twitter
    For Quick Alerts
    ALLOW NOTIFICATIONS  
    For Daily Alerts

    Puttakkana Makkalu: ಸಹನಾ - ಮುರಳಿ ಮದುವೆಗೆ ಎದುರಾಗುತ್ತಾ ಗಂಡಾಂತರ?

    By Poorva
    |

    ಸ್ನೇಹಾ ಭೂಪತಿ ಬಳಿ ನನಗೆ ಏನಾದರು ಆದರೆ ನನ್ನ ಸೂಪರ್ ಮ್ಯಾನ್ ನನ್ನ ರಕ್ಷಣೆಗೆ ಬರುತ್ತಾರೆ ಎಂದಾಗ ಕಂಠಿಗೆ ಮೊದಲು ಅರ್ಥ ಆಗುವುದಿಲ್ಲ. ಬಳಿಕ ಸ್ನೇಹಾ ಕರೆಂಟ್ ಹೊಡೆದಾಗ ತನ್ನನ್ನು ತಾನು ರಕ್ಷಣೆ ಮಾಡಿಕೊಂಡ ಬಗ್ಗೆ ಮಾತನಾಡುತ್ತಾ ಇದ್ದಾಳೆ ಎಂದು ತಿಳಿಯುತ್ತದೆ. ಬಳಿಕ ಆತನಿಗೆ ಕೂಡ ನಾಚಿಕೆ ಆಗುತ್ತದೆ. ನಂತರ ಸ್ನೇಹಾ ಬೇರೆ ಯಾರೇ ಕಾಪಾಡಿದ್ದರೂ ನಾನು ಅವರಿಗೆ ಧನ್ಯವಾದ ಹೇಳುತ್ತಿದ್ದೆ ಆದರೆ ನಿಮಗೆ ಧನ್ಯವಾದ ಹೇಳಲು ಆಗುತ್ತಿಲ್ಲ ನೀವು ನನಗೆ ಬಹಳ ಹತ್ತಿರ ಆಗಿಬಿಟ್ಟಿದ್ದಿರಾ ಅದಕ್ಕೆ ನನಗೆ ಧನ್ಯವಾದ ಹೇಳಲು ಆಗುತ್ತಿಲ್ಲ ಎಂದು ಹೇಳಿದಾಗ ಕಂಠಿ ಮುಖ ಅರಳಿ ಬಿಡುತ್ತದೆ.

    ಆತನಿಗೆ ಬಹಳ ಖುಷಿ ಕೂಡ ಆಗುತ್ತದೆ. ಆತನಿಗೆ ಮಾತನಾಡಲು ಪದಗಳೇ ಸಿಗದಾದವು. ಈ ವೇಳೆ ಕಂಠಿ ರೂಮ್ ಬಳಿ ಬಂದು ಬಂಗಾರಮ್ಮ ಕರೆಯುತ್ತಾಳೆ. ಕಂಠಿ ಎಂದು ಬಾಗಿಲು ತಟ್ಟುತ್ತಾ ಇರುತ್ತಾಳೆ. ಈ ಧ್ವನಿ ಸ್ನೇಹಾಗೆ ಕೇಳುತ್ತದೆ ಶ್ರೀ ಅದು ಯಾರು ಎಂದು ಕೇಳಿದಾಗ ಕಂಠಿ ಅವರು ನಮ್ಮ ಗದ್ದೆಯಲ್ಲಿ ಕೆಲಸ ಮಾಡುವವರು, ಒಂದು ನಿಮಿಷ ಇರಿ ಎಂದು ಹೇಳುತ್ತಾನೆ. ಬಳಿಕ ಫೋನ್ ಸೈಡ್ ಗೆ ಇಟ್ಟು ಬಾಗಿಲು ತೆಗೆಯುತ್ತಾನೆ. ಅಮ್ಮನನ್ನು ನೋಡಿ ಏನು ಎಂದು ಕೇಳುತ್ತಾನೆ. ಅದನ್ನು ಕೇಳಿದ ಬಂಗಾರಮ್ಮ ನಿನಗಾಗಿ ಬಾದಾಮಿ ಹಾಲು ಮಾಡಿದ್ದೆ ಕುಡಿಯದೆ ಹಾಗೆ ಬಂದಿದ್ದೀಯಾ ತಗೋ ಎಂದು ಹೇಳಿ ಕೊಡುತ್ತಾಳೆ.

