ಮದುವೆಗೆ ಒಪ್ಪಿಕೊಂಡ ಕಂಠಿ ಮಾತು ಕೇಳಿ ಬಂಗಾರಮ್ಮ ಫುಲ್ ಖುಷ್

By Poorva

ಪುಟ್ಟಕ್ಕನ ಮಕ್ಕಳು ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇದೀಗ ಕಂಠಿ ಮಾತ್ರ ಸ್ನೇಹಾ ಸಿಗಲಿಲ್ಲ ಎನ್ನುವ ಬೇಸರದಲ್ಲಿ ಇದ್ದರೆ, ಇನ್ನೊಂದು ಕಡೆ ಸ್ನೇಹಾ ಮನೆಯಲ್ಲಿ ಎಲ್ಲಿಯೂ ಇಲ್ಲ ಎಲ್ಲಿಗೆ ಹೋಗಿದ್ದಾಳೆ ಎಂದು ಭಯದ ವಾತಾವರಣ ಸೃಷ್ಟಿ ಆಗಿತ್ತು. ಆದರೆ ಇದೀಗ ಭುವನ್ ಜೊತೆ ಸ್ನೇಹಾ ಕಾರಿನಿಂದ ಇಳಿದು ಬಂದಿರುವುದನ್ನು ಮನೆ ಮಂದಿ ನೋಡುತ್ತಾರೆ.

ಅವರಿಗೆ ಶಾಕ್ ಕೂಡ ಆಗುತ್ತದೆ. ಭುವನ್ ಜೊತೆ ಸ್ನೇಹ ಶಾಪಿಂಗ್‌ಗೆ ಹೋಗಿದ್ದಳು. ಆದರೆ ಕಂಠಿ ಗೆ ಮಾತ್ರ ಭುವನ್ ಜೊತೆ ಸ್ನೇಹಳನ್ನು ನೋಡಿ ಶಾಕ್ ಆಗುತ್ತದೆ. ಸ್ನೇಹಾ ಹೇಳದೆ ಕೇಳದೆ ಭುವನ್ ಜೊತೆ ಶಾಪಿಂಗ್‌ಗೆ ಹೋಗಿರುವುದನ್ನು ನೋಡಿದ ಸುಮಾಗೆ ಮಾತ್ರ ಅಕ್ಕ ಯಾಕೆ ಹೀಗೆ ಆಡುತ್ತಾ ಇದ್ದಾಳೆ ಎಂದು ಯೋಚನೆ ಆಗುತ್ತದೆ.

Kannada serial Puttakkana Makkalu written update on 31st may

ಆದರೂ ಏನು ಮಾತನಾಡದೆ ಸುಮ್ಮನೆ ಆಗುತ್ತಾಳೆ. ಸ್ನೇಹಾ ಮಾತ್ರ ಕಂಠಿಯತ್ತ ತಿರುಗಿ ಕೂಡ ನೋಡದೇ ಇರುವುದನ್ನು ಕಂಡು ಕಂಠಿಗೆ ಬೇಸರ ಮೂಡುತ್ತದೆ. ಇನ್ನು ಕಂಠಿ ಇದೆಲ್ಲವನ್ನೂ ನೋಡಿ ಕಂಠ ಪೂರ್ತಿ ಕುಡಿದು ಮನೆಗೆ ಹೋಗುತ್ತಾನೆ.

ಆಗ ತನ್ನ ಅಣ್ಣನಿಗಾಗಿ ವಸು ಬಾಗಿಲ ಬಳಿಯೇ ಕಾದು ಕುಳಿತು ಇರುತ್ತಾಳೆ. ಇನ್ನು ಬಾಗಿಲ ಬಳಿಯೇ ಯಾರೋ ಬಂದ ಹಾಗೆ ಆಗುತ್ತದೆ. ಆದರೆ ಯಾರು ಎಂದು ತಿಳಿಯದೇ ಯಾರದು ಎಂದು ವಸು ಕೇಳುತ್ತಾಳೆ. ಆಗ ಅತ್ತ ಕಡೆಯಿಂದ ಏನು ಮಾತನಾಡದೆ ಕುಡಿದ ಅಮಲಿನಲ್ಲಿ ಇದ್ದ ಕಂಠಿಯನ್ನು ಕಂಡು ವಸುಗೆ ಶಾಕ್ ಆಗುತ್ತದೆ.

