Puttakkana Makkalu: ಸಂಕಷ್ಟದಲ್ಲಿರುವ ಸಹನಾ ನೋವು ಪುಟ್ಟಕ್ಕನಿಗೆ ಅರ್ಥ ಆಗುತ್ತಾ?
ಪುಟ್ಟಕ್ಕ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾಳೆ. ತನ್ನ ಮಗಳು ಬಂದ ಹಾಗೆ ತನಗೆ ಸಾಂತ್ವನ ಹೇಳಿದ ಹಾಗೆ ಪುಟ್ಟಕ್ಕಾಗೆ ನೆನಪಾಗುತ್ತಾ ಇರುತ್ತದೆ. ಇದನ್ನು ನೋಡಿದ ಪುಟ್ಟಕ್ಕ ಮನಸಿಗೆ ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಮುರಳಿ ಆಗಮನ ಆಗುತ್ತದೆ. ಪುಟ್ಟಕ್ಕನ ಬಳಿ ಮಾತನಾಡುತ್ತಾ ಬಹಳ ಖುಷಿಯಿಂದ ಇರುತ್ತಾನೆ. ಆ ವೇಳೆ ಮೇಷ್ಟ್ರ ಬಳಿ ಸಹನಾ ಬಗ್ಗೆ ವಿಚಾರಣೆ ಮಾಡಿದಾಗ ಮೇಷ್ಟ್ರು ಕೂಡ ನಿರುತ್ತರ ನೀಡುತ್ತಾರೆ.
ಮೇಷ್ಟ್ರು ಸಹನಾ ಅವರು ನನ್ನ ಬಳಿ ಸರಿಯಾಗಿ ಮಾತನಾಡುತ್ತಾ ಇಲ್ಲ ಅವರು ನನ್ನ ಮೇಲೆ ಕೋಪ ಮಾಡಿಕೊಂಡ ಹಾಗೆ ಅನ್ನಿಸುತ್ತದೆ ಎದಾಗ ಸುಮಾ ಕೂಡ ಅಕ್ಕನ ಪರ ನಿಲ್ಲುತ್ತಾಳೆ. ಹಬ್ಬದ ದಿನ ಕೂಡ ನೀವು ಮನೆಗೆ ಹೋಗದೆ ಇದ್ದರೆ ಹೇಗೆ ಎಂದೆಲ್ಲ ಹೇಳಿ ಮುನಿಸಿಕೊಳ್ತಾಳೆ. ಅಕ್ಕ ಕೋಪ ಮಾಡಿಕೊಳ್ಳುವುದರಲ್ಲಿ ಏನು ತಪ್ಪಿಲ್ಲ ಎಂದು ಯೋಚನೆ ಮಾಡುತ್ತಾ ಇರುವಾಗ ಪುಟ್ಟಕ್ಕ ಕೂಡ ಯೋಚನೆ ಮಾಡುತ್ತಾ ಇರುತ್ತಾಳೆ.

ಸಹನಾ ಹಬ್ಬದ ಸಮಯದಲ್ಲಿ ಹೀಗೆಲ್ಲ ಕೋಪ ಮಾಡಿಕೊಂಡು ಇರುತ್ತಾಳ, ಇವಳು ಯಾಕೆ ಹೀಗೆ ಮಾಡುತ್ತಾ ಇದ್ದಾಳೆ ಯಾವತ್ತೂ ಆಕೆ ಕೋಪ ಮಾಡಿಕೊಂಡಿರುವವಳು ಅಲ್ಲ. ಆದರೆ ಇವತ್ತು ಯಾಕೆ ಹೀಗೆ ಆಡುತ್ತಾ ಇದ್ದಾಳೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಮೇಷ್ಟ್ರು ಹೋದ ಬಳಿಕ ಸ್ನೇಹಾ ತನ್ನ ಅಮ್ಮ ನಾವು ಬಹಳ ಗ್ರ್ಯಾಂಡ್ ಆಗಿ ಹಬ್ಬ ಸೆಲೆಬ್ರೇಟ್ ಮಾಡುತ್ತಾ ಇದ್ದೇವೆ ಈ ಹಬ್ಬಕ್ಕೆ ಶ್ರೀ ಅವರನ್ನು ಬರ ಹೇಳೋಣ ಎಂದಾಗ ಶ್ರೀ ನಮ್ಮ ಮನೆಯ ಹುಡುಗ ತಾನೇ ಅವನು ಹಬ್ಬಕ್ಕೆ ಬರಲಿ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಸ್ನೇಹಾ ಕಂಠಿಗೆ ಕರೆ ಮಾಡಿ ಹಬ್ಬಕ್ಕೆ ಬರಲು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಖಂಡಿತವಾಗಿಯೂ ಮನೆಗೆ ಬರುತ್ತೇನೆ ಎಂದು ಹೇಳಿದಾಗ ಸುಮಾ ಹಾಗೂ ಸ್ನೇಹಾಗೆ ಬಹಳ ಖುಷಿ ಆಗುತ್ತದೆ. ಇನ್ನು ಸಹನಾಗೆ ಪುಟ್ಟಕ್ಕ ಕರೆ ಮಾಡಿದಾಗ ಕೌಸಲ್ಯ ಕರೆ ಸ್ವೀಕರಿಸುತ್ತಾಳೆ.

