Puttakkana Makkalu: ರಾಜಿ ಮಾಡಿದ ಸಂಚಿಗೆ ಬಲಿಯಾದ ಪುಟ್ಟಕ್ಕ, ಬಂಗಾರಮ್ಮನ ಕೋಪಕ್ಕೆ ಗುರಿಯಾಗುತ್ತಾರಾ?

By Poorva

ಪುಟ್ಟಕ್ಕ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಧ ಹಾಗೂ ಆಕೆಯ ತಾಯಿಯನ್ನು ಪುಟ್ಟಕ್ಕ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಈ ವಿಚಾರ ರಾಜಿಗೆ ಗೊತ್ತಾಗಿದೆ. ಪುಟ್ಟಕ್ಕನ ಮನೆಗೆ ಹೋಗುವಂತೆ ರಾಧಾ ತಾಯಿಯ ಬಳಿ ರಾಜಿ ಈ ಮೊದಲೇ ಮಾತನಾಡಿದ್ದಳು. ಹೀಗಾಗಿಯೇ ರಾಧ ಹಾಗೂ ಆಕೆಯ ತಾಯಿ ಪುಟ್ಟಕ್ಕನ ಮನೆಗೆ ಸುಳ್ಳು ನೆಪಗಳನ್ನು ಹೇಳಿಕೊಂಡು ಬಂದು ಜಾಂಡ ಹೂಡಿರುತ್ತಾರೆ.

ಇನ್ನು ಬಂಗಾರಮ್ಮನ ಮನೆಗೆ ಹೋದ ರಾಜಿ ಪುಟ್ಟಕ್ಕನ ಬಳಿ ರಾಧ ಹಾಗೂ ಆಕೆಯ ತಾಯಿ ಇದ್ದಾರೆ ಎನ್ನುವ ವಿಚಾರವನ್ನು ಹೇಳುತ್ತಾಳೆ. ಆಗ ಬಂಗಾರಮ್ಮ ಅದನ್ನು ನಂಬುವುದಿಲ್ಲ. ರಾಜಿ ಮಾತು ಕೇಳಿ ಸ್ನೇಹಾಗೆ ಬಹಳ ಕೋಪ ಬರುತ್ತದೆ. ಆದರೆ ರಾಜಿ ಮಾತ್ರ ಸ್ನೇಹಾ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾಳೆ. ಅಮ್ಮನ ಬಗ್ಗೆ ಸ್ವಲ್ಪ ಮಾತನಾಡಿದರೆ ಸಾಕು ನೀನು ಎಲ್ಲಿದ್ದರೂ ಬಂದುಬಿಡುತ್ತೀಯಾ ಎಂದು ಸ್ನೇಹಾಗೆ ರಾಜಿ ಬೈಯುತ್ತಾಳೆ.

Kannada serial Puttakkana Makkalu written update on 27th November

ನನ್ನ ತಾಯಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಬಾರದು ಎಂದು ಸ್ನೇಹಾ ಕೂಡ ಬೈಯುತ್ತಾಳೆ. ಕೋಪದಿಂದ ಹೇಳಿದಾಗ ರಾಜಿ ಮಾತಿಗೆ ಮಾತು ಬಿಡದೆ ಜೋರಾಗಿ ಮಾತನಾಡುತ್ತಿರುತ್ತಾರೆ. ಈ ಸಮಯದಲ್ಲಿ ಬಂಗಾರಮ್ಮ ಬಹಳ ಕೋಪದಿಂದ ಇಬ್ಬರು ಸ್ವಲ್ಪ ಸುಮ್ಮನಾಗಿ ಎಂದು ರೇಗುತ್ತಾಳೆ.

