಮನೆಯಲ್ಲಿ ಇರುವವರೆಗೆ ನಾನು ಈ ಮನೆಗೆ ಬರುವುದು ಇಲ್ಲ. ಈ ವಿಚಾರ ನಿನಗೆ ತಿಳಿದು ಇದ್ದರೂ ನನ್ನನ್ನು ಯಾಕೆ ಮನೆಗೆ ಕರೆಯುತ್ತಿಯಾ ಎಂದು ಹೇಳುತ್ತಾಳೆ.
ಸ್ನೇಹನಿಗೆ ಸಮಾಧಾನ ಮಾಡಿದ ಕಂಠಿ
ಇದನ್ನು ಕೇಳಿಸಿಕೊಂಡ ಕಂಠಿ ಸ್ನೇಹ ನೀನು ದುಡುಕಬೇಡ ನಿಂತಲ್ಲಿಂದಲೆ ಮಾವಯ್ಯ ಮನೆಯಿಂದ ಹೋಗು ಎಂದರೆ ಎಲ್ಲಿಗೆ ಹೋಗುತ್ತಾರೆ ನೀನು ಸ್ವಲ್ಪ ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಿನಗೆ ಅವರ ಮೇಲೆ ಬಹಳಷ್ಟು ಕೋಪ ಇದೆ ಆದರೆ ಅದನ್ನು ಈಗ ತೋರಿಸಿಕೊಳ್ಳುವ ಸಮಯ ಅಲ್ಲ ಎನ್ನುತ್ತಾನೆ. ಆದರೆ, ಸ್ನೇಹಾ ಮಾತ್ರ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದು ಇಲ್ಲ. ಇನ್ನೂ ಸುಮಾ ಕೂಡ ತಂದೆಯ ಬಳಿ ನಮ್ಮ ಮನೆಯಲ್ಲಿ ಹಬ್ಬದ ದಿನ ಕೂಡ ಸಂಭ್ರಮ ಆಚರಿಸುವುದಿಲ್ಲ. ನಮಗೆ ನಮ್ಮ ಅಕ್ಕಂದಿರು ಬಂದಾಗಲೇ ಈ ಮನೆಯಲ್ಲಿ ಸಂಭ್ರಮ. ಅದಕ್ಕೆ ಕೂಡ ಕಲ್ಲು ಹಾಕಬೇಡ ಹೋಗು ನೀನು ಈ ಮನೆಯಿಂದ ಎಂದು ಹೇಳುತ್ತಾಳೆ.
ತಂದೆಯ ಬಳಿ ಬೇಡಿಕೊಂಡ ಸುಮಾ
ಇದನ್ನು ಕೇಳಿದ ಗೋಪಾಲ ನಿಗೆ ಎನು ಹೇಳಬೇಕು ಎಂದು ತೋಚದೇ ಆಗುತ್ತದೆ . ಮಕ್ಕಳ ಮಾತನ್ನು ಕೇಳಿದ ಪುಟ್ಟಕ್ಕ ಮಾತ್ರ ಸುಮ್ಮನೆ ಇರುತ್ತಾಳೆ. ಮಾತು ಮುಂದುವರೆಸಿದ ಸ್ನೇಹಾ, ಸುಮಾ ಕಣ್ಣು ಬಿಡುವ ಮುಂಚೆಯೇ ಅಪ್ಪಯ್ಯ ನಮ್ಮಿಂದ ಬಹಳ ದೂರ ಹೋಗಿದ್ದಾರೆ. ಆದರೆ ಇದೀಗ ಮತ್ತೆ ಅವರೇ ನಮ್ಮ ಮನೆಗೆ ಬಂದರೆ .. ನಡೆದಂತಹ ದಿನಗಳನ್ನು ಮರೆಯುವುದಾದರು ಹೇಗೆ. ಅಮ್ಮನಿಗೆ ಹುಷಾರು ತಪ್ಪಿದಾಗಲು ನಮ್ಮನ್ನು ಬಹಳ ಪ್ರೀತಿಯಿಂದ ನೋಡಿಕೊಂಡು ಇದ್ದಳು ಎನ್ನುತ್ತಾಳೆ.

ನಾನು ಇಲ್ಲಿಯೇ ಇರುತ್ತೇನೆ ಎಂದು ಪುಟ್ಟಕ್ಕನ ಬಳಿ ಬೇಡಿಕೊಂಡ ಗೋಪಾಲ
ಬಳಿಕ ಮಾತನಾಡಿದ ಆಕೆ ಇವರು ರಾಜಿನ ಮದುವೆ ಆಗಿ ಹೋದರು ಆ ಬಳಿಕ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಆದರೆ ಅದೆಲ್ಲಾ ಅವ್ವ ಮರೆತಿರಬಹುದು. ಆದರೆ ನಾನು ಮರೆತಿಲ್ಲ ಎಂದು ಬಹಳ ಜೋರಾಗಿ ಹೇಳಿದಾಗ ಪುಟ್ಟಕ್ಕ ಎನು ಹೇಳದ ಸ್ಥಿತಿಯಲ್ಲಿ ಇರುತ್ತಾರೆ. ಮಕ್ಕಳಿಗಾಗಿ ಎನು ಬೇಕಾದರೂ ಮಾಡಲು ಸಿದ್ದ ಇರುವ ಪುಟ್ಟಕ್ಕ ಮಾತ್ರ ಈ ವಿಚಾರದಲ್ಲಿ ಮೌನಿ ಆಗಿದ್ದಾರೆ. ಆದರೆ ಗೋಪಾಲ ಮೆತ್ತಗೆ ಪುಟ್ಟಕ್ಕನ ಬಳಿಗೆ ಹೋಗಿ ಹೇಳುತ್ತಾನೆ ಪುಟ್ಟಮ್ಮಿ ನನ್ನನ್ನು ಈ ಮನೆ ಬಿಟ್ಟು ಇಲ್ಲಿ ಕೂಡ ಕಳಿಸಬೇಡ. ನಾನು ಇಲ್ಲಿಯೇ ನೀವು ಬಿಟ್ಟ ಚಪ್ಪಲಿ ಕಾಯುತ್ತ ಇರುತ್ತೇನೆ.. ದಯವಿಟ್ಟು ನನ್ನನ್ನು ಇಲ್ಲಿಂದ ಕಳುಹಿಸಬೇಡ ಎಂದು ಹೇಳುತ್ತಾರೆ .


Click it and Unblock the Notifications











