Puttakkana Makkalu: ಬಂಗಾರಮ್ಮನ ಮನೆಗೆ ಎಂಟ್ರಿ ಕೊಟ್ಟ ಸ್ನೇಹಾ; ಅತ್ತಿಗೆಯನ್ನು ಬರ ಮಾಡಿಕೊಂಡ ವಸು

By Poorva

ಪುಟ್ಟಕ್ಕನ ಮನೆಯಿಂದ ಹೊರಟ ಸ್ನೇಹಾ ನೇರವಾಗಿ ಬಂಗಾರಮ್ಮನ ಮನೆಗೆ ಹೋಗಿದ್ದಾಳೆ. ಪುಟ್ಟಕ್ಕನಿಗೆ ಬಹಳ ಭಯ ಇರುತ್ತದೆ. ನನ್ನ ಮಗಳು ಬಂಗಾರಮ್ಮ ಅವರ ಮನೆಗೆ ಸೊಸೆಯಾಗಿ ಹೋಗಿದ್ದಾಳೆ ಆಕೆಗೆ ಏನೂ ತೊಂದರೆ ಆಗದಿರಲಿ, ಹಾಗೆಯೇ ಆಕೆ ಯಾವತ್ತಿದ್ದರೂ ಚೆನ್ನಾಗಿರಲಿ ಎಂದು ದೇವರ ಬಳಿ ಬೇಡಿಕೊಂಡೇ ಇರುತ್ತಾಳೆ.

ಇನ್ನು ಸ್ನೇಹಾ ಮಾತ್ರ ಯಾವುದೇ ಅಳುಕು ಇಲ್ಲದೇ ತನ್ನ ಅತ್ತೆಯ ಮನೆ ಕಡೆ ಹೋಗುತ್ತಾಳೆ. ಇದನ್ನೆಲ್ಲ ನೋಡಿದ ಕಂಠಿ ಮೌನಿ ಆಗಿರುತ್ತಾನೆ. ಇನ್ನು ಸ್ನೇಹಾ ಕಂಠಿ ಜೀಪ್ ಹತ್ತದೇ ಆಕೆಯ ಸ್ಕೂಟರ್ ನಲ್ಲಿ ಬಂಗರಮ್ಮನ ಮನೆಗೆ ಹೋಗುತ್ತಾಳೆ. ಇನ್ನು ಕಂಠಿ ಕೂಡ ಸ್ನೇಹಾ ಹಿಂದೆಯಿಂದ ಜೀಪಿನಲ್ಲಿ ಹೋಗುತ್ತಾನೆ.

kannada-serial-puttakkana-makkalu

ಸ್ನೇಹಾ ಹಾಗೂ ಕಂಠಿ ಬಂಗಾರಮ್ಮನ ಮನೆ ತಲುಪುತ್ತಾರೆ. ಕಂಠಿ ಕಂಡ ವಸು ಅತ್ತಿಗೆ, ಅಣ್ಣ ಎಂದು ಬಹಳ ಖುಷಿಯಿಂದ ಕಿರುಚುತ್ತಾಳೆ. ಇದನ್ನು ನೋಡಿಯೇ ಬಂಗಾರಮ್ಮಗೆ ತನ್ನ ಮಗ ಸೊಸೆ ಬಂದರು ಎಂದು ತಿಳಿಯುತ್ತದೆ.

ಆದರೂ ಏನೂ ಮಾತನಾಡದೆ ಸುಮ್ಮನೆ ಕುಳಿತುಕೊಂಡಿರುತ್ತಾಳೆ. ಆಕೆ ಕುಳಿತಲ್ಲಿಂದ ಎದ್ದೇಳುವುದೆ ಇಲ್ಲ. ಇನ್ನು ಸ್ನೇಹಾ ಹಾಗೂ ಕಂಠಿಯನ್ನು ಮನೆಯ ಎದುರುಗಡೆ ನಿಲ್ಲಿಸಿ ಬಂದೆ ಬಂದೆ ಇಲ್ಲಿಯೇ ಇರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಸುಮ್ಮನೆ ನಿಂತುಕೊಂಡಿರುತ್ತಾಳೆ. ವಸು ತನ್ನ ತಾಯಿ ಬಳಿ ಬಂದು ಹೇಳುತ್ತಾಳೆ.

