Puttakkana Makkalu: ರೌಡಿಗಳಿಗೆ ಸರಿಯಾದ ಪಾಠ ಕಲಿಸಿದ ಕಂಠಿ; ಪುಟ್ಟಕ್ಕನ ಮೆಸ್‌ಗೆ ಬೆಂಕಿ ಇಟ್ಟ ಕಿಡಿಗೇಡಿಗಳು!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ.. ಇದೀಗ ಪೂಜೆ ಎಲ್ಲಾ ಮುಗಿಸಿಕೊಂಡ ಪುಟ್ಟಕ್ಕ ನ ಕುಟುಂಬಸ್ಥರು ಭಾಗಿ ಆಗಿ ಇರುತ್ತಾರೆ.. ಕಂಠಿ ಬಗ್ಗೆ ತುಚ್ಛವಾಗಿ ಮಾತನಾಡಿದವರು ಎಲ್ಲಾ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಮಾಡಿದ್ದಾನೆ ಕಂಠಿ.. ಮುರಳಿ ಗೆ ಕಂಠಿ ಯನ್ನ ಕಂಡರೆ ಆಗುತ್ತಾ ಇರಲಿಲ್ಲ..

ಯಾಕೆಂದರೆ ಆತ ಓದೆ ಇಲ್ಲ ಎನ್ನುವ ಕಾರಣಕ್ಕೆ. ಆದರೆ ಜೀವನ ಮಾಡಲು ಓದು ಮಾತ್ರ ಇದ್ದರೆ ಸಾಲದು ತಾಕತ್ತು ಇರಬೇಕು ಎನ್ನುವುದನ್ನು ಕಂಠಿ ಮಾತು.. ಪೂಜೆ ಮುಗಿದ ಬಳಿಕ ಸುಮಾ ಪ್ರಸಾದ ವಿತರಣೆ ಮಾಡಲು ಹೋಗುತ್ತಾಳೆ.. ಆಗ ಕೆಲವರು ಕೇಡಿಗಳು ಬಂದು ಸುಮಾ ಳನ್ನು ಚುಡಾಯಿಸುತ್ತ ಇರುತ್ತಾರೆ.. ಆದರೆ ಇದೆಲ್ಲ ಸುಮಾ ಗೆ ಬಹಳ ಕಿರಿ ಕಿರಿ ಎನಿಸುತ್ತದೆ .

kannada-serial-puttakkana-makkalu

ಆ ವೇಳೆ ಸುಮಾ ಎಷ್ಟೇ ಕೋಪದಿಂದ ಆ ಪುಂಡರಿಗೆ ಬೈದರು ಅವರು ಮಾತ್ರ ಅದೆಲ್ಲವನ್ನೂ ಕ್ಯಾರೆ ಎನ್ನುತ್ತಿಲ್ಲ.. ಇನ್ನೂ ಮುರಳಿ ಅಲ್ಲಿಗೆ ಬಂದು ಸುಮಾ ಯಾಕೆ ಪ್ರಸಾದ ಕೊಟ್ಟು ಬರಲಿಲ್ಲ.. ಎಂದೆಲ್ಲ ಕೇಳಿದಾಗ ಅಲ್ಲಿರುವ ರೌಡಿ ಗಳು ಕೋಪಗೊಂಡು ಮುರಳಿ ಗೆ ಕೂಡ ಟಕ್ಕರ್ ಕೊಟ್ಟು ಮಾತನಾಡುತ್ತಾ ಇರುವಾಗ ಮುರಳಿ ಪೊಲೀಸರು ಗೆ ಫೋನ್ ಮಾಡಲು ಮೊಬೈಲ್ ತೆಗೆಯುತ್ತಾನೆ..

