Don't Miss!
- Sports
BBL 2023: ಬ್ರಿಸ್ಬೇನ್ ಹೀಟ್ ಮಣಿಸಿ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್ ಸ್ಕಾರ್ಚರ್ಸ್
- Lifestyle
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu Serial: ಗೋಪಾಲನ ಮನೆಗೆ ಹೊರಟ ಪುಟ್ಟಕ್ಕ
ಪುಟ್ಟಕ್ಕನ ಮನೆಗೆ ಆಗಮಿಸಿದ ಮೇಷ್ಟ್ರ ಮನೆಯವರು ಹೆಣ್ಣಿಗೆ ಹೂ ಮೂಡಿಸುವ ಶಾಸ್ತ್ರ ಮಾಡುವ ಸಲುವಾಗಿ ಫಲ ಪುಷ್ಪಗಳನ್ನು ತಂದಿರುತ್ತಾರೆ. ಈ ವೇಳೆ ಮೇಷ್ಟ್ರ ತಾಯಿ ಕುಹಕ ಮಾತನಾಡಿದರು. ಅದನ್ನು ಪುಟ್ಟಕ್ಕ ತಡೆದು ನಿಂತರು ಸ್ನೇಹಾ ಮಾತ್ರ ಕೇಳುವುದೇ ಇಲ್ಲ. ಇನ್ನು ಮೇಷ್ಟ್ರ ತಾಯಿ ಕೌಸಲ್ಯ ನಮ್ಮ ಹುಡುಗ ನಿಮ್ಮ ಹುಡುಗಿಯನ್ನು ಇಷ್ಟೊಂದು ಪ್ರೀತಿಸುತ್ತಾ ಇದ್ದಾನೆ ಎಂದು ನಮಗೇ ಗೊತ್ತೇ ಇರಲಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೇಷ್ಟ್ರ ತಂದೆ ಕೂಡ ಹಾಗೆ ಹೇಳುತ್ತಾರೆ ಹೌದು ಮೋಡ ಮೊದಲು ಅವನು ಹೀಗೆ ಸುಮ್ಮನೆ ಹಠ ಮಾಡುತ್ತಾನೆ ಅಂದುಕೊಂಡೆವು ಆಮೇಲೆ ಅರ್ಥ ಆಯಿತು ಎಂದು ಹೇಳಿದಾಗ ಸುಮಾ ಮೇಷ್ಟ್ರ ತಂದೆಯನ್ನು ಪ್ರಶ್ನೆ ಮಾಡುತ್ತಾಳೆ..
ಮಾವ ನಿಮಗೆ ಹೇಗೆ ಅರ್ಥ ಆಯಿತು ಎಂದು ಕೇಳುತ್ತಾಳೆ. ಹೀಗೆ ಕೇಳಿದಾಗ ಎಲ್ಲರೂ ಸುಮಾ ಮುಖವನ್ನು ನೋಡುತ್ತಾರೆ. ಬಳಿಕ ಮೇಷ್ಟ್ರ ಬಾವ ಹೇಳುತ್ತಾರೆ ಯಾಕೋ ಇವತ್ತು ನಮ್ಮ ಭಾಮೈದ ತುಂಬಾ ನಾಚಿಕೊಳ್ಳುತ್ತಾ ಇದ್ದಾನಲ್ಲ. ಎಂದಾಗ ಚೈತ್ರ ತನ್ನ ಗಂಡನ ಬಳಿ ರೀ ನೀವು ಸುಮ್ಮನೆ ಅವನ ಕಾಲು ಏಳೆಯಬೇಡಿ ಎಂದು ಹೇಳುತ್ತಾಳೆ. ಬಳಿಕ ಮೇಷ್ಟ್ರ ತಂದೆ ಏನೇನು ಶಾಸ್ತ್ರ ಇದೆ ಅದನ್ನು ಶುರು ಮಾಡೋಣ ಎಂದು ಹೇಳುತ್ತಾರೆ. ಬಳಿಕ ಪುಟ್ಟಕ್ಕ ವಿವರವಾಗಿ ಹೇಳುತ್ತಾರೆ. ಹೋದ ಬಾರಿ ಮನೆಗೆ ಬಂದಾಗ ಮಾತು ಕತೆ ಸರಿಯಾಗಿ ಆಗಿರಲಿಲ್ಲ. ಅದಕ್ಕೆ ಹೂ ಮೂಡಿಸುವ ಶಾಸ್ತ್ರದಿಂದ ಶುರು ಮಾಡೋಣ ಅಂತ ನಾನು ಕೇಳಿಕೊಂಡಿದ್ದು ನಿಮಗೆ ಎನು ಅಭ್ಯಂತರ ಇಲ್ಲ ಅಲ್ವಾ ಎಂದು ಹೇಳುತ್ತಾರೆ.

