Puttakkana Makkalu: ಸಹನಾಳನ್ನು ಮನೆಗೆ ಕರೆದುಕೊಂಡು ಬರಲು ಹೋದ ಸ್ನೇಹಾ; ಆತಂಕಗೊಂಡ ಪುಟ್ಟಕ್ಕ

By Poorva

ಪುಟ್ಟಕ್ಕ ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ಕಾರಣ ಆಕೆಯ ಮಗಳು ಹಬ್ಬಕ್ಕೆ ಬರುವುದಿಲ್ಲ ಎಂದು ಆಕೆಗೆ ತಿಳಿದಿದೆ. ಆದರೆ ತನ್ನ ಇಬ್ಬರು ಮಕ್ಕಳನ್ನು ಸಂತೈಸುವುದು ಆಕೆಗೆ ಬಹಳ ಕಷ್ಟಕರ ಆಗಿರುತ್ತದೆ . ಸಹನಾ ಬರುವಿಕೆಗೆ ಕಾದು ಕುಳಿತಿದ್ದಾರೆ. ಇನ್ನು ಚಂದ್ರು ಮನೆಗೆ ಬಂದಿರುವುದು ಸ್ನೇಹಾಗೆ ಬಹಳ ಖುಷಿ ನೀಡುತ್ತದೆ.

ಇನ್ನು ಕಂಠಿ ಬೆಳಗ್ಗಿನ ಜಾವ ಎದ್ದು ಹೊರಟು ಬರುತ್ತಾನೆ. ಕಂಠಿ ನಡವಳಿಕೆ ಕಂಡು ಬಂಗಾರಮ್ಮ ತಬ್ಬಿಬ್ಬು ಆಗುತ್ತಾರೆ. ಚಂದ್ರು ಮೊಬೈಲ್‌ನಿಂದ ಕಂಠಿಗೆ ಕರೆ ಮಾಡಿದಾಗ ಅದನ್ನು ಬಂಗಾರಮ್ಮ ಸ್ವೀಕಾರ ಮಾಡುತ್ತಾಳೆ. ಹೆಣ್ಣಿನ ಧ್ವನಿ ಕೇಳಿ ಬೆಚ್ಚಿ ಬಿದ್ದು ಇರುತ್ತಾಳೆ. ಯಾರು ಕರೆ ಮಾಡಿ ರಬಹುದು ಎಂದು ಅಮ್ಮ ಯೋಚನೆ ಮಾಡುತ್ತಾ ಇದ್ದಾರೆ ಎಂದು ವಸು ಅಣ್ಣನ ಬಳಿ ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ಗೆ ಕೊಂಚ ಗಾಬರಿ ಆದರೂ ಆ ಬಳಿಕ ಸ್ವಲ್ಪ ಸುಧಾರಿಸಿಕೊಂಡು ಇರುತ್ತಾನೆ.

Kannada serial Puttakkana Makkalu written update on 31st March

ಅಮ್ಮನ ಬಳಿ ಏನೇನೋ ಸಬೂಬು ಹೇಳಿ ಹೊರ ಹೋಗುತ್ತಾನೆ. ಅಷ್ಟರಲ್ಲಿ ಬೈರನ ಕರೆ ಬಂಗಾರಮ್ಮಗೆ ಬರುತ್ತದೆ. ಆಕೆ ಬೈರ ಬಂದೀಯಾ ಇಲ್ಲಿ ಮಾತನಾಡುವುದು ಬೇಡ ತೋಟದ ಕಡೆ ಹೋಗೋಣ ಅಲ್ಲಿ ಮಾತನಾಡೋಣ ಎಂದು ಹೇಳುತ್ತಾಳೆ. ಅದನ್ನು ಕೇಳಿದ ಬೈರ ಆಯಿತು ಎಂದು ತೋಟದ ಬಳಿ ಬರುತ್ತಾನೆ. ತೋಟದ ಬಳಿ ಬೈರ ಬಂದಿರುವುದನ್ನು ನೋಡಿದ ಬಂಗಾರಮ್ಮ ಆತನ ಕ್ಷೇಮ ಸಮಾಚಾರ ತಿಳಿದುಕೊಳ್ಳುತ್ತಾಳೆ.

