Puttakkana Makkalu: ಬಂಗಾರಮ್ಮಗೆ ತಿಳಿದೇ ಬಿಟ್ಟಿತು ಕಂಠಿ ಲವ್ ಸ್ಟೋರಿ; ಮುಂದೇನು ಮಾಡ್ತಾಳೆ ಬಂಗಾರಮ್ಮ?
ಪುಟ್ಟಕ್ಕನ ಮಕ್ಕಳು ಧಾರವಾಹಿ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಾ ಇದೆ. ಇದೀಗ ರಾಜಿ ಬಂಗಾರಮ್ಮನ ಬಳಿ ಸಂಶಯದ ಮೊಳಕೆ ಬೀಜ ಬಿತ್ತಿ ಬಿತ್ತಿದ್ದಾಳೆ. ರಾಜಿ ಬಂಗಾರಮ್ಮಗೆ ಕರೆ ಮಾಡಿ ಆಕೆಯ ಜೊತೆ ಮಾತನಾಡುತ್ತಾಳೆ. ಏನೇ ಹೇಳಿದರೂ ಬಂಗಾರಮ್ಮ ತನ್ನ ಮಗನನ್ನು ಬಿಟ್ಟು ಕೊಡದೆ ರಾಜೀ ಮಾತಿಗೆ ಕಿವಿಗೊಡದೇ ಇರುತ್ತಾಳೆ.
ನೀವು ನನ್ನ ಮಾತನ್ನು ನಂಬುವುದಿಲ್ಲ ಎಂದು ನನಗೆ ಗೊತ್ತಿದೆ ಅದಕ್ಕಾಗಿ ನನ್ನ ಬಳಿ ಸಾಕ್ಷಿ ಇದೆ, ಅದನ್ನ ನಿಮಗೆ ತೋರಿಸುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಂಗಾರಮ್ಮ ಫೋನ್ ಇಡುತ್ತಾಳೆ. ಆ ಕೂಡಲೇ ಬಂಗಾರಮ್ಮನ ಮೊಬೈಲ್ ಗೆ ವಿಡಿಯೋ ಬರುತ್ತದೆ. ಅದನ್ನು ನೋಡಿದ ಬಂಗಾರಮ್ಮಗೆ ಶಾಕ್ ಮೇಲೆ ಶಾಕ್ ಆಗುತ್ತದೆ. ಆ ಕೂಡಲೇ ಬಂಗಾರಮ್ಮ ಕಂಠಿ ಹುಡುಕಿಕೊಂಡು ಹೋಗಿ ಬಿಡುತ್ತಾಳೆ. ಕಂಠಿ ರೂಮ್‌ನಲ್ಲಿ ಸ್ನೇಹಾ ಬಳಿ ಮಾತನಾಡುತ್ತಾ ಇರುತ್ತಾಳೆ.