ಆಕೆಗೆ ಹಣದ್ದೇ ಧ್ಯಾನ. ಹಣ ಕೊಡುವುದಾದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ನನಗೆ ಹಣ ಬೇಕು, ಹಣ ಇಲ್ಲ ಎಂದರೆ ಹಣ ಆದ ಮೇಲೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಆಕೆಗೆ ಬಹಳ ನೋವಾಗಿ ಅಳುತ್ತಾಳೆ .
ಈಕೆ ಅಷ್ಟೆಲ್ಲ ಹಣ ಕೊಟ್ಟರೂ ಕೊಟ್ಟಿಲ್ಲ ಎಂದು ಹೇಳಿ ಪದೇ ಪದೇ ಹಣ ಕೇಳಿದರೆ ಎಲ್ಲಿಂದ ಕೊಡಲಿ ಎಂದು ಬೇಸರ ಪಟ್ಟುಕೊಂಡಿರುತ್ತಾಳೆ, ಕೌಸಲ್ಯ ಮಾತ್ರ ಹಣ ಕೊಟ್ಟಿಲ್ಲ ಎಂದರೆ ನಿಮ್ಮ ಮಗಳನ್ನು ಮರೆತು ಬಿಡಿ ಎಂದು ಹೇಳಿ ಬಿಡುತ್ತಾಳೆ. ಈಗಂತೂ ಪುಟ್ಟಕ್ಕನ ಗೋಳು ಮಾತ್ರ ಹೇಳತೀರದು. ಇನ್ನು ಕಾಳಿ ಕುಡಿದು ಮಲಗಿರುತ್ತಾನೆ. ಆತನಿಗೆ ಧ್ಯಾನ ಕೂಡ ಇರುವುದಿಲ್ಲ. ಈ ವೇಳೆ ಭದ್ರ ಎನ್ನುವವ ಕರೆ ಮಾಡುತ್ತಾನೆ. ರಾಜಿ ಭದ್ರ ಕರೆ ಮಾಡುತ್ತಾ ಇದ್ದಾನೆ ಸ್ವೀಕಾರ ಮಾಡು ಎಂದು ಹೇಳುತ್ತಾಳೆ.
ಕಾಳಿ ಮೇಲೇಳಲೇ ಇಲ್ಲ. ರಾಜಿ ಮಾತ್ರ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆ ಬಳಿಕ ಕರೆ ಸ್ವೀಕಾರ ಮಾಡಿದಾಗ ರಾಜಿ ಮಾತನಾಡುತ್ತಾಳೆ. ಆದರೆ ಆ ಕಡೆಯಿಂದ ಕರೆ ಕಟ್ ಆಗಿ ಹೋಗಿರುತ್ತದೆ. ಇನ್ನು ರಾಜಿ ಕಾಳಿ ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ ಸ್ನೇಹಾ ಹಾಗೂ ಕಂಠಿ ಲವ್ ಪ್ರಪೋಸ್ ಮಾಡಿರುವುದು ಇರುತ್ತದೆ. ಅದನ್ನು ನೋಡಿದ ರಾಜೀ ಏನಿದು ಎಂದು ವಿಡಿಯೋ ನೋಡಿದಾಗ ಆಕೆಗೆ ಎಲ್ಲಾ ವಿಚಾರ ಅರ್ಥ ಆಗುತ್ತದೆ. ಮುಂದೆ ಈಕೆ ಹೊಸ ಆಟ ಕ್ರಿಯೇಟ್ ಮಾಡುವ ಸಾಧ್ಯತೆ ಇದೆ.


Click it and Unblock the Notifications