ಸಹನಾ ಮನೆಗೆ ಆಗಮಿಸಿದ ನೆಂಟರು
ಇದನ್ನು ಕೇಳಿಸಿಕೊಂಡ ಗಂಡಿನ ಕಡೆಯವರು ಹೇಳುತ್ತಾರೆ ಅಭ್ಯಂತರ ಇದ್ದರೇ ನಾವು ಬರುತ್ತಿರಲಿಲ್ಲ. ಈಗ ನಮಗೆ ಈ ಸಂಬಂಧ ಪೂರ್ತಿ ಒಪ್ಪಿಗೆ ಇದೆ ಎನ್ನುತ್ತಾರೆ. ಬಳಿಕ ಮೇಷ್ಟ್ರ ತಾಯಿ ಮೇಷ್ಟ್ರನ್ನು ನೋಡಿ ಏನೋ ಮುರಳಿ ನಿನಗೆ ಈಗ ಸಮಾಧಾನ ಅಲ್ವಾ ಎಂದಾಗ ಮುರಳಿ ನಗುತ್ತಾ ನಾಚಿ ನೀರಾಗುತ್ತಾನೆ. ಇನ್ನು ಮುರಳಿ ತಾಯಿಗೆ ಸಹನಾ ಕಂಡರೆ ಅಷ್ಟಕಷ್ಟೆ ಮುರಳಿ ಮೇಷ್ಟ್ರು ಆಕೆಯನ್ನು ಇಷ್ಟ ಪಟ್ಟರು ಎನ್ನುವ ಕಾರಣಕ್ಕೆ ಮಾತ್ರ ಆಕೆ ಒಪ್ಪಿಗೆ ನೀಡಿದ್ದಾರೆ. ಇನ್ನು ಸಹನಾಳನ್ನು ಕರೆದುಕೊಂಡು ಬರುತ್ತಾರೆ.

ರಂಗೇರಿದ ಮುರಳಿ ಮುಖ
ಇನ್ನು ಸಹನಳನ್ನು ನೋಡಿದ ಮೇಷ್ಟ್ರ ಬಾವ ಮಾತ್ರ ಜೊಲ್ಲು ಸುರಿಸುತ್ತಾ ಇರುತ್ತಾನೆ. ಸಹನಾ ಮುಡಿಗೆ ಮೇಷ್ಟ್ರ ತಾಯಿ ಹೂ ಮುಡಿಸುತ್ತಾರೆ. ಇನ್ನು ಮೇಷ್ಟ್ರ ಮನೆಯವರು ಮನೆಗೆ ಹೋಗುವ ವೇಳೆ ಕೌಸಲ್ಯ ಪುಟ್ಟಕ್ಕ ಬಳಿ ಪುಟ್ಟಕ್ಕ ಅವರೇ ಈಗ ಹೂ ಮೂಡಿಸುವ ಕಾರ್ಯಕ್ರಮಕ್ಕೆ ಹುಡುಗಿ ತಂದೆ ಬರಬೇಕುಂತ ಇಲ್ಲ ಆದರೆ ನಿಶ್ಚಿತಾರ್ಥ ಮದುವೆಗೆ ಬರಬೇಕು ಎಂದು ಹೇಳಿ ಹೊರಟು ಹೋಗುತ್ತಾರೆ. ಇದನ್ನು ಕೇಳಿ ಸ್ನೇಹಾಗೆ ಕೋಪ ಉಕ್ಕಿ ಬರುತ್ತದೆ. ಪುಟ್ಟಕ್ಕ ಬಳಿ ಅದೆಷ್ಟು ಹೇಳಿದರು ಆಕೆ ಮಾತ್ರ ನಾನು ಹೋಗಿ ಗಂಡನ ಬಳಿ ಮಾತನಾಡಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಲು ರೆಡಿ ಆದಾಗ ಸ್ನೇಹಾ ಕೋಪ ಸಹನಾ ಮೇಲೆ ತಿರುಗುತ್ತದೆ..