ರಾಜಿ ಮಾತಿಗೆ ಸೊಪ್ಪು ಹಾಕದ ಸ್ನೇಹಾ

ರಾಜಿ ಕಡೆಗೆ ತಿರುಗಿದ ಬಂಗಾರಮ್ಮ, ಸುಳ್ಳು ಹೇಳಬೇಡ ರಾಜಿ, ನಿಜ ವಿಚಾರ ಹೇಳು ಎಂದು ಕೇಳಿದಾಗ ಅಮ್ಮಾವ್ರೇ ನಾನು ಸುಳ್ಳು ಹೇಳುತ್ತಿಲ್ಲ.. ಪುಟ್ಟಕ್ಕನ ಮನೆಯಲ್ಲಿ ಶಶಿಕಲಾ ಹಾಗೂ ರಾಧ ಇದ್ದಾರೆ ಎನ್ನುತ್ತಾಳೆ. ನಂತರ ಬಂಗಾರಮ್ಮ ಕೊಂಚ ಆಲೋಚನೆ ಮಾಡುತ್ತಾರೆ.

Kannada serial Puttakkana Makkalu written update on 27th November

ಪುಟ್ಟಕ್ಕ ಯಾಕೆ ಹಿಂಗೆ ಮಾಡಿದ್ದಾರೆ ಎಂದು ಬಂಗಾರಮ್ಮ ಪ್ರಶ್ನೆ ಮಾಡಿಕೊಳ್ಳುತ್ತಾರೆ. ಅದಕ್ಕೆ ರಾಜಿ, ರಾಧ ಈ ಮನೆಗೆ ಬಂದರೆ ಎಲ್ಲಿ ತನ್ನ ಮಗಳ ಸಂಸಾರ ಹಾಳಾಗಿ ಬಿಡುತ್ತದೆ ಎಂದು ಆಲೋಚನೆ ಮಾಡಿ ಪುಟ್ಟಕ್ಕ ಆಕೆಯನ್ನು ಮನೆಯೊಳಗೆ ಕೂಡಿ ಹಾಕಿದ್ದಾರೆ ಎಂದು ಹೇಳುತ್ತಾಳೆ. ಆಗ ಬಂಗಾರಮ್ಮಗೆ ಕೊಂಚ ಅನುಮಾನವಾಗುತ್ತದೆ. ಆದರೆ ಸ್ನೇಹಾ ಮಾತ್ರ ಅವ್ವ ಅಂಥ ಕೆಲಸ ಮಾಡಲು ಸಾಧ್ಯ ಇಲ್ಲ ಎಂದು ಹೇಳುತ್ತ ಇರುತ್ತಾಳೆ.

ಆತಂಕದಲ್ಲಿ ಪುಟ್ಟಕ್ಕ

ಊರಿನ ಬಹುತೇಕ ಜಾಗಗಳಲ್ಲಿ ಬಂಗಾರಮ್ಮ ಅವರ ಜನರು ಶಶಿಕಲಾ ಹಾಗೂ ರಾಧಾಳನ್ನ ಹುಡುಕಿಕೊಂಡು ಇರುತ್ತಾರೆ. ಪುಟ್ಟಕ್ಕಗೆ ಇದು ಬಹಳ ಭಯ ತರಿಸುತ್ತದೆ. ಬಳಿಕ ಪುಟ್ಟಕ್ಕ ಶಶಿಕಲಾ ಬಳಿ ಬಂದು ನೀವಿಬ್ಬರು ಇಲ್ಲಿ ಇರುವುದನ್ನು ಬಂಗಾರಮ್ಮನವರ ಮನೆಗೆ ಹೋಗಿ ಅವರ ಬಳಿ ನಿಜ ವಿಚಾರ ಹೇಳಿ ಬಿಡುತ್ತೇನೆ ನೀವು ಇಬ್ಬರು ಅಲ್ಲಿಗೆ ಹೋಗಿ ಎಂದು ಹೇಳುತ್ತಾಳೆ. ಆದರೆ ಶಶಿಕಲಾ ಮಾತ್ರ ಹೀಗೆ ಮಾಡಬೇಡಿ ಎಂದು ಪುಟ್ಟಕ್ಕನ ಬಳಿ ಅಂಗಲಾಚುತ್ತಾರೆ.

More from Filmibeat

English summary
Puttakkana Makkalu serial November 27th written update,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X