    ಬಳಿಕ ಮಗನ ಬಳಿ ಏನು ಮಲಗಿಕೊಂಡು ಇದ್ದೀಯಾ ಎಂದಾಗ ಕಂಠಿ ಗಾಬರಿಯಿಂದ ಹೂ ಅಮ್ಮ ಹಾಲು ಕುಡಿಯುತ್ತೇನೆ ನೀನು ಹೋಗಮ್ಮ ಎಂದು ಹೇಳುತ್ತಾನೆ. ಕಂಠಿ ಅಮ್ಮನನ್ನು ರೂಮ್‌ನಿಂದ ಹೊರ ಹಾಕಿ ಫೋನ್ ನಲ್ಲಿ ಮಾತನಾಡುತ್ತಾನೆ . ಈ ಧ್ವನಿ ಬಂಗಾರಮ್ಮ ಅವರಿಗೆ ಕೇಳಿಸುತ್ತದೆ. ಇದನ್ನೆಲ್ಲ ಕೇಳಿಸಿಕೊಂಡ ಬಂಗಾರಮ್ಮ ಮನದಲ್ಲಿ ಯಾರ ಬಳಿಯಲ್ಲಿ ಮಾತನಾಡುತ್ತಿದ್ದಾನೆ ಎಂದು ಪುನಃ ಬಾಗಿಲು ತಟ್ಟಲು ಹೋದಾಗ ಸುಮ್ಮನೆ ಯಾಕೆ ಡಿಸ್ಟರ್ಬ್ ಮಾಡುವುದು ಎಂದುಕೊಂಡು ಬಂಗಾರಮ್ಮ ಅಲ್ಲಿಂದ ಹೋಗುತ್ತಾಳೆ.

    ಕುಲದೇವರ ದರ್ಶನ ಮಾಡಿದ ಪುಟ್ಟಕ್ಕ

    ಕುಲದೇವರ ದರ್ಶನ ಮಾಡಿದ ಪುಟ್ಟಕ್ಕ

    ಇನ್ನು ಸ್ನೇಹಾ ಕಂಠೀಗೆ ಕರೆ ಮಾಡಿರುವ ಉದ್ದೇಶ ನಾಳೆ ಕುಲ ದೇವರ ದರ್ಶನ ಮಾಡಲು ಹೋಗುತ್ತಾ ಇದ್ದೇವೆ ನೀವು ಬರುತ್ತೀರಾ ಎಂದು ಕರೆಯಲು. ಇದನ್ನು ಕೇಳಿದ ಕಂಠಿ ಆಯಿತು ಎಂದು ಒಪ್ಪಿಕೊಂಡು ದೇವಾಲಯಕ್ಕೆ ಹೋಗಲು ಮರುದಿನ ತಯಾರಾಗಿ ಹೋಗುತ್ತಾನೆ. ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು, ಮುರಳಿ, ಕಂಠಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ಅಶ್ವತ್ಥ ಮರಕ್ಕೆ ಭಕ್ತರು ಏನೇ ನೆನೆದು ಕೊಂಡು ಒಂದು ತಾಯತವನ್ನು ಕಟ್ಟಿದರೆ ಅದೆಲ್ಲವನ್ನು ಆ ದೇವರು ಸಿದ್ದಿಸುತ್ತಾರೆ ಎಂಬುವುದು ಅಲ್ಲಿಯವರ ನಂಬಿಕೆ . ಇದನ್ನು ಪುಟ್ಟಕ್ಕ ಅವರ ಮಕ್ಕಳಿಗೆ ವಿವರವಾಗಿ ಹೇಳುತ್ತಾರೆ. ಇನ್ನು ಪುಟ್ಟಕ್ಕ ಅರ್ಚಕರ ಬಳಿ ಲಗ್ನ ಪತ್ರಿಕೆ ಕೊಟ್ಟು ಪೂಜೆ ಮಾಡಲು ಹೇಳುತ್ತಾರೆ. ಅರ್ಚಕರು ಪೂಜೆ ಮಾಡಿ ವಾಪಸ್ ಪ್ರಸಾದ ನೀಡಬೇಕಾದರೆ ಕಂಠಿಯನ್ನು ನೋಡಿ ಇವನನ್ನು ಎಲ್ಲೋ ನೋಡಿದ್ದೇನೆ ಎಂದು ಹೇಳಿದಾಗ ಕಂಠಿ ಏನೋ ಸಬೂಬು ಹೇಳಿ ಅಲ್ಲಿಂದ ತಪ್ಪಿಸಿಕೊಳ್ತಾನೆ.