ಆತ ಅಮಲಿನಲ್ಲಿ ಮನೆಯ ಒಳಗೆ ಕಾಲಿಡಲು ಆಗದ ಪರಿಸ್ಥಿತಿಯಲ್ಲಿ ಇದ್ದಿದ್ದನ್ನು ಕಂಡು ವಸುಗೆ ಬಹಳ ನೋವು ಆಗುತ್ತದೆ. ಭಯ ಆವರಿಸಿಕೊಂಡಿರುತ್ತದೆ. ಏನು ಮಾಡಬೇಕು ಎಂದು ತಿಳಿಯದಾಗಿ ಹೋಗುತ್ತದೆ. ಇನ್ನು ವಸು ಜೋರಾಗಿ ಅಮ್ಮನನ್ನು ಕರೆಯುತ್ತಾಳೆ. ಆಗ ಬಂಗಾರಮ್ಮ ಹಾಲ್ ನಲ್ಲಿ ನಿಂತು ಮಗ ಪಡುತ್ತಿರುವ ನೋವನ್ನು ನೋಡುತ್ತಾ ಇರುತ್ತಾಳೆ.

ಕಂಠಿ ಸ್ನೇಹಾನಾ ದೂರ ಮಾಡಬೇಕೆಂಬ ಹಠ ಹೊತ್ತ ಬಂಗಾರಮ್ಮಗೆ ಇದೀಗ ಭಯ ಕಾಡಲು ಆರಂಭ ಆಗಿದೆ. ಇನ್ನು ತನ್ನ ತಾಯಿ ಬಳಿ ಬಂದ ಕಂಠಿ ನೋವಿನಲ್ಲಿ ಅಮ್ಮ ಸ್ನೇಹಾ ಬೇರೆ ಹುಡುಗನ ಜೊತೆ ಕೈ ಕೈ ಹಿಡಿದು ಹೋಗುತ್ತಾ ಇರುತ್ತಾಳೆ ಆದರೆ ಆಕೆ ಬೇರೆ ಮದುವೆ ಆಗಬಹುದು ಆದರೆ ನಾನು.. ನೀನಾದರೂ ಎನು ತಪ್ಪು ಮಾಡಿದ್ದೀಯಾ.. ನನಗೆ ನಮ್ಮ ಮನೆಯ ಹಿತ ಮುಖ್ಯ ಆಕೆಯೇ ಇನ್ನೊಂದು ಮದುವೆ ಆಗುತ್ತಾಳೆ.. ನಾನು ಇನ್ನೊಂದು ಮದುವೆ ಆಗುತ್ತೇನೆ ನೀನು ಹುಡುಗಿ ಹುಡುಕಮ್ಮ ನೀನು ಹೇಳಿದ ಹುಡುಗಿಗೆ ಕಣ್ಣು ಮುಚ್ಚಿ ತಾಳಿ ಕಟ್ಟುತ್ತೇನೆ ಎಂದು ಹೇಳಿ ಜೋರಾಗಿ ಅಳುತ್ತಾನೆ. ಇದನ್ನು ಕೇಳಿದ ಬಂಗಾರಮ್ಮಗೆ ಅದೇ ಬೇಕಿತ್ತು. ಕೊಂಚ ನೆಮ್ಮದಿ ಆಗುತ್ತದೆ. ಇನ್ನು ವಸು ಮಾತ್ರ ಅಣ್ಣನ ಮಾತು ಕೇಳಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿರುತ್ತಾಳೆ. ಅಣ್ಣನಿಗೆ ಎಂಥ ಗತಿ ಬಂತು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆ ಬಳಿಕ ಕಂಠಿ ತನ್ನ ತಾಯಿ ಹಾಗೂ ತಂಗಿಯನ್ನು ಬಿಗಿದಪ್ಪಿ ಅಳುತ್ತಾನೆ.

More from Filmibeat

English summary
Kannada serial puttakkana makkalu written updated on 31th may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X