Puttakkana Makkalu: ಸ್ನೇಹಾ ಮೆಸೇಜ್ ಮಾಡಿದ ಖುಷಿಯಲ್ಲಿ ಕಂಠಿ; ಕಂಠಿ ಆಡಿದ ಮಾತು ಕೇಳಿಸಿಕೊಂಡಳಾ ಬಂಗಾರಮ್ಮ?
ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಪುಟ್ಟಕ್ಕಗೆ ಸಹನಾ ನಮ್ಮ ಜೊತೆ ಇನ್ನು ಇಲ್ಲ ಎನ್ನುವ ಬೇಸರ ಕಾಡುತ್ತಿದೆ. ತನ್ನ ಅಕ್ಕ ಪಕ್ಕ ಸುಳಿದಾಡುತ್ತಿದ್ದ ಸಹನಾ ಇದೀಗ ನನ್ನ ಜೊತೆ ಇಲ್ಲ ಎಂದು ಗೊತ್ತಾದಾಗ ಬಹಳ ಬೇಸರ ಆಗುತ್ತದೆ.. ಊಟ ಮಾಡುತ್ತಾ ಇರಬೇಕಾದರೆ ಸಹನಾ ನನ್ನ ಬಳಿ ಇದ್ದಾಳೆ ಎಂದುಕೊಂಡು ಸಹನಾ ಕೆನ್ನೆ ಹಿಡಿದು ನಿಂತಿರುತ್ತಾರೆ ಇದನ್ನು ನೋಡಿದ ಸ್ನೇಹಾ ಅಮ್ಮನನ್ನು ಸಮಾಧಾನ ಮಾಡುತ್ತಾಳೆ.
ಸ್ನೇಹಾ ಅಮ್ಮನ ಬಳಿ ಅಕ್ಕ ನಿನಗೆ ಎಲ್ಲಾ ಕೆಲಸದಲ್ಲೂ ಸಮಾಧಾನ ಮಾಡುತ್ತಾ ಇದ್ದಳು, ಹಾಗೆಯೇ ನಾನು ಕೂಡ ನಿನಗೆ ಸಮಾಧಾನ ಮಾಡುತ್ತೇನೆ ಬೇಸರ ಮಾಡಿಕೊಳ್ಳಬೇಡ ಅಮ್ಮ, ಸಹನಾ ಅಕ್ಕ ಗಂಡನ ಮನೆಯಲ್ಲಿ ಬಹಳ ಕ್ಷೇಮವಾಗಿ ಇರುತ್ತಾಳೆ ಎಂದು ಧೈರ್ಯ ತುಂಬುತ್ತಾಳೆ. ಇನ್ನು ಮುರಳಿ ಮನೆಯಲ್ಲಿ ಸಹನಾಗೆ ತಾನು ಒಬ್ಬಳೇ ಎನ್ನುವ ಫೀಲ್ ಬರುತ್ತದೆ. ಆಕೆಗೆ ತನ್ನ ಗಂಡ ನನ್ನ ಜೊತೆ ಇದೀಗ ಇಲ್ಲವಲ್ಲ ನಾನು ಯಾರ ಬಳಿ ಮಾತನಾಡಲಿ ಎಂದು ಯೋಚನೆ ಮಾಡುತ್ತಾ ಇರುವಾಗ ಆಕೆಗೆ ಏನು ಮಾಡುವುದು ತಿಳಿಯಲಿಲ್ಲ. ಹಾಗೆಯೇ ಆಕೆಯ ಅಕ್ಕ ಪಕ್ಕ ನಿಂತಿದ್ದ ಹೆಂಗಸರು ಕೂಡ ಪ್ರಸ್ತದ ವಿಚಾರ ಮಾತನಾಡುತ್ತಾ ಇರುವಾಗ ಸಹನಾಗೆ ಇನ್ನೂ ಮುಜುಗರ ಆಗುತ್ತದೆ ಹಾಗೆಯೇ ನಾಚಿಕೆ ಕೂಡ ಆಗುತ್ತದೆ.

ಇನ್ನು ಮುರಳಿ ಮೇಷ್ಟ್ರ ಗೆಳೆಯರು ಎಲ್ಲರೂ ಹೊರಡಲು ಮುಂದಾದಾಗ ಆತನ ಗೆಳೆಯ ವಿಶ್ವಾಸ್ ಸ್ನೇಹಾಗೆ ಕಾಳು ಹಾಕಿರುವ ವಿಚಾರವನ್ನು ಆತನ ಗೆಳೆಯರು ಮುರಳಿ ಬಳಿ ಹೇಳಿದಾಗ ಮುರಳಿಗೆ ಅರ್ಥ ಆಗುವುದಿಲ್ಲ. ಯಾರೋ ಅದು ಎಂದು ಕೇಳುತ್ತಾನೆ. ಆದರೆ ಯಾರು ಎಂದು ಹೇಳದೆ ಸುಮ್ಮನೆ ಹೇಳಿದ್ದು ಎಂದು ಹೇಳುತ್ತಾರೆ. ಬಳಿಕ ಪ್ರಸ್ತ ಇರುವುದರಿಂದ ಮುರಳಿ ಕಾಲು ಎಳೆಯುತ್ತಾರೆ. ಇನ್ನು ಮುರಳಿ ಮೇಷ್ಟ್ರ ಗೆಳೆಯರೆಲ್ಲಾ ತಮ್ಮ ತಮ್ಮ ಊರಿಗೆ ತೆರಳಲು ಅನುವಾಗುತ್ತಾರೆ.