ಬೈರ ಹೇಗಿದ್ದಿಯ ಚೆನ್ನಾಗಿ ಇದ್ದೀಯಾ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಆ ಬಳಿಕ ಬೈರ ಮುಂಬೈನಲ್ಲಿ ನೆಲೆಸಿರುವುದು ಗೊತ್ತಾಗುತ್ತದೆ. ಬಳಿಕ ಆಕೆ ಬಂದ ಕಾರಣ ತಿಳಿಸುತ್ತಾಳೆ. ಕಂಠಿಯನ್ನು ಫಾಲೋ ಮಾಡಬೇಕು ಆತ ಯಾವ ಹುಡುಗಿ ಜೊತೆ ಸುತ್ತಾಟ ಮಾಡುತ್ತಾ ಇದ್ದಾನೆ ಎಂಬುವುದನ್ನು ತಿಳಿಯಬೇಕು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಬೈರ ಒಮ್ಮೆ ಹೌಹಾರಿದರೂ ಆ ಬಳಿಕ ಸುಮ್ಮನೆ ಆಗುತ್ತಾನೆ. ಆ ಬಳಿಕ ಬಂಗಾರಮ್ಮ ವಹಿಸಿಕೊಟ್ಟ ಕೆಲಸ ಮಾಡಲು ಮುಂದಾಗುತ್ತಾನೆ .

Kannada serial Puttakkana Makkalu written update on 31st March

ಇದನ್ನು ನೋಡಿದ ಬಂಗಾರಮ್ಮ ಯಾವ ಹುಡುಗಿ ಆದರೂ ತೊಂದರೆ ಇಲ್ಲ, ನನ್ನ ಬಳಿ ಎಲ್ಲಾ ವಿಚಾರ ತಿಳಿದ ಬಳಿಕ ನನಗೆ ಹೇಳು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬೈರ ಆಯಿತು ಎಂದು ಹೋಗುತ್ತಾನೆ. ಕಂಠಿ ನೇರವಾಗಿ ಸ್ನೇಹಾ ಮನೆಗೆ ಹೋಗುತ್ತಾನೆ. ಆ ವೇಳೆ ಸುಮಾ ಕಂಠಿ ಕಾಲು ಎಳೆಯುತ್ತಲೇ ಇರುತ್ತಾಳೆ. ಈ ವರುಷ ನಮ್ಮಿಬ್ಬರ ಮದುವೆ ಎಂದೆಲ್ಲ ಕಂಠಿ ಹೇಳಿದಾಗ ಸ್ನೇಹಾ ನಾಚಿ ನೀರಾಗಿದ್ದಳು. ಕಂಠಿ ಮಾತನ್ನ ಕೇಳಿ ಚಂದ್ರು ಹೊರಗೆ ಬರುತ್ತಾನೆ.ಚಂದ್ರುವನ್ನು ನೋಡಿದ ಕಂಠಿ ಸುಮ್ಮನೆ ಆಗುತ್ತಾನೆ.

ಸ್ನೇಹಾ ಕಂಠಿಯನ್ನು ನೋಡುತ್ತಾ ಚಂದ್ರು ಬಳಿ ಅಣ್ಣ ನಿನ್ನ ಜೊತೆ ನಾನು ಮಾತನಾಡಬೇಕಾಗಿದೆ, ನೀನು ಇಲ್ಲಿಯೇ ಕುಳಿತಿರು ಎಂದು ಸಹನಳನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿ ಹೊರಡುವ ವೇಳೆ ಹೊರಗೆ ಬಂದ ಪುಟ್ಟಕ್ಕ ಬೀಗರು ಏನಾದರು ಹೇಳಿದರೆ ಅವರಿಗೆ ಎದುರು ಆಡಬೇಡ ಎಂದು ಹೇಳುತ್ತಾಳೆ. ಬಳಿಕ ಅಮ್ಮನನ್ನು ಸತೈಸಿ ಅಲ್ಲಿಂದ ಹೊರಡುತ್ತಾರೆ. ಬಳಿಕ ರಸ್ತೆಯುದ್ದಕ್ಕೂ ಸ್ನೇಹಾ ಹಾಗೂ ಕಂಠಿ ಪ್ರೀತಿಯ ಮಾತುಕತೆಗಳನ್ನು ಆಡುತ್ತಾ ಹೋಗುತ್ತಾರೆ.

More from Filmibeat

English summary
Kannada serial puttakkana makkalu written updated on 31st March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X