ಅಮ್ಮನ ಧ್ವನಿ ಕೇಳಿದ ವೇಳೆ ಕಂಠಿ ಮಲಗಿ ಬಿಡುತ್ತಾನೆ. ಇನ್ನು ಕಂಠಿ ರೂಮ್‌ಗೆ ಬಂದ ಬಂಗಾರಮ್ಮ ಕಂಠಿಯನ್ನು ಅದೆಷ್ಟೇ ಬಾರಿ ಎಚ್ಚರಿಸಿದರೂ ಆತ ಮಾತ್ರ ನಿದ್ದೆ ಮಾಡುವ ಹಾಗೆ ನಟಿಸುತ್ತಾ ಇರುತ್ತಾನೆ. ಇದನ್ನು ನೋಡಿದ ಬಂಗಾರಮ್ಮ ಮಗ ಮಲಗಿದ್ದಾನೆ ಎಂದು ರೂಮಿನಿಂದ ಹೊರಗೆ ಹೋಗುತ್ತಾಳೆ. ಆ ವೇಳೆ ಕಂಠಿ ಎದ್ದು ಕುಳಿತು ಮೊಬೈಲ್ ಒತ್ತುತ್ತಾ ಇರುತ್ತಾನೆ.
ಇನ್ನು ಕಂಠಿ ಮುಖ ಒಮ್ಮೆ ನೋಡಿ ಬಿಡೋಣ ಎಂದು ನೋಡುತ್ತಾಳೆ. ಆದರೆ ಕಂಠಿ ಮಾತ್ರ ನಿದ್ದೆಯಿಂದ ಎದ್ದು ಮೊಬೈಲ್ ನೋಡುತ್ತಾ ಇರುವುದನ್ನು ನೋಡಿ ಬಂಗಾರಮ್ಮಗೆ ಶಾಕ್ ಆಗುತ್ತದೆ. ಇನ್ನು ಪುಟ್ಟಕ್ಕ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮದಲ್ಲಿ ಇರುತ್ತಾರೆ. ಆದರೆ ಪುಟ್ಟಕ್ಕ ಮಾತ್ರ ಕೊಂಚ ಬೇಸರ ಮಾಡಿಕೊಂಡಿರುತ್ತಾಳೆ.
ತನ್ನ ಮಗಳು ಯುಗಾದಿ ಹಬ್ಬಕ್ಕೆ ಬರುವುದಿಲ್ಲವಲ್ಲ ಎಂದು ಸಂಕಟದಿಂದ ಇರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಶಾಂತ ಯುಗಾದಿ ಹಬ್ಬಕ್ಕೆ ಬೇಕಾದ ತಯಾರಿ ಬಗ್ಗೆ ಮಾತನಾಡುತ್ತಾ ಇರುತ್ತಾಳೆ. ಆದರೆ ಪುಟ್ಟಕ್ಕಗೆ ಈ ಬಗ್ಗೆ ಆಸಕ್ತಿ ಇರುವುದಿಲ್ಲ. ಈ ವೇಳೆ ಸ್ನೇಹಾ ಪುಟ್ಟಕ್ಕನ ಬಳಿ ಬಂದು ಅಮ್ಮ ಅಕ್ಕ ಎಷ್ಟು ಹೊತ್ತಿಗೆ ಬರುತ್ತಾಳೆ ಎಂದೆಲ್ಲ ಪ್ರಶ್ನೆ ಕೇಳಿದಾಗ ಪುಟ್ಟಕ್ಕ ಸುಳ್ಳು ಹೇಳುತ್ತಾಳೆ.

ಸಹನಾ ಹಬ್ಬಕ್ಕೆ ಬರುವುದಿಲ್ಲವಂತೆ ಅವರು ಹಬ್ಬ ಮಾಡುತ್ತಾ ಇದ್ದಾರೆ ಆ ಕಾರಣ ಅವರು ಬರುವುದಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಮಾತ್ರ ಅಕ್ಕ ಇಲ್ಲದೇ ಹಬ್ಬ ಹೇಗೆ ಆಗುತ್ತದೆ ಹಬ್ಬ ಮಾಡಬೇಕಾದರೆ ಅಕ್ಕ ಬರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಅಮ್ಮನ ಬಳಿ ಸಹನಾ ಅಕ್ಕನನ್ನು ನಾನೇ ಕರೆದುಕೊಂಡು ಬರುತ್ತೇನೆ ಎಂದು ಹೇಳಿದಾಗ ಪುಟ್ಟಕ್ಕಗೆ ಇನ್ನೂ ಚೂರು ಭಯ ಆಗುತ್ತದೆ.
ಬಳಿಕ ಪುಟ್ಟಕ್ಕ ಏನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಪುಟ್ಟಕ್ಕನ ಮನೆಗೆ ಚಂದ್ರು ಬರುತ್ತಾನೆ. ಚಂದ್ರು ಮನೆಗೆ ಬರುತ್ತಾ ಇದ್ದ ಹಾಗೆ ಸ್ನೇಹಾ ಬಗ್ಗೆ ವಿಚಾರಣೆ ಮಾಡುತ್ತಾನೆ. ಆಗ ಸ್ನೇಹಾ ಮನೆಯ ಒಳಗಿನಿಂದ ಬಂದು ಚಂದ್ರು ಹತ್ತಿರ ಮಾತನಾಡುತ್ತಾಳೆ. ಬಳಿಕ ಸಹನಳನ್ನು ಮನೆಗೆ ಕರೆದುಕೊಂಡು ಬರಲು ಜೀಪಿನಲ್ಲಿ ಹೋಗುವುದಾಗಿ ಹೇಳುತ್ತಾಳೆ. ಇದನ್ನು ಕೇಳಿದ ಚಂದ್ರುಗೆ ಶಾಕ್ ಆಗುತ್ತದೆ.


Click it and Unblock the Notifications











