Puttakkana Makkalu: ಬಂಗಾರಮ್ಮನ ಮನೆಯಲ್ಲಿ ಬಂಗಾರಮ್ಮನನ್ನೇ ಎದುರು ಹಾಕಿಕೊಂಡ ಸ್ನೇಹಾ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ಅದ್ಭುತವಾಗಿ ಮುದು ಬರುತ್ತಿದೆ. ಸ್ನೇಹಾ ಇದೀಗ ಗಂಡನ ಮನೆಯಲ್ಲಿ ಇದ್ದಾಳೆ ಆದರೆ ಯಾರು ತನ್ನವರು ಎಂದುಕೊಳ್ಳದೆ ಒಲ್ಲದ ಮನಸಲ್ಲಿ ಬಂಗಾರಮ್ಮ ನ ಮನೆಯಲ್ಲಿ ಇರುತ್ತಾಳೆ ಆಕೆಯನ್ನೂ ನೋಡಿದ ವಸು ಹಾಗೂ ಕಂಠಿ ಗೆ ಬಹಳ ಬೇಸರ ಆಗುತ್ತದೆ. ಕಂಠಿ ಅದೆಷ್ಟೋ ಬಾರಿ ಸ್ನೇಹಾ ಬಳಿ ತನ್ನನ್ನು ಕ್ಷಮಿಸುವಂತೆ ಕೇಳಿಕೊಂಡರು ಕ್ಷಮಿಸಲು ಸ್ನೇಹಾ ತಯಾರಿಲ್ಲ.
ಇನ್ನೂ ಸಹನಾ ಮತ್ತು ಮುರಳಿ ಇದೀಗ ಮುನಿಸಿಕೊಂಡು ಇದ್ದಾರೆ. ತಾಯಿ ಸಾಲ ಮಾಡಿ ನನ್ನ ಮದುವೆ ಮಾಡಿಸಿದರು ಎಂಬ ಕೊರಗಿನಲ್ಲಿ ಸಹನಾ ಇರುತ್ತಾಳೆ. ನನ್ನ ಜೀವನ ನೆಟ್ಟಗೆ ಇಲ್ಲ ಇನ್ನೂ ನನ್ನ ತಂಗಿ ಜೀವನ ನನ್ನ ಹಾಗೆ ಆಗುವುದು ಬೇದ ಎಂದು ಯೋಚಿಸುತ್ತಾ ಇರುತ್ತಾಳೆ. ಇತ್ತ ಪುಟ್ಟಕ್ಕ ತಾನು ಮಾಡಿದ ಸಾಲಕ್ಕೆ ಬಡ್ಡಿ ಕೇಳಿಯೇ ಸುಸ್ತಾಗಿದ್ದಾರೆ ಪುಟ್ಟಕ್ಕ.

ಪುಟ್ಟಕ್ಕ ಇದೀಗ ಬಡ್ಡಿ ಮೊದಲ ಕಂತು ರಾಜೀ ಕೈ ಗೆ ಕೊಟ್ಟಿದ್ದಾಳೆ. ಆದರೆ ಬರುವ ತಿಂಗಳು ಸಲ ಕೇಳಿಕೊಂಡು ಬಂದರೆ ಎನು ಮಾಡುವುದು . ನಮ್ಮ ಜೊತೆ ಅಷ್ಟೆಲ್ಲ ಹಣ ಇಲ್ಲ ಅಲ್ವಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ . ಇದನ್ನೆಲ್ಲ ತಿಳಿದುಕೊಂಡ ಶಾಂತ ಕೂಡ ಪುಟ್ಟಕ್ಕ ಗೆ ಸಹಾಯ ಮಾಡಲಾಗದೆ ಒದ್ದಾಡುವ ಪರಿಸ್ಥಿತಿ ಬಂದು ಒದಗಿದೆ. . ಇದೀಗ ಸಹನಾ ತನ್ನ ತಾಯಿ ಬಳಿ ಮೆತ್ತಗೆ ಹೇಳುತ್ತಾಳೆ ಅಮ್ಮ ಅಂತ ಬಂಗಾರಮ್ಮ ನ ಮನೆಗೆ ಹೋಗುತ್ತೇನೆ.