ಇನ್ನು ಮುರಳಿ ಮೇಷ್ಟ್ರು ಅವರನ್ನು ಕಳುಹಿಸಿ ಕೊಡಲು ಹೋಗುತ್ತಾರೆ. ಅದನ್ನು ನೋಡಿ ಸಹನಾ ಮುರಳಿಯನ್ನು ಕರೆಯುತ್ತಾಳೆ. ಆದರೆ ಮುರಳಿ ಅವರನ್ನು ಕಳುಹಿಸಿ ಈಗ ಬರುತ್ತೇನೆ ಎಂದು ಅಲ್ಲಿಂದ ಹೋಗುತ್ತಾನೆ. ಇನ್ನು ಮುರಳಿ ಹಾಗೂ ಸಹನಳನ್ನು ಪ್ರಸ್ತದ ಕೋಣೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ಅವರಿಬ್ಬರನ್ನು ಬಿಟ್ಟು ಬಾಗಿಲು ಹಾಕಿಕೊಳ್ಳುತ್ತಾರೆ. ಇದನ್ನೆಲ್ಲ ನೋಡಿ ಸಹನಾಗೆ ನಾಚಿಕೆ ಆಗುತ್ತದೆ.

ಇನ್ನು ಆಕೆಯ ಕೈಯಲ್ಲಿದ್ದ ಹಾಲು ಕುಡಿಯಬೇಕು ಎನ್ನುವಷ್ಟರಲ್ಲಿ ಮುರಳಿ ತಂದೆ ಬಾಗಿಲು ತಟ್ಟುತ್ತಾರೆ. ಇವತ್ತು ಪ್ರಸ್ತ ಆಗುವುದು ಬೇಡ ಎಂದು ಸ್ವಾಮೀಜಿ ಕರೆ ಮಾಡಿದರು, ಪ್ರಸ್ತಕ್ಕೆ ದಿನ ಹೇಳುತ್ತಾರೆ ಅಂತೆ ಅಲ್ಲಿಯವರೆಗೆ ಪ್ರಸ್ತ ಬೇಡ ಎಂದು ಹೇಳುತ್ತಾನೆ. ಅದನ್ನು ಕೇಳಿದ ಮುರಳಿಗೆ ಏನು ಹೇಳಬೇಕೋ ತಿಳಿಯದೇ ಸುಮ್ಮನೆ ಆಗುತ್ತಾನೆ. ಸಹನಾ ಚಿತ್ರ ಜೊತೆ ಮಲಗುತ್ತಾಳೆ.
ಇನ್ನು ಸ್ನೇಹಾ ಕಂಠಿಗೆ ಮೆಸೇಜ್ ಮಾಡುತ್ತಾಳೆ. ಕಂಠಿ ತಂಗಿ ಆ ಮೆಸೆಜ್ ಅನ್ನು ಅವನ ಬಳಿ ಓಡಿ ಹೇಳುತ್ತ ಇರುತ್ತಾಳೆ. ಸ್ನೇಹಾ ಕಂಠಿಗೆ ಧನ್ಯವಾದ ಹೇಳುತ್ತಾಳೆ. ಇದನ್ನು ನೋಡಿ ಕಂಠಿಗೆ ಬಹಳ ಖುಷಿ ಆಗುತ್ತದೆ. ಆತ ಖುಷಿಯಿಂದ ತೇಲಾಡುತ್ತಾನೆ. ಇದನ್ನು ನೋಡಿ ಕಂಠಿ ತಂಗಿ ವಸು ಅಣ್ಣ ಮೆಲ್ಲಗೆ ಅಮ್ಮನಿಗೆ ಎಚ್ಚರ ಆಗಿ ಬಿಡುತ್ತದೆ ಎಂದಾಗ ಅದನ್ನು ಕೇಳದೆ ಕಂಠಿ ಮಾತ್ರ ಕೊಂಚ ಜೋರಾಗಿ ಮಾತನಾಡುತ್ತಾನೆ. ಬಳಿಕ ಕಂಠಿ ಮಾತುಗಳನ್ನು ಕೇಳಿ ಬಂಗಾರಮ್ಮ ನಿದ್ದೆಯಿಂದ ಎದ್ದು ಬರುತ್ತಾರೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











