Puttakkana Makkalu: ಕಾಣೆಯಾದ ಪುಟ್ಟಕ್ಕ..ಮನೆಗೆ ಬಂದ ಕಾಳಿ ಕೈಯಲ್ಲಿ ಸಿಲುಕಿದ ಸಹನಾ!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪುಟ್ಟಕ್ಕನ ಮಕ್ಕಳ ವಿಚಾರದಲ್ಲಿ ಜ್ಯೋತಿಷ್ಯ ಒಬ್ಬ ಹೇಳಿದ ವಿಚಾರ ಇದೀಗ ನಿಜ ಆಗುವ ಎಲ್ಲಾ ಸಂದರ್ಭ ಬರುತ್ತಿದೆ. ಯಾಕೆಂದರೆ ಪುಟ್ಟಕ್ಕ ಇದೀಗ ಕಾಣೆಯಾಗಿದ್ದಾಳೆ. ಕಾಳಿಯ ವಶದಲ್ಲಿರುವ ಪುಟ್ಟಕ್ಕಗೆ ಇದೀಗ ತನ್ನ ಮಕ್ಕಳದ್ದೆ ಚಿಂತೆ ಆದರೆ ಸ್ನೇಹ ಹಾಗೂ ಕಂಠಿ ವಿಚಾರದಲ್ಲಿ ರಾಧನೇ ಮುಳುವಾದರೆ ಸಹನಾ ಹಾಗೂ ಮುರಳಿ ವಿಚಾರದಲ್ಲಿ ಕಾಳೀಯೇ ದೊಡ್ಡ ಮುಳು ಆಗಿದ್ದಾನೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಸಹನಾ ಬಳಿಗೆ ಬಂದ ಕಾಳಿ ಮನಬಂದಂತೆ ಮಾತನಾಡುತ್ತಾನೆ. ಆದರೆ ಮನೆಯಲ್ಲಿ ಯಾರು ಇಲ್ಲದ ವೇಳೆ ಕಾಳಿ ಮನೆಗೆ ಬಂದಿರುವುದು ಸಹನಾಗೆ ಬಹಳ ಕೋಪ ತರಿಸುತ್ತದೆ. ಹಾಗೇ ಭಯವೂ ಆಗುತ್ತದೆ. ಕಾಳಿ ಯಾಕೆ ಮನೆಗೆ ಬಂದಿದ್ದಾನೆ, ಆತನ ಉದ್ದೇಶ ಏನು ಎಂದು ತಿಳಿದುಕೊಳ್ಳುವ ಮುಂಚೆಯೇ ಕಾಳಿ ಮಾತನಾಡುವ ರೀತಿ ಬೇರೆ ಇರುತ್ತದೆ.

kannada serial Puttakkana Makkalu written update on 30th November

ಕಾಳಿಗೆ ಸಹನಾ ಮೇಲೆ ಬಹಳ ಪ್ರೀತಿ, ಆದರೆ ಸಹನಾಗೆ ಕಾಳಿಯನ್ನು ಕಂಡರೆ ಅಷ್ಟಕಷ್ಟೇ. ಮುರಳಿಯನ್ನ ಪ್ರೀತಿಸಿ ಸಹನಾ ಮದುವೆಯಾಗುತ್ತಾರೆ. ಆದರೆ ಸಹನಾ ಮದುವೆ ಕಾಳಿಗೆ ಬಹಳ ದೊಡ್ಡ ಆಘಾತ ನೀಡಿದೆ . ಸಹನಾ ನನ್ನವಳು.. ನನಗಾಗಿ ಹುಟ್ಟಿದವಳು ಎಂದು ಯೋಚನೆ ಮಾಡುತ್ತಾ ಇರುತ್ತಿದ್ದನು. ಹೀಗಾಗಿ ಪುಟ್ಟಕನ ಮೇಲೆ ದ್ವೇಷವನ್ನು ಸಾಧಿಸುತ್ತಿದ್ದಾನೆ ಕಾಳಿ.

