Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Puttakkana Makkalu serial: ಪುಟ್ಟಕ್ಕನ ಮನೆಗೆ ಆಗಮಿಸಿದ ಮೇಷ್ಟ್ರ ತಂದೆ ತಾಯಿ
ಪುಟ್ಟಕ್ಕನ ಮನೆಯಲ್ಲಿ ಇದೀಗ ಹಬ್ಬದ ವಾತಾವರಣ ಸೃಷ್ಟಿ. ನಿಶ್ಚಿತಾರ್ಥದ ಸಂಭ್ರಮ ಮನೆ ಮಾಡಿದೆ. ಸಹನಾ ನಿಶ್ಚಿತಾರ್ಥವನ್ನು ಬಹಳ ಅದ್ದೂರಿಯಾಗಿ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಪುಟ್ಟಕ್ಕ. ಸಣ್ಣ ವಯಸ್ಸಿನಿಂದಲೂ ಅವಳಿಗಾಗಿ ನಾನೇನು ಮಾಡಿಕೊಡಲಿಲ್ಲ, ಅವಳಾಗಿ ಇದುವರೆಗೂ ಬಾಯಿಬಿಟ್ಟು ಕೇಳಿಲ್ಲ ಅದಕ್ಕಾಗಿ ತಾನು ಆಕೆಯ. ಮದುವೆಯನ್ನಾದರೂ ಅದ್ದೂರಿಯಾಗಿ ಮಾಡಬೇಕು ಎಂಬುವುದು ಪುಟ್ಟಕ್ಕನ ಆಸೆ ಇನ್ನು ಮುರಳಿ ಮೇಷ್ಟ್ರು ಬಂದು ಹೋದ ಬಳಿಕ ಪುಟ್ಟಕ್ಕನ ಮನೆಯಲ್ಲಿ ನಿಶ್ಚಿತಾರ್ಥದ ಕೆಲಸ ಜೋರಾಗಿಯೇ ನಡೆಯುತ್ತಿದೆ .
ಇದೀಗ ಪುಟ್ಟಕ್ಕ ಹಾಗೂ ಅವರ ಮಕ್ಕಳು ಸಹನಾಗೆ ಯಾವ ಸೀರೆ ಚೆನ್ನಾಗಿ ಕಾಣಿಸಬಹುದು ಎಂದುಕೊಂಡು ಆನ್ ಲೈನ್ ನಲ್ಲಿ ನೋಡುತ್ತಾ ಇರುತ್ತಾರೆ. ಈ ವೇಳೆ ಸ್ನೇಹಾ ತಾಯಿ ಬಳಿ ಒಂದು ಸೀರೆಯನ್ನು ತೋರಿಸಿ ಅಮ್ಮ ಈ ಕಲರ್ ಚೆನ್ನಾಗಿ ಇದೆಯಲ್ಲ ಎಂದಾಗ ಸಹನಾ ಹಾಗೂ ಪುಟ್ಟಕ್ಕ ಇದ್ಯಾವುದೂ ಚೆನ್ನಾಗಿಲ್ಲ ನೀನು ಬೇರೆ ತೋರಿಸು ಎಂದು ಹೇಳುತ್ತಾರೆ. ಸ್ನೇಹಾ ಇನ್ನೊಂದು ಸೀರೆಯನ್ನು ತೋರಿಸುತ್ತಾಳೆ. ಆಗ ಆ ಸೀರೆ ಪುಟ್ಟಕ್ಕಗೆ ಬಹಳ ಹಿಡಿಸುತ್ತದೆ. ಇನ್ನು ಆ ಕಲರ್ ನಲ್ಲಿ ಬೇರೆ ಇದ್ದರೆ ತೋರಿಸಿ ಎಂದೆಲ್ಲ ಹೇಳುತ್ತಾರೆ. ಹೀಗೆ ಸೀರೆಯನ್ನು ಸೆಲೆಕ್ಟ್ ಮಾಡುತ್ತ ಇರುತ್ತಾರೆ. ಈ ವೇಳೆ ಸುಮಾ ಕೂಡ ಆಕೆಗೆ ಅಕ್ಕನ ನಿಶ್ಚಿತಾರ್ಥದಲ್ಲಿ ಹಾಕಿಕೊಳ್ಳಲು ಡ್ರೆಸ್ ಹುಡುಕುತ್ತಾ ಇರುತ್ತಾರೆ.
