Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಗಳ ಮದುವೆ ಸಲುವಾಗಿ ರಾಜಿ ಕಾಲಿಗೆ ಬೀಳುತ್ತಾಳ ಪುಟ್ಟಕ್ಕ?
ಪುಟ್ಟಕ್ಕ ಯಾರ ಮಾತನ್ನೂ ಕೇಳದೆ ರಾಜೇಶ್ವರಿ ಮನೆಗೆ ಸುಮಾ ಜೊತೆ ತೆರಳುತ್ತಾಳೆ. ಸ್ನೇಹಾ ಅದೆಷ್ಟೇ ಬೇಡ ಎಂದು ಹೇಳಿದರೂ ಪುಟ್ಟಕ್ಕ ಮಾತ್ರ ನನ್ನ ಮಗಳ ಮದುವೆ ನಿರ್ವಿಘ್ನವಾಗಿ ಆಗಬೇಕು ಎಂದಾದರೆ ರಾಜೇಶ್ವರಿ ಮನೆಗೆ ಹೋಗಿ ಗೋಪಾಲನನ್ನು ಮದುವೆಗೆ ಕರೆತರಲೇ ಬೇಕು ಹಾಗೂ ಯಾರು ನಮ್ಮನ್ನು ಹಂಗಿಸುವುದು ಇಲ್ಲ ಎಂದು ಅಂದುಕೊಂಡು ರಾಜೀ ಮನೆ ಬಳಿಗೆ ಹೋಗುತ್ತಾಳೆ. ಪುಟ್ಟಕ್ಕ ಮನೆಗೆ ಬರುತ್ತಿರುವುದನ್ನು ಕಂಡ ರಾಜೀ ಅಂಗಳದಲ್ಲಿಯೇ ತಡೆದು ನಿಲ್ಲಿಸುತ್ತಾಳೆ. ಬಳಿಕ ಪುಟ್ಟಕ್ಕ ಬಳಿ ಮಾತನಾಡಲು ಬರುತ್ತಾಳೆ.
ಆ ವೇಳೆ ಈ ಚೋಟು ಮೆಣಸಿನ ಕಾಯಿಯನ್ನು ಯಾಕೆ ಕರೆದುಕೊಂಡು ಬಂದೆ ನಿನ್ನ ಎರಡನೇ ಮಗಳನ್ನು ಕರೆದುಕೊಂಡು ಬರಬೇಕಾಗಿತ್ತು ಯಾಕೆ ಕರೆದುಕೊಂಡು ಬಂದಿಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಸಹನಾ ಮನದಲ್ಲಿಯೇ ನಿನಗೆ ಅವಳೇ ಸರಿ ಎಂದುಕೊಂಡು ಪುಟ್ಟಕ್ಕನ ಬಳಿ ಸುಮಾ ಅಮ್ಮ ಅಕ್ಕನನ್ನು ಕರೆಯಬೇಕ ಎಂದು ಕೇಳಿದಾಗ ಪುಟ್ಟಕ್ಕ ಬೇಡ ಎನ್ನುತ್ತಾಳೆ. ಪಂಚಾಯಿತಿಯಲ್ಲಿ ನನ್ನ ಮರ್ಯಾದೆ ತೆಗೆದೆ ಪುಟ್ಟಕ್ಕ, ಹಾಗೆಯೇ ನನ್ನ ಐದು ಲಕ್ಷ ಕೂಡ ಹೋಯಿತು ಅದಲ್ಲದೆ ನನ್ನ ಮನೆ ಮುಂದೆ ನಿನ್ನ ಎರಡನೇ ಮಗಳು ಹಾಗೂ ಕಿರಿ ಮಗಳು ಬಂದು ಡಾನ್ಸ್ ಮಾಡುವುದೇನು ಇದೇನು ನನಗೆ ಗೊತ್ತಿಲ್ಲ ಎಂದುಕೊಂಡು ಬಿಟ್ಟಿದ್ದಿಯಾ ಎಂದೆಲ್ಲ ಹೇಳುತ್ತಾಳೆ.
ನೀನು ಹೇಳದೆ ನಿನ್ನ ಬಳಿ ಕೇಳದೆ ನಿನ್ನ ಮಕ್ಕಳು ಇಷ್ಟೆಲ್ಲ ಮುಂದುವರೆಯುತ್ತಾರ ಎಂದು ಪುಟ್ಟಕ್ಕನನ್ನು ಪ್ರಶ್ನೆ ಮಾಡುತ್ತಾಳೆ ರಾಜೀ. ಈ ವೇಳೆ ಪುಟ್ಟಕ್ಕ ಸುಮ್ಮನೆ ಇರುತ್ತಾಳೆ. ಬಳಿಕ ಏನೋ ಎಂದು ನೆಪ ಹೇಳಿದಾಗ ರಾಜೀ ಕೋಪದಿಂದ ಎಲ್ಲದಕ್ಕೂ ಉತ್ತರ ತಯಾರಿ ಮಾಡಿಕೊಂಡು ಬಂದಿದ್ದೀಯಾ ಎನ್ನುತ್ತಾಳೆ. ಗಂಡನ ಕಳುಹಿಸಿ ಕೊಡುತ್ತೇನೆ ಆದರೆ ನನ್ನದೊಂದು ಶರತ್ ಇದೆ ಎನ್ನುತ್ತಾಳೆ. ಇದನ್ನು ಕೇಳಿ ಪುಟ್ಟಕ್ಕ ಅವಕ್ಕಾಗುತ್ತಾಳೆ.