ಇದನ್ನು ನೋಡಿದ ರೌಡಿಗಳು ಮುರಳಿ ಯ ಕತ್ತಿನ ಬಳಿ ಚಾಕು ಇಡುತ್ತಾರೆ . ಆ ಬಳಿಕ ಸುಮಾ ಮೈ ಮುಟ್ಟಲು ರೌಡಿಗಳು ಪ್ರಯತ್ನ ಪಡುತ್ತಾರೆ.. ಇದೆಲ್ಲವನ್ನೂ ನೋಡಿದ ಕಂಠಿ ರೌಡಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ. ಇದನ್ನು ನೋಡಿದ ಸುಮಾ ಮಾತ್ರ ಕಂಠಿ ಗೆ ಧನ್ಯವಾದ ಅರ್ಪಿಸುತ್ತ ಇರುತ್ತಾರೆ... ಇದನ್ನು ನೋಡಿದ ಕಂಠಿ ನಗುತ್ತಾ ಸರಿ ಎಂದು ಹೇಳುತ್ತಾರೆ.. ಆ ಬಳಿಕ ಕಂಠಿ ಮಾತ್ರ ಮುರಳಿ ಬಳಿ ಹೇಳುತ್ತಾನೆ.. ಕೆಲವೊಂದು ಬಾರಿ ಎಜುಕೇಶನ್ ಯಾವತ್ತೂ ಕೆಲಸ ಮಾಡುವುದು ಇಲ್ಲ.. ನಾನು ಕಲಿತಿಲ್ಲ ಎನ್ನುವ ಕಾರಣಕ್ಕೆ ನೀವು ನನ್ನ ಬಳಿ ಮಾತನಾಡದೆ ಇರುವುದು ತಪ್ಪು.. ನಿಮಗೆ ತಿಳಿಯದು ನಮಗೆ ತಿಳಿಯುತ್ತದೆ ಎಂದು ಹೇಳುತ್ತಾರೆ.

ಇದನ್ನು ಕೇಳಿದ ಮುರಳಿ ಗೆ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾನೆ.. ಇನ್ನೂ ಕಂಠಿ ಅಷ್ಟು ಹೇಳಿ ಅಲ್ಲಿಂದ ಹೋಗುತ್ತಾನೆ.. ಇನ್ನೂ ಪುಟ್ಟಕ್ಕ ದೇವಾಲಯದಿಂದ ಹೊರಟ ಬಳಿಕ ಆಕೆಯ ಮೆಸ್ ಗೆ ಯಾರೋ ರೌಡಿಗಳು ಬಂದು ಬೆಂಕಿ ಕೊಟ್ಟಿದ್ದಾರೆ.. ಪುಟ್ಟಕ್ಕನ ಮೆಸ್ ಗೆ ಬೆಂಕಿ ಬಿದ್ದಿರುವುದನ್ನು ನೋಡಿದ ಅಲ್ಲಿದ್ದವರು ಜೋರಾಗಿ ಕಿರುಚಾಡುತ್ತ ಇರುತ್ತಾರೆ...ಇದನ್ನು ನೋಡಿದ ಎಲ್ಲರೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನ ಪಡುತ್ತಾರೆ.

ಆದರೆ ಬೆಂಕಿ ನಂದದೆ ಇರುವುದನ್ನು ಕಂಡು ಪುಟ್ಟ ಕ್ಕ ಗೆ ಕರೆ ಮಾಡುತ್ತಾರೆ ಆದರೆ ಪುಟ್ಟಕ್ಕ ಮಾತ್ರ ಈ ವಿಚಾರವನ್ನು ಕೇಳಿ ಶಾಕ್ ಆಗುತ್ತಾರೆ . ಎನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿದ್ದಾರೆ.. ಜೀವನಕ್ಕೆ ಒಂದೇ ಆಧಾರ ಆಗಿರುವ ಮೆಸ್ ಕೂಡ ಬೆಂಕಿ ಪಾಲಾಗಿದೆ.. ಪುಟ್ಟಕ್ಕ ಮಾತ್ರ ಇದನ್ನು ಹೇಗೆ ತದೆದುಕೊಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ

More from Filmibeat

English summary
Kannada serial puttakkana makkalu written updated on 30th August
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X