Puttakkana Makkalu: ಸ್ನೇಹಾಗೆ ಬಳೆ ತೊಡಿಸಲು ಹೋಗಿ ಪಜೀತಿಗೆ ಸಿಕ್ಕಿಹಾಕಿಕೊಂಡ ಕಂಠಿ!
ಸ್ನೇಹಾಗೆ ಬಳೆ ತೊಡಿಸಲು ಹೋಗಿ ಪಜಿತಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ ಕಂಠಿ. ಸ್ನೇಹಾಗೆ ಬಳೆ ತೋಡಿಸುತ್ತ ಇದ್ದ ಹಾಗೆ ಅಲ್ಲಿ ನೆರೆದಿದ್ದವರೆಲ್ಲರೂ ನೀವೇ ನನಗೆ ಬಳೆ ತೊಡಿಸಿ ಎಂದು ಹೇಳಿದರು. ಆದರೆ ಇದನ್ನು ಕೇಳಿದ ಕಂಠಿಗೆ ಏನು ಹೇಳಬೇಕು ಎಂದು ಅರ್ಥವಾಗದೇ ಅಯ್ಯೋ ಬಳೆಗಾರ ಬರುತ್ತಾನೆ ಎಂದು ಹೇಳ್ತಾನೆ. ಆದರೆ ಅದನ್ನು ಕೇಳಿಸಿಕೊಳ್ಳದೆ ನೀನೇ ತೊಡಿಸಪ್ಪ ಎಂದು ಒಬ್ಬರ ಮೇಲೆ ಒಬ್ಬರು ಬರತೊಡಗಿದರು.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ಕಂಠಿ ಗೆಳೆಯರ ಬಳಿ ಬಳೆಗಾರನನ್ನು ಬೇಗ ಬರಹೆಳಿ ಎನ್ನುತ್ತಾನೆ. ಬಳೆಗಾರನಿಗೆ ಓವರ್ ಡೋಸ್ ಆಗಿದೆ ಆ ಕಾರಣದಿಂದ ಬಳೆಗಾರ ಬರಲು ಆಗುತ್ತಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಎಲ್ಲಾ ಜನರಿಗೂ ಕಂಠಿ ಬಳೆ ತೊಡಿಸುತ್ತಾನೆ. ಇನ್ನು ಮುರಳಿ ಮೇಷ್ಟ್ರ ಗೆಳೆಯರು ಮೇಷ್ಟ್ರ ಬಳಿ ಇವತ್ತು ಬಳೆ ಶಾಸ್ತ್ರ ಅಲ್ವಾ ನೀನು ಹೋಗುವುದಿಲ್ವಾ ಎಂದು ಕೇಳಿದಾಗ ಅಮ್ಮ ಬೇಡ ಎಂದು ಹೇಳಿದರು ಎಂದು ಹೇಳುತ್ತಾನೆ. ಮೇಷ್ಟ್ರ ಈ ಮಾತನ್ನ ಕೇಳಿದ ಆತನ ಗೆಳೆಯರು ಜೋರಾಗಿ ನಗುತ್ತಾರೆ. ಏನಪ್ಪ ಈಗಲೂ ಅಮ್ಮನ ಮಾತು ಕೇಳುತ್ತಾ ಇದ್ದೀಯಾ ಅಲ್ವಾ ಎಂದು ಕಾಲೆಳೆಯುತ್ತಾರ. ಈ ವೇಳೆ ಮೇಷ್ಟ್ರು ಸರಿ ಹೋಗೋಣ ಎಂದುಕೊಂಡು ಎಲ್ಲರನ್ನೂ ಕರೆದುಕೊಂಡು ಪುಟ್ಟಕ್ಕನ ಮನೆಗೆ ಬರುತ್ತಾರೆ.