ಅಮ್ಮ ಅಣ್ಣ ಅತ್ತಿಗೆ ಹೊರಗೆ ನಿಂತಿದ್ದಾರೆ ಅವರನ್ನು ಆರತಿ ಎತ್ತಿ ಸೇರು ಒದ್ದು ಮನೆ ಒಳಗೆ ಕರೆದುಕೊಳ್ಳುವ ಶಾಸ್ತ್ರ ಮಾಡಬೇಕು ಎಂದಾಗ ಬಂಗಾರಮ್ಮ ಇದೇನು ಸ್ಪೆಷಲ್ ಇವತ್ತು ಮಾತ್ರ ನನ್ನ ಮಾತು ಕೇಳುವುದು ಯಾವತ್ತೂ ಇಲ್ಲದ್ದು ಎಂದು ಹೇಳುತ್ತಾಳೆ. ಆಗ ಅಲ್ಲಿಗೆ ಬಂದ ಬಂಗಾರಮ್ಮ ಅವರ ಗಂಡ ವಸು ಇವತ್ತು ನೀನೇ ಅವರನ್ನು ಒಳಗೆ ಕರೆದುಕೋ ನಾನು ನಿಮ್ಮ ಅಮ್ಮನ ಬಳಿ ಮಾತನಾಡುತ್ತೇನೆ ಎಂದು ಹೇಳುತ್ತಾರೆ.

ಇದನ್ನು ಕೇಳಿದ ವಸು ಅಣ್ಣ ಅತ್ತಿಗೆಯನ್ನು ಬರ ಮಾಡಿಕೊಳ್ಳಲು ಬರುತ್ತಾಳೆ. ಕಂಠಿಗೆ ಆ ವೇಳೆ ತನ್ನ ತಾಯಿಯೇ ತಮ್ಮಿಬ್ಬರನ್ನು ಮನೆ ಒಳಗೆ ಬರಮಾಡಿಕೊಳ್ಳಲು ಬಂದರು ಎನ್ನಿಸುತ್ತದೆ. ಆ ವೇಳೆ ಕಂಠಿ ಮುಖದಲ್ಲಿ ಆದ ಖುಷಿ ಹೇಳ ತೀರದು. ಆದರೆ ಆ ಬಳಿಕ ತಿಳಿಯುತ್ತದೆ ತನ್ನ ತಾಯಿ ಇಲ್ಲಿಗೆ ಬಂದೆ ಇಲ್ಲ, ಆಕೆಗೆ ನನ್ನ ಮೇಲೆ ಯಾವುದೇ ಪ್ರೀತಿ ಇಲ್ಲ, ಆಕೆಗೆ ನನ್ನ ಮೇಲೆ ಕೋಪ ಕರಗುವುದು ಇಲ್ಲ ಎನ್ನಿಸುತ್ತದೆ. ಇನ್ನು ಮುಖದಲ್ಲಿ ಇದ್ದ ಆ ಸ್ವಲ್ಪ ಖುಷಿಯೂ ಹೋಗುತ್ತದೆ.

ಇನ್ನು ಸ್ನೇಹಾ ಬಲಗಾಲಿನಲ್ಲಿ ಸೇರು ಒದ್ದು ಒಳಗೆ ಬರುತ್ತಾಳೆ. ಸ್ನೇಹಾ ಕಂಠಿ ಮೇಲೆ ಬಹಳ ಪ್ರೀತಿ ಇಟ್ಟಿರುತ್ತಾಳೆ. ಆದರೆ ಆಕೆಗೆ ಕಂಠಿ ಮೇಲೆ ಬಹಳ ಕೋಪ ಬಂದಿರುತ್ತದೆ. ಆದ ಕಾರಣ ಕಂಠಿ ಮೇಲೆ ಇದ್ದ ಪ್ರೀತಿ ತಾತ್ಕಾಲಿಕವಾಗಿ ಹೊರಟು ಹೋಗಿದೆ ಎಂದರೆ ತಪ್ಪಾಗದು. ಇದೀಗ ಬಂಗಾರಮ್ಮನ ಮನೆಗೆ ಸ್ನೇಹಾ ಎಂಟ್ರಿ ನೀಡಿದ್ದಾಳೆ. ಮುಂದೆ ಅತ್ತೆ ಸೊಸೆ ಕೋಳಿ ಜಗಳ ಶುರುವಾಗುತ್ತಾ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

More from Filmibeat

English summary
Kannada serial puttakkana makkalu written updated on 26th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X