Puttakkana Makkalu: ಕಂಠಿ ಪಕ್ಕದಲ್ಲಿ ಮಲಗಿರುವುದು ಸ್ನೇಹಾ ಅಲ್ಲ ರಾಧಾ! ಕಂಠಿ ಪರಿಸ್ಥಿತಿ ಕಂಡು ಪೆಚ್ಚಾದ ಫ್ಯಾನ್ಸ್
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ಹೊಸ ಟ್ವಿಸ್ಟ್ ನೊಂದಿಗೆ ಜನರ ಮನ ಗೆಲ್ಲುತ್ತಿದೆ. ಆದರೆ ಈ ಬಾರಿ ಮಾತ್ರ ಸೀರಿಯಲ್ ಪ್ರೇಮಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಾ ಇದೆ. ಹೌದು ಕಂಠಿ ದೊಡ್ಡ ಅವಾಂತರವನ್ನೆ ಮಾಡಿಕೊಂಡಿದ್ದಾನೆ. ಕಂಠಿ ಮನೆಗೆ ಸೇರಿರುವ ರಾಧಾ ದೊಡ್ಡ ಕಿರಾಪತಿಯನ್ನೆ ಮಾಡಿದ್ದಾಳೆ.
ಕಂಠಿ ರೂಮ್‌ನಲ್ಲಿ ಮಲಗಿರಬೇಕಾದರೆ ರಾಧಾ ಮೆತ್ತಗೆ ಆತನ ರೂಮ್‌ಗೆ ಬಂದು ಮಲಗುತ್ತಾಳೆ. ಬೆಳಗ್ಗೆ ಎದ್ದ ಕಂಠಿ ಇದೇನಿದು ಮಿಸ್ಸು ನೀವು ಎಷ್ಟೊತ್ತಿಗೆ ಬಂದ್ರಿ ಎಂದು ಕೇಳಿದಾಗ ಸ್ನೇಹಾ ಎಂದುಕೊಂಡಿದ್ದ ಕಂಠಿಗೆ ಬಹಳ ಶಾಕ್ ಆಗುತ್ತದೆ. ರಾಧಾಳನ್ನು ನೋಡಿದ ಕಂಠಿ ರಾಧಾ ನೀನಾ ಎಂದು ಕೇಳಿದ ಕೂಡಲೇ ಎದ್ದ ರಾಧಾ ಜೋರಾಗಿ ಅಮ್ಮ ಎಂದು ಕಿರುಚಿಕೊಂಡು ಬಿಡುತ್ತಾಳೆ .

ಅಷ್ಟರಲ್ಲಿ ಅಲ್ಲಿಗೆ ರಾಧಾ ತಾಯಿ, ಸ್ನೇಹಾ, ಸುಮಾ, ಬಂಗಾರಮ್ಮ ಓಡಿಕೊಂಡು ಬರುತ್ತಾರೆ. ಕಂಠಿ ಹಾಗೂ ರಾಧಾ ಇವರಿಬ್ಬರನ್ನು ಒಂದೇ ರೂಮ್‌ನಲ್ಲಿ ನೋಡಿದ ಸ್ನೇಹಾ ಶಾಕ್ ಆಗುತ್ತಾಳೆ. ಇದು ಏನೆಲ್ಲ ಅವಾಂತರವನ್ನು ಸೃಷ್ಟಿ ಮಾಡುತ್ತದೆ ಎಂಬುವುದು ಧಾರವಾಹಿ ನೋಡಿದ ಬಳಿಕವಷ್ಟೇ ತಿಳಿಯಬೇಕಿದೆ. ಇತ್ತ ಗೋಪಾಲನಿಗೆ ಅಪಘಾತವಾಗಿ ಎಲ್ಲವನ್ನೂ ಮರೆತು ಬಿಟ್ಟಿರುತ್ತಾನೆ.
ಹಳೆಯದನ್ನೆಲ್ಲ ಮರೆತ ಗೋಪಾಲ!
ಆತನಿಗೆ 20 ವರುಷದ ಹಿಂದೆ ನಡೆದ ವಿಚಾರ ಮಾತ್ರ ತಿಳಿದಿರುತ್ತದೆ. ಆ ಬಳಿಕ ನಡೆದ ಘಟನೆ ಒಂದು ನೆನಪಿಲ್ಲ. ಪುಟ್ಟಕ್ಕ ಅದೆಷ್ಟೇ ಜ್ಞಾಪಿಸಿದರು ಪ್ರಯೋಜನ ಆಗಲಿಲ್ಲ . ಕೊನೆಗೆ ಪುಟ್ಟಕ್ಕ ಕೈ ತಪ್ಪಿ ಲೋಟ ಬಿದ್ದು ಹೋಗುತ್ತದೆ ಅದನ್ನು ಎತ್ತಿ ಮೇಲಕ್ಕೆ ಇಡಬೇಕು ಎನ್ನುವಷ್ಟರಲ್ಲಿ ಗೋಪಾಲ ಹೇಳುತ್ತಾನೆ. ಪುಟ್ಟಮ್ಮಿ ಗ್ಲಾಸ್ ಎಲ್ಲಾ ಎತ್ತಲು ಹೋಗಬೇಡ ನೀನು ಗರ್ಭಿಣಿ ಅಲ್ವಾ.. ಈ ಬಾರಿ ಆದರೂ ಗಂಡು ಮಗುನ ಹೆತ್ತುಕೊಡು ಎಂದಾಗ ಪುಟ್ಟಕ್ಕಗೆ ಶಾಕ್ ಆಗುತ್ತದೆ.