ಅಲ್ಲಿ ಇವತ್ತು ಬರಬೇಡ ಎಂದು ಹೇಳಿದ್ದೆ ಅಲ್ವಾ ಯಾಕೆ ಬಂದಿದ್ದು ಎಂದು ಹೇಳುತ್ತಾರೆ. ಇದನ್ನು ಕೇಳಿದ ಮೇಷ್ಟ್ರ ಗೆಳೆಯ ನಾವೇ ಕರೆದುಕೊಂಡು ಬಂದೆವು ಮದುವೆ ಅಂದ ಮೇಲೆ ಮದುಮಗ ಮೂಲೆಯಲ್ಲಿ ಕುಳಿತು ಏನು ಮಾಡುವುದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಕೌಸಲ್ಯ ಅಲ್ಲಿಂದ ಕೋಪದಿಂದ ಹೋಗುತ್ತಾಳೆ . ಇನ್ನು ಮೇಷ್ಟ್ರ ಗೆಳೆಯರನ್ನು ನೋಡಿದ ಸ್ನೇಹಾ ಸುಮಾ ಹಾಗೂ ಸಹನಾ ಅಲ್ಲಿಯೇ ನಿಂತಿರುತ್ತಾರೆ. ಮೇಷ್ಟ್ರ ಗೆಳೆಯರನ್ನು ನೋಡಿದ ಸ್ನೇಹಾ ಇಂಗ್ಲಿಷ್‌ನಲ್ಲಿ ಎರಡು ಪದ ಬಿಡ್ತಾರೆ.

ಸ್ನೇಹಾ ಬಳಿ ಕ್ಷಮೆ ಕೇಳಿದ ಮೇಷ್ಟ್ರ ಗೆಳೆಯ
ಇದನ್ನು ಕೇಳಿದ ಮೇಷ್ಟ್ರ ಗೆಳೆಯರು ಯಾರಪ್ಪ ಈ ಊರಲ್ಲಿ ಇಂಗ್ಲೀಷ್ ಮಾತನಾಡುವವರು ಎಂದಾಗ ಮೇಷ್ಟ್ರ ಗೆಳೆಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಇದನ್ನು ನೋಡಿದ ಕಂಠಿ ಸುಮ್ಮನೆ ಇರುತ್ತಾನೆ. ಇನ್ನು ಮೇಷ್ಟ್ರ ಸ್ನೇಹಿತ ಸ್ನೇಹಳನ್ನು ನೋಡಿ ಇಷ್ಟಪಟ್ಟಿರುತ್ತಾನೆ. ಆಕೆಯ ಮನವೊಲಿಸಲು ಏನು ಬೇಕಾದರೂ ಮಾಡಲು ತಯಾರಿದ್ದಾನೆ. ಆದರೆ ಸಹನಾ ಕೋಪಾಗೊಂಡಿದ್ದನ್ನು ನೋಡಿದ ಆತ ಕ್ಷಮೆ ಯಾಚಿಸುತ್ತೇನೆ. ಇದ್ದನ್ನು ನೋಡಿದ ಕಂಠಿಗೆ ಮೈ ಎಲ್ಲ ಉರಿದು ಹೋಗುತ್ತದೆ.

ಸ್ನೇಹಾ ಮಾತಿಗೆ ಕಿಡಿಕಾರಿದ ಕಂಠಿ
ಸ್ನೇಹಾ ನನಗೆ ಆ ರೀತಿ ಮಾತನಾಡುವವರನ್ನು ಕಂಡರೆ ಸಿಟ್ಟು ಬರುತ್ತದೆ, ಆದರೆ ಅಷ್ಟೇ ಬೇಗ ಆ ಸಿಟ್ಟು ಕರಗಿ ಹೋಗುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರ ಗೆಳೆಯನ ಮನದಲ್ಲಿ ಚಿಟ್ಟೆ ಹಾರಾಡಿದ ಹಾಗೆ ಆಗುತ್ತದೆ. ಆತನ ಮುಖ ಕಾಂತಿಯುತವಾಗಿ ಹೊಳೆಯುತ್ತದೆ. ಇನ್ನು ಕೌಸಲ್ಯ ಪುಟ್ಟಕ್ಕನ ಬಳಿ ಬಂದು ಏನು ಪುಟ್ಟಕ್ಕ ನಾವು ಹೇಳಿದಷ್ಟು ದುಡ್ಡು ಅರೇಂಜ್ ಆಯಿತಾ ಎಂದು ಕೇಳುತ್ತಾಳೆ.