ಸ್ನೇಹಾ ಹೇಗಿದ್ದಾಳೆ ಎನು ಗೊತ್ತಿಲ್ಲ ಅದಕ್ಕಾಗಿ ನಾನು ಹೋಗುತ್ತೇನೆ ಎಂದು ಹೋಗುತ್ತಾಳೆ. ಇನ್ನೂ ತನ್ನ ಅಕ್ಕನನ್ನು ಬಂಗಾರಮ್ಮ ನ ಮನೆಯಲ್ಲಿ ಇರುವುದನ್ನು ನೋಡಿದ ಸ್ನೇಹಾ ಮಾತ್ರ ಅಕ್ಕ ಹೇಗಿದ್ದೀಯ, ಚೆನ್ನಾಗಿದ್ದೀಯಾ.. ನೀನು ಯಾಕೆ ಇಲ್ಲಿಗೆ ಬಂದೆ ಎಂದೆಲ್ಲ ಕೇಳುತ್ತಾ ಇರುತ್ತಾಳೆ ಆಗ ಆಗ ಸಹನಾ ಹೇಳುತ್ತಾಳೆ ಮದುವೆ ಆದ ಹೆಣ್ಣು ಮಗಳ ಜೊತೆ ಯಾರಾದರೂ ಮನೆಯವರು ಬರಬೇಕು ಅದಕ್ಕೆ ಬಂದೆ ಎಂದಾಗ ಸ್ನೇಹಾ ಮಾತ್ರ ಅಕ್ಕ ನೀನು ಹೋಗು ಎಂದು ಹೇಳುತ್ತಾಳೆ
ಆಗ ಸಹನಾ ಬಹಳ ಸಪ್ಪೆ ಮುಖ ಮಾಡಿಕೊಂಡು ಇರುತ್ತಾಳೆ. ಆಗ ಅದೆಲ್ಲವನ್ನೂ ನೋಡಿದ ವಸು ಗ ಬಹಳ ಬೇಸರ ಆಗುತ್ತದೆ. ಆದರೂ ಎನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಇನ್ನೂ ಸಪ್ಪೆ ಮುಖ ಮಾಡಿಕೊಂಡು ಇದ್ದ ಸಹನಾ ಳನ್ನು ಮನೆಯಲ್ಲಿ ಉಳಿಸಿಕೊಂಡು ಇರುತ್ತಾಳೆ . ಸ್ನೇಹಾ ಬಂಗಾರಮ್ಮ ನ ಮನೆಯವರ ಬಳಿ ಮಾತನಾಡುವುದೇ ಇಲ್ಲ.. ವಸು ಜೊತೆಗೂ ಅಷ್ಟಕಷ್ಟೆ ಮಾತುಕತೆ ಇದೀಗ ಸಹನಾ ಬಂದಿರುವುದು ಸ್ನೇಹಾ ಗೆ ಒಂಚೂರು ಬಲ ಬಂದ ಹಾಗೆ ಆಗಿದೆ.
ಇನ್ನೂ ಎಲ್ಲರೂ ದೇವರ ಮನೆಯಲ್ಲಿ ಇರುತ್ತಾರೆ. ವಸು ಹಾಗೂ ಸಹನಾ ದೇವರ ಕೋಣೆಯಲ್ಲಿ ಪೂಜೆ ಗೆ ತಯಾರಿ ಮಾಡಿಕೊಂಡು ಇರುತ್ತಾರೆ. ಯಾಕೆಂದರೆ ಮನೆಗೆ ಹೊಸ ಸೊಸೆ ಬಂದಿದ್ದಾಳೆ ಆಕೆಯ ಕೈಯಿಂದಲೇ ಪೂಜೆ ಮಾಡಿಸುವುದು ಎಂದು ಎಲ್ಲರೂ ಫಿಕ್ಸ್ ಆಗುತ್ತಾರೆ. ಇನ್ನೂ ಈ ವೇಳೆ ದೇವರ ಕೋಣೆಗೆ ಬಂದ ಬಂಗಾರಮ್ಮ ಕೊಂಚ ಏರು ಧ್ವನಿಯಲ್ಲಿ ಹೇಳುತ್ತಾಳೆ. ಯಾರು ನಿಮಗೆ ದೇವರ ಕೊನೆಗೆ ಬಿಟ್ಟವರು.. ಇಲ್ಲಿ ಎನು ಮಾಡುತ್ತಾ ಇದ್ದೀರಾ ಎಂದಾಗ ವಸು ಹೇಳುತ್ತಾಳೆ ಮನೆಗೆ ಬಂದ ಸೊಸೆ ಕೈಯಲ್ಲಿ ಪೂಜೆ ಮಾಡಿಸುವುದು ರೂಡಿ ಅದ ಕಾರಣ ಎಂದಾಗ ವಸು ಬಾಯಿ ಮುಚ್ಚಿಸಿದ ಬಂಗಾರ ಮ್ಮ ಎನು ಬೇಕಾಗಿಲ್ಲ ಎಲ್ಲಾ ತೆಗೆದು ಇಡೀ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ನಾನು ಈ ಮನೆಯವರನ್ನು ಒಪ್ಪಿ ಮದುವೆ ಆಗದೆ ಇದ್ದರೂ ಈ ಮನೆಯ ಸೊಸೆ ಆದ ಕಾರಣ ಈ ಮನೆಯ ದೀಪ ಬೆಳಗಿಸುತ್ತೇನೆ ಎಂದು ಹೇಳಿದಾಗ ಬಂಗಾರ ಮ್ಮ ಗೆ ಕೋಪ ಬಂದರು ಆಕೆಯ ಗಂಡ ತಡೆಯುತ್ತಾನೆ. ಇನ್ನೂ ಸ್ನೇಹಾ ಪೂಜೆಯನ್ನು ಮುಗಿದು ಎಲ್ಲರಿಗೂ ಆರತಿ ಕೊಡುತ್ತಾಳೆ..


Click it and Unblock the Notifications