ಸಹನಳನ್ನು ತರಾಟೆಗೆ ತೆಗೆದುಕೊಂಡ ಸ್ನೇಹಾ
ನಿನಗೆ ಮದುವೆ ಒಂದು ಆದರೆ ಸಾಕಾ ಅಮ್ಮನಿಗೆ ಅವಮಾನ ಆದರೂ ಪರವಾಗಿ ಇಲ್ವಾ ಎಂದಾಗ ಪುಟ್ಟಕ್ಕ ಕೋಪದಿಂದ ಸ್ನೇಹ ಎಂದು ಜೋರಾಗಿ ಕರೆದು ಹೇಳುತ್ತಾರೆ. ನೀನು ಹಾಗೆಲ್ಲ ಮಾತನಾಡಿದರೆ ನಾನು ಸುಮ್ಮನೆ ಇರುವುದು ಇಲ್ಲ ನಡೀ ಒಳಗೆ ಎಂದು ಕೋಪದಿಂದ ಹೇಳುತ್ತಾರೆ. ಬಳಿಕ ಪುಟ್ಟಕ್ಕ ನಾನೇ ಹೋಗಿ ನನ್ನ ಗಂಡನನ್ನು, ರಾಜೇಶ್ವರಿಯನ್ನೂ ಒಪ್ಪಿಸುತ್ತೇನೆ ಎಂದು ಹೇಳುತ್ತಾರೆ. ಇನ್ನು ಸ್ನೇಹಾ ಕೋಪ ತಣಿದ ಬಳಿಕ ಸಹನಾ ಮಾತನಾಡುತ್ತಾ ಇರುತ್ತಾಳೆ.. ಅಮ್ಮನಿಗೆ ನಾನು ಏನೇ ಹೇಳಿದರೂ ಕೇಳುವುದು ಇಲ್ಲ. ಅದಕ್ಕೆ ನಾನು ಹೇಳಲಿಲ್ಲ. ನನಗೂ ಅಮ್ಮ ಅವರ ಮನೆ ಮುಂದೆ ಹೋಗಿ ಬೇಡುವುದು ಇಷ್ಟ ಇಲ್ಲ ಎಂದು ಹೇಳಿ ಬೇಸರ ಪಟ್ಟುಕೊಳ್ಳುತ್ತಾಳೆ. ಇದನ್ನು ನೋಡಿದ ಸ್ನೇಹಾ ನಾನು ನಿನ್ನ ಮೇಲೆ ರೇಗಿ ಬಿಟ್ಟೆ ನನ್ನ ಕ್ಷಮಿಸು ಎಂದು ಹೇಳುತ್ತಾಳೆ.

ಅಕ್ಕನ ಬಳಿ ಕ್ಷಮೆ ಕೇಳಿದ ಸ್ನೇಹಾ
ಇನ್ನು ಗೋಪಾಲನ ಮನೆಗೆ ಪುಟ್ಟಕ್ಕ ಹೊರಟೆ ಬಿಡುತ್ತಾಳೆ. ಆದರೆ ಸ್ನೇಹಾಗೆ ಪುಟ್ಟಕ್ಕನನ್ನು ಒಬ್ಬಳೇ ಕಳುಹಿಸಲು ಮನಸಿಲ್ಲದೆ ಸುಮಾಳನ್ನು ಕಳುಹಿಸುತ್ತಾಳೆ. ಸುಮಾ ಅಮ್ಮನ ಜೊತೆ ಹೋಗು ಅಲ್ಲಿ ಏನು ನಡೆಯುತ್ತದೆ ಎಂಬುವುದನ್ನು ತಿಳಿದುಕೊಂಡು ಬಾ ಎಂದು ಹೇಳಿ ಕಳುಹಿಸುತ್ತಾಳೆ. ಇತ್ತ ರಾಜೀ ಬಳಿ ಕೌಸಲ್ಯ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ದಯಮಾಡಿ ಈ ಮದುವೆ ತಡೆಯಿರಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