Puttakkana Makkalu: ಸಂಕಷ್ಟಕ್ಕೆ ಸಿಲುಕಿದ ಪುಟ್ಟಕ್ಕ; ಪುಟ್ಟಕ್ಕನ ಮನೆಗೆ ಗೂಂಡಾಗಳನ್ನು ಕರೆದೊಯ್ದ ರಾಜಿ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸಿಗೆ ಖುಷಿ ನೀಡಿದೆ. ಪುಟ್ಟಕ್ಕ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ರಾಜೇಶ್ವರಿ ಹೆಸರಿಗೆ ತನ್ನ ಆಸ್ತಿಯನ್ನು ಬರೆದಿದ್ದಾಳೆ. ಆದರೆ ಇದು ಆದಷ್ಟು ಬೇಗ ಪುಟ್ಟಕ್ಕನ ಪಾಲಿಗೆ ಉರುಳು ಆಗುತ್ತೆ ಎಂದು ಪುಟ್ಟಕ್ಕ ತಿಳಿದಿರುವುದಿಲ್ಲ. ತನ್ನ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ಬಳಿಕ ಆಕೆಯ ನೆನಪಲ್ಲಿ ಇರುವ ಪುಟ್ಟಕ್ಕಗೆ ರಾಜೇಶ್ವರಿ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾಳೆ.
ಪುರುಷೋತ್ತಮ ಪುಟ್ಟಕ್ಕ ಬಳಿ ಅಮ್ಮ ಇವತ್ತು ಮನೆಗೆ ಬರುತ್ತಾರೆ ಎಂದೆಲ್ಲ ಹೇಳಿದ ಬಳಿಕ ಪುಟ್ಟಕ್ಕಗೆ ಬಹಳ ಭಯ ಆಗುತ್ತದೆ. ಈ ಸಮಯದಲ್ಲಿ ಸ್ನೇಹಾ ಸುಮಾ ಮನೆಯಲ್ಲಿ ಇಲದೇ ಇರುವುದು ಒಳ್ಳೆಯದೇ ಆಯಿತು ಎಂದುಕೊಂಡು ಇರಬೇಕಾದರೆ ಶಾಂತ ಬರುತ್ತಾಳೆ. ಪುಟ್ಟಕ್ಕನ ಬಳಿ ಶಾಂತ ಏನಾಯಿತು ಪುಟ್ಟಕ್ಕ ಯಾಕೆ ಹೀಗೆಲ್ಲ ಯೋಚನೆ ಮಾಡುತ್ತಾ ಇದ್ದೀಯಾ ಎಂದಾಗ ಶಾಂತಕ್ಕನ ಬಳಿ ನಡೆದ ಎಲ್ಲಾ ವಿಚಾರವನ್ನು ಹೇಳುತ್ತಾಳೆ. ಅದನ್ನು ಕೇಳಿದ ಶಾಂತಕ್ಕಗೆ ಶಾಕ್ ಆಗುತ್ತದೆ.

ಎಂತಹ ಕೆಲಸ ಮಾಡಿದೆ ಪುಟ್ಟಕ್ಕ ಎಂದೆಲ್ಲ ಹೇಳಿದಾಗ ಪುಟ್ಟಕ್ಕ ಶಾಂತ ರಾಜೀ ಬಳಿ.ಕೊಂಚ ಸಮಯ ಕೇಳುತ್ತೀನೆ, ಆಸ್ತಿ ಬೇಕಾದರೆ ಆಕೆಯ ಹೆಸರಿನಲ್ಲಿ ಇರಲಿ ಆದರೆ ಮನೆ ಖಾಲಿ ಮಾಡಲು ಹೇಳುವುದು ಬೇಡ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಇಷ್ಟು ಹೇಳುತ್ತ ಇರಬೇಕಾದರೆ ಅಲ್ಲಿಗೆ ರಾಜೀ ಬರುತ್ತಾಳೆ. ಪುಟ್ಟಕ್ಕನನ್ನು ಎಷ್ಟೇ ಕರೆದರೂ ಆಕೆ ಬಾರದೇ ಇರುವುದನ್ನು ಕಂಡ ರಾಜೇಶ್ವರಿಗೆ ನಗು ಬರುತ್ತದೆ .ಇದನ್ನು ಕಂಡ ಆಕೆಯ ಗಂಡ ಗೋಪಾಲ ರಾಜಿ ಎಂದು ಕರೆಯುತ್ತಾನೆ.
ಅದನ್ನು ಕೇಳಿದ ರಾಜಿ ಗಂಡನ ಮುಖವನ್ನು ದೊಡ್ಡ ಕಣ್ಣು ಮಾಡಿ ನೋಡುತ್ತಾಳೆ. ಬಳಿಕ ಅಲ್ಲಿಂದ ನೇರವಾಗಿ ಗೂಂಡಾಗಳ ಬಳಿ ನೋಡಿ ಬನ್ನಿ ಎಂದು ಸನ್ನೆ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಪುಟ್ಟಕ್ಕ ಬರುತ್ತಾಳೆ. ಇನ್ನು ಕಂಠಿ ಹಾಗೂ ಆತನ ಗೆಳೆಯರು ಅಮ್ಮ ಹೇಳಿದ ಹಾಗೆಯೇ ಬಡ್ಡಿ ವಸೂಲಿ ಮಾಡಲು ಹೋಗಿರುತ್ತಾರೆ. ಮಾರ್ಕೆಟ್ ಬಳಿ ನಿಂತುಕೊಂಡಿರುವ ವೇಳೆ ಕಂಠಿ ಮನದಲ್ಲಿ ಅಳುಕು ಇರುತ್ತದೆ. ಏನಾದರು ಸ್ನೇಹಾ ಇಲ್ಲಿಗೆ ಬಂದರೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ.

