Puttakkana Makkalu: ಮಗನ ಜೊತೆ ಸ್ನೇಹಾಳನ್ನು ನೋಡಿ ಬಂಗಾರಮ್ಮ ಶಾಕ್

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಬಹಳ ಕುತೂಹಲದಿಂದ ಮೂಡಿ ಬರುತ್ತಿದ್ದು ನೋಡುಗರ ಮನಸೆಳೆಯುತ್ತಿದೆ. ಟಿ ಆರ್ ಪಿಯಲ್ಲಿ ಕೂಡ ಈ ಧಾರಾವಾಹಿ ಪ್ರಥಮ ಸ್ಥಾನದಲ್ಲಿದೆ. ಈ ಧಾರಾವಾಹಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ 7.30ಕ್ಕೆ ಸರಿಯಾಗಿ ಈ ಧಾರಾವಾಹಿ ಪ್ರಸಾರ ಆಗಲಿದೆ.

ಸ್ನೇಹಾ ಹಾಗೂ ಕಂಠಿ ಮದುವೆ ಆಗೋಗಿದೆ. ಬಂಗಾರಮ್ಮನ ಮನೆಗೆ ಸ್ನೇಹಳನ್ನು ಕರೆದುಕೊಂಡು ಬಂದು ಅಮ್ಮನನ್ನು ಜೋರಾಗಿ ಕರೆಯುತ್ತಾನೆ. ಮಗ ಬಂದ ಎಂದು ಖುಷಿಯಿಂದ ಮನೆ ಹೊರಗೆ ಬಂದ ಬಂಗಾರಮ್ಮಗೆ ಶಾಕ್ ಕಾದಿತ್ತು. ಮಗ ಬೇರೆ ಮದುವೆ ಮಾಡಿಕೊಂಡು ಬಂದಿದ್ದಾನೆ.

Kannada serial Puttakkana Makkalu written update on 29th june

ತನ್ನ ಗಂಡನ ತಂಗಿ ಮಗಳು ರಾಧಾಗೆ ನಾನೇನು ಹೇಳಲಿ ಎಂದೆಲ್ಲ ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ. ಹಾಗೆಯೇ ಕಂಠಿ ಮದುವೆ ಮಾಡಿಕೊಂಡು ಬಂದ ಸ್ನೇಹಾಳನ್ನು ನೋಡಿ ಕೋಪ ಉಕ್ಕಿ ಬರುತ್ತದೆ. ಕಂಠಿ ಸ್ನೇಹಳನ್ನು ಬಹಳ ಪ್ರೀತಿ ಮಾಡಿದ್ದ. ಆ ಕಾರಣಕ್ಕಾಗಿ ಸ್ನೇಹಾಳನ್ನು ಯಾವತ್ತೂ ನಾನು ಕೈ ಬಿಡುವುದು ಇಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ಇನ್ನು ಪುಟ್ಟಕ್ಕ ಜೋರಾಗಿ ಅಳುತ್ತಾ ಇರುತ್ತಾಳೆ. ತನ್ನ ಮಗಳು ಯಾರನ್ನು ಮದುವೆ ಆಗಿದ್ದಾಳೆ ಅಯ್ಯೋ ಎಂದು ಗೋಳಾಡುತ್ತಿದ್ದಾಳೆ. ಸ್ನೇಹಾ ನನ್ನ ಮಾತು ಕೇಳಿದಳು ಆದರೆ ಆತ ಯಾರು ಮಾತು ಕೇಳದೆ ಆಕೆಗೆ ತಾಳಿ ಕಟ್ಟಿ ಕರೆದುಕೊಂಡು ಹೋಗಿಯೇ ಬಿಟ್ಟನಲ್ವ ಎಂದು ಅಳುತ್ತಾ ಇರುತ್ತಾಳೆ.

ಆದರೆ ಸುಮಾ ಮಾತ್ರ ಏನು ಆಗಿಲ್ಲ ಎಂಬಂತೆ ಮಾತನಾಡಿದಾಗ ಪುಟ್ಟಕ್ಕಗೆ ಸಿಟ್ಟು ಬಂದು ಸ್ನೇಹಾ ಬಂಗಾರಮ್ಮನ ಮಗನನ್ನು ಮದುವೆ ಆಗಿರುವುದು ಎಂದು ಹೇಳಿದಾಗ ಸುಮಾ, ಸಹನಾ ಹಾಗೂ ಶಾಂತವ್ವಗೆ ಬಹಳ ಶಾಕ್ ಆಗುತ್ತದೆ. ಸುಮಗೆ ಆ ಸಮಯಕ್ಕೆ ಏನು ಹೇಳಬೇಕು ಎಂದು ತಿಳಿಯದೇ ಮೌನಕ್ಕೆ ಶರಣಾಗುತ್ತಾಳೆ.

ಇನ್ನು ಬಂಗಾರಮ್ಮ ಮಾತ್ರ ಕಿರುಚಾಡುತ್ತ ಇರುತ್ತಾಳೆ. ಕಂಠಿ ತನ್ನ ಅಮ್ಮನ ಬಳಿ ಅವ್ವ ಸೊಸೆಯನ್ನು ಕರೆದುಕೊಂಡು ಬಂದಿದ್ದೇನೆ ಮನೆ ತುಂಬಿಸಿಕೊಳ್ಳಿ ಎಂದಾಗ ಯಾರ್ಯಾರನ್ನೋ ನಾನು ಮನೆ ತುಂಬಿಸಿಕೊಳ್ಳುವುದಿಲ್ಲ ಎಂದು ಜೋರಾಗಿ ಹೇಳುತ್ತಾಳೆ. ಸ್ನೇಹಾ ಸಿಟ್ಟು ತಡೆಯದೆ ಮಾತನಾಡುತ್ತಾಳೆ. ಹೇಯ್ ಬಂಗಾರಮ್ಮ ಎಂದಾಗ ಕಂಠಿ ಮಿಸ್ಸು‌... ಎಂದು ಹೇಳುತ್ತಾನೆ. ಅದನ್ನು ಕೇಳಿದ ಸ್ನೇಹಾ ಶ್.. ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ತೆಪ್ಪಗೆ ಆಗುತ್ತಾನೆ. ಬಂಗಾರಮ್ಮನ ಮನದಲ್ಲಿ ಸ್ನೇಹಾನೆ ಕಂಠಿಯನ್ನು ಮದುವೆ ಆಗಿರುವುದು, ನನ್ನ ಮಗನದ್ದು ಏನು ತಪ್ಪು ಇಲ್ಲ ಅನ್ನುವ ಹಾಗೆ ಮಾತನಾಡುತ್ತಾ ಇರುತ್ತಾಳೆ. ಇದನೆಲ್ಲ ಕೇಳಿದ ಕಂಠಿ ಅಮ್ಮನ ಬಳಿ ನೀನು ತಿಳಿದುಕೊಂಡಿದ್ದು ಎಲ್ಲಾ ಸರಿ ಅಲ್ಲ ಎಂದೆಲ್ಲ ಹೇಳಿದರೂ ಬಂಗಾರಮ್ಮ ಬಹಳ ಕೋಪದಲ್ಲಿ ಇರುತ್ತಾಳೆ.

More from Filmibeat

English summary
Kannada serial puttakkana makkalu written updated on 29th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X