Puttakkana Makkalu: ಮುರಳಿ ಮಾತಿಗೆ ಕೋಪಗೊಂಡ ಸಹನಾಗೆ ನೋವು ಕಟ್ಟಿಟ್ಟ ಬುತ್ತಿ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ತಣಿಸುತ್ತದೆ. ಇದೀಗ ಕಂಠಿ ಸೆಮಿನಾರ್ ಕೊಡಲು ಕಾಲೇಜಿಗೆ ಬರಲು ಒಪ್ಪಿಕೊಂಡಿದ್ದಾನೆ. ಅದೆಲ್ಲ ತನ್ನ ಪ್ರೀತಿಸುತ್ತಿರುವ ಹುಡುಗಿಗಾಗಿ. ಸ್ನೇಹಾ ಹೇಳಿದಳು ಎಂಬ ಒಂದೇ ಕಾರಣಕ್ಕಾಗಿ ಕಂಠಿ ಕಾಲೇಜಿಗೆ ಹೋಗಲು ಒಪ್ಪಿಕೊಳ್ಳುತ್ತಾನ ಅದಕ್ಕೆ ಗೆಳೆಯರ ಸಾಥ್ ಬೇರೆ. ಕಾಲೇಜು ಅಂದ ಕೂಡಲೇ ಕಂಠಿಗೆ ಭಯ ಶುರು ಆಗಿ ಬಿಟ್ಟಿತು. ಸಹನಾ ಮುರಳಿ ನೆನಪಲ್ಲೇ ಇರುತ್ತಾಳೆ. ಆಕೆಗೆ ಕರೆ ಮಾಡಲು ಫೋನ್ ಕೊಡದೇ ಕೌಸಲ್ಯ ಸತಯಿಸುತ್ತಾ ಇರುತ್ತಾಳೆ.
ಇನ್ನು ಬೆಳಗ್ಗೆ ಸಹನಾ ತಿಂಡಿ ಕೂಡ ಮಾಡಿರುವುದಿಲ್ಲ. ಕೌಸಲ್ಯ ಮನೆ ಬಾಗಿಲಿಗೆ ಬಿಕ್ಷುಕ ಬರುತ್ತಾನೆ. ಕೌಸಲ್ಯ ಆ ಚಿತ್ರಾನ್ನ ಎಲ್ಲ ಬಿಕ್ಷುಕನಿಗೆ ಹಾಕಿ ಕಳುಹಿಸುತ್ತಾಳೆ. ಮಗಳು ಯಾಕೆ ಹೀಗೆ ಮಾಡಿದೆ ಅಮ್ಮ ಎಂದು ಪ್ರಶ್ನೆ ಮಾಡಿದರು ಆಕೆ ಮಾತು ಕೇಳದೆ ಸುಮ್ಮನೆ ಇರಲು ಮಗಳಿಗೆ ಹೇಳುತ್ತಾಳೆ. ಎಲ್ಲಾ ಕೆಲಸ ಮಾಡಿ ಬಂದ ಸಹನಾ ತಿಂಡಿ ಮಾಡಲು ಬರುತ್ತಾಳೆ. ಆಗ ಪಾತ್ರೆ ಎಲ್ಲಾ ಖಾಲಿ ಆಗಿ ಹೋಗಿರುತ್ತದೆ.

