Puttakkana Makkalu: ಅಮ್ಮನನ್ನು ಎದುರು ಹಾಕಿಕೊಂಡ ಕಂಠಿಗೆ ಕಾದಿದೆ ಅಗ್ನಿ ಪರೀಕ್ಷೆ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ಇದೀಗ ಸ್ನೇಹಾಗೆ ಕಂಠಿ ತಾಳಿ ಕಟ್ಟಿಯೇ ಬಿಟ್ಟಿದ್ದಾನೆ. ಪರೀಕ್ಷೆ ಬರೆಯಲು ಹೊರಟ ಸ್ನೇಹಾ ದೇವರಿಗೆ ಕೈ ಮುಗಿದು ಬಳಿಕ ಪರೀಕ್ಷೆ ಬರೆಯಲು ತೆರಳಬೇಕು ಅಂದುಕೊಂಡಿರುತ್ತಾಳೆ. ಆದರೆ ಅಲ್ಲಿ ನಡೆದದ್ದೇ ಬೇರೆ. ಕಂಠಿ ನೇರವಾಗಿ ಸ್ನೇಹಾನಾ ಬಳಿ ಬಂದು ಆಕೆಯ ಬಳಿ ಹೇಳುತ್ತಾನೆ.
ನಾನು ಯಾವತ್ತೂ ನಿಮ್ಮವನೇ, ನನಗೆ ನೀವು ಬೇಕೆ ಬೇಕು ನೀವಿಲ್ಲ ಅಂದರೆ ನಾನು ಇಲ್ಲ, ನನ್ನ ಮನದಲ್ಲಿ ನಿಮಗೆ ಒಬ್ಬರಿಗೆ ಸ್ಥಾನ ಎಂದು ಹೇಳುತ್ತಾನೆ. ಸ್ನೇಹಾ ಅದೆಷ್ಟೇ ಮಾತನಾಡಲು ಟ್ರೈ ಮಾಡಿದರೂ ಸ್ನೇಹಾ ಮಾತಿಗೆ ಒಂಚೂರು ಗಮನ ಹರಿಸದೇ ದೇವಿಯ ಕೊರಳಲ್ಲಿ ಇದ್ದ ಮಾಂಗಲ್ಯವನ್ನು ತೆಗೆದು ಸ್ನೇಹಾ ಕುತ್ತಿಗೆಗೆ ಕಟ್ಟುತ್ತಾನೆ.

ಸ್ನೇಹಾ ಅದೆಷ್ಟೇ ತಡೆದರೂ ಆಕೆಗೆ ತಾಳಿ ಕಟ್ಟಿದ್ದಾನೆ. ಕೊನೆಗೆ ನೆತ್ತಿಗೆ ಕುಂಕುಮವನ್ನು ಹಚ್ಚಿದ್ದಾನೆ. ಕಂಠಿ ತಾಳಿ ಕಟ್ಟಿದ್ದನ್ನು ಕಂಡ ಊರವರು ನೇರವಾಗಿ ಪುಟ್ಟಕ್ಕನ ಬಳಿ ಹೇಳುತ್ತಾರೆ. ಪುಟ್ಟಕ್ಕ ಓಡಿ ಬರುವ ವೇಳೆ ಕಂಠಿ ಸ್ನೇಹಾಗೆ ತಾಳಿ ಕಟ್ಟಿ ಆಕೆಯನ್ನು ಕರೆದುಕೊಂಡು ಹೋಗಲು ರೆಡಿ ಆಗಿರುತ್ತಾನೆ.
ಆಗ ಅಲ್ಲಿಗೆ ಬಂದ ಪುಟ್ಟಕ್ಕ ಸ್ನೇಹಾ ಕೊರಳಲ್ಲಿ ತಾಳಿಯನ್ನು ಕಂಡು ಶಾಕ್ ಆಗುತ್ತಾಳೆ ಮುರಳಿ ಅದೆಷ್ಟೇ ಎಗರಾಡಿದರು ಕಂಠಿ ಮಾತ್ರ ಸುಮ್ಮನೆ ಕುಳಿತುಕೊಳ್ಳುವವನು ಅಲ್ಲ. ಆತ ನೋಡಿದ ಒಂದೇ ಲುಕ್ ಗೆ ಮುರಳಿ ದೂರ ನಿಂತುಕೊಳ್ಳುತ್ತಾರೆ. ಇನ್ನೂ ಸ್ನೇಹಳನ್ನು ಕರೆದುಕೊಂಡು ಕಂಠಿ ಹೋಗುತ್ತಾನೆ.