ಹಣ ನೋಡಿ ಓಡಿ ಹೋದ ಕೌಸಲ್ಯ
ಇದನ್ನು ಕೇಳಿದ ಪುಟ್ಟಕ್ಕ ಬನ್ನಿ ಕೋಣೆಯೊಳಗೆ ಬನ್ನಿ, ನಾನು ನಿಮಗೆ ಎಲ್ಲರೆದುರು ಇದನ್ನು ಕೊಡಲು ಸಾಧ್ಯ ಇಲ್ಲ, ಆದ ಕಾರಣ ಇಲ್ಲಿಯೇ ನಾನು ಆ ಹಣವನ್ನು ಕೊಡುತ್ತಾ ಇದ್ದೇನೆ ಎಂದು ಹೇಳುತ್ತಾಳೆ. ಆ ಹಣವನ್ನು ನೋಡುತ್ತಾ ಇದ್ದ ಹಾಗೆಯೇ ಕೌಸಲ್ಯ ಅಲ್ಲಿಂದ ಹೆದರಿ ಓಡಿ ಹೋಗುತ್ತಾಳೆ. ಇದನ್ನು ಕಂಡ ಪುಟ್ಟಕ್ಕಗೆ ಏನು ಹೇಳಬೇಕೆಂದು ತೋಚದೇ ಸುಮ್ಮನೆ ಇರುತ್ತಾಳೆ. ಇತ್ತ ಕಾಳಿ ಮಾತ್ರ ನಾನೇ ಸಹನಾಳನ್ನು ಮದುವೆ ಆಗುವುದು ಬೇರೆ ಯಾರು ಮದುವೆ ಆಗಲು ಸಾಧ್ಯವೇ ಇಲ್ಲ, ನಾನೇ ಆಗುತ್ತೇನೆ ಎಂದು ಹೇಳಿದಾಗ ಗೋಪಾಲ ಏನೋ ಒಂದು ಪ್ಲಾನ್ ಮಾಡಿ ಮಹಡಿ ಮನೆಗೆ ಕರೆದುಕೊಂಡು ಕಂಠಿಗೆ ಫುಲ್ ಕುಡಿಸಿ ಮಲಗಿಸಿಬಿಡುತ್ತಾರೆ.

ಕಾಳಿ ಆಟಕ್ಕೆ ಬ್ರೇಕ್ ಹಾಕಿದ ಗೋಪಾಲ
ಇದನ್ನು ನೋಡಿದ ಪುರುಷೋತ್ತಮ ಹಾಗೂ ಗೋಪಾಲ ಸಹನಳನ್ನು ನಿನಗೆ ಮದುವೆ ಮಾಡಿ ಕೊಡುವುದಿಲ್ಲ ಎಂದು ಅಲ್ಲಿಂದ ಹೋಗುತ್ತಾರೆ. ಇನ್ನು ಬಂಗಾರಮ್ಮ ಕಂಠಿಗೆ ಕರೆ ಮಾಡಿ ಇಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ ಅಲ್ವಾ ಎಂದೆಲ್ಲ ಹೇಳಿದಾಗ ಕಂಠಿ ಪುಟ್ಟಕ್ಕನ ಮನೆಯಲ್ಲಿ ಇರುವುದಾಗಿ ಹೇಳುತ್ತಾರೆ. ಇದನ್ನು ಕೇಳಿದ ಬಂಗಾರಮ್ಮ ಸುಮ್ಮನೆ ಆಗುತ್ತಾರೆ. ಈ ವೇಳೆ ಪುಟ್ಟಕ್ಕ ಬಂಗಾರಮ್ಮಗೆ ಕರೆ ಮಾಡುತ್ತಾರೆ. ಕಂಠಿಗೆ ಮಾಡಿದ ಕರೆಯನ್ನು ಕಟ್ ಮಾಡಿ ಪುಟ್ಟಕ್ಕನ ಬಳಿ ಮಾತನಾಡುತ್ತಾರೆ. ಪುಟ್ಟಕ್ಕ ಅರಶಿನ ಶಾಸ್ತ್ರಕ್ಕೆ ಬರಲು ಹೇಳಿದಾಗ ಬಂಗಾರಮ್ಮ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ. ಬಳಿಕ ಬಂಗಾರಮ್ಮ ಪುಟ್ಟಕ್ಕನ ಬಳಿ ನನ್ನ ಮಗ ಕಂಠಿ ಏನಾದರು ಅಲ್ಲಿದ್ದನ ಎಂದಾಗ ಪುಟ್ಟಕ್ಕ ಇಲ್ಲ ಎಂದು ಹೇಳುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