ಆಗ ಸ್ನೇಹಾಗೆ ಕರೆ ಮಾಡುತ್ತಾನೆ. ಸ್ನೇಹಾ ಶ್ರೀ ಕಾಲ್ ಮಾಡಿದ್ದಾರೆ ಯಾಕೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಕರೆ ಮಾಡಿ ವಿಚಾರಿಸುತ್ತಾ ಇರುವ ವೇಳೆ ಸುಮಾ ಕಂಠಿಯನ್ನು ನೋಡುತ್ತಾಳೆ. ಅಕ್ಕನ ಬಳಿ ಕಂಠಿ ಇಲ್ಲಿಯೇ ಇದ್ದಾರೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಸ್ನೇಹಾ ಅತ್ತ ತಿರುಗಿ ನೋಡುತ್ತಾಳೆ. ಬಳಿಕ ಕಂಠಿಯನ್ನು ನೋಡಿ ಬಹಳ ಖುಷಿ ಆಗುತ್ತದೆ. ಆತನ ಹತ್ತಿರ ಬಂದು ಶ್ರೀ ಎಂದು ಕರೆಯುತ್ತಾಳೆ. ಸ್ನೇಹಾಳನ್ನು ನೋಡಿ ಕಂಠಿಗೆ ಶಾಕ್ ಆದರೂ ಸ್ವಲ್ಪ ಸುಧಾರಿಸಿಕೊಂಡು ಸುಮ್ಮನೆ ಆಗುತ್ತಾನೆ. ಬಳಿಕ ಆಕೆಯ ಬಳಿ ಮಾತನಾಡುತ್ತಾನೆ.
ಇತ್ತ ಸುಮಾ ಬಳಿ ನಡೆದ ವಿಚಾರವನ್ನು ಪುರುಷೋತ್ತಮ ಬಂದು ಹೇಳುತ್ತಾನೆ. ಇದನ್ನು ನೋಡಿದ ಸುಮಾ ಬಹಳ ಭಯಗೊಂಡು ಸ್ನೇಹಾಗೆ ವಿಚಾರ ತಿಳಿಸುತ್ತಾಳೆ. ಸ್ನೇಹಾಗೆ ಈ ವಿಚಾರ ತಿಳಿದು ಬಹಳ ಕೋಪಗೊಳ್ಳುತ್ತಾಳೆ. ಬಳಿಕ ಸ್ನೇಹಾ ಕಂಠಿಯನ್ನು ಕೂಡ ಕರೆದುಕೊಂಡು ಹೋಗುತ್ತಾಳೆ. ಇನ್ನು ಸಹನಾ ಆಕೆಯ ಗಂಡನ ಮನೆಯಲ್ಲಿ ಖುಷಿ ಎನ್ನುವುದಕ್ಕಿಂತ ತನಗೆ ಯಾರು ಇಲ್ಲ ಇದೀಗ ನನ್ನ ಪ್ರಪಂಚ ಬೇರೆ ಆಗಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಮನೆಗೆ ಬಂದ ಸಹನಾಳನ್ನು ಬರ ಮಾಡಿಕೊಳ್ಳಲು ಆರತಿ ಕೂಡ ಎತ್ತದೇ ಅವಳನ್ನು ಒಳಗೆ ಕರೆದುಕೊಂಡು ಹೋಗುತ್ತಾರೆ.


Click it and Unblock the Notifications