ಇನ್ನು ಕಾಳಿ ಮಾತ್ರ ಒಬ್ಬ ಮಿನಿಸ್ಟರ್ ಬಳಿ ಬಂದು ಸರ್ ನನಗೆ ಇವತ್ತು ದಾಂಡಿಗರು ಬೇಕೆ ಬೇಕು, ಕಂಠಿಯನ್ನು ಇವತ್ತು ಹೊಡೆದು ಹಾಕುತ್ತೇವೆ ಎಂದು ಹೇಳಿದಾಗ ಆ ಮಿನಿಸ್ಟರ್ ಮೊದಲಿಗೆ ಕೊಂಚ ದೂರ ಸರಿಯುತ್ತಾರೆ. ಆ ಬಳಿಕ ಆಯಿತು ಎಂದು ಒಪ್ಪಿಗೆಯನ್ನು ನೀಡಿ ಕಾಳಿ ಜೊತೆ ದಾಂಡಿಗರನ್ನು ಕರೆದುಕೊಂಡು ಹೋಗುತ್ತಾನೆ.
ಕಾಳಿಯನ್ನು ಕಿಡ್ನಾಪ್ ಮಾಡಿದ್ದು ಕಂಠಿ ಎಂದುಕೊಂಡ ಕಾಳಿಗೆ ಕಂಠಿ ಮೇಲೆ ವಿಪರೀತ ಸಿಟ್ಟು ಬರುತ್ತದೆ. ಇನ್ನೂ ಸ್ನೇಹಾಗೆ ಕಂಠಿ ವರ್ತನೆ ಕೊಂಚ ವಿಚಿತ್ರವಾಗಿದೆ ಎಂದು ಅನ್ನಿಸುತ್ತದೆ. ಯಾರಿಗೂ ನೋವು ಮಾಡದ ಶ್ರೀ ಎಂದು ಯಾಕೆ ಹೀಗೆ ನಡೆದುಕೊಳ್ಳುತ್ತಾರೆ ಎಂಬುವುದು ತಿಳಿಯದೇ ಆಗಿ ಹೋಗುತ್ತದೆ. ಕಂಠಿ ಜೊತೆ ಜೀಪಿನಲ್ಲಿ ಹೋಗುತ್ತಿದ್ದ ಸ್ನೇಹಾಗೆ ಬಹಳ ದುಃಖ ಆಗುತ್ತದೆ. ಜೊತೆಗೆ ಶಾಕ್ ಬೇರೆ ಆಗಿರುತ್ತದೆ.
ಆದರೂ ವಿಚಿತ್ರವೆನಿಸಿತು. ಇನ್ನು ಕಾಳಿ ಕಂಠಿ ಜೀಪನ್ನು ಅಡ್ಡ ಹಾಕುತ್ತಾನೆ. ಇನ್ನು ಕಂಠಿಯನ್ನು ಅಟ್ಯಾಕ್ ಮಾಡಲು ಬಂದ ರೌಡಿಯನ್ನು ಕಾಲಿನಿಂದಲೇ ಓದ್ದಿದ್ದನ್ನು ಕಂಡ ಸ್ನೇಹಾಗೆ ಸಿಕ್ಕಾಪಟ್ಟೆ ಶಾಕ್ ಆಗುತ್ತದೆ. ಆಗ ಕಾಳಿ ಜೋರಾಗಿ ನಾವು ಒಬ್ಬೊಬ್ಬರು ಹೋದರೆ ನಮ್ಮನ್ನು ಹೊಡೆದು ಬಿಡುತ್ತಾನೆ. ಎಲ್ಲರೂ ಒಟ್ಟಾಗಿ ಹೋಗಿ ಹೊಡಿರೋ ಎಂದು ಹೇಳುತ್ತಾನೆ. ಕಂಠಿ ಎಲ್ಲರನ್ನೂ ಹಿಗ್ಗ ಮುಗ್ಗ ಹೊಡೆಯುತ್ತಾ ಇರುವುದನ್ನು ನೋಡಿದ ಸ್ನೇಹಾಗೆ ಕಂಠಿ ಅಸಲಿ ಮುಖ ತಿಳಿಯುತ್ತದೆ.


Click it and Unblock the Notifications