    ಅರ್ಚಕರ ಬಳಿಯಿಂದ ತಪ್ಪಿಸಿಕೊಂಡ ಕಂಠಿ

    ಅರ್ಚಕರ ಬಳಿಯಿಂದ ತಪ್ಪಿಸಿಕೊಂಡ ಕಂಠಿ

    ಇನ್ನು ಅಶ್ವತ್ಥ ಮರದ ಹತ್ತಿರ ಸಹನಾ ಹಾಗೂ ಮುರಳಿ ತಾಯತ ಕಟ್ಟುತ್ತಾ ಇರುತ್ತಾರೆ. ಅವರಿಬ್ಬರಿಗೂ ತಾವು ಇಬ್ಬರು ಮದುವೆ ಆಗಿ ನೂರು ಕಾಲ ಚೆನ್ನಾಗಿ ಬಾಳಿ ಬದುಕಬೇಕು ಎನ್ನುವ ಆಸೆ . ಪುಟ್ಟಕ್ಕ ಕೂಡ ಅದೇ ಕೋರುತ್ತಾಳೆ. ಬಹಳ ಮೃದು ಆದ ಮನಸು ಆಕೆಯದ್ದು ಯಾರಿಗೂ ಕೆಟ್ಟದು ಮಾಡಲು ಆಕೆ ಹೋಗುವುದು ಇಲ್ಲ. ಈಗ ಆಕೆ ತನ್ನದೇ ಜೀವನ ಕಟ್ಟಲು ಹೋಗುತ್ತಾ ಇದ್ದಾಳೆ ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ದೇವರ ಬಳಿ ಕೇಳುತ್ತಾಳೆ. ಇನ್ನು ಪುಟ್ಟಕ್ಕ ದೇವರಿಗೆ ತಂದಿದ್ದ ತೆಂಗಿನ ಕಾಯಿ ಹಾಳಾಗಿ ಹೋಗಿರುತ್ತದೆ. ಇದನ್ನು ನೋಡಿದ ಅರ್ಚಕರು ಶಾಕ್ ಆಗುತ್ತಾರೆ.

    ಬಂಗಾರಮ್ಮನ ಮನೆಗೆ ಹೋದ ಪುಟ್ಟಕ್ಕ

    ಬಂಗಾರಮ್ಮನ ಮನೆಗೆ ಹೋದ ಪುಟ್ಟಕ್ಕ

    ದೇವರ ಬಳಿ ಅರ್ಚಕರು ಕೇಳುತ್ತಾರೆ. ಆ ತಾಯಿ ಅಷ್ಟೂ ದೂರದಿಂದ ನಿನಗಾಗಿ ಇದನ್ನೆಲ್ಲ ತಂದಿದ್ದಾರೆ. ಆದರೆ ನಿನಗೆ ಯಾಕೆ ತಾಯಿ ಇಷ್ಟು ಕೋಪ, ಆಕೆಯ ಮಗಳ ಮದುವೆ ಎಂದು ಬಂದಿದ್ದಾಳೆ, ದಯವಿಟ್ಟು ಆಕೆಯ ಕೈ ಬಿಡಬೇಡ ಎಂದು ದೇವರ ಬಳಿ ಕೇಳುತ್ತಾರೆ. ಇನ್ನು ಪುಟ್ಟಕ್ಕ ದೇವಾಲಯದಿಂದ ಬಂದು ನೇರವಾಗಿ ಬಂಗಾರಮ್ಮನ ಮನೆಗೆ ಹೋಗಿ ಬಂಗಾರಮ್ಮಗೆ ಲಗ್ನ ಪತ್ರಿಕೆ ಕೊಡುತ್ತಾಳೆ. ಸಹನಾ ಅವರಿಬ್ಬರ ಕಾಲು ಹಿಡಿದು ಆಶಿರ್ವಾದ ಪಡೆದುಕೊಳ್ಳುತ್ತಾ ಇರುತ್ತಾಳೆ. ಇನ್ನು ಬಂಗಾರಮ್ಮ ಬಂಗಾರದ ಕಾಯಿನ್ ಅನ್ನು ಉಡುಗೊರೆ ಆಗಿ ನೀಡುತ್ತಾಳೆ. ಆದರೆ ಪುಟ್ಟಕ್ಕ ಅದನ್ನು ನಿರಾಕರಿಸುತ್ತಾಳೆ. ಇದನ್ನು ನೋಡಿದ ಬಂಗಾರಮ್ಮ ಪುಟ್ಟಕ್ಕ ಮತ್ತು ಆಕೆಯ ಮಕ್ಕಳಿಗೆ ಸೀರೆಯನ್ನು ಉಡುಗೊರೆ ಆಗಿ ನೀಡುತ್ತಾರೆ.

    English summary
    Kannada serial puttakkana makkalu written update on 27th January
    Saturday, January 28, 2023, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X