ಈ ವೇಳೆ ಒಂದು ಡ್ರೆಸ್ ಸುಮಾಗೆ ಬಹಳ ಹಿಡಿಸುತ್ತದೆ. ಇದನ್ನು ಅಮ್ಮನಿಗೆ ತೋರಿಸಿ ಅಮ್ಮ ನನಗೆ ಈ ಡ್ರೆಸ್ ಬಹಳ ಚೆನ್ನಾಗಿ ಇದೆ ಎಂದು ಹೇಳಿದಾಗ ಪುಟ್ಟಕ್ಕ ನಿನಗೆ ಯಾಕೆ ಇಂತಹ ಡ್ರೆಸ್ ಸುಮ್ಮನಿರು, ಎಷ್ಟು ಆ ಡ್ರೆಸ್ ಎಂದು ಕೇಳುತ್ತಾರೆ. ಅದಕ್ಕೆ ಸುಮಾ 13000 ಎಂದು ಹೇಳುತ್ತಾಳೆ. ಅದನ್ನು ಕೇಳಿದ ಕೂಡಲೇ ಪುಟ್ಟಕ್ಕ ಏನೇ ಇಷ್ಟೊಂದು ರೇಟಾ ಎಂದು ಜೋರಾಗಿ ಕೆಮ್ಮುತ್ತಾರೆ. ಆ ಡ್ರೆಸ್ ಬೆಲೆ ಕೇಳಿ ಸ್ನೇಹಾಗೆ ಕೂಡ ಶಾಕ್ ಆಗುತ್ತದೆ. ಇನ್ನು ಪುಟ್ಟಕ್ಕ ಸಹನಾ ಬಳಿ ಏನೇ ಇದು ನಿನ್ನ ಮದುವೆನಾ ಅಥವಾ ನಿನ್ನ ಅಕ್ಕನ ಮದುವೆನಾ ಎಂದು ಕೇಳುತ್ತಾರೆ. ಇದನ್ನು ಕೇಳಿದ ಸುಮಾ ಅಕ್ಕನ ಮದುವೆಗೆ ಇನ್ನೂ ನಾಲಕ್ಕು ಜೊತೆ ಡ್ರೆಸ್ ತೆಗೆದುಕೊಳ್ಳಬೇಕು ಎಂದುಕೊಂಡು ಇದ್ದೇನೆ ಎನ್ನುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ.

ಶಾಕ್ ಆದ ಪುಟ್ಟಕ್ಕ
ಈ ವೇಳೆ ಬಂಗಾರಮ್ಮ ಕರೆ ಮಾಡುತ್ತಾರೆ. ಈ ವೇಳೆ ಕುಪಿತಗೊಂಡ ಸ್ನೇಹಾ ಏನಮ್ಮ ನಿನಗೆ ಬಂಗಾರಮ್ಮ ಇನ್ನೂ ಪದೇ ಪದೇ ಕರೆ ಮಾಡುತ್ತಾ ಇರುತ್ತಾರೆ ಏನು ವಿಚಾರ ಎಂಬುವುದನ್ನು ಕೇಳುತ್ತಾಳೆ. ಇದಕ್ಕೆ ಪುಟ್ಟಕ್ಕ ಸುಮ್ಮನಿರು ಎಂದು ಹೇಳಿದರೂ ಕೇಳದ ಸ್ನೇಹಾ ಗಟ್ಟಿ ಧ್ವನಿ ಇಟ್ಟು ಮಾತನಾಡು ಎಂದು ಹೇಳಿದಾಗ ಲೌಡ್ ಸ್ಪೀಕರ್ ಇಟ್ಟು ಮಾತನಾಡುತ್ತಾರೆ.

ಪುಟ್ಟಕ್ಕಗೆ ಕರೆ ಮಾಡಿದ ಬಂಗಾರಮ್ಮ
ಪುಟ್ಟಕ್ಕ ಗಂಡಿನ ಕಡೆಯವರು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಟ್ಟ ಹಾಗೆ ಕಾಣುತ್ತಿದೆ. ಆದರೂ ಏನಾದರು ಕಿರಿ ಕಿರಿ ಮಾಡಿದರೆ ಹೇಳಿ ಎಂದು ಬಂಗಾರಮ್ಮ ಹೇಳುತ್ತಾಳೆ. ಬಳಿಕ ನನಗೂ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬರಲು ಆಸೆ ಇದೆ, ಆದರೆ ಅದು ಸಾಧ್ಯ ಆಗಿಲ್ಲ ಕೂಡ. ಆದುದರಿಂದ ನನ್ನ ಮಗ ಹಾಗೂ ಮಗಳು ಬರುತ್ತಾರೆ ಎಂದು ಹೇಳುತ್ತಾಳೆ. ಬಳಿಕ ಪುಟ್ಟಕ್ಕನ ಕುಶಲೋಪರಿ ವಿಚಾರಣೆ ಮಾಡಿ ಫೋನ್ ಇಡುತ್ತಾರೆ. ಇನ್ನು ಇದನ್ನು ಕೇಳಿಸಿಕೊಂಡ ಸ್ನೇಹಾ ಏನು ಬಂಗಾರಮ್ಮ ಅವರ ಮಗ ಬರುತ್ತಾನ ಬರಲಿ ಅವನಿಗೆ ಬುದ್ದಿ ಹೇಳಿ ತಿದ್ದುತ್ತೇನೆ ಎಂದು ಹೇಳುತ್ತ ಇರುತ್ತಾಳೆ.

ಕಂಠಿಯನ್ನು ನೋಡಿ ಸುಮಾ ಶಾಕ್
ಇನ್ನು ಸುಮಾ ಹಾಲ್‌ನ ಎದುರುಗಡೆ ಓದುತ್ತಾ ಇರುತ್ತಾಳೆ, ಈ ವೇಳೆ ದೊಡ್ಡ ಕಾರು ಬಂದು ನಿಲ್ಲುತ್ತದೆ. ಇದರಿಂದ ಕಂಠಿ ಇಳಿಯುವುದನ್ನು ಕಂಡು ಮನೆ ಮಂದಿಗೆ ಶಾಕ್ ಆಗುತ್ತದೆ. ಇನ್ನು ಪುಟ್ಟಕ್ಕನ ಮನೆಗೆ ಮೇಷ್ಟ್ರ ತಾಯಿ ಹಾಗೂ ತಂದೆ ಬರುತ್ತಾರೆ. ಪುಟ್ಟಕ್ಕನ ಬಳಿ ಪ್ರತಿಯೊಂದನ್ನೂ ಹೇಳುತ್ತಾರೆ. ನಿಶ್ಚಿತಾರ್ಥ ಎಲ್ಲಿ ಮಾಡಬೇಕು ಅಂದುಕೊಂಡು ಇದ್ದೀರಿ ಎಂದು ಕೌಸಲ್ಯ ಕೇಳುತ್ತಾಳೆ. ಅದಕ್ಕೆ ಪುಟ್ಟಕ್ಕ ಮನೆಯಲ್ಲಿ ಮಾಡೋಣ ಅದುಕೊಂಡು ಇದ್ದೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕೌಸಲ್ಯ ನಿಶ್ಚಿತಾರ್ಥ ಕಲ್ಯಾಣ ಮಂಟಪದಲ್ಲಿ ಮಾಡಬೇಕು ಅಂದುಕೊಂಡು ಇದ್ದೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪುಟ್ಟಕ್ಕ ಸರಿ ಎಂದು ಹೇಳುತ್ತಾರೆ.

ಪುಟ್ಟಕ್ಕನ ಮನೆಗೆ ಆಗಮಿಸಿದ ಮೇಷ್ಟ್ರ ಹೆತ್ತವರು
ಪುಟ್ಟಕ್ಕನ ಬಳಿ ಕೌಸಲ್ಯ ಉಂಗುರ ಕೂಡ ನೀವೇ ಮಾಡಿಸಿ ಬಿಡಿ ಎಂದು ಹೇಳಿ, ಇದೆಲ್ಲವನ್ನೂ ನಾವೇ ಮಾಡಿಸಿದ್ದು ಎಂದು ಎಲ್ಲೂ ಹೇಳಬೇಡಿ ಎಲ್ಲಾ ಗಂಡಿನ ಕಡೆಯವರೆ ಖರ್ಚು ಮಾಡಿದ್ದು ಎಂದು ಹೇಳಬೇಕು ಎಂದು ಹೇಳಿ ಅಲ್ಲಿಂದ ಗಂಡ ಹೆಂಡತಿ ಹೋಗುತ್ತಾರೆ. ಆದರೆ ಪುಟ್ಟಕ್ಕ ಏನು ಮಾಡುವುದು ಎಂದು ಯೋಚನೆ ಮಾಡುತ್ತಾಳೆ