Puttakkana Makkalu: ಸ್ನೇಹಾಗೆ ತಾಳಿ ಕಟ್ಟಿದ ಕಂಠಿ; ಶಾಕ್ ಆದ ಪುಟ್ಟಕ್ಕ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಬಂಗಾರಮ್ಮ ಕಂಠಿ ವಿರುದ್ದ ತಿರುಗಿ ಬೀಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಇದೀಗ ರಾಧಾ ಮನೆಗೆ ಬಂದಿದ್ದಾಳೆ. ರಾಧಾ ಅಳುತ್ತಾ ಇರುವಾಗ ಬಂಗಾರಮ್ಮನ ಸಿಟ್ಟು ನೆತ್ತಿಗೇರಿತ್ತು.
ಯಾರು ರಾಧನ ಕರೆದುಕೊಂಡು ಹೋಗಿ ಕೂಡಿ ಹಾಕಿರುವುದು ಎಂದೆಲ್ಲ ಹೇಳುತ್ತಾರೆ. ಆಗ ಮನೆಯವರೆಲ್ಲ ಎದುರು ಹಾಜರಾಗುತ್ತಾರೆ. ಆದರೆ ಕಂಠಿ ಒಬ್ಬನನ್ನು ಬಿಟ್ಟು. ಆಗ ಅಲ್ಲಿಗೆ ರಾಜಿ ಬರುತ್ತಾಳೆ. ರಾಜೇಶ್ವರಿ ರಾಧನನ್ನು ಎಲ್ಲಿಗೆ ಯಾರು ಕರೆದುಕೊಂಡು ಹೋಗಿರುವುದು ಎಂದು ನನಗೆ ಗೊತ್ತಿದೆ ಎನ್ನುತ್ರಾಳೆ.

ಕಾಳಿ ಕೂಡ ಎಲ್ಲಿಗೆ ಹೋಗಿದ್ದಾನೆ ಎಂದು ಗೊತ್ತಿಲ್ಲ ಎಲ್ಲರೂ ಕಾಳೀ ರಾಧಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಎಲ್ಲರು ಅಂದುಕೊಂಡು ಇದ್ದರು ಆದರೆ ರಾಧಾಳನ್ನು ಕರೆದುಕೊಂಡು ಹೋದದ್ದು ಬೇರೆ ಯಾರೂ ಅಲ್ಲ ಎಂದು ಹೇಳಿ ಮಾತನಾಡುವುದನ್ನು ಸ್ಟಾಪ್ ಮಾಡುತ್ತಾರೆ.
ಆಗ ಬಂಗಾರಮ್ಮ ಕೊಂಚ ಕೋಪ ಮಾಡಿಕೊಂಡು ಯಾರು ಅದು ಹೇಳು ಎಂದು ಹೇಳಿದಾಗ ರಾಜಿ ರಾಧಾ ಮತ್ತು ಅವರ ತಾಯಿಯನ್ನು ಒಳಗೆ ಕಳುಹಿಸಿ ಆಮೇಲೆ ಹೇಳಿ ಎಂದು ಹೇಳುತ್ತಾರೆ. ಆಗ ರಾಜೇಶ್ವರಿ ರಾಧಳನ್ನು ಕಿಡ್ನಾಪ್ ಮಾಡಿರುವುದು ನಿಮ್ಮ ಮಗ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮಗೆ ಶಾಕ್ ಆಗುತ್ತದೆ.
ಇನ್ನು ರಾಜಿ ಹಾಗೂ ಗೋಪಾಲ ಅಲ್ಲಿಂದ ಹೋದ ಬಳಿಕ ಕಂಠಿ ಬರುತ್ತಾನೆ. ಆಗ ಕಂಠಿಯನ್ನು ಕರೆದು ರಾಧಾ ಬಂದಿದ್ದಾಳೆ ಆಕೆಗೆ ನಿನಗೂ ನಾಳೆಯೇ ಮದುವೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿಗೆ ಶಾಕ್ ಆಗುತ್ತದೆ. ತಾನು ಸ್ನೇಹಾನ ಬಿಟ್ಟು ಬೇರೆ ಯಾರನ್ನೂ ಯಾವತ್ತೂ ಮದುವೆ ಆಗುವುದಿಲ್ಲ ಎಂದು ಶಪಥ ಮಾಡಿರುತ್ತಾನೆ.
ಇನ್ನು ಕಾಳಿಯನ್ನು ಉಳಿಸಲು ಪೊಲೀಸ್ ಬರುತ್ತಾರೆ. ಪೊಲೀಸ್‌ನನ್ನು ನೋಡಿ ರೌಡಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾರೆ. ಆ ಬಳಿಕ ಪೊಲೀಸ್ ರಾಧಾ ಹಾಗೂ ಕಾಳಿಯನ್ನು ರಕ್ಷಣೆ ಮಾಡುತ್ತಾರೆ. ಆದ ಕಾರಣ ರಾಧಾ ಮನೆಗೆ ಬರಲು ಕಾರಣ ಇಲ್ಲವಾದರೆ ಕಿಡ್ನಾಪ್ ಆದ ಜಾಗದಲ್ಲಿ ಆಕೆ ಇರಬೇಕಿತ್ತು. ಇನ್ನೂ ಪೊಲೀಸರಿಂದ ತಪ್ಪಿಸಿಕೊಂಡ ರೌಡಿಗಳು ನೇರವಾಗಿ ಕಂಠಿ ಬಳಿ ಓಡಿ ಬರುತ್ತಾರೆ.
ಇನ್ನು ಕಾಳಿ ಏನಾದರೂ ಬಾಯಿ ಬಿಟ್ಟರೆ ಎಂದು ಮುಂಗುಸಿ ರೌಡಿಗಳಿಗೆ ಸರಿಯಾಗಿ ಬಯ್ಯುತ್ತಾ ಇರುತ್ತಾರೆ, ಇನ್ನು ಮುಂಗುಸಿ ಹೇಳಿದ ಪ್ರಕಾರ ಕಂಠಿ ನೇರವಾಗಿ ಸ್ನೇಹಳನ್ನು ಮದುವೆ ಆಗಲು ಬರುತ್ತಾರೆ. ಸ್ನೇಹಾ ದೇವಸ್ಥಾನಕ್ಕೆ ಹೋಗಿ ಕೈ ಮುಗಿಯುತ್ತಾ ಇರಬೇಕಾದರೆ ಕಂಠಿ ದೇವಾಲಯದ ಬಳಿ ಬರುತ್ತಾನೆ. ಆ ಬಳಿಕ ದೇವರ ಕುತ್ತಿಗೆಯಲ್ಲಿ ಇದ್ದ ತಾಳಿಯನ್ನು ಸ್ನೇಹಾಗೆ ಕಟ್ಟುತ್ತಾನೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











