Puttakkana Makkalu: ಸ್ನೇಹಾ ಮಾತಿಗೆ ಬೇಸರಗೊಂಡ ವಸು; ಬಂಗಾರಮ್ಮನ ಮನೆಯಲ್ಲಿ ಪರದಾಡುತ್ತಿರುವ ಸ್ನೇಹಾ
ಸ್ನೇಹಾ ಇದೀಗ ಕಂಠಿ ಮನೆಗೆ ಕಾಲಿಟ್ಟಾಗಿದೆ. ಆದರೆ ಬಂಗಾರಮ್ಮ ಮಾತ್ರ ಸ್ನೇಹಾನಾ ಕಂಡರೆ ಉರಿದು ಬೀಳುತ್ತಾಳೆ. ಇದೀಗ ವಿಧಿ ಇಲ್ಲದೆ ತನ್ನ ಮನೆಗೆ ಸ್ನೇಹಳ ಬರುವುದನ್ನು ತಡೆಯಲು ಆಗದೆ ಬಂಗಾರಮ್ಮ ಸುಮ್ಮನೆ ಕುಳಿತುಕೊಂಡೆ ಇರುತ್ತಾಳೆ. ಇನ್ನು ಬಂಗಾರಮ್ಮನನ್ನು ಪರಿಗಣನೆಗೆ ತೆಗೆದುಕೊಳ್ಳದ ಸ್ನೇಹಾ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಇನ್ನು ಯಾವುದೇ ಅಳುಕು ಇಲ್ಲದೆ ಮನೆಗೆ ಬರುತ್ತಾಳೆ ಹಾಗೆಯೇ ಆತನ ರೂಮ್ ಗೆ ಕೂಡ ಹೋಗುತ್ತಾಳೆ. ತಾನು ಹುಟ್ಟು ಸ್ವಾಭಿಮಾನಿ ಆಗಿರುವುದರಿಂದ ಮನೆಯಿಂದ ತಂದ ವಸ್ತುಗಳನ್ನು ಜೋಡಿಸುವತ್ತ ನೋಡುತ್ತಾ ಇರುತ್ತಾಳೆ. ಮನೆಯಿಂದ ತಂದ ಎಲ್ಲಾ ಸಾಮಗ್ರಿಗಳನ್ನು ಎತ್ತಿ ಇಡುವುದು ಎಲ್ಲಿ ಎಂದು ಯೋಚನೆ ಬೇರೆ ಮಾಡುತ್ತಾ ಇರುತ್ತಾಳೆ.

ಇದನ್ನೆಲ್ಲ ನೋಡಿದ ಕಂಠಿಗೆ ಏನು ಮಾಡಬೇಕು ಎಂದು ತಿಳಿಯದೇ ಸ್ನೇಹಾ ಏನೇನೆಲ್ಲ ಮಾಡುತ್ತಾ ಇರುತ್ತಾಳೆ ಅದೆಲ್ಲವನ್ನೂ ಮೌನಿ ಆಗಿ ನೋಡುತ್ತಾ ಇರುತ್ತಾನೆ. ಇನ್ನೂ ಪ್ಯಾಕ್ ಮಾಡಿರುವುದನ್ನು ಓಪನ್ ಮಾಡುವ ವೇಳೆ ಸ್ನೇಹಾ ಕೈಗೆ ಬ್ಲೇಡ್ ತಾಗುತ್ತದೆ ಅದನ್ನು ನೋಡಿದ ಕಂಠಿ ಓಡಿ ಬರುತ್ತಾನೆ
ಆದರೆ ಕಂಠಿಯನ್ನು ನೋಡಿ ಇನ್ನೂ ಕೋಪಗೊಳ್ಳುತ್ತ ಇರುತ್ತಾಳೆ ಸ್ನೇಹಾ. ಇದೆಲ್ಲವನ್ನೂ ನೋಡಿದ ಕಂಠಿ ತನ್ನ ತಂಗಿ ಬಳಿಗೆ ಬಂದು ಸ್ನೇಹಾ ಕೈಗೆ ಬ್ಲೇಡ್ ತಾಗಿಸಿಕೊಂಡಿದ್ದಾಳೆ ನಾನು ಹೋದರೆ ಬಯ್ಯುತ್ತಾ ಇರುತ್ತಾಳೆ, ನೀನೇ ಹೋಗಿ ಇದನ್ನು ಕೊಟ್ಟು ಬಾ ಎಂದು ಕಳುಹಿಸುತ್ತಾನೆ. ಇನ್ನೂ ಸ್ನೇಹಾ ಬಳಿ ಬಂದ ವಸು ಅತ್ತಿಗೆ ನಿಮಗೆ ನನ್ನ ಮೇಲೆ ಬಹಳ ಕೋಪ ಬಂದಿರಬಹುದು ಆದರೆ ನಾನು ತಪ್ಪು ಮಾಡಿದ್ದೇನೆ ಎಂದಾಗ ಸ್ನೇಹಾ ವಸು ಮೇಲೆ ಒಂಚೂರು ಸಿಟ್ಟು ಮಾಡಿಕೊಳ್ಳದೆ ವಸು ಅತ್ತಿಗೆ ನೀವು ನನ್ನನ್ನು ಅವರೇ ಇವರೇ ಎಂದೆಲ್ಲ ಕರೆಯಬೇಡಿ ನನಗೆ ಬಹಳ ಮುಜುಗರ ಆಗುತ್ತದೆ ನೀವು ನನ್ನನ್ನು ಪ್ರೀತಿಯಿಂದ ಸ್ನೇಹಾ ಎಂದು ಕರೆಯಿರಿ ಎಂದು ಹೇಳುತ್ತಾಳೆ
ಇದನ್ನು ಕೇಳಿದ ವಸು ಸುಮ್ಮನೆ ಇರುವಾಗ ಸ್ನೇಹಾಗೆ ಬ್ಲೇಡ್ ತಗುಲಿದ್ದಲ್ಲಿ ನೋವು ಆಗುತ್ತದೆ. ಇದನ್ನು ನೋಡಿದ ವಸು ಅದಕ್ಕೆ ಪ್ಲಾಸ್ಟರ್ ಹಾಕುತ್ತಾಳೆ. ಇತ್ತ ರಾಜಿ ಪುಟ್ಟಕ್ಕನನ್ನ ಬಹಳ ಗೋಳು ಹೊಯ್ದುಕೊಂಡಿರುತ್ತಾಳೆ. 45,000 ಬೇಕು ನೀನು ಬಂಗಾರಮ್ಮನ ಕೈಯಿಂದ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಬೇಕು ಎಂದೆಲ್ಲ ಕಪಟ ನಾಟಕಗಳನ್ನು ಆಡುತ್ತಾ ಇರುವಾಗ ಸಹನಾ ಅದೆಲ್ಲದಕ್ಕೆ ಬ್ರೇಕ್ ಹಾಕಿ ಒಡವೆ ಅಡ ಇಡಲು ಹೋಗುತ್ತಾಳೆ.
ಆದರೆ ಸೇಟು ಆ ಒಡವೆಯನ್ನು ನಕಲಿ ಎಂದು ಬಿಟ್ಟ. ಇನ್ನು ಸಹನಾಗೆ ತನ್ನ ನಾದಿನಿ ಮಾಡಿದ ಎಲ್ಲಾ ಕುತಂತ್ರ ಅರ್ಥ ಆಗುತ್ತದೆ. ಇನ್ನೇನು ಮಾಡುವುದು ಎಂದು ದಾರಿಯಲ್ಲಿ ನಡೆದುಕೊಂಡು ಬರುವಾಗ ಗೋಪಾಲ ಸಿಗುತ್ತಾನೆ. ತಂದೆ ಎಂದು ನಾಟಕಗಳನ್ನು ಆಡಿ 45,000 ವನ್ನಿ ಆತನ ಕೈಯಿಂದಲೇ ತೆಗೆದುಕೊಂಡು ಹೋಗಿ ರಾಜೀ ಕೈಗತೆ ಕೊಡುತ್ತಾಳೆ..


Click it and Unblock the Notifications