ರಾಜಿ ಮಾತಿಗೆ ಬೆಚ್ಚಿಬಿದ್ದ ಪುಟ್ಟಕ್ಕ
ಬಳಿಕ ಮಾತು ಮುಂದುವರಿಸಿದ ರಾಜಿ ನಿನ್ನ ಎರಡನೇ ಮಗಳು ಬೇರೆ ಎಲ್ಲದಕ್ಕೂ ಮುಂದೆ ಬರುತ್ತಾಳೆ ಈಗ ಎಲ್ಲಿ ಹೋಗಿ ಬಿಟ್ಟಳು ಅಕ್ಕನ ಮದುವೆಗಿಂತ ಬೇರೆ ಎನು ವಿಚಾರ ಇದೆ ಅವಳಿಗೆ ಎನ್ನುತ್ತಾಳೆ. ಮುಂದುವರಿದು ಸರಿ ನಾನು ನನ್ನ ಗಂಡನನ್ನು ಕನ್ಯಾದಾನ ಮಾಡಲು ಕೆಳುಹಿಸಿಕೊಡುತ್ತೇನೆ ಎಂದಾಗ ಪುಟ್ಟಕ್ಕನ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಖುಷಿಯಲ್ಲಿ ಇರುವಾಗ ರಾಜಿ ಪುಟ್ಟಕ್ಕನ ಭುಜ ತಟ್ಟುತ್ತಾಳೆ. ಆದರೆ ಎರಡನೆಯವಳು ಇಲ್ಲಿ ಈಗ ಬರಬೇಕು ಎಂದು ಹೇಳಿದಾಗ ಪುಟ್ಟಕ್ಕನಿಗೆ ಏನು ಹೇಳಬೇಕೆಂದು ತಿಳಿಯಲೇ ಇಲ್ಲ. ಬಳಿಕ ರಾಜಿ ಮೊದಲನೆಯವಳು ಬರಬೇಕು ಹಾಗೆಯೇ ಎರಡನೆಯವಳು ಬರಬೇಕು ಎಂದಾಗ ಸುಮಾ ಈಗಲೇ ಕರೆಯುತ್ತೇನೆ ಎನ್ನತ್ತಾಳೆ. ಆದರೆ ಪುಟ್ಟಕ್ಕ ಬೇಡ ಎಂದು ತಡೆಯುತ್ತಾಳೆ.

ಸ್ನೇಹಾಳನ್ನು ಕರೆದ ಸುಮಾ
ಮೊದಲಿಗೆ ಬೇಡ ಎಂದ ಪುಟ್ಟಕ್ಕ ನಂತರ ಸ್ನೇಹಾ ಸಹನಾಳನ್ನು ಬರ ಹೇಳಲು ಹೇಳುತ್ತಾಳೆ. ಸ್ನೇಹಾ ಅಕ್ಕನ ಬಳಿ ನಡೆದ ವಿಚಾರವನ್ನು ವಿವರಿಸಿ ಹೇಳಿ ಕರೆಯುತ್ತಾಳೆ. ಸುಮಾ ಕರೆದ ಐದು ನಿಮಿಷಕ್ಕೆ ಸ್ನೇಹಾ ಸಹನಾ ಬರುತ್ತಾರೆ. ಸ್ನೇಹಾ ಬರುವುದನ್ನು ನೋಡಿದ ಗೋಪಾಲನಿಗೆ ಭಯ ಆಗುತ್ತದೆ. ಪುಟ್ಟಕ್ಕ ಸ್ನೇಹಾ ಬಳಿ ಬಂದು ಐದು ನಿಮಿಷ ಸುಮ್ಮನೆ ಇರುವಂತೆ ಹೇಳುತ್ತಾರೆ. ಇದನ್ನು ಕೇಳಿದ ಸ್ನೇಹಾ ಸುಮ್ಮನೆ ಆಗುತ್ತಾರೆ.

ಕಾಲ ಮೇಲೆ ಕಾಲು ಹಾಕಿ ಕುಳಿತ ರಾಜಿ
ಇನ್ನು ರಾಜಿ ಅವರನ್ನು ಆಕೆಯ ಮನೆಯ ಒಳಗೆ ಕರೆದು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಸುಮ್ಮನೆ ಆಗುತ್ತಾಳೆ. ಪುಟ್ಟಕ್ಕ ರಾಜೀ ಮನೆಯ ಹೊಸಿಲ ತುಳಿದು ಬರಲು ಆಗದೆ ಸುಮ್ಮನೆ ಇರುತ್ತಾಳೆ. ಇದನ್ನು ನೋಡಿದ ರಾಜಿ ಮನೆಗೆ ಬರುವಂತೆ ಜೋರಾಗಿ ಹೇಳುತ್ತಾಳೆ.. ಜಗಲಿಯಲ್ಲಿ ಸಾಲಾಗಿ ನಿಂತುಕೊಂಡು ಬಳಿಕ ರಾಜಿ ನನ್ನ ಗಂಡನನ್ನು ಕಳುಹಿಸುತ್ತೇನೆ ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾಗೆ ಕೋಪ ಬಂದರೂ ಸುಮ್ಮನೆ ಇರುತ್ತಾಳೆ. ಇನ್ನು ಪುಟ್ಟಕ್ಕ ಮಾತ್ರ ಏನು ಮಾಡುವುದು ರಾಜೀ ಕಾಲಿಗೆ ಬೀಳದೇ ಇದ್ದರೆ ಬೇರೆ ವಿಧಿ ಇಲ್ಲ ಎಂದು ಯೋಚಿಸುತ್ತಾ ರಾಜಿಯ ಕಾಲಿಗೆ ಬೀಳಲು ಮುಂದಾಗುತ್ತಾಳೆ.