ಸಹನಾ ಏನೂ ಮಾತನಾಡದೆ ಸುಮ್ಮನಿರುತ್ತಾಳೆ. ಆದರೆ ಕೌಸಲ್ಯ ತಿಂಡಿ ಖಾಲಿ ಆಗಿ ಹೋಯಿತು, ಇನ್ನು ಮಧ್ಯಾಹ್ನ ಊಟ ಮಾಡಿದಾಗ ತಿನ್ನು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾಗೆ ನೋವು ಆದರೂ ತಡೆದುಕೊಂಡಿರುತ್ತಾಳೆ. ಇನ್ನು ಕೌಸಲ್ಯ ಹಾಗೂ ಆಕೆಯ ಮಗಳು ಅಳಿಯ ಕುಳಿತುಕೊಂಡಿರುವಾಗ ಚಿತ್ರ ಗಂಡ ಚಿತ್ರ ಬಳಿ.ಕಾಫಿ ಮಾಡಿಕೊಂಡು ಬರಲು ಹೇಳುತ್ತಾನೆ. ಆದಕ್ಕೆ ಚಿತ್ರ ಒಪ್ಪದೇ ಸುಮ್ಮನೆ ಕುಳಿತುಕೊಂಡಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸಹನಾ ನಾನು ಮಾಡಿಕೊಡುತ್ತೇನೆ ಎಂದು ಹೇಳಿ ಅಡುಗೆ ರೂಮ್‌ಗೆ ಹೋಗುತ್ತಾಳೆ.
ಅಸ್ತ್ರಲ್ಲಿ ಸಹನಾ ಮೊಬೈಲ್ ಗೆ ಮೆಸೇಜ್ ಬರುತ್ತದೆ. ಅದು ರೀಚಾರ್ಜ್ ಮೆಸೇಜ್. ಅದನ್ನು ನೋಡಿದ ಕೌಸಲ್ಯಗೆ ಶಾಕ್ ಆಗುತ್ತದೆ. ಯಾರು ಹಾಕಿರಬಹುದು ಎಂದು ಯೋಚನೆ ಮಾಡುತ್ತಾ ಇರುವಾಗ ಮುರಳಿ ಕರೆ ಮಾಡುತ್ತಾನೆ. ಸಹನಾ ಮೊಬೈಲನ್ನು ಎಷ್ಟು ಹೊತ್ತಿಗೆ ಕಾಲ್ ಮಾಡಿದರು ಅಮ್ಮನೇ ತೆಗೆಯುತ್ತಾ ಇರುವುದನ್ನು ನೋಡಿ ಮೇಷ್ಟ್ರಿಗೆ ಕೊಂಚ ಕಿರಿ ಕಿರಿ ಆಗಿ ಸಹನಾ ಅವರು ಎಲ್ಲಮ್ಮ ಅವರ ಫೋನ್ ನೀನು ಯಾಕೆ ಇಟ್ಟುಕೊಂಡಿದ್ದು ಎಂದಾಗ ಕೊಂಚ ಗಲಿಬಿಲಿಗೊಂಡು ಇಲ್ಲದ ಸಬೂಬು ಹೇಳಿ ಸುಮ್ಮನೆ ಆಗುತ್ತಾಳೆ.
ಆ ವೇಳೆ ಸಹನಾ ಕೈಗೆ ಫೋನ್ ಕೊಟ್ಟು ಹೀಗೆಯೇ ಮಾತನಾಡು ಎಂದು ಕೌಸಲ್ಯ ಹೇಳುತ್ತಾಳೆ. ಮುರಳಿ ಜೊತೆ ತುಂಬಾ ಜೋರು ಧ್ವನಿಯಲ್ಲಿ ಸಹನಾ ಮಾತನಾಡುತ್ತಾ ಇರುವುದನ್ನು ಕೇಳಿಸಿಕೊಂಡ ಮುರಳಿ ಏನಾಯಿತು ಎಂದು ಪ್ರಶ್ನೆ ಮಾಡುವುದರ ಒಳಗೆ ಕರೆ ಕಟ್ ಆಗಿ ಹೋಗುತ್ತದೆ. ಇನ್ನು ಕಂಠಿ ಮಾತ್ರ ತನ್ನ ಗೆಳೆಯರನ್ನು ನಂಬಿ ಬಂದಿದ್ದಾನೆ.

ಖಂಡಿತ ಈ ಬಾರಿಯ ಸೆಮಿನಾರ್ ಮಾತ್ರ ಫ್ಲಾಪ್ ಆಗುತ್ತಾ ಇತ್ತು. ಆದರೆ ಕಂಠಿ ಕೃಷಿ ಬಗ್ಗೆ ಇರುವ ಜ್ಞಾನವನ್ನು ಮಕ್ಕಳಿಗೆ ಹೇಳುತ್ತಾನೆ. ಕೆಲವೊಂದು ಬಾರಿ ಎಡವಿದರೂ ಆ ಬಳಿಕ ಆ ಮಾತನ್ನು ವಾಪಸ್ ತೆಗೆದುಕೊಂಡು ಬೇರೆಯೇ ತರ ಕ್ರಿಯೇಟ್ ಮಾಡಿ ಹೇಳುತ್ತಾನೆ. ಇನ್ನು ಇದನ್ನೆಲ್ಲ ನೋಡಿದ ಸ್ನೇಹಾ ಸಖತ್ ಇಂಪ್ರೆಸ್ ಆಗುತ್ತಾಳೆ. ತನ್ನ ಹುಡುಗನ ಬಗ್ಗೆ ಬಹಳ ಹೆಮ್ಮೆ ಪಡುತ್ತಾಳೆ. ಇನ್ನು ಬಂಗಾರಮ್ಮ ತನ್ನ ಮಗ ಎಲ್ಲಿಗೆಲ್ಲಾ ಹೋಗುತ್ತಾನೆ, ಏನು ಮಾಡುತ್ತಾನೆ ಎಂಬುವುದನ್ನು ತಿಳಿಯಲು ಲೆಕ್ಕಾಚಾರನನ್ನೆ ಚೂ ಬಿಟ್ಟಿದ್ದಾಳೆ.


Click it and Unblock the Notifications











