Puttakkana Makkalu: ಪುಟ್ಟಕ್ಕನ ತಾಳಿ ಮೇಲೆ ರಾಜೇಶ್ವರಿ ಕಣ್ಣು, ಮಾಂಗಲ್ಯ ತೆಗೆಯುತ್ತಾನಾ ಗೋಪಾಲ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡುಗರ ಮನದಲ್ಲಿ ಕುತೂಹಲ ಮನೆ ಮಾಡಿದೆ. ಪುಟ್ಟಕ್ಕ ಒಂದಲ್ಲ ಒಂದು ಇಕ್ಕಟ್ಟಿಗೆ ಸಿಲುಕಿ ಕೊಳ್ಳುತ್ತಿದ್ದಾಳೆ. ಮಗಳ ಮನೆಗೆ ಪುರುಷೋತ್ತಮನನ್ನು ಕರೆದುಕೊಂಡು ಹೋಗುತ್ತಾಳೆ., ಕೌಶಲ್ಯ ಬಳಿ ಬಹಳ ಕಟುವಾಗಿ ಪುರುಷೋತ್ತಮ ಮಾತನಾಡುತ್ತಾನೆ ಅದನ್ನು ಕೇಳಿದ ಕೌಶಲ್ಯ ಕುಂಕುಮಾತುಗಳಿಂದ ನಿಂದಿಸುತ್ತಾಳೆ.

ಬಳಿಕ ಪುರುಷೋತ್ತಮನನ್ನು ಪುಟ್ಟಕ್ಕ ಕೌಶಲ್ಯ ಮನೆಯಿಂದ ಹೊರಗೆ ನಿಲ್ಲಲು ಹೇಳುತ್ತಾಳೆ. ಆದರೆ ಪುರುಷೋತ್ತಮ ತನ್ನ ತಾಯಿಯ ಮಾತನ್ನ ಮೀರದೆ ಮನೆಯ ಹೊರಗಡೆ ಹೋಗಿ ನಿಲ್ಲುತ್ತಾನೆ. ಇನ್ನು ಕೌಸಲ್ಯ ಸಹನಾ ಕ್ಷಮೆ ಕೇಳಬೇಕು ಎಂದು ಹೇಳಿದಾಗ ಸಹನಾಗೆ ಬಹಳ ಸಿಟ್ಟು ಬರುತ್ತದೆ.

Kannada serial Puttakkana Makkalu written update on 26th October

ಆದರೆ ತನ್ನ ತಾಯಿ ಅತ್ತೆಯ ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದು ಕೇಳಿದಾಗ ಇಲ್ಲ ಎಂದು ಹೇಳಲಾಗದೆ ತನ್ನ ಅತ್ತೆ ಬಳಿ ಕ್ಷಮೆಯನ್ನು ಕೇಳುತ್ತಾಳೆ. ಅಳುತ್ತಿರುವ ಸಹನಾ ಮುಖ ನೋಡಲಾಗದೆ ಪುಟ್ಟಕ್ಕ ಮಗಳಿಗೆ ಸಮಾಧಾನ ಹೇಳಿ ತರಾತುರಿಯಲ್ಲಿ ಮನೆಗೆ ಬರುತ್ತಾಳೆ. ಆಮೇಲೆ ಮನೆಗೆ ರಾಜೇಶ್ವರಿ ಬಂದಿರುತ್ತಾಳೆ. ಪುರುಷೋತ್ತಮನನ್ನು ಕರೆದುಕೊಂಡು ಹೋದ ಪುಟ್ಟಕ್ಕಗೆ ಇದೀಗ ಬಹಳ ದೊಡ್ಡ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ರಾಜೇಶ್ವರಿ ಕೋಪದಿಂದ ಕೆಂಡಮಂಡಲಾಗಿರುತ್ತಾಳೆ.