ಕಾಳಿ ವಶದಲ್ಲಿ ಪುಟ್ಟಕ್ಕ!

ಹೇಗಾದರೂ ಮಾಡಿ ಸಹನಾಳನ್ನ ಪಡೆದೆ ಪಡೆಯಬೇಕು ಎಂದು ಯೋಚನೆ ಮಾಡುತ್ತಿದ್ದಾನೆ ಕಾಳಿ. ಹಾಗೆಯೇ ಸಹನಾ ಒಬ್ಬೊಂಟಿಯಾಗಿ ಕಾಳಿಗೆ ಸಿಕ್ಕಿದ್ದಾಳೆ. ಕಾಳಿಯನ್ನು ನೋಡಿ ಸಹನಾ ಬಹಳ ಕೋಪದಿಂದ ಇಲ್ಲಿಗೆ ಯಾಕೆ ಬಂದೆ , ಈ ಮನೆಯಿಂದ ಹೊರಗೆ ಹೋಗು ಎಂದು ಜೋರಾಗಿ ಬಯ್ಯುತ್ತಾಳೆ. ಇದನ್ನು ಕೇಳಿದ ಕಾಳಿ ನಾನು ಎಲ್ಲಿಗೂ ಹೋಗುವುದಿಲ್ಲ.. ಏನು ಮಾಡುತ್ತೀಯಾ ಎಂದು ಕೇಳಿದಾಗ ಸಹನಾಗೆ ಚಿತ್ರ ಗಂಡನಿಗೆ ಹೊಡೆದ ನೆನಪು ಆಗುತ್ತದೆ.

kannada serial Puttakkana Makkalu written update on 30th November

ಕಾಳಿಯನ್ನು ನೋಡಿ ಸುಮಾ ಶಾಕ್

ಕಾಳಿಗೆ ಇನ್ನೇನು ಹೊಡೆಯಬೇಕು ಎಂದು ಸಹನಾ ಯೋಚನೆ ಮಾಡುತ್ತಾ ಇರುವಾಗ ಅಲ್ಲಿಗೆ ಸುಮಾ ಬರುತ್ತಾಳೆ . ಕಾಳಿಯನ್ನು ನೋಡಿ ಸುಮಾಗೆ ಬಹಳ ಶಾಕ್ ಆಗುತ್ತದೆ. ಜೈಲಿಗೆ ಹೋದಾತ ಹೇಗೆ ರಿಲೀಸ್ ಆಗಿ ಬಂದು ಬಿಟ್ಟ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಕಂಠಿಯನ್ನು ಬಿಗಿದಪ್ಪಿಕೊಂಡ ರಾಧ

ಇನ್ನು ರಾಧ ಕಂಠಿ ಮೇಲೆ ಅಗಾಧವಾದ ಪ್ರೀತಿಯನ್ನು ಇಟ್ಟುಕೊಂಡು ಇರುತ್ತಾಳೆ. ಮದುವೆ ಮಂಟಪದವರೆಗೂ ಹೊದ ಸಂಬಂಧ ಮುರಿದುಬಿದ್ದಿದ್ದು, ಹೇಗಾದರೂ ಕಂಠಿಯನ್ನು ಪಡೆಯುವ ಪಣ ತೊಟ್ಟಿದ್ದಾರೆ. ತನ್ನ ಮಾವ ಕಂಠಿ ನನ್ನನ್ನು ಯಾವತ್ತೂ ಬಿಟ್ಟು ಹೋಗುವುದು ಇಲ್ಲ ಎಂದು ಆತನನ್ನು ಓಡಿ ಬಂದು ಬಿಗಿದು ಅಪ್ಪಿಕೊಂಡು ಇರುತ್ತಾಳೆ. ಇದನ್ನು ನೋಡಿದ ಸ್ನೇಹಾಗೆ ಎನು ಮಾಡಬೇಕು ಎಂದು ತಿಳಿಯದೇ ತೆಪ್ಪಗೆ ಇರುತ್ತಾಳೆ .

More from Filmibeat

English summary
Puttakkana Makkalu serial 30th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X