ಗಂಡನ ಮಾತು ಕೇಳಿ ಪುಟ್ಟಕ್ಕ ಶಾಕ್
ಇದೇನಿದು ಹೀಗೆ ಮಾತನಾಡುತ್ತಾ ಇದ್ದಾರಲ್ಲ ಏನಾಯಿತು ಇವರಿಗೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆ ಬಳಿಕ ಅಲ್ಲಿಗೆ ಡಾಕ್ಟರ್ ಬರುತ್ತಾರೆ. ಡಾಕ್ಟರ್ ಬರುವುದನ್ನು ನೋಡಿದ ಪುರುಷೋತ್ತಮ, ಸಹನಾ ಬರುತ್ತಾರೆ . ಡಾಕ್ಟರ್ ಅನ್ನು ಗುರುತಿಸಿದ ಗೋಪಾಲ. ತನ್ನ ಮಕ್ಕಳಿಬ್ಬರನ್ನೂ ಗುರುತಿಸುವಲ್ಲಿ ವಿಫಲ ಆಗುತ್ತಾನೆ. ಪುರುಷೋತ್ತಮ ಹಲವು ಬಾರಿ ಡ್ಯಾಡಿ ಡ್ಯಾಡಿ ಎಂದು ಕರೆದರೂ ಗೋಪಾಲ ಮಾತ್ರ ನೀನು ನನ್ನ ಮಗ ಅಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಪುರುಷೋತ್ತಮಗೆ ನೋವು ಆಗುತ್ತದೆ .
ಡಾಕ್ಟರ್ ಮಾತು ಕೇಳಿದ ಪುಟ್ಟಕ್ಕಗೆ ಆಘಾತ
ಸಹನಾಳನ್ನು ನೋಡಿ ಇವರ್ಯಾರು ಹೊಸಬರು ಎಂದು ಕೇಳಿ ಬಿಡುತ್ತಾನೆ ಗೋಪಾಲ. ಬಳಿಕ ಪುರುಷೋತ್ತಮನ ಬಳಿ ಹೇಳುತ್ತಾನೆ ಗೋಪಾಲ ನನಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇರುವುದು ಎಂದಾಗ ಬಹಳ ಬೇಸರದಿಂದ ಎನು ಮಾತನಾಡದೆ ನಿಂತುಕೊಂಡಿರುತ್ತಾನೆ ಪುರುಷೋತ್ತಮ. ಇನ್ನು ಡಾಕ್ಟರ್ ಪುಟ್ಟಕ್ಕನ ಬಳಿ ಹೇಳುತ್ತಾರೆ. ಗೋಪಾಲ ಅವರ ತಲೆಗೆ ಬಲವಾದ ಏಟು ಬಿದ್ದಿರುವುದರಿಂದ ಅವರಿಗೆ ಹಳೆಯದೆಲ್ಲ ಮರೆತು ಹೋಗಿದೆ ಎಂದು ಹೇಳುತ್ತಾರೆ ಇದನ್ನು ಕೇಳಿ ಪುಟ್ಟಕ್ಕಗೆ ಆಕಾಶ ಕಳಚಿ ಬಿದ್ದಂತೆ ಆಗಿದೆ.


Click it and Unblock the Notifications