ರಾಜೀ ಮಾತಿಗೆ ಶಾಕ್ ಆದ ಪುಟ್ಟಕ್ಕ

ಪುರುಷೋತ್ತಮ ನನ್ನ ಮಗನು ಅಥವಾ ಪುಟ್ಟಕ್ಕನ ಮಗನೋ ಎಂದು ರಾಜೇಶ್ವರಿ ಜೋರಾಗಿ ಹೇಳುತ್ತಿರುತ್ತಾಳೆ ಇದನ್ನೆಲ್ಲ ಕೇಳುತ್ತಿದ್ದ ಗೋಪಾಲ ಮಾತ್ರ ಸುಮ್ಮನಿರುತ್ತಾನೆ. ಪುಟ್ಟಕ್ಕ ರಾಜೇಶ್ವರಿ ಬಳಿ ಕ್ಷಮೆ ಕೇಳುತ್ತಾ ಇರುತ್ತಾಳೆ ನನ್ನದು ಬಹಳ ದೊಡ್ಡ ತಪ್ಪಾಗಿದೆ ನನ್ನೊಂದಿಗೆ ಕರೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು.

Kannada serial Puttakkana Makkalu written update on 26th October

ಪುರುಷೋತ್ತಮನನ್ನು ಕರೆದುಕೊಂಡು ಹೋಗಬೇಕಾಗಿ ಬಂತು ಇದಕ್ಕಾಗಿ ನನ್ನ ಕ್ಷಮೆ ಇರಲಿ ಎಂದು ರಾಜೇಶ್ವರಿ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ಗೋಪಾಲ ಮಾತ್ರ ಮೌನವಾಗಿ ಉಳಿಯುತ್ತಾನೆ. ಪುರುಷೋತ್ತಮ ಮಾತ್ರ ತಾನೇ ಹೋಗಿದ್ದೇನೆ ಎಂದು ಹೇಳಿದರು ರಾಜೇಶ್ವರಿ ಆ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗೋದಿಲ್ಲ.

ಪುಟ್ಟಕ್ಕ- ಪುರುಷೋತ್ತಮನ ಸಂಬಂಧ ಸಹಿಸದ ರಾಜಿ

ಪುರುಷೋತ್ತಮ ಆಗಾಗ ಪುಟ್ಟಕ್ಕನನ್ನು ಅವ್ವ ಅವ್ವ ಎಂದು ಕರೆದಾಗ ರಾಜಿಗೆ ಬಹಳ ಕೋಪ ಬರುತ್ತದೆ. ಆಕೆ ಈ ಪುಟ್ಟಕ್ಕನ ಕೊರಳಲ್ಲಿ ತಾಳಿ ಇದ್ದರೆ ಅಲ್ವಾ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಆಗುವುದು ಆದ ಕಾರಣ ಪುಟ್ಟಕ್ಕನ ಕೊರಳಲ್ಲಿರುವ ತಾಳಿಯನ್ನು ಆದಷ್ಟು ಬೇಗ ತೆಗೆದು ಹಾಕಬೇಕೆಂದು ಯೋಚನೆ ಮಾಡುತ್ತಿರುತ್ತಾಳೆ. ಬಳಿಕ ತನ್ನ ಗಂಡನ ಬಳಿ ಹೇಳುತ್ತಾಳೆ.

ರಾಜಿ ಮಾತಿಗೆ ಕೋಪಗೊಂಡ ಗೋಪಾಲ

ಪುರುಷೋತ್ತಮನಿಗೆ ನನಗಿಂತ ಮಲತಾಯಿಯೇ ತಾಯಿಯಾಗಿ ಹೋದಳು. ಹೆತ್ತ ತಾಯಿ ಬಗ್ಗೆ ಚೂರು ಯೋಚನೆ ಮಾಡದೆ ಇರುತ್ತಾನೆ. ಇದೇ ಕಾರಣಕ್ಕೆ ಪುಟ್ಟಕ್ಕನ ಕೊರಳಲ್ಲಿ ತಾಳಿಯನ್ನು ತೆಗೆದು ಹಾಕಿದರೆ ಪುಟ್ಟಕ್ಕಗೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ ಪುರುಷೋತ್ತಮ ಅವ್ವ ಎನ್ನಲು ಆಗಾಗೋದಿಲ್ಲ. ಆದಕಾರಣ ಕೊರಳಲ್ಲಿ ತಾಳಿಯನ್ನು ತೆಗೆದುಹಾಕಿ ಇಂದು ಜೋರಾಗಿ ಗೋಪಾಲನಿಗೆ ಹೇಳುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕಾಗೆ ಬಹಳ ಶಾಕ್ ಆಗುತ್ತದೆ.

More from Filmibeat

English summary
Puttakkana Makkalu serial October 26th update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X